ಹಸು ಕೊಟ್ಟಿಗೆ (Cow Shed) ನಿರ್ಮಾಣಕ್ಕೆ 57,000₹ ಸಹಾಯಧನ: ಅರ್ಜಿ ಸಲ್ಲಿಸುವುದು ಹೇಗೆ?

WhatsApp Group Join Now
Telegram Group Join Now

Table of Contents

ರೈತರ ಉಪಯೋಗಕ್ಕೆ ಹಸು ಕೊಟ್ಟಿಗೆ ( Cow shed ) ನಿರ್ಮಾಣ ಮಾಡಲು ಸಹಾಯವಾಗಲು ಸರ್ಕಾರದ ಕಡೆಯಿಂದ 57,000 ರೂ. ಸಹಾಯಧನವನ್ನು ನೀಡುತ್ತಿದೆ.

ಹೌದು, ನರೇಗಾ ಯೋಜನೆಯಡಿಯಲ್ಲಿ ವೈಯಕ್ತಿಕ ಕಾಮಗಾರಿಯಡಿ ರೈತರಿಗೆ ನೆರವಾಗಲು ಮತ್ತು ಕೃಷಿ ಉದ್ದೇಶಕ್ಕಾಗಿ ಜಾನುವಾರುಗಳ ಸಾಕಾಣಿಕೆ ಮಾಡಲು ಸಹಾಯವಾಗಲೆಂದು ಹಸು ಮತ್ತು ಎಮ್ಮೆ ಕಟ್ಟಲು ಕೊಟ್ಟಿಗೆ ನಿರ್ಮಾಣ ಮಾಡಿಕೊಳ್ಳಬಹುದಾಗಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 57,000 ರೂ ಗಳನ್ನು ನೀಡಲಾಗುತ್ತಿದ್ದೂ, ಇದರಲ್ಲಿ ಸಾಮಗ್ರಿ ಮತ್ತು ಕಾಮಗಾರಿ ವೆಚ್ಚ ಎರಡು ಒಳಗೊಂಡಿದೆ. ರೈತರು ಇದರ ಸದುಪಯೋಗ ಪಡೆಯಬಹುದು.

ಈ ಯೋಜನೆಯಡಿ ಸಹಾಯಧನ ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು?, ಯಾರಿಗೆ ಅರ್ಜಿ ಸಲ್ಲಿಕೆ ಮಾಡಬೇಕು? ಮತ್ತು ಯಾವೆಲ್ಲಾ ದಾಖಲೆಗಳು ಬೇಕು? ಎನ್ನುವುದರ ಸಂಪೂರ್ಣ ಮಾಹಿತಿಯನ್ನು ನೋಡಲು ಈ ಲೇಖನವನ್ನು ಓದಿ.

MGNREGA ಯೋಜನೆಯಲ್ಲಿ ವೈಯಕ್ತಿಕ ಕಾಮಗಾರಿ.

ನರೇಗಾ ಯೋಜನೆಯಲ್ಲಿ ವೈಯಕ್ತಿಕವಾಗಿ ಕೆಲವು ಕಾಮಗಾರಿಗಳನ್ನು ಮಾಡಿಕೊಳ್ಳಬಹುದಾಗಿದೆ. ಒಂದು ಕುಟುಂಬ ತನ್ನ ಜೀವಿತಾವಧಿಗೆ 5 ಲಕ್ಷ ರೂಪಾಯಿ ಗಳವರೆಗೆ ಕಾಮಗಾರಿಗಳನ್ನು ಮಾಡಿಕೊಳ್ಳಬಹುದು.

ಈ ವೈಯಕ್ತಿಕ ಕಾಮಗಾರಿಯಲ್ಲಿ ಹಸು ಶೆಡ್, ಕೋಳಿ ಶೆಡ್, ಹಂದಿ ಶೆಡ್, ಮತ್ತು ಕುರಿ ಶೆಡ್ ಗಳ ನಿರ್ಮಾಣವನ್ನು ಮಾಡಿಕೊಳ್ಳಬಹುದು.

ಹಸು ಕೊಟ್ಟಿಗೆ (cow shed ) ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು

ಅರ್ಜಿ ಸಲ್ಲಿಸಲು ರೈತರು ನರೇಗಾ ಯೋಜನೆಯ ಜಾಬ್ ಕಾರ್ಡ್ ಹೊಂದಿರಬೇಕು.ಕಟ್ಟಡ ನಿರ್ಮಿಸಲು ಒಳ್ಳೆಯ ಗಾಳಿ ಮತ್ತು ಬೆಳಕು ಇರುವಂತಹ ಸ್ಥಳವಕಾಶವನ್ನು ಹೊಂದಿರಬೇಕು. ಪಶುವೈದ್ಯಧಿಕಾರಿಯಿಂದ ದೃಡೀಕರಣ ಪತ್ರ ಪಡೆದಿರಬೇಕು.ಈಗಾಗಲೇ ಹಸು ಎಮ್ಮೆ ಸಾಕಾಣಿಕೆಯ ಬಗ್ಗೆ ಜ್ಞಾನ ಹೊಂದಿದ್ದರೆ ಉತ್ತಮ.

