Table of Contents
ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಅತಿ ಪ್ರಮುಖ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆಯ 29ನೇ ಕಂತಿನ ಹಣ(Gruhalakshmi 29th Installment) ಬಿಡುಗಡೆಯ ಹೊಸ್ತಿಲಿನಲ್ಲಿದೆ.
ಸರ್ಕಾರದ ಕಡೆಯಿಂದ ಬರುವ ಈ ಸಹಾಯ ಧನದಿಂದ ಮಹಿಳೆಯರು ಸ್ವಂತ ಉದ್ಯೋಗ ಅಥವಾ ಮನೆಗೆ ಅಗತ್ಯವಾದ ವಸ್ತುಗಳ ಖರೀದಿಗೆ ಸಹಾಯ ಆಗಲೆಂಬ ಹಂಬಲದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ಗೃಹಲಕ್ಷ್ಮಿ ಯೋಜನೆ ಎಂದರೇನು?
ಗೃಹಲಕ್ಷ್ಮಿ ಯೋಜನೆ ಎನ್ನುವುದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಒಂದು ಜನಪ್ರಿಯ ಕಲ್ಯಾಣ ಯೋಜನೆಯಾಗಿದೆ. ಇದರ ಮುಖ್ಯ ಉದ್ದೇಶ ಒಂದು ಕುಟುಂಬದ ಮಹಿಳಾ ಮುಖ್ಯಸ್ಥೆಗೆ ಆರ್ಥಿಕ ನೆರವು ನೀಡುವುದು.ಇದರಿಂದ ಮಹಿಳಾ ಸಬಲೀಕರಣ ಮಾಡುವ ಗುರಿಯನ್ನು ಹೊಂದಿದೆ.
2023ರಂದು ಪ್ರಾರಂಭವಾದ ಈ ಯೋಜನೆಯು ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಾದ ಗೃಹ ಜ್ಯೋತಿ, ಅನ್ನಭಾಗ್ಯ, ಶಕ್ತಿ ಮತ್ತು ಯುವ ನಿಧಿ ಇವುಗಳಲ್ಲೇ ಒಂದಾಗಿದೆ.ಇದು ಮಧ್ಯಮ ಮತ್ತು ಅದಕ್ಕೂ ಕೆಳಗಿನ ವರ್ಗದ ಜನ ಸಾಮಾನ್ಯರಿಗೆ ಉತ್ತಮ ಯೋಜನೆಯಾಗಿ ರೂಪಗೊಂಡಿದೆ.
ಈ ಯೋಜನೆಯ ಪ್ರಮುಖ ಅಂಶಗಳೆಂದರೆ:
- ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಪ್ರತಿ ತಿಂಗಳಂತೆ ಹಣಕಾಸು ಸಹಾಯ ನೀಡುವುದು.
- ಪ್ರತಿ ತಿಂಗಳು ₹2000 ಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವುದು
- ಮಧ್ಯಾವರ್ತಿಯ ಸಹಾಯವಿಲ್ಲದೆ,ಡಿಬಿಟಿ (Direct Benefit Transfer) ಮೂಲಕ ಹಣ ವರ್ಗಾವಣೆ
- ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಈ ಯೋಜನೆ ಲಾಭ ಪಡೆಯಲು ಇರಬೇಕಾದ ಅರ್ಹತೆಗಳೇನು?
ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಅಥವಾ ಹೊಸದಾಗಿ ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರಿಗೆ ಇರಬೇಕಾದ ಅರ್ಹತೆಗಳು :
- ಮಹಿಳೆ ಕುಟುಂಬದ ಮುಖ್ಯಸ್ಥರಾಗಿರಬೇಕು.
- ಮುಖ್ಯವಾಗಿ ಆ ಮಹಿಳೆ ಕರ್ನಾಟಕದ ನಿವಾಸಿಯಾಗಿರಬೇಕು.
- ಮಾನ್ಯವಾದ ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ ಹೊಂದಿರಬೇಕು.
- ಸರ್ಕಾರ ನಿಗದಿಪಡಿಸಿದ ಇತರೆ ಅರ್ಹತೆ ಹೊಂದಿರಬೇಕು.
ಗೃಹಲಕ್ಷ್ಮಿ 29ನೇ ಕಂತಿನ ಹಣದ ಬಗ್ಗೆ (Gruhalakshmi 29th installment )
ಎಲ್ಲಾ ಫಲಾನುಭವಿಗಳಿಗೆ ಇಲ್ಲಿಯವರೆಗೆ ಗೃಹಲಕ್ಷ್ಮಿ ಯೋಜನೆಯ 28 ಕಂತುಗಳ ಹಣವನ್ನು ಬಿಡುಗಡೆ ಮಾಡಿ ಜಮೆ ಮಾಡಲಾಗಿದೆ. ಈಗ 29ನೇ ಕಂತಿನ ಹಣವನ್ನು ಬಿಡುಗಡೆ ಮಾಡುವ ಹೊಸ್ತಿಲಲ್ಲಿ ಇದೆ. ಇಷ್ಟು ದಿನಗಳಿಂದ ಕಾಯುತ್ತಿದ್ದ 29ನೇ ಕಂತಿನ ಹಣವನ್ನು ಖಾತೆಗೆ ಜಮೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ.
