SSP Scholarship 2026: post Metric ವಿದ್ಯಾರ್ಥಿಗಳಿಗೆ ಇಂದು ಕೊನೆಯ ದಿನ – ಈಗಲೇ ಅರ್ಜಿ ಸಲ್ಲಿಸಿ!

WhatsApp Group Join Now
Telegram Group Join Now

SSP Scholarship 2026 last date ಇಂದು(15-03-2026). ಕರ್ನಾಟಕದಲ್ಲಿ post metric ಓದುತ್ತಿರುವ ವಿದ್ಯಾರ್ಥಿಗಳಿಗೆ ಇನ್ನೂ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸದೆ ಇದ್ದ ಪಕ್ಷದಲ್ಲಿ ಇವತ್ತು ಕೊನೆಯ ದಿನವನ್ನು ನಿಗದಿಪಡಿಸಲಾಗಿದೆ.ಯಾರೆಲ್ಲಾ ಇನ್ನೂ ಅರ್ಜಿ ಸಲ್ಲಿಸಿಲ್ಲ ಇವತ್ತು ಸಲ್ಲಿಸಬಹುದು.

SSP Scholarship 2026: ಇದಕ್ಕೆ ಅರ್ಜಿ ಸಲ್ಲಿಸಲು ಬೇಕಿರುವ ಅಗತ್ಯ ಮಾಹಿತಿ, ದಾಖಲೆ, ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಹತೆಗಳ ಬಗ್ಗೆ ಸವಿವರವಾಗಿ ಈ ಲೇಖನದಲ್ಲಿ ತಿಳಿಸಲಾಗಿದೆ.

SSP Scholarship 2026 ಎಂದರೇನು?

SSP (State Scholarship Portal) ಕರ್ನಾಟಕ ಸರ್ಕಾರದ ವಿದ್ಯಾರ್ಥಿವೇತನ ನಿರ್ವಹಣೆಯ ತಂತ್ರಾಂಶವಾಗಿದ್ದು. ಈ ಪೋರ್ಟಲ್ ಮೂಲಕ ವಿವಿಧ ಇಲಾಖೆಗಳ ವಿದ್ಯಾರ್ಥಿವೇತನವನ್ನು ಒಂದೇ ಕಡೆಯಲ್ಲಿ ವಿದ್ಯಾರ್ಥಿಗಳಿಗೆ ಲಭಿಸುವಂತೆ ಮಾಡಲಾಗಿದೆ.

ಈ ಯೋಜನೆಯ ಮುಖ್ಯ ಉದ್ದೇಶ:ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಸಹಾಯ, ಉನ್ನತ ಶಿಕ್ಷಣ ಮುಂದುವರಿಸಲು ಪ್ರೋತ್ಸಾಹ ಮತ್ತು ವಿದ್ಯಾರ್ಥಿಗಳ ಶಿಕ್ಷಣ ವೆಚ್ಚ ಕಡಿಮೆ ಮಾಡುವುದು.Post Matric ವಿದ್ಯಾರ್ಥಿಗಳು ಈ ತಂತ್ರಾಂಶದಿಂದ ಈ ಪ್ರಯೋಜನವನ್ನು ಪಡೆಯಬಹುದು.

SSP Scholarship 2026 Last Date

ಕರ್ನಾಟಕ ಸರ್ಕಾರದ ಬೇರೆ ಬೇರೆ ಇಲಾಖೆಗಳಿಂದ ರಾಜ್ಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ ಮೂಲಕ ಅರ್ಜಿಯನ್ನು ಕರೆಯಲಾಗುತ್ತದೆ. ಪ್ರತಿ ವರ್ಷ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಸಲು ಕಾಲ ಮಿತಿಯನ್ನು ವಿಧಿಸಲಾಗುತ್ತದೆ. ಅಂತೆಯೇ Post Metric ಸ್ಕಾಲರ್ಷಿಪ್ ಅರ್ಜಿ ಸಲ್ಲಿಸಲು ಇಂದು(15-03-2026) ಕೊನೆಯ ದಿನವನ್ನಾಗಿ ನಿಗದಿ ಪಡಿಸಿದೆ.

