ಸರ್ಕಾರದಿಂದ 56,432 ಹುದ್ದೆ ಭರ್ತಿಗೆ ಸೂಚನೆ : ಉದ್ಯೋಗ

WhatsApp Group Join Now
Telegram Group Join Now

ಕರ್ನಾಟದ ಸರ್ಕಾರದಿಂದ ಉದ್ಯೋಗ ಆಕಾಂಕ್ಷಿಗಳಿಗೆ ಒಂದು ಗುಡ್ ನ್ಯೂಸ್ ನೀಡಿದ್ದು, ಕರ್ನಾಟದ ಸರ್ಕಾರದ ಹಲವು ಇಲಾಖೆ ಮತ್ತು ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಬಗ್ಗೆ ಹಲವು ದಿನಗಳಿಂದ ಚರ್ಚೆ ಮಾತು ಕಥೆ ಹಾಗೂ ಅಭ್ಯರ್ಥಿಗಳ ಹೋರಾಟಗಳು ನಡೆಯುತ್ತಲೇ ಇದ್ದವು, ಆದರೂ ಸಹ ಸರ್ಕಾರವು ಇದಕ್ಕೆ ಸ್ಪಂದಿಸದೆ, ನೇಮಕಾತಿ ಪ್ರಕಿಯೆ ಮಂದಗತಿಯಲ್ಲಿ ಸಾಗುತ್ತಿದ್ದವು.ಆದರೆ ಸರ್ಕಾರ ಈಗ ಹುದ್ದೆಗಳ ನೇಮಕಾತಿ ಮಾಡಲು ನಿರ್ಧಾರಿಸಲಾಗಿದೆ.

ಖಾಲಿ ಹುದ್ದೆಗಳ ನೇಮಕಕ್ಕೆ ಸರ್ಕಾರದಿಂದ ಚಾಲನೆ

ಹೌದು, ಹಲವು ಹೋರಾಟಗಳ ನಂತರ ಸರ್ಕಾರದ ಕಡೆಯಿಂದ ಹಸಿರು ನಿಶಾನೆ ದೊರೆತಂತೆಯೇ ಕಾಣುತ್ತಿದೆ. ವಿದ್ಯಾರ್ಥಿಗಳ, ಭಯಕೆ, ಪ್ರತಿಭಟನೆ ಮತ್ತು ಹೋರಾಟಗಳ ಫಲವಾಗಿ ಸರ್ಕಾರವು ಗುರುವಾರ (ಫೆಬ್ರವರಿ, 26) ರಂದು ನಡೆದ ಸಚಿವ ಸಂಪುಟದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಚಿವ ಸಂಪುಟದಲ್ಲಿನ ತೀರ್ಮಾನ

ಫೆಬ್ರವರಿ 26,ಗುರುವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಖಾಲಿಯಿರುವ ಹುದ್ದೆಗಳ ಪೈಕಿ 56432 ಹುದ್ದೆಗಳಿಗೆ 30 ದಿನಗಳೋಳಗಾಗಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

2022 ರಲ್ಲಿ ನೇಮಕಾತಿ ಮೀಸಲಾತಿ ಮತ್ತು ರೋಸ್ಟರ್ ಬಿಂದು ಶೇ 56% ಹೆಚ್ಚಳವಾಗಿದ್ದು, ಈಗ ಸರ್ಕಾರ ಶೇ 50% ಅನ್ವಯ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲು ಸೂಚನೆ ನೀಡಲಾಗಿದೆ.

