Table of Contents
ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದPM Kisan Samman Nidhi ಯೋಜನೆ ಅಡಿಯಲ್ಲಿ ರೈತರಿಗೆ ವಾರ್ಷಿಕ 6,000 ರೂ ಗಳನ್ನು ಮೂರು ಕಂತುಗಳಲ್ಲಿ ನೀಡುತ್ತಾ ಬಂದಿದೆ.ಈಗ ರೈತರಿಗೆ PM Kisan 22nd Installment Release date ಅಪ್ಡೇಟ್ ಬಂದಿದೆ.
ಈ ಲೇಖನದಲ್ಲಿ ಅಪ್ಡೇಟ್ ಬಗ್ಗೆ ಮತ್ತು ಹಣವನ್ನು ಯಾವುದೇ ಸಮಸ್ಯೆ ಇಲ್ಲದೆ ನೇರವಾಗಿ ಬ್ಯಾಂಕ್ ಖಾತೆಗೆ ಬರುವಂತೆ ಮಾಡಲು ಪ್ರಮುಖ ಸಲಹೆಗಳನ್ನು ನೀಡಲಾಗಿದೆ.
PM Kisan 22nd Installment Release Date
ಪ್ರಸ್ತುತ ದೊರೆತಿರುವ ಮಾಹಿತಿಯ ಪ್ರಕಾರ PM Kisan 22nd Installment Release date ಮಾರ್ಚ್ 13,2026 ಎಂದು ತಿಳಿದು ಬಂದಿದೆ.
ಇದರ ಪ್ರಕಾರವಾಗಿ ಈ ಯೋಜನೆಯ ಹಣವನ್ನು ಅರ್ಹ ಇರುವ ಎಲ್ಲಾ ರೈತರಿಗೆ ಈ ಮೇಲೆ ತಿಳಿಸಿರುವ ದಿನಾಂಕ ದಂದು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಾರೆ. ಆದರೆ ರೈತರು ಈ ಹಣವನ್ನು ಪಡೆಯಬೇಕಾದಲ್ಲಿ ಪ್ರಮುಖ ಕೆಲಸಗಳನ್ನು ಮಾಡಿರಬೇಕು. ಇಲ್ಲವಾದಲ್ಲಿ ಈ ಹಣವು ನಿಮ್ಮ ಕೈ ಸೇರುವುದು ಕಷ್ಟ.
2,000 ರೂ ಹಣವನ್ನು ನೇರವಾಗಿ ಅಂದರೆ DBT (Direct Benefit Transfer) ಮೂಲಕ ಜಮೆ ಮಾಡಲಾಗುತ್ತದೆ. ಇದರಿಂದ ಮಧ್ಯವರ್ತಿಗಳ ಹಾವಳಿಯನ್ನು ತಡೆದು ನೇರ ಪ್ರಯೋಜನವನ್ನು ರೈತರು ಪಡೆಯುವಂತೆ ಮಾಡುವುದು ಕೇಂದ್ರ ಸರ್ಕಾರದ ಗುರಿಯಾಗಿದೆ.
ಸಾಮಾನ್ಯವಾಗಿ ಪ್ರತಿ ಕಂತಿನ ಹಣವನ್ನು ರೈತರಿಗೆ ಜಮೆ ಮಾಡುವ ಮೊದಲು ಸರ್ಕಾರ PM Kisan beneficiary list ಅನ್ನು ಬಿಡುಗಡೆ ಮಾಡುತ್ತದೆ. ಇದರಲ್ಲಿ ಪ್ರಸ್ತುತ ಬಿಡುಗಡೆ ಮಾಡಲು ಇರುವ ಕಂತಿಗೆ ಯಾರೆಲ್ಲ ರೈತರು ಅರ್ಹರಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. ಕೆಲವು ಬಾರಿ ಇತರೆ ಸಕಾರಣಗಳಿಂದ ನಿಮ್ಮ ಹೆಸರು ಈ ಪಟ್ಟಿಯಿಂದ ತಪ್ಪಿರುವ ಸಾಧ್ಯತೆಗಳಿರುತ್ತದೆ.ಇದಕ್ಕೆ ಮುಖ್ಯ ಕಾರಣಗಳನ್ನು ಕೆಳಗೆ ನೋಡಬಹುದಾಗಿದೆ.
