PSI Recruitment 2026 ಬರಲಿದೆ – ಅರ್ಹತೆ, ಪರೀಕ್ಷಾ ಮಾದರಿ ಮತ್ತು ಈಗಲೇ ತಯಾರಿ ಆರಂಭಿಸಿ!

WhatsApp Group Join Now
Telegram Group Join Now

ಕರ್ನಾಟಕ ಸರ್ಕಾರದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಕನಸು ಕಂಡಿರುವ ಸಾವಿರಾರು ಅಭ್ಯರ್ಥಿಗಳು ಹಗಲಿರುಳು ಓದುತ್ತಿದ್ದಾರೆ. ಅದರಂತೆಯೇ Karnataka PSI Recruitment 2026 ಕುರಿತು ತಯಾರಿ ಮಾಡುತ್ತಿರುವ ಅಭ್ಯರ್ಥಿಗಳಿಗೆ ಹುದ್ದೆಯ ಪರೀಕ್ಷೆ ಮತ್ತು ಇತರೆ ಮಾಹಿತಿಗಳನ್ನು ಒದಗಿಸಲು ಈ ಲೇಖನವನ್ನು ಬರೆದಿರುತ್ತೇವೆ.

ಈ ಲೇಖನದಲ್ಲಿ Karnataka PSI Recruitment 2026, ಅರ್ಹತೆ, ಪರೀಕ್ಷಾ ಮಾದರಿ, ದೈಹಿಕ ಪರೀಕ್ಷೆ ಮತ್ತು ತಯಾರಿ ವಿಧಾನಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದ್ದು ಇದರ ಬಗ್ಗೆ ತಿಳಿದುಕೊಳ್ಳೋಣ.

PSI ಹುದ್ದೆಯ ಕುರಿತು.

PSI ಹುದ್ದೆ ಎನ್ನುವುದು ಒಂದು ಉನ್ನತ ಮಟ್ಟದ ಮತ್ತು ಗೌರವಯುತವಾದ ಹುದ್ದೆಯಾಗಿದೆ. ಖಾಕಿಯ ಕನಸು ಕಾಣುವ ಯುವ ಮನಸುಗಳು PSI ಆಗಬೇಕು ಎನ್ನುವ ಹಂಬಲ ಹೊಂದಿರುತ್ತಾರೆ.ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು PSI ಗಳ ಪಾತ್ರ ಪ್ರಮುವಾದದ್ದು, ಅದರಂತೆಯೇ ಸರ್ಕಾರದ ಪೊಲೀಸ್ ಇಲಾಖೆಯಿಂದ PSI ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲು ತಯಾರಿಯನ್ನು ಮಾಡಿಕೊಳ್ಳುತ್ತಿದೆ.

ಯಾವ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಹೊರಡಿಸಲಿದೆ?

ಈ ಹಿಂದೆ ನಡೆದಿರುವ ಪ್ರಮುಖ ಎಲ್ಲಾ psi ನೇಮಕಾತಿಗಳು KARNATAKA STATE POLICE ( KSP ) ಯವರು ನಡೆಸಿಕೊಟ್ಟಿದ್ದರು ಆದರೆ ನ್ಯಾಯಾಲಯದ ನಿರ್ದೇಶನದಂತೆ PSI 545 ಮತ್ತು PSI 402 ಅನ್ನು KSP ಹೊರತುಪಡಿಸಿ ಇತರೆ ನೇಮಕಾತಿ ಪ್ರಾಧಿಕಾರದಿಂದ ನಡೆಸಲು ಸೂಚಿಸಿದ್ದರು. ಅದರಂತೆಯೇ ಈ ಎರಡು ನೇಮಕಾತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA ) ವತಿಯಿಂದ ನಡೆದಿತ್ತು.