ಶೇ 56 % ರ ಮೀಸಲಾತಿಗೆ ಹೈಕೋರ್ಟ್ ತಡೆ ಹಿನ್ನಲೆ

2022ರಲ್ಲಿ ರಾಜ್ಯ ಸರ್ಕಾರ ನೇಮಕಾತಿ ಪ್ರಕ್ರಿಯೆ ವೇಳೆಯಲ್ಲಿ ಮೀಸಲಾತಿಯನ್ನು ಶೇ 50 ರಿಂದ ಶೇ 56 ಕ್ಕೆ ಹೆಚ್ಚಿಸಿದ್ದರಿಂದ, ಈ ಮೀಸಲಾತಿಗೆ ಹೈಕೋರ್ಟ್ ತಡೆ ನೀಡಿರುವುದರಿಂದ ಸರ್ಕಾರ ಈ ಮೊದಲೇ ಇದ್ದ ಶೇ 50 ರ ಅನ್ವಯ ಈ 56432 ಹುದ್ದೆಗಳಿಗೆ ಅನ್ವಯಿಸುವಂತೆ ಸೂಚನೆಯನ್ನು ನೀಡಲಾಗಿದೆ.

ಅಂದರೆ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ 15% ಮತ್ತು ಪರಿಶಿಷ್ಟ ಪಂಗಡ 3% ರಂತೆ ಮೀಸಲಾತಿ ನೀಡಲಾಗುತ್ತದೆ.

30 ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲು ಸೂಚನೆ

ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ ಸಂತೋಷದ ಸುದ್ದಿಯೇನ್ನುವಂತೆ ಗುರುವಾರ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಿದಂತೆ ಈ ಮೇಲೆ ತಿಳಿಸಿರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಇನ್ನೂ 30 ದಿನಗಳಲ್ಲಿ ಪ್ರಾರಂಭಿಸಬೇಕು ಎಂದು ಸೂಚನೆಯನ್ನು ಹೊರಡಿಸಲಾಗಿದೆ.

Karnataka Govt job recruitment news

ಸರ್ಕಾರದ ಈ ತೀರ್ಮಾನಕ್ಕೆ ಮುಖ್ಯ ಕಾರಣ

ರಾಜ್ಯದ ಇತರೆ ಪ್ರಮುಖ ನಗರಗಳಾದ ಬೆಂಗಳೂರು, ಧಾರವಾಡ ಮತ್ತು ವಿಜಯಪುರ ಜಿಲ್ಲೆಗಳ್ಳಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯನ್ನು ಹೊಂದಿರುವ ಸಾವಿರಾರು ಅಭ್ಯರ್ಥಿಗಳು ಹಲವಾರು ವರ್ಷಗಳಿಂದ ಓದುತ್ತಾ ಅಧಿಸೂಚನೆಯ ಕಡೆ ಮುಖ ಮಾಡಿ ನೋಡುತ್ತಿದ್ದರು.

ಆದರೂ ಸಹ ಸರ್ಕಾರದ ಇತ್ತೀಚಿನ 2-3 ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಅಷ್ಟು ದೊಡ್ಡ ಮಟ್ಟದ ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಿರಲಿಲ್ಲ.ಹಲವು ದಿನಗಳಿಂದ ಅಭ್ಯರ್ಥಿಗಳು ಹೋರಾಟ ಮತ್ತು ಪ್ರತಿಭಟನೆಯನ್ನು ಮಾಡುತ್ತ ಬಂದಿದ್ದವು.

ಧಾರವಾಡದಲ್ಲಿ ದಿನಾಂಕ ಫೆಬ್ರವರಿ 24 ರಂದು ನಡೆದ ದೊಡ್ಡ ಮಟ್ಟದ ಯುವ ಜನತೆಯ ಹೋರಾಟದಿಂದ ಎಚ್ಚೆತ್ತ ಸರ್ಕಾರ ಈ ತೀರ್ಮಾನವನ್ನು ತನ್ನ ಸಚಿವ ಸಂಪುಟದಲ್ಲಿ ಮಾಡಿದೆ.

ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ.

