Table of Contents
ಕರ್ನಾಟಕ ರಾಜ್ಯದಲ್ಲಿನ ಲಕ್ಷಾಂತರ ವಿದ್ಯಾರ್ಥಿಗಳು ಪ್ರತಿವರ್ಷದಂತೆ ಈ ವರ್ಷವೂ ಕೂಡ 2nd PUC Result 2026 ಗಾಗಿ ಆತುರದಿಂದ ಕಾಯುತ್ತಿದ್ದಾರೆ. ಪರೀಕ್ಷೆಗಳು ಮುಗಿದ ಬಳಿಕ, ವಿದ್ಯಾರ್ಥಿಗಳಲ್ಲಿ ಯಾವಾಗ 2nd puc ಫಲಿತಾಂಶ ಬರುತ್ತದೆ? ಎಂಬ ಪ್ರಶ್ನೆ ಸಾಮಾನ್ಯವಾಗಿದೆ. ಈ ಲೇಖನದಲ್ಲಿ ಫಲಿತಾಂಶದ ದಿನಾಂಕ, ಫಲಿತಾಂಶ ಪರಿಶೀಲಿಸುವ ವಿಧಾನ, ಅಧಿಕೃತ ವೆಬ್ಸೈಟ್ಗಳು ಹಾಗೂ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿಸಿಕೊಡಲಾಗಿದೆ.
2nd PUC Result 2026
2nd PUC ಪರೀಕ್ಷೆಯನ್ನು KSEAB (Karnataka School Examination and Assessment Board) ನಡೆಸುತ್ತದೆ. ಇದನ್ನು ಕೆಲವರು ಇನ್ನೂ ಹಳೆಯ ಹೆಸರಿನಿಂದ KSEEB ಎಂದು ಕರೆಯುತ್ತಾರೆ.ಪರೀಕ್ಷೆ ಬರೆದ ನಂತರ ಮೌಲ್ಯಮಾಪನ ಮಾಡಿ ಫಲಿತಾಂಶವನ್ನು ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸುವ ಜವಾಬ್ದಾರಿ KSEAB ಅವರದು.
2nd puc ಫಲಿತಾಂಶ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಅತ್ಯಂತ ಮುಖ್ಯವಾಗಿದ್ದು, ಮುಂದಿನ ಶಿಕ್ಷಣದ ಹಾದಿಯನ್ನು ನಿರ್ಧರಿಸುತ್ತದೆ ಎಂದು ಹೇಳಿದರು ತಪ್ಪಾಗಲಾರದು.
2nd PUC 2026 ಪರೀಕ್ಷೆಯ ಫಲಿತಾಂಶ ಯಾವಾಗ?
ಪ್ರತಿ ವರ್ಷ 12ನೇ ತರಗತಿಯ ಪರೀಕ್ಷೆಯು ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ನಡೆಯುತ್ತವೆ ಮತ್ತು ಫಲಿತಾಂಶವು ಸಾಮಾನ್ಯವಾಗಿ ಪರೀಕ್ಷೆಗಳ ನಡೆದ ಕೆಲವು ವಾರಗಳಲ್ಲಿ ಪ್ರಕಟವಾಗುತ್ತದೆ.ಹಾಗೆಯೇ
ಈ ವರ್ಷವೂ puc result 2026 ಶೀಘ್ರದಲ್ಲೇ ಅಂದರೆ ಏಪ್ರಿಲ್ 07 ಅಥವಾ 08 ರಂದು ಪ್ರಕಟವಾಗುವ ನಿರೀಕ್ಷೆಯಿದೆ. ವಿದ್ಯಾರ್ಥಿಗಳು ಆಗಾಗ ಅಧಿಕೃತ ವೆಬ್ಸೈಟ್ಗಳನ್ನು ಪರಿಶೀಲಿಸುತ್ತಿರಬೇಕು.