ಈ ಮೇಲಿನ ಅರ್ಹತೆಯನ್ನು ಹೊಂದಿದ್ದರೆ ಖಂಡಿತವಾಗಿಯೂ ನೀವು ನರೇಗಾ ಯೋಜನೆಯ ವೈಯಕ್ತಿಕ ಕಾಮಗಾರಿಯಲ್ಲಿ ಅರ್ಜಿ ಸಲ್ಲಿಸಿ ಸಹಾಯಧನವನ್ನು ಪಡೆಯಬಹುದು.

ಇದೆ ತರಹದ ಮಾಹಿತಿಗಳನ್ನು ಬೇಗನೆ ಪಡೆಯಲು ಈಗಲೇ ನಮ್ಮ ಟೆಲಿಗ್ರಾಂ ಚಾನೆಲ್ ಅನ್ನು ಅನುಸರಿಸಿ.

ನರೇಗಾ ಯೋಜನೆಯ ಹಸು ಕೊಟ್ಟಿಗೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ನರೇಗಾ ಜಾಬ್ ಕಾರ್ಡ್
  • ರೇಷನ್ ಕಾರ್ಡ್
  • RTC ಅಥವಾ ಪಹಣಿ ಪ್ರತಿ
  • ಪಶುವೈದ್ಯಧಿಕಾರಿಯವರಿಂದ ಪಡೆದ ದೃಡೀಕರಣ ಪತ್ರ
  • ಅರ್ಜಿ ಪ್ರತಿ
  • ಭಾವಚಿತ್ರ
  • ಬ್ಯಾಂಕ್ ಪಾಸುಬುಕ್ ಪ್ರತಿ

ಅರ್ಜಿಯನ್ನು ಯಾರಿಗೆ ಮತ್ತು ಹೇಗೆ ಸಲ್ಲಿಸಬೇಕು?

ಈ ಮೇಲೆ ಹೇಳಿರುವ ಎಲ್ಲಾ ದಾಖಲೆಗಳನ್ನು ಜೋಡಿಸಿ, ಅರ್ಜಿಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಥವಾ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ,ನೀವು ನರೇಗಾ ಯೋಜನೆಯ ವೈಯಕ್ತಿಕ ಕಾಮಗಾರಿಯಡಿ ಹಸು ಕೊಟ್ಟಿಗೆ ( cow shed ) ನಿರ್ಮಾಣ ಮಾಡಿಕೊಳ್ಳಲು ಆಸಕ್ತನಾಗಿದ್ದು, ಇದಕ್ಕೆ ಬೇಕಿರುವ ಎಲ್ಲಾ ದಾಖಲೆಗಳನ್ನು ಲಗತ್ತಿಸಿರುವ ಬಗ್ಗೆ ತಿಳಿಸಿ. ಅರ್ಜಿ ಜೊತೆಗೆ ಬೇಕಾದ ಎಲ್ಲಾ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆಯ ನಂತರ ನಿಮ್ಮ ಅರ್ಜಿಯು ಅನುಮೋದನೆಗೊಂಡು ಸ್ಥಳ ಪರಿಶೀಲನೆಗೆ ಅರ್ಜಿಯನ್ನು ವರ್ಗಾಯಿಸುತ್ತಾರೆ. ಪಂಚಾಯತ್ ವತಿಯಿಂದ ಸ್ಥಳ ಪರಿಶೀಲನೆ ಮಾಡಿ. ಕಾಮಗಾರಿ ನಿರ್ಮಾಣ ಪ್ರಾರಂಭಿಸಲು ತಿಳಿಸಲಾಗುತ್ತದೆ.

Cow shed

ಅರ್ಜಿಯನ್ನು ಸಲ್ಲಿಸುವಾಗ ಈ ತಪ್ಪುಗಳನ್ನು ಮಾಡಬೇಡಿ.

ಅರ್ಜಿಯನ್ನು ಸಲ್ಲಿಸುವ ರೈತರು ಮುಖ್ಯವಾಗಿ ಎಲ್ಲಾ ದಾಖಲೆಗಳು ಮಾನ್ಯವಾಗಿರುವಂತೆ ನೋಡಿಕೊಳ್ಳಿ ಮತ್ತು ಮಾನ್ಯವಾದ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ.