ಯಾವೆಲ್ಲಾ ಇಲಾಖೆ ವಿದ್ಯಾರ್ಥಿವೇತನಕ್ಕೆ ಇಂದು ಕೊನೆಯ ದಿನ?

SSP ತಂತ್ರಾಂಶದಲ್ಲಿ ಹತ್ತು ಹಲವಾರು ಸರ್ಕಾರಿ ಇಲಾಖೆಗಳ ಹಲವು ಯೋಜನೆಯ ವಿದ್ಯಾರ್ಥಿವೇತನಗಳಿವೆ. ಇದಕ್ಕೆ ಸಮಯಕ್ಕೆ ತಕ್ಕಂತೆ ಕೊನೆಯ ದಿನಾಂಕಗಳನ್ನು ನಿಗದಿಪಡಿಡಲಾಗಿದೆ. ಕೆಲವು ವಿದ್ಯಾರ್ಥಿವೇತನದ ಕೊನೆಯ ದಿನಾಂಕ ತಲುಪಿದ್ದು, ಇನ್ನೂ ಕೆಲವು ವಿದ್ಯಾರ್ಥಿವೇತನಗಳಿಗೆ ಸ್ವಲ್ಪ ದಿನಗಳ ಸಮಯವಕಾಶವಿದೆ.

ಇಲಾಖೆಗಳು
1.ತಾಂತ್ರಿಕ ಶಿಕ್ಷಣ
2.ಆರ್ಯ ವೈಶ್ಯ
3.ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ
4.ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ
5.ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

ಈ ಮೇಲೆ ತಿಳಿಸಿರುವ ಇಲಾಖೆಗಳಿಗೆ ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುವ ವಿದ್ಯಾರ್ಥಿಗಳು ಬೇಗನೆ ಅರ್ಜಿ ಸಲ್ಲಿಸಿ ಕೊಳ್ಳಿ, ದಿನಾಂಕ 15-03-2026 ಕೊನೆಯ ದಿನವನ್ನಾಗಿ ನಿಗದಿಪಡಿಸಲಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

2026 ರ ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಮುಖ್ಯವಾಗಿ ಬೇಕಾಗಿರುವ ದಾಖಲೆಗಳು ಇಂತಿವೆ :

  • ವಿದ್ಯಾರ್ಥಿಯ ಆಧಾರ್ ಸಂಖ್ಯೆ
  • ವಿದ್ಯಾರ್ಥಿಯ ಮೊಬೈಲ್ ನಂಬರ್
  • ವಿದ್ಯಾರ್ಥಿಯ ಇಮೇಲ್ ಐ ಡಿ
  • ವಿದ್ಯಾರ್ಥಿಯ SSLC ನೋಂದಣಿ ಸಂಖ್ಯೆ
  • ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ RD ಸಂಖ್ಯೆ
  • ವಿದ್ಯಾರ್ಥಿಯು ವಿಕಲಚೇತನರಾದಲ್ಲಿ ಯು ಡಿ ಐ ಡಿ ಗುರುತಿನ ಸಂಖ್ಯೆ
  • ವಿದ್ಯಾರ್ಥಿಯ ಪೂರ್ಣ ವಿಳಾಸ
  • ವಿದ್ಯಾರ್ಥಿಯ ಕಾಲೇಜಿನ ದಾಖಲಾತಿ ಅಥವಾ ನೋಂದಣಿ ಸಂಖ್ಯೆ
  • ಇತರೆ ಮಾಹಿತಿ (ಅಗತ್ಯವಿದ್ದಲ್ಲಿ )

SSP Scholarship 2026 ಅರ್ಹತೆ

2026 ರ ssp Scholarship ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.

Post metric ಯಾವುದೇ ಕೋರ್ಸ್‌ನಲ್ಲಿ ಓದುತ್ತಿರಬೇಕು.

ಕುಟುಂಬದ ಒಟ್ಟು ವಾರ್ಷಿಕ ಆದಾಯ ಸರ್ಕಾರ ನಿಗದಿಪಡಿಸಿದ ಮಿತಿಯೊಳಗೆ ಇರಬೇಕು

ಮಾನ್ಯತೆಯ ಕಾಲೇಜಿನಲ್ಲಿ ದಾಖಲಾತಿ ಪಡೆದು ವ್ಯಾಸಂಗ ಮಾಡುತ್ತಿರಬೇಕು.