ರಾಜ್ಯದಲ್ಲಿ ವಿವಿಧ ಇಲಾಖೆಗಳಿಂದ ಸರಿ ಸುಮಾರು 2.5 ಲಕ್ಷಕ್ಕೂ ಹೆಚ್ಚಿನ ಹುದ್ದೆಗಳು ಖಾಲಿಯಾಗಿದ್ದೂ, ಇದರ ಭರ್ತಿಯ ಬಗ್ಗೆ ರಾಜ್ಯ ಸರ್ಕಾರ ಹೆಚ್ಚಾಗಿ ತಲೆ ಕೆಡಸಿಕೊಂಡಿರಲಿಲ್ಲ… ಆದರೆ ರಾಜ್ಯದಲ್ಲಿ ಯುವಶಕ್ತಿಯ ಹೋರಾಟದ ಕಾವು ಹೆಚ್ಚುತ್ತಿದ್ದಂತೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ.ಇದರ ಪರಿಣಾಮವಾಗಿ ನೇಮಕಾತಿಗೆ ಚಾಲನೆ ನೀಡುವಂತೆ ಸೂಚನೆ ನೀಡಲಾಗಿದೆ.

ಇನ್ನೂ ಕೇವಲ ಒಂದು ತಿಂಗಳಿನಲ್ಲಿ ನೇಮಕಾತಿ ಅಧಿಸೂಚನೆ

ಮೇಲೆ ಹೇಳಿರುವಂತೆ ಇನ್ನೂ ಒಂದು ತಿಂಗಳ ಕಾಲಾವಧಿಯಲ್ಲಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲು ಎಲ್ಲಾ ಸಂಭಾವನಿಯತೆ ಇದೆ. ಆದ್ದರಿಂದ ಅಭ್ಯರ್ಥಿಗಳು ತಮ್ಮ ತಮ್ಮ ಅಭ್ಯಾಸವನ್ನು ಚುರುಕುಗೊಳಿಸಿಕೊಂಡು ಪರೀಕ್ಷೆಗೆ ಸಿದ್ದರಾಗಬೇಕಿದೆ.

ಯಾವುದೇ ಕ್ಷಣದಲ್ಲಾದರೂ ಅಧಿಸೂಚನೆ ಹೊರ ಬೀಳುವ ಸಂಭವವಿದೆ. ಈ ಅಧಿಸೂಚನೆಗಳ ಬಗ್ಗೆ ವೇಗವಾಗಿ ತಿಳಿಯಲು ನಮ್ಮ ಟೆಲಿಗ್ರಾಂ ಚಾನೆಲ್ ಅನ್ನು ಅನುಸರಿಸಿ.

ಉದ್ಯೋಗ ಆಕಾಂಕ್ಷಿಗಳಿಗೆ ಪ್ರಮುಖ ಸಲಹೆಗಳು

  • ಸಮಯದ ಅಭಾವವಿರುವುದರಿಂದ ಓದುವುದನ್ನು ವೇಗಗೊಳಿಸಿ.
  • ಓದುವಾಗ ವಿಷಯದ ಆಳವಾದ ಜ್ಞಾನವನ್ನು ಪಡೆದು ಕೊಳ್ಳಿ.
  • ಎಲ್ಲಾ ವಿಷಯಗಳ ಮೇಲೆ ಹಿಡಿತವನ್ನು ಸಾಧಿಸಿ.
  • ಪಠ್ಯಕ್ರಮವನ್ನು ಸರಿಯಾಗಿ ಅರ್ಥೈಸಿಕೊಂಡು, ಅಭ್ಯಾಸ ಮಾಡಿ.
  • ಓದುವಾಗ ಸಮಯವನ್ನು ಸರಿಯಾಗಿ ನಿರ್ವಹಣೆ ಮಾಡಿ.
  • ಹಳೆಯ ವರ್ಷದ ಪ್ರಶ್ನೆ ಪತ್ರಿಕೆಯನ್ನು ಅಭ್ಯಾಸಕ್ಕೆ ಪೂರಕವಾಗಿ ಬಳಸಿಕೊಳ್ಳಿ.