ಸರಿಯಾದ ನಿಮ್ಮ ಹೆಸರಿನ RTC ಅಥವಾ ಪಹಣಿ ಪ್ರತಿಯನ್ನು ನೀಡುವುದು.

ಕಡ್ಡಾಯವಾಗಿ ಪಶು ವೈದ್ಯರಿಂದ ದೃಡೀಕರಣವನ್ನು ಪಡೆದು, ಅರ್ಜಿಯಲ್ಲಿ ಲಗತ್ತಿಸುವುದನ್ನು ಮರೆಯಬೇಡಿ.

ಹಸು ಕೊಟ್ಟಿಗೆ ಸಹಾಯಧನ ಯಾವಾಗ ಬರುತ್ತದೆ?

ಕಾಮಗಾರಿ ಪ್ರಾರಂಭವಾಗಿ ಹಂತ ಹಂತಗಳು ಪೂರ್ಣಗೊಳ್ಳುವುದರ ಜೊತೆಗೆ ಹಂತ ಹಂತವಾಗಿ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.

ಇದನ್ನು mgnrega ಅಧಿಕೃತ ವೆಬ್ಸೈಟ್ ನಲ್ಲಿ ನಿಮ್ಮ ಕಾಮಗಾರಿಯ ಹಂತ ಮತ್ತು ಪಾವತಿಯ ಸ್ಥಿತಿಯನ್ನು ನೋಡಬಹುದು.

ನಿಮ್ಮ ಕಾಮಗಾರಿಯ ಸ್ಥಿತಿಯನ್ನು ನೋಡುವುದು ಹೇಗೆ?

  • mgnrega ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
  • Report ಮೇಲೆ ಕ್ಲಿಕ್ ಮಾಡಿ.
  • ನಂತರ ಆರ್ಥಿಕ ವರ್ಷವನ್ನು ಮತ್ತು ರಾಜ್ಯವನ್ನು ಆಯ್ಕೆ ಮಾಡಿ.
  • Work progress ನಲ್ಲಿ work status ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಕೆಲಸವನ್ನು ಹುಡುಕಿ.
  • ಮಾಹಿತಿ ಪಡೆಯಿರಿ.

ಈ ಅಧಿಕೃತ ವೆಬ್ಸೈಟ್ ನಲ್ಲಿ ಕಾಮಗಾರಿಗೆ ಸಂಬಂದಿಸಿದ ಇನ್ನೂ ಹಲವಾರು ವಿಷಯಗಳನ್ನು ತಿಳಿದು ಕೊಳ್ಳಬಹುದು.

ಕಟ್ಟಡ ನಿರ್ಮಾಣದಲ್ಲಿ ಅನುಸರಿಸಬೇಕಾದ ಕ್ರಮಗಳು

  • ಕೊಟ್ಟಿಗೆ ನಿರ್ಮಾಣದಲ್ಲಿ ಪಶುಗಳಿಗೆ ಒಳ್ಳೆಯ ಗಾಳಿ ಮತ್ತು ಬೆಳಕು ಸಿಗುವಂತೆ ಕಿಟಕಿಗಳ ನಿರ್ಮಾಣ ಮಾಡಿದರೆ ಉತ್ತಮ
  • ಮೇವುಗಳನ್ನು ಸಂಗ್ರಹಿಸಿ ಇಡಲು ಸ್ಥಳವಕಾಶವನ್ನು ಇರುವಂತೆ ಮಾಡಿಕೊಂಡಲ್ಲಿ ಅನುಕೂಲವಾಗುತ್ತದೆ.
  • ಮೆಲ್ಚಾವಣಿಯನ್ನು ಬಿಸಿಲಿನ ಶಾಖವನ್ನು ನಿಯಂತ್ರಿಸುವ ವಸ್ತುವುನಿಂದ ನಿರ್ಮಿಸಿದರೆ ಒಳ್ಳೆಯದು.
  • ಪಶುಗಳು ಮಲಗಲು ಯೋಗ್ಯವಾದ ನೆಲಹಾಸನ್ನು ನಿರ್ಮಿಸಿಕೊಳ್ಳುವುದು ಮುಖ್ಯ. ಇದರಿಂದ ಹಲವಾರು ರೋಗಗಳ ನಿಯಂತ್ರಣ ಮಾಡಬಹುದು.
Cow shed