2nd puc ಫಲಿತಾಂಶ ಪ್ರಕಟಿಸುವ ಅಧಿಕೃತ ವೆಬ್ಸೈಟ್ಗಳು
ವಿದ್ಯಾರ್ಥಿಗಳು ತಮ್ಮ 2nd puc result ಅನ್ನು ಕೆಳಗಿನ ಅಧಿಕೃತ ವೆಬ್ಸೈಟ್ಗಳಲ್ಲಿ ಪರಿಶೀಲಿಸಬಹುದು
kseab.karnataka.gov.in
ಅಥವಾ
karresults.nic.in
ಫಲಿತಾಂಶ ಪ್ರಕಟವಾದಾಗ ನಂತರ ಈ ಲಿಂಕ್ ಮೂಲಕ ನಿಮ್ಮ ಫಲಿತಾಂಶವನ್ನು ನೇರವಾಗಿ ನೋಡಬಹುದು.
2nd PUC 2026 ರ ಫಲಿತಾಂಶವನ್ನು ಹೇಗೆ ನೋಡುವುದು?
ನೀವು ನಿಮ್ಮ 2nd puc result 2026 ಲಿಂಕ್ ಬಳಸಿಕೊಂಡು ಫಲಿತಾಂಶವನ್ನು ಸುಲಭವಾಗಿ online ಮೂಲಕ ನೋಡಬಹುದು
ಈ ಕೆಳಗಿನ ಹಂತಗಳನ್ನು ಅನುಸರಿಸಿ ನಿಮ್ಮ ಫಲಿತಾಂಶವನ್ನು ನೋಡಿಕೊಳ್ಳಿ.
- ಮೊದಲು ಮೇಲೆ ತಿಳಿಸಿರುವ kseab ವೆಬ್ಸೈಟ್ ಅಥವಾ karresults.nic.in ತೆರೆಯಿರಿ.
- “2nd PUC Result 2026” ಎನ್ನುವ ಲೈನ್ ತೋರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ
- ನಿಮ್ಮ “ನೋಂದಣಿ ಸಂಖ್ಯೆ” ಅಥವಾ “Register Number” ನಮೂದಿಸಿ.
- Submit ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಫಲಿತಾಂಶವನ್ನು ನೋಡಬಹುದು.
- ಈಗ ಇದನ್ನು ಪ್ರಿಂಟ್ ಅಥವಾ ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು.

ಫಲಿತಾಂಶವನ್ನು ನೋಡುವ ಮೊದಲು ಈ ಅಂಶವನ್ನು ನೆನಪಿಡಿ.
2nd puc ಫಲಿತಾಂಶ ಪ್ರಕಟವಾಗುವ ಮುನ್ನ ಶಿಕ್ಷಣ ಮಂಡಳಿಯಿಂದ ಪತ್ರಿಕಾಗೋಷ್ಠಿ ನಡೆಸುತ್ತಾರೆ. ಈ ವೇಳೆಯಲ್ಲಿ ಆ ವರ್ಷದ ಫಲಿತಾಂಶದ ಶೇಕಡಾವಾರು ಉತ್ತಿರ್ಣ ಪ್ರಮಾಣ ಮತ್ತು ಯಾವ ಯಾವ ವಿಭಾಗದಲ್ಲಿ(ಕಲಾ, ವಾಣಿಜ್ಯ ಮತ್ತು ವಿಜ್ಞಾನ) ಎಷ್ಟು ಪ್ರಮಾಣದ ಮಕ್ಕಳು ಉತ್ತಿರ್ಣರಾಗಿದ್ದಾರೆ? ರಾಜ್ಯ ಮಟ್ಟದಲ್ಲಿ ಹೆಚ್ಚಿಗೆ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ವಿಭಾಗವಾರು ಹೆಸರು ಘೋಷಣೆ, ಜಿಲ್ಲಾವಾರು ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.
ತದ ನಂತರದಲ್ಲಿ ಫಲಿತಾಂಶವನ್ನು ಬಿಡುಗಡೆ ಮಾಡಲಾಗುತ್ತದೆ. ಆಮೇಲೆ ನಿಮ್ಮ ಫಲಿತಾಂಶವನ್ನು online ಮೂಲಕ ನಿಮ್ಮ ಮೊಬೈಲ್ ಅಥವಾ ಲ್ಯಾಪ್ ಟಾಪ್ ನಲ್ಲಿ ನೋಡಬಹುದು.