ಪ್ರತಿ ಜಿಲ್ಲೆಯ ಫಲಾನುಭವಿಗಳಿಗೆ ಹಂತ ಹಂತವಾಗಿ ಯೋಜನೆಯ 29ನೇ ಕಂತಿನ ಹಣವನ್ನು ಜಮೆ ಮಾಡಲಾಗುತ್ತದೆ. ಕೆಲವು ದಿನಗಳ ನಂತರ ಎಲ್ಲಾ ಫಲಾನುಭವಿಗಳಿಗೆ ಪ್ರಸ್ತುತ ತಿಳಿಸಿರುವ ಕಂತಿನ ₹2000 ಹಣವನ್ನು dbt ಮೂಲಕ ಜಮೆ ಮಾಡಲಾಗುವುದು.
ಹಣ ಜಮೆಯಾಗುವ ಮೊದಲು ಯಾವೆಲ್ಲಾ ಹಂತಗಳು ಪೂರೈಸಬೇಕು.
- ಪ್ರಸ್ತುತ ಕಂತಿನ ಹಣ ಜಮೆ ಮಾಡಲು ಅರ್ಹವಿರುವ ಫಲಾನುಭವಿಗಳ ಪಟ್ಟಿ ಸಿದ್ದಗೊಳಿಸಲಾಗುತ್ತದೆ.
- ಫಲನುಭವಿಗಳ ಕಂತಿನ ₹2000 ವನ್ನು ನೇರವಾಗಿ dbt ಮೂಲಕ ಖಾತೆಗೆ ಜಮೆ ಮಾಡಲಾಗುತ್ತದೆ.
- ಜಿಲ್ಲೆಗಳಲ್ಲಿ ಹಂತ ಹಂತವಾಗಿ ಹಣವನ್ನು ಜಮೆ ಮಾಡುವ ಕಾರ್ಯ ಪ್ರಾರಂಭವಾಗುತ್ತದೆ.
ಪೇಮೆಂಟ್ ಸ್ಥಿತಿ ತಿಳಿಯುವುದು ಹೇಗೆ?(Gruhalakshmi 29th Installment status check)
ಗೃಹಲಕ್ಷ್ಮಿ ಹಣವನ್ನು ಎಲ್ಲಾ ಫಲಾನುಭವಿಗಳಿಗೆ ಒಂದೇ ದಿನ ಜಮೆಯಾಗುದಿಲ್ಲ. ಹಂತ ಹಂತವಾಗಿ ಎಲ್ಲಾ ಜಿಲ್ಲೆಯ ಫಲಾನುಭವಿಗಳಿಗೆ ಹಣವನ್ನು ಜಮೆ ಮಾಡಲಾಗುತ್ತದೆ
ಪೇಮೆಂಟ್ ಸ್ಥಿತಿ ನೋಡುವ ವಿಧಾನ :
ನಿಮ್ಮ ಎಲ್ಲಾ ಕಂತಿನ ಹಣವು ಜಮೆಯಾಗಿರುವ ಬಗ್ಗೆ ತಿಳಿದುಕೊಳ್ಳಲು DBT ಕರ್ನಾಟಕ ಆಪ್ ಲಾಗಿನ್ ಆಗಿ ನೋಡಿಕೊಳ್ಳಬಹುದು.ಈ ಬಾರಿಯ gruhalakshmi 29th installment ಸ್ಥಿತಿ ಅಥವಾ ಜಮೆಯಾಗಿರುವ ಮಾಹಿತಿ ಪಡೆಯಲು ಈ ಕೆಳಗೆ ಹೇಳಿರುವ ಹಂತಗಳನ್ನು ಪಾಲಿಸಿ.
- ಪ್ಲೇಯಸ್ಟೋರ್ ಮೂಲಕ DBT ಕರ್ನಾಟಕ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
- ಆಧಾರ್ ನಂಬರ್ ಬಳಸಿ ಹಾಗೂ ಒಟಿಪಿ ನಮೂದಿಸಿ ಲಾಗಿನ್ ಆಗಬೇಕು.
- ಲಾಗಿನ್ ಮಾಡಬೇಕಿರುವಾಗ PIN ಅನ್ನು ನಮೂದಿಸಿ.
- ಈ ಪಿನ್ ನಂತರದಲ್ಲಿ ಆಪ್ ತೆರೆಯಲು ಸಹಕಾರಿಯಾಗುತ್ತದೆ.

ಹಣ ಜಮೆಯಾಗಲು ವಿಳಂಬಕ್ಕೆ ಕಾರಣಗಳೇನು?
ಕೆಲ ಫಲಾನುಭವಿಗಳಿಗೆ ಹಣ ತಡವಾಗಿ ಜಮೆಯಾಗುವ ಸಂಭವಗಳು ಇವೆ. ಅದಕ್ಕೆ ಮುಖ್ಯವಾಗಿ ಈ ಕೆಳಗೆ ತಿಳಿಸಿರುವ ಅಂಶಗಳು ಕಾರಣವಾಗಿರಬಹುದು.