PM ಕಿಸಾನ್ Beneficiary List ಹೇಗೆ ಪರಿಶೀಲಿಸಬಹುದು?
ಈ ಬಾರಿಯ PM Kisan beneficiary list ಅನ್ನು ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ. ರೈತರು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಬಹುದು. PM Kisan beneficiary list ಅನ್ನು ನೋಡಲು ಈ ಕೆಳಗಿನ ಹಂತಗಳನ್ನು ಪಾಲಿಸಿ.
- PM Kisan ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- Beneficiary List ಮೇಲೆ ಕ್ಲಿಕ್ ಮಾಡಿ.
- ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮವನ್ನು ಆಯ್ಕೆ ಮಾಡಿ.
- ನಂತರ ನಿಮ್ಮ ಗ್ರಾಮದಲ್ಲಿನ ಎಲ್ಲಾ ಅರ್ಹ ರೈತರ ಪಟ್ಟಿ ತೆರೆದುಕೊಳ್ಳುತ್ತದೆ.
- ಇದರಲ್ಲಿ ನಿಮ್ಮ ಹೆಸರನ್ನು ಹುಡುಕಿ.
ಈ ಪಟ್ಟಿಯಲ್ಲಿ ಹೆಸರು ಇದ್ದಲ್ಲಿ ಈ ಬಾರಿಯ pm kisan 22nd Installment ಹಣ ಬರುತ್ತದೆ.
ಒಂದು ವೇಳೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಕಂಡು ಬಾರದೆ ಇದ್ದಲ್ಲಿ, ತಕ್ಷಣವೇ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆ ಕಚೇರಿಯನ್ನು ಭೇಟಿ ಮಾಡಿ. ಇದರ ಬಗ್ಗೆ ಮಾಹಿತಿ ಪಡೆಯಿರಿ.
2000₹ ಪಡೆಯಲು ಈ ಕೆಲಸವನ್ನು ಅವಶ್ಯವಾಗಿ ಮಾಡಿ.
ಈ ಬಾರಿಯ PM Kisan 22nd Installment ಹಣವನ್ನು ಪಡೆಯಲು ಮುಖ್ಯವಾಗಿ ಈ ಕೆಳಗಿನ ಮಾಹಿತಿಯು ಅಪ್ಡೇಟ್ ಆಗಿದೆಯೋ ಅಥವಾ ಇಲ್ಲವೋ ಎನ್ನುವುದನ್ನ ಪರಿಶೀಲಿಸಿಕೊಳ್ಳಿ.
ರೈತರ eKYC ಪೂರ್ಣಗೊಂಡಿರಬೇಕು
ಕೇಂದ್ರ ಸರ್ಕಾರ ರೈತರು PM kisan samman nidhi ಯೋಜನೆಯ ಲಾಭ ಪಡೆಯಲು ಕಡ್ಡಾಯವಾಗಿ ekyc ಯನ್ನು ಪೂರ್ಣಗೊಳಿಸಲು ಸೂಚಿಸಿದೆ. ಒಂದು ವೇಳೆ ekyc ಪೂರ್ಣಗೊಳ್ಳದ ಪಕ್ಷದಲ್ಲಿ ಈ ನಂತರದ ಯಾವುದೇ ಕಂತಿನ ಹಣ ಪಡೆಯಲು ಆಗುವುದಿಲ್ಲ.
ekyc ಪೂರ್ಣ ಗೊಳಿಸಲು ಅಧಿಕೃತ ವೆಬ್ಸೈಟ್ ಭೇಟಿ ನೀಡಿ ಅಥವಾ ಸೈಬರ್ ಸೆಂಟರ್ ನಲ್ಲಿ ವಿಚಾರಿಸಿ ನಿಮ್ಮ ekyc ಪೂರ್ಣಗೊಳಿಸಿಕೊಳ್ಳಬಹುದು.
ಇದೆ ತರದ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಅನ್ನು ಅನುಸರಿಸಿ.
ರೈತರು ತಮ್ಮ ಬ್ಯಾಂಕ್ ಖಾತೆ NPCI ಮ್ಯಾಪಿಂಗ್ ಮಾಡಿಸಿಕೊಂಡಿರಬೇಕು.