ಅಧಿಸೂಚನೆಗೂ ಮೊದಲೇ ತಯಾರಿಯನ್ನು ಶುರು ಮಾಡಿದರೆ, ಉತ್ತಮವಾದ ಫಲಿತಾಂಶವನ್ನು ನೋಡಬಹುದು. ಪುನರ್ ಮನನ ಎನ್ನುವುದು ಸಾಧನೆಗೆ ಕೀಲಿ ಕೈ ಇದ್ದಹಾಗೆ.

ಕೊನೆಯದಾಗಿ

ಇನ್ನೇನು ಕೆಲವೇ ದಿನಗಳಲ್ಲಿ ಅಧಿಸೂಚನೆಯ ಮಹಾ ಪೂರವೇ ಇರುವುದರಿಂದ, ಉತ್ತಮವಾದ ಫಲಿತಾಂಶವನ್ನು ಪಡೆಯಲು ಚೆನ್ನಾಗಿ ಅಭ್ಯಾಸ ಮಾಡಿ. ದೇಶದಲ್ಲಿನ ಯುವ ಶಕ್ತಿಯ ಹೋರಾಟದ ಫಲವೇ ಇಂದು ಸರ್ಕಾರ ಮಾಡಿರುವ ಈ ನಿರ್ಧಾರಕ್ಕೆ ಕೈ ಗನ್ನಡಿಯಂತೆ ತೋರುತ್ತದೆ.


KPSC ಮತ್ತು KEA ಕಡೆಯಿಂದ ನೇಮಕಾತಿ ಯಾವಾಗ ಪ್ರಾರಂಭವಾಗುತ್ತದೆ?

ಸರ್ಕಾರದ ಸಂಪುಟ ಸಮಿತಿಯ ಸಭೆಯ ನಿರ್ಧಾರದಂತೆ ಇನ್ನೂ ಕೇವಲ 30 ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸೂಚನೆಯನ್ನು ನೀಡಲಾಗಿದೆ.

ಒಟ್ಟು ಎಷ್ಟು ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚಾಲನೆಗೆ ಸಂಪುಟ ಸಮಿತಿ ಒಪ್ಪಿಗೆ ನೀಡಿದೆ?

ಫೆಬ್ರವರಿ 26 ರಂದು ನಡೆದ ಸಚಿವ ಸಂಪುಟ ಸಮಿತಿಯಲ್ಲಿ 56,432 ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಚಾಲನೆ ನೀಡಲು ಸೂಚನೆ ನೀಡಲಾಗಿದೆ.

ಈಗಿನ ನೇಮಕಾತಿಗಳಿಗೆ ಎಷ್ಟು ಶೇಕಡಾ ಮೀಸಲಾತಿಯನ್ನು ಪರಿಗಣಿಸಲಾಗುತ್ತದೆ?

ಸಚಿವ ಸಂಪುಟದ ತೀರ್ಮಾನದಂತೆ ಶೇ 56% ಮೀಸಲಾತಿಯ ಬದಲು 2022ರ ಪೂರ್ವದಂತೆ ಶೇ 50% ಮೀಸಲಾತಿಯನ್ನು ಅನ್ವಯವಾಗುವಂತೆ ಈ 56432 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಮೀಸಲಾತಿಯ ಬಗ್ಗೆ ಹೈಕೋರ್ಟ್ ತಡೆ ಏಕೆ?

2022ರ ನಂತರ ರಾಜ್ಯ ಸರ್ಕಾರ ನೇಮಕಾತಿಯಲ್ಲಿ ಶೇ 50% ಬದಲು ಶೇ 56% ವನ್ನು ನೀಡುವಂತೆ ಆದೇಶವನ್ನು ಹೋರಾಡಿಸಿರುತ್ತದೆ. ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿ, ಹೈಕೋರ್ಟ್ ಈಗ ಈ ವಿಚಾರವಾಗಿ ತಡೆಯನ್ನು ನೀಡಿದೆ.

About Content Writer
Jayanth

Jayanth

ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.

About Us →
WhatsApp Group Join Now
Telegram Group Join Now

Leave a Comment