Table of Contents
ಕರ್ನಾಟಕ ಸರ್ಕಾರವು ವಿದ್ಯಾಭ್ಯಾಸದಲ್ಲಿ ತೊಡಗಿರುವ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು SSP Scholarship 2026 (state scholarship portal )ಮೂಲಕ ಇತರೆ ತರನಾದ ವಿದ್ಯಾರ್ಥಿವೇತನಗಳಿಗೆ ಅರ್ಜಿಯನ್ನು ಕರೆಯಲಾಗಿದೆ.
SSP Scholarship 2026
2025-26 ನೆ ಸಾಲಿನಲ್ಲಿಯು ಸಹ ಅರ್ಜಿಯನ್ನು ಸ್ವೀಕರಿಸಲಾಗಿದ್ದು, ಅರ್ಜಿಯನ್ನು ಅನುಮೋದಿಸಲಾಗಿದೆಯೋ ಅಥವಾ ತಿರಸ್ಕರಿಸಲಾಗಿದೆಯೋ ಎನ್ನುವುದರ ಬಗ್ಗೆ ಗೊಂದಲಗಳಿಗೆ ಇಲ್ಲಿದೆ ಪರಿಹಾರ.
SSP ಎಂದರೆ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ, ಈ ಮೂಲಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ, ಕೃಷಿ ಇಲಾಖೆ, ಹಿಂದುಳಿದ ವರ್ಗ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಹತ್ತು ಹಲವಾರು ಇಲಾಖೆಗಳ ವಿದ್ಯಾರ್ಥಿವೇತನವನ್ನು ಒಂದೇ ತಂತ್ರಾಂಶದಲ್ಲಿ ಅರ್ಜಿ ಸ್ವೀಕರಿಸಿ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
SSP Scholarship 2026 ಅರ್ಜಿ ಸ್ಥಿತಿ ನೋಡುವುದು ಹೇಗೆ?
- SSP scholarship ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- 2025-26 ನೆ ಸಾಲಿನ ವಿದ್ಯಾರ್ಥಿವೇತನದಡಿ ಈಗಾಗಲೇ ssp ಯಲ್ಲಿ ಖಾತೆ ಸೃಜಸಿರುವ ವಿದ್ಯಾರ್ಥಿಗಳ ಮೇಲೆ ಕ್ಲಿಕ್ ಮಾಡಿ.
- ವಿದ್ಯಾರ್ಥಿಯ user id ಮತ್ತು ಪಾಸ್ವರ್ಡ್ ಜೊತೆ ಕ್ಯಾಪ್ಟರ್ ಕೋಡ್ ಅನ್ನು ನಮೂದಿಸಿ ಸ್ಟೂಡೆಂಟ್ ಲಾಗಿನ್ ಮೇಲೆ ಕ್ಲಿಕ್ ಮಾಡಿ.
- ನಂತರ year wise student status ಮೇಲೆ ಕ್ಲಿಕ್ ಮಾಡಿ.
- Academic year ಅನ್ನು 2025-26 ಎಂದು ಆಯ್ಕೆ ಮಾಡಿ. ನಂತರ view ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಅರ್ಜಿ ಸ್ಥಿತಿಯ ಸಂಪೂರ್ಣ ಮಾಹಿತಿ ತೆರೆದುಕೊಳ್ಳುತ್ತದೆ.
ಹಿಂದಿನ ಎಲ್ಲಾ ವರ್ಷದ ವಿದ್ಯಾರ್ಥಿವೇತನದ ಸ್ಥಿತಿ ವೀಕ್ಷಣೆ
ಇದೆ ತರನಾಗಿ ವಿದ್ಯಾರ್ಥಿಗಳು ಹಿಂದಿನ ವರ್ಷದ ವಿದ್ಯಾರ್ಥಿವೇತನದ ಅರ್ಜಿ ಸ್ಥಿತಿಯನ್ನು ವೀಕ್ಷಿಸಬಹುದು.
ಈ ಮೇಲಿನ ಹಂತಗಳನ್ನೇ ಪಾಲಿಸಿ academic year ನಲ್ಲಿ ನಿಮಗೆ ಬೇಕಿರುವ ಶೈಕ್ಷಣಿಕ ವರ್ಷವನ್ನು ಆಯ್ಕೆ ಮಾಡಿಕೊಳ್ಳಿ (ಇಲ್ಲಿ ಕೇವಲ 2019-20 ರಿಂದ 2025-26 ರವರೆಗೆ ಮಾಹಿತಿ ಒಳಗೊಂಡಿದೆ.)
ನಂತರ view ಮೇಲೆ ಕ್ಲಿಕ್ ಮಾಡಿದರೆ ಹಿಂದಿನ ವರ್ಷದ ಮಾಹಿತಿ ದೊರೆಯುತ್ತದೆ.