ಈ ಬಾರಿಯ ಹೊಸ ನೇಮಕಾತಿಯನ್ನು (PSI Recruitment 2026) ಯಾವ ಪ್ರಾಧಿಕಾರದಿಂದ ನಡೆಸುತ್ತಾರೆ ಎಂಬ ಬಗ್ಗೆ ಹೆಚ್ಚಿಗಿನ ಮಾಹಿತಿ ಇಲ್ಲವಾದರೂ, KEA ವತಿಯಿಂದ ನಡೆಸಬಹುದಾಗಿದೆ. ಇದರ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ದೊರೆತಿರುವುದಿಲ್ಲ.

ಇದೆ ತರಹದ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಅನ್ನು ಅನುಸರಿಸಿ.

ಅರ್ಹತೆ

PSI ಆಗಬೇಕೆಂದಿರುವ ಅಭ್ಯರ್ಥಿಗಳು ಕೆಲವಂದು ಅರ್ಹತೆಗಳನ್ನು ಹೊಂದಿರುವುದು ಅತ್ಯಗತ್ಯ, ಆ ಅರ್ಹತೆಗಳ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡಲಾಗಿದೆ.

ವಿದ್ಯಾರ್ಹತೆ (Educational Qualification)

ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರುವವರು ಅರ್ಜಿ ಸಲ್ಲಿಸಲು ಅರ್ಹರು.

ವಯೋಮಿತಿ (Age Limit)

ಅಧಿಕೃತವಾದ ವಯೋಮಿತಿಯ ಬಗ್ಗೆ ಅಧಿಸೂಚನೆಯನ್ನು ವೀಕ್ಷಿಸಿ. ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.

ಅರ್ಜಿ ಶುಲ್ಕ

ಸಾಮಾನ್ಯ ವರ್ಗದ ಅಭ್ಯರ್ಥಿಗಳು ಹಾಗೂ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ರೂಪಾಯಿ 500 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1 ರ ಅಭ್ಯರ್ಥಿಗಳಿಗೆ ರೂಪಾಯಿ 250 ಅನ್ನು ಅರ್ಜಿ ಶುಲ್ಕವಾಗಿ ನಿಗದಿಪಡಿಸಿದೆ.(ಈ ಬಾರಿ PSI Recruitment 2026 ರನ್ನು KEA ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದರೆ ಅರ್ಜಿ ಶುಲ್ಕದಲ್ಲಿಯೂ ಬದಲಾವಣೆಯಾಗುವ ಸಂಭವವಿದೆ.

ಆಯ್ಕೆ ಪ್ರಕ್ರಿಯೆ (Selection Process)

Karnataka PSI Recruitment 2026 ಆಯ್ಕೆ ಪ್ರಕ್ರಿಯೆಯು ಈ ಕೆಳಗಿನ 03 ಹಂತಗಳನ್ನು ಒಳಗೊಂಡಿರುತ್ತದೆ :

  • ದೈಹಿಕ ಪರೀಕ್ಷೆ (PHYSICAL TEST )
  • ಲಿಖಿತ ಪರೀಕ್ಷೆ (WRITTEN TEST )
  • ವೈದ್ಯಕೀಯ ಪರೀಕ್ಷೆ (Medical Examination )

ದೈಹಿಕ ಪರೀಕ್ಷೆ (PHYSICAL TEST )

PSI ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಿದ ನಂತರದ ಮೊದಲ ಹಂತವೇ ದೈಹಿಕ ಪರೀಕ್ಷೆ ಇದನ್ನು ದೈಹಿಕ ಸಾಮರ್ಥ್ಯ ಮತ್ತು ದೈಹಿಕ ಸಹಿಷ್ಣುತೆ ಪರೀಕ್ಷೆಯೆಂದು ಕರೆಯುತ್ತಾರೆ. ಸರಿಯಾಗಿ ಕ್ರಮದಲ್ಲಿ ಅರ್ಜಿ ಸಲ್ಲಿಸಿ ಅರ್ಜಿ ಶುಲ್ಕ ತುಂಬಿರುವ ಎಲ್ಲಾ ಅಭ್ಯರ್ಥಿಗಳಿಗೂ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಈ ಕೆಳಕಂಡ ರೀತಿಯಲ್ಲಿ ನಡೆಸಲಾಗುತ್ತದೆ.