ಇದೆ ರೀತಿಯ ಇತರೆ ಮಾಹಿತಿಗಳನ್ನು ಲೇಖನ ರೂಪದಲ್ಲಿ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಅನ್ನು ಅನುಸರಿಸಿ.

SSP Scholarship 2026 ಗೆ ಅರ್ಜಿ ಸಲ್ಲಿಸುವ ವಿಧಾನ

2026 ರ ssp scholarship ಗೆ ಅರ್ಜಿ ಸಲ್ಲಿಸಲು ಬಯಸುವವರು ಈ ಕೆಳಗಿನ ಹಂತಗಳನ್ನು ಪಾಲಿಸಿ ಅರ್ಜಿಯನ್ನು ಸುಲಭವಾಗಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಹಂತಗಳು :

  1. SSP portal ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  2. Student ಲಾಗಿನ್ ಮಾಡಿ. ಒಂದು ವೇಳೆ ಹೊಸ ಬಳಕೆದಾರರಾಗಿದ್ದಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು.
  3. ಅಲ್ಲಿ ತೋರುವ ಎಲ್ಲಾ ಹಂತಗಳನ್ನು ನಿಮ್ಮ ಅಗತ್ಯ ಮಾಹಿತಿಯೊಂದಿಗೆ ಭರ್ತಿ ಮಾಡಬೇಕು. .
  4. ಕೊನೆಯಲ್ಲಿ ಅರ್ಜಿಯ preview ನೋಡಿ, ಎಲ್ಲಾ ಮಾಹಿತಿ ಸರಿಯಾಗಿದ್ದರೆ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸಿದ ನಂತರ ಅದರ ಸ್ವಿಕೃತಿಯನ್ನು ಪಡೆದು ಪ್ರಿಂಟ್ ತೆಗೆದುಕೊಂಡು ಅಗತ್ಯ ದಾಖಲೆಗಳ zerox ಪ್ರತಿಯನ್ನು ಲಗತ್ತಿಸಿ ನಿಮ್ಮ ಕಾಲೇಜಿನ ಕಚೇರಿಗೆ ಸಲ್ಲಿಸಬೇಕು.ನಂತರ ಕಾಲೇಜಿನ ಕಚೇರಿಯಿಂದ ಪರಿಶೀಲನೆಗೊಂಡು ಸಂಬಂಧಪಟ್ಟ ಇಲಾಖೆಯ ಪರಿಶೀಲನೆಗೆ ಹೋಗುತ್ತದೆ. ಅಲ್ಲಿ ಪರಿಶೀಲಿಸಿ, ಅನುಮೋದನೆ ಗೊಂಡ ನಂತರ ವಿದ್ಯಾರ್ಥಿವೇತನ ಬರುತ್ತದೆ.

Ssp scholarship 2026
Ssp scholarship 2026

ಅರ್ಜಿ ತಿರಸ್ಕರಿಸಲ್ಪಡುವ ಸಾಮಾನ್ಯ ಕಾರಣಗಳು

ವಿದ್ಯಾರ್ಥಿಯು ನೀಡಿರುವ ಯಾವುದೇ ಮಾಹಿತಿಯು ಅಸತ್ಯ ಅಥವಾ ಸುಳ್ಳು ದಾಖಲೆಗಳನ್ನು ನೀಡಿದ್ದಲ್ಲಿ.

ಸಲ್ಲಿಸಿರುವ ದಾಖಲೆಗಳಲ್ಲಿನ ಮಾಹಿತಿಗಳು ಸರಿಯಾಗಿ ಹೊಂದಾಣಿಕೆಯಾಗದೆ ಇದ್ದಲ್ಲಿ.