SSP ಪೋರ್ಟಲ್ ನಲ್ಲಿ ಲಾಗಿನ್ ಸಮಸ್ಯೆಗಳಾದಲ್ಲಿ ಪರಿಹಾರ?
ಲಾಗಿನ್ ಮಾಡುವಾಗ ಇತರೆ ಸಮಸ್ಯೆಗಳು ಎದುರಾಗುವುದುಂಟು, ಅದನ್ನು ಈ ಕೆಳಗಿನ ಮಾಹಿತಿಯ ಮೂಲಕ ಪರಿಹಾರಿಸಿಕೊಳ್ಳಬಹುದು.
ವಿದ್ಯಾರ್ಥಿಯ user id ಮರೆತಿದ್ದರೆ…?
ಈ ವೇಳೆಯಲ್ಲಿ ಲಾಗಿನ್ ಪೇಜ್ ನ ಕೆಳ ಭಾಗದಲ್ಲಿ ‘ನಿಮ್ಮ ಎಸ್ ಎಸ್ ಪಿ ಐ ಡಿ ಯನ್ನು ತಿಳಿಯಿರಿ’ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಆಧಾರ್ ನಂಬರ್ ನಮೂದಿಸಿ Get student id ಮೇಲೆ ಕ್ಲಿಕ್ ಮಾಡಿ ಪಡೆದುಕೊಳ್ಳಬಹುದು.

ವಿದ್ಯಾರ್ಥಿಯು ಪಾಸ್ವರ್ಡ್ ಮರೆತಿದ್ದರೆ..?
ಒಂದು ವೇಳೆ ಪಾಸ್ವರ್ಡ್ ಮರೆತಿದ್ದರೆ ಲಾಗಿನ್ ಪೇಜ್ ನ ಕೆಳ ಭಾಗದಲ್ಲಿ ‘ಪಾಸ್ವರ್ಡ್ ಮರೆತಿರುವಿರಾ’ ಮೇಲೆ ಕ್ಲಿಕ್ ಮಾಡಿ.
ನಿಮ್ಮ user id ಮತ್ತು ನೀವು ಹೊಸ ಪಾಸ್ವರ್ಡ್ ರಚಿಸಿರುವುದನ್ನು ಎರಡು ಬಾರಿ ನಮೂದಿಸಿ ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ.
ನೋಂದಾಯಿಸಿದ ಮೊಬೈಲ್ ನಂಬರ್ ಗೆ otp ಬರುತ್ತದೆ. ಅದನ್ನು ನಮೂದಿಸಿ ಪಾಸ್ವರ್ಡ್ ಅನ್ನು ಬದಲಾಯಿಸ ಬಹುದು….
SSP Scholarship ಅನುಮೋದನೆಯ ನಂತರದ ಹಂತ?
ನಿಮ್ಮ ಅರ್ಜಿ ಸಲ್ಲಿಕೆಯ ನಂತರ ಅರ್ಜಿಯನ್ನು ಹಲವು ಹಂತಗಳಲ್ಲಿ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಅರ್ಜಿಯು ಎಲ್ಲಾ ಹಂತದಲ್ಲಿಯೂ ಸರಿಯಾಗಿದೆ ಎಂದು ಅನಿಸಿದರೆ ಅನುಮೋದನೆ ದೊರೆಯುತ್ತದೆ.
ಅನುಮೋದನೆಯ ನಂತರ ನಿಮಗೆ ಮಂಜೂರಾದ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ DBT ಮೂಲಕ ಜಮೆ ಮಾಡಲಾಗುತ್ತದೆ.
ಹಣ ಜಮೆಯಾಗಿರುವ ಅಥವಾ ಇನ್ನೂ ಪ್ರಗತಿಯಲ್ಲಿದ್ದರೆ ಅದನ್ನು ಸಹ ಅರ್ಜಿ ಸ್ಥಿತಿಯಲ್ಲಿ ತಿಳಿಯಬಹುದು.
ಸೂಚನೆ :-ಇದೆ ತರಹದ ಹೆಚ್ಚಿನ ಮಾಹಿತಿಯನ್ನು ಪಡೆಯಲು ಈಗಲೇ ನಮ್ಮ ಟೆಲಿಗ್ರಾಂ ಚಾನೆಲ್ ಅನ್ನು ಅನುಸರಿಸಿ.
SSP Scholarship Status ನಲ್ಲಿ ಕಾಣುವ ವಿವಿಧ Status ಅರ್ಥಗಳು..
ಅರ್ಜಿ ಸಲ್ಲಿಸಲಾಗಿದೆ (Application submitted ):- ಅರ್ಜಿ ಸ್ಥಿತಿ ಈ ರೀತಿಯಾಗಿದ್ದರೆ, ನಿಮ್ಮ ಅರ್ಜಿ ಪರಿಪೂರ್ಣವಾಗಿ ಸಲ್ಲಿಕೆಯಾಗಿದೆ ಎಂದು ಅರ್ಥ.