ಫಲಿತಾಂಶ ಪುಟದಲ್ಲಿ ಈ ಅಂಶಗಳನ್ನು ಗಮನಿಸಬಹುದು.
ಒಮ್ಮೆ ನೀವು ಫಲಿತಾಂಶ ನೋಡಲು ಮೇಲಿನ ಹಂತಗಳನ್ನು ಪಾಲಿಸಿದರೆ, ನಿಮ್ಮ ಫಲಿತಾಂಶ ದೊರೆಯುತ್ತದೆ. ಇಲ್ಲಿ ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿಯ ಜೊತೆಗೆ ಇತರೆ ಅಂಶಗಳನ್ನು ನೋಡಬಹುದು.
- ವಿದ್ಯಾರ್ಥಿಯ ಹೆಸರು
- ನೋಂದಣಿ ಸಂಖ್ಯೆ
- ವಿಷಯವಾರು ಅಂಕಗಳು
- ಒಟ್ಟು ಅಂಕಗಳು
- ಫಲಿತಾಂಶ ಸ್ಥಿತಿ (Pass/Fail)
ಮರುಮೌಲ್ಯಮಾಪನ (Revaluation)ದ ಬಗ್ಗೆ ಮಾಹಿತಿ:
ನಿಮ್ಮ ಫಲಿತಾಂಶವನ್ನು ಗಮನಿಸಿದ ನಂತರ ಯಾವುದಾದರು ವಿಷಯದಲ್ಲಿ ನಿಮ್ಮ ಅಂಕ ಕಡಿಮೆ ಬಂದಿದ್ದರೆ, ಆ ವಿಷಯದ ಮೇಲೆ ಮರುಮೌಲ್ಯಮಾಪನ ಕ್ಕೆ ಅರ್ಜಿ ಸಲ್ಲಿಸಬಹುದು.
- ಇದು ಅಧಿಕೃತ ವೆಬ್ಸೈಟ್ ಮೂಲಕ ಲಭ್ಯ.
- ನಿರ್ದಿಷ್ಟ ಶುಲ್ಕವನ್ನು ಪಾವತಿಸಬೇಕು
- ಒಂದು ವೇಳೆ ನೀವು ತಿಳಿಸಿದ ವಿಷಯದಲ್ಲಿ ಅಂಕಗಳು ಕಡಿಮೆ ಬಂದಲ್ಲಿ ಮರು ಮೌಲ್ಯಮಾಪನದ ನಂತರ ಅಂಕಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿವೆ.
Supplementary Exam ಬಗ್ಗೆ ಮಾಹಿತಿ
2nd puc 2026 ರ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶಿಕ್ಷಣ ಮಂಡಳಿಯು supplementary exam ಅವಕಾಶ ನೀಡಲಾಗುತ್ತದೆ.ವಿದ್ಯಾರ್ಥಿಯು ತಾನು ಅನುತ್ತಿರ್ಣ ವಾಗಿರುವ ವಿಷಯದ ಮೇಲೆ ಕೆಲವೇ ದಿನಗಳಲ್ಲಿ ಇನ್ನೊಮ್ಮೆ ಪರೀಕ್ಷೆಯನ್ನು ಮಾಡುತ್ತಾರೆ.
- ಮತ್ತೊಮ್ಮೆ ಪರೀಕ್ಷೆ ಬರೆಯಬಹುದು
- ಈಗ ಉತ್ತಮ ಅಂಕ ಪಡೆಯಲು ಅವಕಾಶ ದೊರೆತಂತಾಗುತ್ತದೆ.
- ಭವಿಷ್ಯ ರೂಪಿಸಿ ಕೊಳ್ಳಲು ಮತ್ತೊಂದು ಅವಕಾಶ ಸಿಗುತ್ತದೆ.

ವಿದ್ಯಾರ್ಥಿಗಳು ಗಮನಿಸಬೇಕಾದ ಅಂಶಗಳು
- ಫಲಿತಾಂಶವನ್ನು ನೋಡಲು ಅಧಿಕೃತ ವೆಬ್ಸೈಟ್ಗಳನ್ನು ಮಾತ್ರ ಬಳಸಿ
- ಫಲಿತಾಂಶ ನೋಡವ ಮೊದಲು ನಿಮ್ಮ ರಿಜಿಸ್ಟರ್ ನಂಬರ್ ಸಿದ್ಧವಾಗಿರಲಿ
- ಸುಳ್ಳು ಮಾಹಿತಿಗಳ ಬಗ್ಗೆ ಯೋಚಿಸಬೇಡಿ.