ಹಸು ಕೊಟ್ಟಿಗೆ ( Cow Shed ) ನಿರ್ಮಾಣದಿಂದ ಆಗುವ ಅನುಕೂಲಗಳು

  • ಸುವ್ಯವಸ್ಥಿತ ಕೊಟ್ಟಿಗೆ ನಿರ್ಮಾಣದಿಂದ ಪಶುಗಳ ಅರೋಗ್ಯವನ್ನು ರಕ್ಷಿಸಲು ಸಾಧ್ಯ.
  • ಪಶು ಪಾಲನೆಯು ಸುಲಭ
  • ಕೃಷಿಗೆ ಬೇಕಾದ ಗೊಬ್ಬರಗಳ ತಯಾರಿಕೆಗೆ ಅನುಕೂಲ
  • ಶುಚಿಯಾದ ಹಾಲು ಉತ್ಪಾದಿಸಿ ಮಾರಾಟ ಮಾಡಿ ಲಾಭ ಗಳಿಸಬಹುದು.
  • ಗ್ರಾಮೀಣ ಜೀವನ ಮಟ್ಟ ಸುಧಾರಣೆ ಸಾಧ್ಯ.
  • ಸ್ವಂತ ಉದ್ಯೋಗಕ್ಕೆ ದಾರಿಯಾಗುತ್ತದೆ.

ಕೊನೆಯದಾಗಿ

ಕೃಷಿಯ ಮೇಲೆ ಅವಲಂಭಿತವಾಗಿರುವ ರೈತರಿಗೆ ಪಶುಗಳ ಸಾಕಾಣಿಕೆಯು ಅವಶ್ಯಕ ಮತ್ತು ಪೂರಕವು ಹೌದು. ಆದ್ದರಿಂದ ಈ ಯೋಜನೆಯ ಲಾಭ ಪಡೆದು ಕೊಟ್ಟಿಗೆ ನಿರ್ಮಾಣ ಮಾಡಿಕೊಂಡು, ಕೃಷಿಗೆ ಮತ್ತು ಜೀವನೋಪಾಯಕ್ಕೆ ಸಹಕರಿಯಾವಂತೆ ನೋಡಿಕೊಳ್ಳುವುದು ಒಳ್ಳೆಯದು. ಈ ವೈಯಕ್ತಿಕ ಕಾಮಗಾರಿಯಿಂದ ಸ್ವಂತ ಉದ್ಯೋಗವನ್ನು ಸೃಷ್ಟಿಸಿಕೊಳ್ಳಬಹುದು.


ಮೊಬೈಲ್‌ನಲ್ಲಿ MGNREGA ಸ್ಥಿತಿಯನ್ನು ಪರಿಶೀಲಿಸಬಹುದೇ? ( Can I check MGNREGA status on mobile? )

ಖಂಡಿತವಾಗಿಯೂ, ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅಗತ್ಯವಿದ್ದರೆ ಮೊಬೈಲ್ ಬ್ರೌಸರ್ ನಲ್ಲಿಯೇ desktop mode ಆನ್ ಮಾಡಿಕೊಳ್ಳಿ.

ಪಾವತಿ ತಡವಾದರೆ ಏನು ಮಾಡಬೇಕು? ( What should I do if payment is delayed? )

ಮೊದಲು ಅಧಿಕೃತ ವೆಬ್ಸೈಟ್ ಗೆ ಹೋಗಿ FTO ಚೆಕ್ ಮಾಡಿಕೊಳ್ಳಿ.ಇನ್ನೂ ಸಮಸ್ಯೆಗಳು ಕಂಡುಬಂದಲ್ಲಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ.

ನರೇಗಾದಲ್ಲಿ Muster Roll ಎಂದರೇನು? ( What is a Muster Roll in MGNREGA? )

muster roll ಎಂದರೆ ಕಾರ್ಮಿಕ ಕೆಲಸ ಮಾಡಿದ ಅಧಿಕೃತ ಹಾಜರಾತಿಯ ದಾಖಲೆಯಾಗಿದೆ.ಇದರಲ್ಲಿ ಕೆಲಸದ ದಿನಗಳು ಮತ್ತು ಪಾವತಿಯನ್ನು ನೋಡಬಹುದು.

ಜಾಬ್ ಕಾರ್ಡ್ ಸಂಖ್ಯೆ ಇಲ್ಲದೆ ನರೇಗಾ ಸ್ಟೇಟಸ್ ಪರಿಶೀಲಿಸಬಹುದೇ? / Can I check MGNREGA status without Job Card number?

ರಾಜ್ಯ, ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಗಳ ಆಯ್ಕೆ ಮೂಲಕ ನಿಮ್ಮ ಜಾಬ್ ಕಾರ್ಡ್ ಹುಡುಕಿ ಆಯ್ಕೆ ಮಾಡಿಕೊಂಡು, ನಿಮಗೆ ಬೇಕಾದ ಕಾಮಗಾರಿಯ ಮಾಹಿತಿಯನ್ನು ಪಡೆಯಬಹುದು.

About Content Writer
Jayanth

Jayanth

ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.

About Us →
WhatsApp Group Join Now
Telegram Group Join Now

Leave a Comment