ದಾಖಲೆಗಳು ಮಾನ್ಯವಾಗಿರದೆ ಇದ್ದಲ್ಲಿ ( ಮುಖ್ಯವಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ )

ವಿದ್ಯಾರ್ಥಿವೇತನ ಪಡೆಯಲು ವಿದ್ಯಾರ್ಥಿ ಮಾಡಬೇಕಿರುವ ಮುಖ್ಯ ಕೆಲಸಗಳು

  • ಅರ್ಜಿಯನ್ನು ಸರಿಯಾಗಿ ಯಾವುದೇ ತಪ್ಪಿಲ್ಲದಂತೆ ಭರ್ತಿ ಮಾಡಿ ಸಲ್ಲಿಸಿ.
  • ಅರ್ಜಿ ಸಲ್ಲಿಸಿದ ನಂತರ ಕಾಲೇಜಿನ ಮೂಲಕ ಅರ್ಜಿಯನ್ನು ಪರಿಶೀಲನೆಗೆ ನೀಡುವುದು.
  • ವಿದ್ಯಾರ್ಥಿವೇತನ ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯ ಜೋಡಣೆಯನ್ನು ಮಾಡಿಸಿರಬೇಕು.
  • ನಿಮ್ಮ ಅರ್ಜಿ ಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸುತ್ತಿರಬೇಕು.

SSP Scholarship ಪ್ರಯೋಜನಗಳು

  • ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಲಿಕೆಗೆ ಆರ್ಥಿಕ ನೆರವು ನೀಡಲು
  • ಉನ್ನತ ಶಿಕ್ಷಣಕ್ಕೆ ಸಹಾಯ.
  • ಶೈಕ್ಷಣಿಕವಾಗಿ ಇತರೆ ವೆಚ್ಚಗಳಿಗೆ ಸಹಾಯವಾಗುತ್ತದೆ.

ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಸರ್ಕಾರದ ಈ ವಿದ್ಯಾರ್ಥಿವೇತನದ ಸಹಾಯದಿಂದ ತಮ್ಮ ಕಲಿಕೆಯನ್ನು ಮುಂದುವರೆಸುತ್ತಿದ್ದಾರೆ.

ಪ್ರಮುಖ ಸೂಚನೆ

ಈ ವಿದ್ಯಾರ್ಥಿವೇತನದ Last Date 15-03-2026 ನಿಗದಿಪಡಿಸಲಾಗಿದ್ದು ಇನ್ನೂ ಅರ್ಜಿ ಸಲ್ಲಿಸದ Post Matric ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಕ್ಷಣ SSP Portal ನಲ್ಲಿ ಅರ್ಜಿ ಸಲ್ಲಿಸಿ ವಿದ್ಯಾರ್ಥಿವೇತನದ ಲಾಭವನ್ನು ಪಡೆಯಿರಿ ಈ ಕೊನೆಯ ದಿನದ ನಂತರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದಿಲ್ಲ.


SSP Scholarship 2026 Last Date ಯಾವಾಗ?

ssp ಮೂಲಕ ಅರ್ಜಿ ಸಲ್ಲಿಸಲು ತಾಂತ್ರಿಕ ಶಿಕ್ಷಣ ಇಲಾಖೆ,ಆರ್ಯ ವೈಶ್ಯ ಇಲಾಖೆ,ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ,ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಗಳ post metric ವಿದ್ಯಾರ್ಥಿವೇತನ ಸಲ್ಲಿಸಲು 15-03-2026 ನಿಗದಿಪಡಿಸಲಾಗಿದೆ.

SSP Scholarship ಹೇಗೆ ಅರ್ಜಿ ಸಲ್ಲಿಸಬೇಕು?

SSP Portal ಗೆ ಭೇಟಿ ನೀಡಿ. ಆನ್‌ಲೈನ್ ಮೂಲಕ ಅಗತ್ಯ ಮಾಹಿತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು.

SSP Scholarship 2026 ರ ಹಣ ಯಾವಾಗ ಬರುತ್ತದೆ?

SSP post metric scholarship ಅರ್ಜಿ ಸಲ್ಲಿಸಿ ಕಾಲೇಜು ಮತ್ತು ಸಂಬಂಧಪಟ್ಟ ಇಲಾಖೆ ಪರಿಶೀಲನೆ ಮತ್ತು ಅನುಮೋದನೆಯ ನಂತರ ವಿದ್ಯಾರ್ಥಿಗಳ ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ನೇರವಾಗಿ ಸರ್ಕಾರದಿಂದ ವಿದ್ಯಾರ್ಥಿವೇತನವನ್ನು ಜಮಾ ಮಾಡಲಾಗುತ್ತದೆ.

About Content Writer
Jayanth

Jayanth

ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.

About Us →
WhatsApp Group Join Now
Telegram Group Join Now

Leave a Comment