- ಫಲಿತಾಂಶದ ನಂತರ ನಿಮ್ಮ ಮುಂದಿನ ಯೋಜನೆ ಮಾಡಿ.ಫಲಿತಾಂಶ ಏನೇ ಆಗಿರಲಿ ಎಲ್ಲದಕ್ಕೂ ಮತ್ತೊಂದು ಮಾರ್ಗ ಇದ್ದೆ ಇದೆ. ಇಲ್ಲೇ ಎಲ್ಲಾ ಅಂತ್ಯವಲ್ಲ.
ಕೊನೆಯದಾಗಿ
ಒಟ್ಟಿನಲ್ಲಿ, 2nd puc result 2026 ಎನ್ನುವುದು ಈ ಬಾರಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಕೂತೂಹಲ ಮೂಡಿಸುವ ವಿಷಯವಾಗಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಈ ಪರೀಕ್ಷೆಯೂ ಪ್ರಮುಖ ಹಂತವಾಗಿದೆ.ವಿದ್ಯಾರ್ಥಿಗಳು ಫಲಿತಾಂಶ ದಿನಾಂಕದ ಬಗ್ಗೆ ಹೆಚ್ಚಿನ ನಿರೀಕ್ಷೆ ಇದ್ದರೂ, ವಿದ್ಯಾರ್ಥಿಗಳು ತಾಳ್ಮೆಯಿಂದ ಅಧಿಕೃತ ಮಾಹಿತಿಯನ್ನು ಮಾತ್ರ ಗಮನಿಸಬೇಕು.
2nd puc 2026 ರ ಫಲಿತಾಂಶ ಯಾವಾಗ ಪ್ರಕಟವಾಗುತ್ತದೆ?
2nd PUC Result 2026 ಸಾಮಾನ್ಯವಾಗಿ ಪರೀಕ್ಷೆ ನಡೆದ ನಂತರ ಕೆಲವೇ ವಾರಗಳಲ್ಲಿ ಪ್ರಕಟವಾಗುತ್ತದೆ. ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ಗಳನ್ನು ಆಗಾಗ ಪರಿಶೀಲಿಸುವುದು ಉತ್ತಮ.
2nd puc 2026 ರ ಫಲಿತಾಂಶ ಎಲ್ಲಿ ವೀಕ್ಷಿಸಬೇಕು?
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು kseab.karnataka.gov.in ಅಥವಾ karresults.nic.in ಅಧಿಕೃತ ವೆಬ್ಸೈಟ್ಗಳಲ್ಲಿ ಪರಿಶೀಲಿಸಬಹುದು.
2nd puc 2026 ರ ಫಲಿತಾಂಶದಲ್ಲಿ ಕಡಿಮೆ ಅಂಕ ಬಂದರೆ ಏನು ಮಾಡಬೇಕು?
ಒಂದೊಮ್ಮೆ ನಿಮ್ಮ ಫಲಿತಾಂಶದ ಯಾವುದೇ ವಿಷಯದಲಲ್ಲಿ ಕಡಿಮೆ ಅಂಕ ಬಂದಿದೆ ಎಂದು ಅನಿಸಿದರೆ, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ನಂತರ ನಿಮ್ಮ ಅಂಕ ಹೆಚ್ಚಾಗುವ ಸಾಧ್ಯತೆಗಳಿವೆ.
2nd puc ಫಲಿತಾಂಶ ನೋಡಲು ಯಾವೆಲ್ಲಾ ವಿವರ ಬೇಕು?
ಫಲಿತಾಂಶ ಪರಿಶೀಲಿಸಲು ವಿದ್ಯಾರ್ಥಿಗಳು ಮುಖ್ಯವಾಗಿ ತಮ್ಮ Register Number (ನೋಂದಣಿ ಸಂಖ್ಯೆ) ಹೊಂದಿರಬೇಕು.
Jayanth
ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.
About Us →