ದೈಹಿಕ ಸಹಿಷ್ಣುತೆ

ಎಲ್ಲಾ ಪುರುಷ ಅಭ್ಯರ್ಥಿಗಳಿಗೆ 1600 ಮೀಟರ್ ಓಟವನ್ನು 7 ನಿಮಿಷದೊಳಗೆ ಓಡಿ ಪೂರ್ಣಗೊಳಿಸಬೇಕು.ನಂತರ ಉದ್ದ ಜಿಗಿತ-3.80 ಮೀಟರ್ ಅಥವಾ ಎತ್ತರ ಜಿಗಿತ -1.20 ಮೀಟರ್ (ಉದ್ದಜಿಗಿತ ಮತ್ತು ಎತ್ತರ ಜಿಗಿತ, ಈ ಎರಡರಲ್ಲಿ ಒಂದನ್ನು ಪೂರ್ಣಗೊಳಿಸಿದರೆ ಸಾಕು ) ನಂತರ ಗುಂಡು ಎಸೆತಾ(7.26kg ತೂಕದ) – 5.60 ಮೀಟರ್ ಎಸೆಯಬೇಕು.

ಎಲ್ಲಾ ಮಹಿಳೆ,ಸೇವಾ ನಿರತ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ 400 ಮೀಟರ್ ಓಟವನ್ನು 2ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ನಂತರ ಉದ್ದ ಜಿಗಿತ -2.50 ಮೀಟರ್ ಅಥವಾ ಎತ್ತರ ಜಿಗಿತ -0.90 ಮೀಟರ್ (ಉದ್ದಜಿಗಿತ ಮತ್ತು ಎತ್ತರ ಜಿಗಿತ, ಈ ಎರಡರಲ್ಲಿ ಒಂದನ್ನು ಪೂರ್ಣಗೊಳಿಸಿದರೆ ಸಾಕು ) ನಂತರ ಗುಂಡು ಎಸೆತ (4kg ತೂಕದ )-3. 75 ಮೀಟರ್ ಎಸೆಯಬೇಕು.

ಈ ಮೇಲೆ ತಿಳಿಸಿರುವ ಉದ್ದ ಜಿಗಿತ, ಎತ್ತರ ಜಿಗಿತ ಮತ್ತು ಗುಂಡು ಎಸೆತಕ್ಕೆ ತಲಾ 3 ಅವಕಾಶಗಳನ್ನು ನೀಡಲಾಗುತ್ತದೆ. ಅದರಲ್ಲಿ ಉತ್ತಮವಾದದ್ದನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳುತ್ತಾರೆ.

KARNATAKA PSI RECRUITMENT 2026

Karnataka PSI Recruitment 2026

ದೈಹಿಕ ಸಾಮರ್ಥ್ಯ

ಈ ಹಂತದಲ್ಲಿ ಅಭ್ಯರ್ಥಿಗಳ ದೇಹದಾಢ್ಯತೆ ಯನ್ನು ಪರೀಕ್ಷಿಸಲಾಗುತ್ತದೆ.ಎಲ್ಲಾ ನೇರ ಅಭ್ಯರ್ಥಿಗಳು,ಸೇವಾ ನಿರತ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಎತ್ತರ ಕನಿಷ್ಠ 168 ಸೆಂ. ಮೀ ಮತ್ತು ಎದೆಯ ಸುತ್ತಳತೆ -ಪೂರ್ತಿ ವಿಸ್ತರಿಸಿದಾಗ 86 ಸೆಂ. ಮೀ (ಕನಿಷ್ಠ ವಿಸ್ತರಣೆ 5 ಸೆಂ. ಮೀ).