- ಆಧಾರ್ ಕಾರ್ಡ್ ಗೆ ಬ್ಯಾಂಕ್ ಖಾತೆ ಲಿಂಕ್ ಆಗದೇ ಇರುವುದು.
- NPCI ಮಾಪಿಂಗ್ ಆಗದೇ ಇರುವುದು.
- kyc ದಾಖಲೆಗಳಲ್ಲಿ ಸಮಸ್ಯೆ
- ಬ್ಯಾಂಕ್ ತಾಂತ್ರಿಕ ಸಮಸ್ಯೆ
- ಫಲಾನುಭವಿಗಳ ದಾಖಲೆ ಅಥವಾ ನೈಜ್ಯತೆ ಪರಿಶೀಲನೆ
ಹಣ ಬಂದಿಲ್ಲ ಎಂದರೆ ಏನು ಮಾಡಬೇಕು?
ಸಾಮಾನ್ಯವಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದು ಸಹಜವಾಗಿಯೇ ವಿಳಂಬವಾಗುತ್ತದೆ. ಅದಾಗಿಯೂ ನಿರ್ದಿಷ್ಟ ಗೃಹಲಕ್ಷ್ಮಿ ಯೋಜನೆಯ ಕಂತಿನ ಹಣ ಬಂದಿಲ್ಲ ಎಂದರೆ,
- ಮೊದಲು ನಿಮ್ಮಹಣ ಜಮೆಯಾಗಿರುವ ಸ್ಥಿತಿಯನ್ನು DBT ಆಪ್ ಮೂಲಕ ಪರಿಶೀಲಿಸಿ.
- ತದ ನಂತರ ಬ್ಯಾಂಕ್ ಪಾಸ್ ಬುಕ್ ಎಂಟ್ರಿ ಮಾಡಿಸಿಕೊಳ್ಳಿ.ಆಗಲೂ ಬರದೇ ಇದ್ದಲ್ಲಿ,
- ನಂತರ CDPO ಕಚೇರಿಯನ್ನು ಸಂಪರ್ಕಿಸಿ ನಿಮ್ಮ ಸಮಸ್ಯೆಯನ್ನು ವಿವರಿಸಿ.
ಕೊನೆಯದಾಗಿ
ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆಯೂ ಮಹಿಳೆಯರಿಗೆ ದೊಡ್ಡ ಮಟ್ಟದ ಆರ್ಥಿಕ ನೆರವನ್ನು ಹಾಗೂ ಮಹಿಳಾ ಸಬಲೀಕರಣಕ್ಕೆ ಸ್ಫೂರ್ತಿಯನ್ನು ನೀಡುತ್ತಿದೆ. ಗೃಹಲಕ್ಷ್ಮಿ 29ನೇ ಕಂತಿನ(Gruhalakshmi 29th installment) ಬಿಡುಗಡೆ ಮಾಡುವ ಮೂಲಕ ಲಕ್ಷಾಂತರ ಮಹಿಳೆಯರಿಗೆ ಸಹಾಯ ದೊರೆತಂತಾಗುತ್ತದೆ. ನೀವು ನಿಮ್ಮ ಹಣ ಜಮೆಯಾಗಿರುವ ಬಗ್ಗೆ ಆಗಾಗ್ಗೆ DBT ಆಪ್ ಅಥವಾ ಬ್ಯಾಂಕ್ ಗೆ ಭೇಟಿ ನೀಡಿ ಪರಿಶೀಲಿಸುವುದು ಉತ್ತಮ.
ಗೃಹಲಕ್ಷ್ಮಿ 29ನೇ ಕಂತಿನ(Gruhalakshmi 29th installment) ಹಣ ಯಾವಾಗ ಬರುತ್ತದೆ?
ಬಲ್ಲ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ ಗೃಹಲಕ್ಷ್ಮಿ 29ನೇ ಕಂತಿನ(gruhalakshmi 29th installment) ಹಣವನ್ನು ಜಮೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ.
ಹಣ ಜಮೆಯಾಗಿದೆಯೇ ಎಂದು ಹೇಗೆ ತಿಳಿದುಕೊಳ್ಳುವುದು?
ಕರ್ನಾಟಕ ಸರ್ಕಾರದ DBT ಕರ್ನಾಟಕ ಆಪ್ ಮೂಲಕ ಹಣ ಜಮೆಯಾಗಿರು ಬಗ್ಗೆ ಮಾಹಿತಿ ಪಡೆಯಬಹುದು.
ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲವಾದರೆ ಏನು ಮಾಡಬೇಕು?
ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿಲ್ಲ ಎಂದಾದರೆ, ಬ್ಯಾಂಕ್ ಮತ್ತು ಇತರೆ ದಾಖಲೆಯನ್ನು ಪರಿಶೀಲಿಸಿ, npci ಮಾಪಿಂಗ್ ಆಗಿರುವುದನ್ನು ಕನ್ಫರ್ಮ್ ಮಾಡಿಕೊಳ್ಳಿ.
Jayanth
ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.
About Us →