ಈ ಮೊದಲೇ ಹೇಳಿರುವ ಹಾಗೆ ಕೇಂದ್ರ ಸರ್ಕಾರ ಹಣವನ್ನು ನೇರವಾಗಿ ರೈತರ ಖಾತೆಗೆ DBT (Direct Benefit Transfer) ಮೂಲಕ ಹಣ ವರ್ಗಾವಣೆ ಮಾಡುತ್ತಾರೆ. ಇದಕ್ಕೆ ನಿಮ್ಮ ಬ್ಯಾಂಕ್ ಖಾತೆ ಮತ್ತು NPCI ಮ್ಯಾಪಿಂಗ್ ಆಗಿರುವುದು ಕಡ್ಡಾಯ. ಇದನ್ನು ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಮ್ಯಾಪಿಂಗ್ ಮಾಡಿಕೊಳ್ಳಬಹುದು.
ರೈತರ ಆಧಾರ್ ಮತ್ತು ಬ್ಯಾಂಕ್ ಖಾತೆಯ ಮಾಹಿತಿ ಸರಿಯಾಗಿರಬೇಕು.
ಹೌದು, ಮುಖ್ಯವಾಗಿ ರೈತರ ಹೆಸರು ಮತ್ತು ಬ್ಯಾಂಕ್ ಖಾತೆಯಲ್ಲಿನ ನಿಮ್ಮ ಹೆಸರು ಸರಿಯಾಗಿ ಹೊಂದಿಕೆಯಾಗುವಂತೆ ಇರಬೇಕು ಇದರಿಂದಲೂ ಸಹ ನಿಮ್ಮ ಹಣ ಬರುವುದಕ್ಕೆ ಸಮಸ್ಯೆಯಾಗುತ್ತದೆ.
ಇದನ್ನು ನೀವೇ ನಿಮ್ಮ ದಾಖಲೆಗಳನ್ನು ಪರೀಕ್ಷಿಸಿಕೊಳ್ಳಿ, ತಪ್ಪಿದ್ದರೆ ಆಧಾರ್ ಅಥವಾ ಬ್ಯಾಂಕ್ ಖಾತೆಯ ಮಾಹಿತಿಯನ್ನು ಅಪ್ಡೇಟ್ ಮಾಡಿಕೊಳ್ಳಿ.

PM ಕಿಸಾನ್ ಯೋಜನೆಯಡಿ ರೈತರಿಗೆ ಎಷ್ಟು ಹಣ ಸಿಗುತ್ತದೆ?
PM Kisan Samman Nidhi Scheme ನಲ್ಲಿ ಅರ್ಹ ರೈತರಿಗೆ ವಾರ್ಷಿಕ ಒಟ್ಟು ₹6000 ನೀಡಲಾಗುತ್ತದೆ. ಇದನ್ನು 3 ಕಂತುಗಳ ರೂಪದಲ್ಲಿ ತಲಾ 2,000₹ ಗಳಂತೆ 3 ಬಾರಿ ಖಾತೆಗೆ ಜಮೆ ಮಾಡಲಾಗುತ್ತದೆ.
- ವಾರ್ಷಿಕ ಒಟ್ಟು ಹಣ :- 6,000₹
- ಒಟ್ಟು ಕಂತುಗಳ ಸಂಖ್ಯೆ :- 3
- ಪ್ರತಿ ಕಂತಿನಲ್ಲಿ ಜಮೆಯಾಗುವ ಹಣ :-2,000₹
- ಹಣ ವರ್ಗಾವಣೆಯ ವಿಧಾನ :- DBT( Direct Benefit Transfer )
PM Kisan Payment Status Check ಹೇಗೆ ಮಾಡುವುದು?
ರೈತರು ತಮ್ಮ ಹಣ ವರ್ಗಾವಣೆಯ ಸ್ಥಿತಿಯನ್ನು ಆನ್ಲೈನ್ ನಲ್ಲಿ ಸುಲಭವಾಗಿ ಪರಿಶೀಲಿಸಿಕೊಳ್ಳಬಹುದು.