ಮಹಿಳಾ ಅಭ್ಯರ್ಥಿಗಳಿಗೆ ಎತ್ತರ 157 ಸೆಂ. ಮೀ ಮತ್ತು ತೂಕ 45 kg ನಿಗದಿಪಡಿಸಲಾಗಿದೆ.

ಲಿಖಿತ ಪರೀಕ್ಷೆ ( WRITTEN TEST )

PHYSICAL Test ನಲ್ಲಿ ತೇರ್ಗದೆಯಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಮುಖ್ಯವಾಗಿ ಲಿಖಿತ ಪರೀಕ್ಷೆಯಲ್ಲಿ 2 ಪತ್ರಿಕೆಗಳಿದ್ದು, ಪತ್ರಿಕೆ 1 ರಲ್ಲಿ ಪ್ರಬಂಧ ಬರಹ, ಸಾರಾಂಶ ಬರಹ ಮತ್ತು ಭಾಷಾಂತರ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರಬಂಧ -20 ಅಂಕ, ಸಾರಾಂಶ ಬರಹ -10 ಅಂಕ ಮತ್ತು ಕನ್ನಡದಿಂದ ಇಂಗ್ಲಿಷ್ -ಇಂಗ್ಲಿಷ್ ಇಂದ ಕನ್ನಡಕ್ಕೆ ಭಾಷಾಂತರ-20 ಅಂಕ, ಒಟ್ಟು 50 ಅಂಕ -1 ಗಂಟೆ 30 ನಿಮಿಷ ಸಮಯವಕಾಶ.

ಎರಡನೇ ಪತ್ರಿಕೆ -ಸಾಮಾನ್ಯ ಅಧ್ಯಯನ ಅಥವಾ ಸಾಮಾನ್ಯ ಜ್ಞಾನ ಪತ್ರಿಕೆ – ಇದರಲ್ಲಿ ಮಾನವೀಯ ವಿಷಯಗಳಾದ ಇತಿಹಾಸ, ಭೂಗೋಳ, ಸಂವಿಧಾನ ಅರ್ಥಶಾಸ್ತ್ರ, ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ಮಾನಸಿಕ ಸಾಮರ್ಥ್ಯ ಇತರೆ ವಿಷಯಗಳನ್ನು ಒಳಗೊಂಡಿರುತ್ತದೆ.

ಈ ಪತ್ರಿಕೆ 150 ಅಂಕಗಳ ಬಹುಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿದ್ದು ಸರಿ ಉತ್ತರದ 25% (. 375) ಋಣಾತ್ಮಕ ಅಂಕಗಳನ್ನು ಒಳಗೊಂಡಿದೆ.

ವೈದ್ಯಕೀಯ ಪರೀಕ್ಷೆ ( Medical Examination )

ನಂತರದಲ್ಲಿ ಲಿಖಿತ ಪರೀಕ್ಷೆಯಲ್ಲಿ ತೇರ್ಗದೆಯಾದ ಅಭ್ಯರ್ಥಿಗಳಿಗೆ ಹುದ್ದೆಯ ಮತ್ತು ಮೀಸಲಾತಿಯ ಅನುಸಾರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಿ, ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಪರೀಕ್ಷಾ ತಯಾರಿಗೆ ಪ್ರಮುಖ ಸಲಹೆಗಳು

PSI Recruitment 2026 ರಲ್ಲಿ PSI ಹುದ್ದೆಯನ್ನು ಪಡೆಯುವ ಇಚ್ಛೆಯಿರುವ ಅಭ್ಯರ್ಥಿಗಳು ಈ ಸಲಹೆಗಳನ್ನು ಪಾಲಿಸಿ ಯಶಸ್ಸನ್ನು ಪಡೆಯಿರಿ.