ಪರಿಶೀಲಿಸಲಾಗುತ್ತಿದೆ (Under Verification) :- ನಿಮ್ಮ ಅರ್ಜಿಯನ್ನು ಹಲವು ಹಂತಗಳಲ್ಲಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು.
ಅನುಮೋದಿಸಲಾಗಿದೆ(Approved) :- ಅರ್ಜಿಯನ್ನು ಅನುಮೋದಿಸಲಾಗಿದೆ. ಮತ್ತು ವಿದ್ಯಾರ್ಥಿವೇತನಕ್ಕೆ ಅರ್ಹ.
ಹಣ ಸಂದಾಯ ಪ್ರಾರಂಭಿಸಲಾಗಿದೆ.(Payment initiated ):- ವಿದ್ಯಾರ್ಥಿವೇತನವನ್ನು DBT ಮೂಲಕ ಜಮೆ ಮಾಡುವ ಕಾರ್ಯ ಪ್ರಾರಂಭವಾಗಿದೆ.
ಅರ್ಜಿ ತಿರಸ್ಕೃತವಾಗಿದೆ(Application Rejected) :- ಅರ್ಜಿಯನ್ನು ಕೆಲವು ಕಾರಣಗಳಿಂದ ತಿರಸ್ಕರಿಸಲ್ಪಟ್ಟಿದೆ.
Sanction ಆಗಿದ್ದರೂ ಹಣ ಬಂದಿಲ್ಲವಾದರೆ ಏನು ಮಾಡಬೇಕು?
ನಿಮ್ಮ ಅರ್ಜಿಯ ಸ್ವಿಕೃತಿಯನ್ನು ತಗೆದುಕೊಂಡು ನಿಮ್ಮ ವಿದ್ಯಾರ್ಥಿವೇತನಕ್ಕೆ ಸಂಬಂದಿಸಿದ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ ಮಾಹಿತಿಯನ್ನು ಪಡೆಯಬಹುದು.
ಹಣ ಸಂದಾಯ ಆಗದೇ ಇರಲು ಮುಖ್ಯ ಕಾರಣಗಳು
- ನಿಮ್ಮ ಹೆಸರು ಆಧಾರ್ ಕಾರ್ಡ್ ಮತ್ತು ಶೈಕ್ಷಣಿಕ ದಾಖಲೆಗಳಲ್ಲಿ ಒಂದೇ ತರನಾಗಿ ಇರದೇ ಇರುವುದು…
- ನಿಮ್ಮ ಆಧಾರ್ ನಂಬರ್ ಮತ್ತು ಬ್ಯಾಂಕ್ ಖಾತೆಯು seeding ಆಗದೇ ಇರುವುದು…
- ಮಾನ್ಯವಾದ ದಾಖಲೆಯನ್ನು ಹೊಂದದೆ ಇರುವುದು..
SSP Scholarship 2026 ರ ಅರ್ಜಿ ಸ್ಥಿತಿ ತಿಳುಯುವುದು ಹೇಗೆ? ( How to check SSP Scholarship 2026 status? )
SSP ಅಧಿಕೃತ ವೆಬ್ಸೈಟ್ ನಲ್ಲಿ user id ಮತ್ತು ಪಾಸ್ವರ್ಡ್ ಮೂಲಕ ಲಾಗಿನ್ ಆಗಿ.year wise student status ಕ್ಲಿಕ್ ಮಾಡಿ. 2025-26 ನೆ ಶೈಕ್ಷಣಿಕ ವರ್ಷವನ್ನು ಆಯ್ಕೆ ಮಾಡಿ ಸ್ಥಿತಿಯನ್ನು ತಿಳಿಯಿರಿ.
ಯಾಕೆ SSP Scholarship ಹಣ ಸಂದಾಯವಾಗಿಲ್ಲ? ( Why SSP Scholarship Amount is not credited? )
ಹಣ ಸಂದಾಯವಾಗದಿರಲು ಹಲವು ಕಾರಣಗಳಿವೆ, ಅದರಲ್ಲಿಯೂ ಆಧಾರ್ seeding ಆಗದೇ ಇರುವುದು ಮುಖ್ಯ ಕಾರಣವಾಗಿರಬಹುದು..
ಹಿಂದಿನ ವರ್ಷದ SSP Scholarship ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ? ( How to check previous year ssp scholarship status? )
ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ನಿಮ್ಮ user id ಮತ್ತು ಪಾಸ್ವರ್ಡ್ ಮೂಲಕ ಲಾಗಿನ್ ಆಗಿ.year wise student status ಮೂಲಕ ನಿಮಗೆ ಬೇಕಿರುವ ಶೈಕ್ಷಣಿಕ ವರ್ಷವನ್ನು ಆಯ್ಕೆ ಮಾಡಿ ಸ್ಥಿತಿಯನ್ನು ವೀಕ್ಷಿಸಬಹುದು.
Jayanth
ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.
About Us →