  • ಕರ್ನಾಟಕ ರಾಜ್ಯ ಸಂಬಂಧಿತ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಿ.
  • ಭಾರತ ಸಂವಿಧಾನ ಮತ್ತು ಪೊಲೀಸ್ ವ್ಯವಸ್ಥೆ ಕುರಿತ ವಿಷಯವನ್ನು ತಿಳಿದುಕೊಳ್ಳಿ.
  • ಸಮಯ ನಿರ್ವಹಣೆ ಅತ್ಯಗತ್ಯ
  • Social Media distraction ತಪ್ಪಿಸಿ, ಅಧ್ಯಯನಕ್ಕೆ ಮಾರಕವಾಗುತ್ತದೆ.
  • ಪ್ರತಿದಿನ ಅಭ್ಯಾಸ ಮಾಡಿ.
  • ವಿಷಯವಾರು ಸಮಯವನ್ನು ನಿಗದಿಪಡಿಸಿ ಅಧ್ಯಯನ ಮಾಡಿ.
  • Physical Exam ಗಾಗಿ ದೈಹಿಕ ವ್ಯಾಯಾಮ ಮತ್ತು Running ಗಾಗಿ ಸಮಯವನ್ನು ಗೊತ್ತು ಮಾಡಿ. ಅಭ್ಯಾಸ ಮಾಡಿ.
  • ಒಳ್ಳೆಯ ಆಹಾರ ಮತ್ತು ಪ್ರಾಣಾಯಾಮ ಅತಿ ಅವಶ್ಯಕ.

ಕೊನೆಯದಾಗಿ

PSI Recruitment 2026 ಬರಲಿರುವುದರಿಂದ ಈಗಲೇ ತಯಾರಿ ಆರಂಭಿಸಿದರೆ ನಿಮ್ಮ ತೇರ್ಗಡೆಯ ಸಾಧ್ಯತೆ ಹೆಚ್ಚುತ್ತದೆ. ಅರ್ಹತೆ, ಪರೀಕ್ಷಾ ಮಾದರಿ ಮತ್ತು ದೈಹಿಕ ಪರೀಕ್ಷೆಯ ಸಂಪೂರ್ಣ ಮಾಹಿತಿಯನ್ನು ತಿಳಿದು ಅದರ ಬಗ್ಗೆ ಪ್ಲಾನ್ ಮಾಡಿ ಓದಿದರೆ PSI ಹುದ್ದೆ ಪಡೆಯಬಹುದು.


PSI Recruitment 2026 Notification ಯಾವಾಗ ಬರುತ್ತದೆ?

ಇದರ ಬಗ್ಗೆ ಅಧಿಕೃತ ಮಾಹಿತಿ ಬರದ ಹೊರತು ಏನನ್ನು ಹೇಳಲು ಸಾಧ್ಯವಿಲ್ಲ. ಈ ವರ್ಷದ ಅಂತ್ಯದೊಳಗೆ ನೇಮಕಾತಿ ಅಧಿಸೂಚನೆಯಾಗುವ ಸಾಧ್ಯತೆಗಳಿವೆ.

ಪದವಿ ಅಥವಾ Degree ಇಲ್ಲದವರು ಅರ್ಜಿ ಹಾಕಬಹುದೇ?

ಇಲ್ಲಾ, PSI Recruitment 2026 ಕ್ಕೆ ಅರ್ಜಿ ಸಲ್ಲಿಸಲು ಪದವಿಯನ್ನು ಹೊಂದಿರುವುದು ಅವಶ್ಯಕ.

Physical Test ಕಠಿಣವೇ?

ಸರಿಯಾದ ಮತ್ತು ನಿರಂತರ ಅಭ್ಯಾಸದಿಂದ Physical Test ನಲ್ಲಿ ಪಾಸ್ ಆಗುವುದು ಸುಲಭ.

About Content Writer
Jayanth

Jayanth

ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.

About Us →
WhatsApp Group Join Now
Telegram Group Join Now

Leave a Comment