ಪರಿಶೀಲಿಸುವ ವಿಧಾನ :-
- PM kisan ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- Beneficiary Status ಅನ್ನು ಆಯ್ಕೆ ಮಾಡಿ.
- ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ, ಕ್ಯಾಪ್ಚ್ ಕೋಡ್ ನಮೂದಿಸಿ, ಸಲ್ಲಿಸಿ.
- ನಿಮ್ಮ ಹಿಂದಿನ ಮತ್ತು ಪ್ರಸ್ತುತ ಕಂತಿನ(Pm Kisan 22nd Installment) ಪ್ರತಿಯೊಂದು ಮಾಹಿತಿ ತಿಳಿಯುತ್ತದೆ.
PM Kisan ಯೋಜನೆಯ ಮುಖ್ಯ ಪ್ರಯೋಜನಗಳು
PM kisan ಯೋಜನೆಯು ರೈತರಿಗೆ ಹಲವು ರೀತಿಯಲ್ಲಿ ಆರ್ಥಿಕ ನೆರವನ್ನು ನೀಡುತ್ತದೆ.
- ರೈತರಿಗೆ ಗೊಬ್ಬರ ಮತ್ತು ಔಷಧಗಳ ಖರೀದಿಗೆ ಸಹಕಾರಿ.
- ಕೃಷಿ ವೆಚ್ಚ ಮತ್ತು ಯಂತ್ರೋಪಕರಣ ಖರೀದಿಗೆ
- ಬೆಳೆ ಬೆಳೆಯಲು ಮತ್ತು ಕಟಾವಿನ ಇತರೆ ವೆಚ್ಚಗಳಿಗೆ ಪೂರಕವಾಗಿ ಪರಿಗಣಿಸಿದೆ.
ಕೊನೆಯದಾಗಿ
PM Kisan 22nd Installment Release Date ಬಗ್ಗೆ ರೈತರು ಪ್ರತಿ ದಿನ ಕಾಯುತ್ತಿದ್ದರು. ಈಗ ಪ್ರಸ್ತುತ ಕಂತಿನ ಹಣ ಬಿಡುಗಡೆಯ ದಿನಾಂಕ ಪ್ರಕಟವಾಗಿದೆ, ಸರ್ಕಾರದಿಂದ ₹2000 ಕಂತಿನ ಹಣ ಬಿಡುಗಡೆ ಮಾಡುವ ಬಗ್ಗೆ ಅಧಿಕೃತ ಮಾಹಿತಿ ದೊರೆತಿದೆ. ಆದ್ದರಿಂದ ರೈತರು ತಮ್ಮ eKYC, ಬ್ಯಾಂಕ್ NPCI ಮ್ಯಾಪಿಂಗ್ ಮತ್ತು ಆಧಾರ್ ವಿವರಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳುವುದು ಅತಿ ಅವಶ್ಯಕ.ಇದನ್ನು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಪರಿಶೀಲಿಸಿದರೆ, PM ಕಿಸಾನ್ 22ನೇ ಕಂತಿನ ಹಣ ಪಡೆಯಲು ಯಾವುದೇ ಸಮಸ್ಯೆ ಇರುವುದಿಲ್ಲ.
PM ಕಿಸಾನ್ 22ನೇ ಕಂತು ಬಿಡುಗಡೆ ದಿನಾಂಕ ಯಾವಾಗ?
ಪ್ರಸ್ತುತ ದೊರೆತ ಮಾಹಿತಿಯ ಪ್ರಕಾರ ಮಾರ್ಚ್ 13,2026 ರಂದು PM kisan 22nd installment ಬಿಡುಗಡೆ ಮಾಡಲಾಗುತ್ತದೆ.
PM ಕಿಸಾನ್ eKYC ಮಾಡುವುದು ಕಡ್ಡಾಯವೇ?
ಹೌದು, ಕೇಂದ್ರ ಸರ್ಕಾರದ ಸೂಚನೆಯಂತೆ, PM kisan ಫಲನುಭವಿಗಳು ಈ ಯೋಜನೆಯ ಲಾಭ ಪಡೆಯಲು ಕಡ್ಡಾಯವಾಗಿ ekyc ಮಾಡಿಸಬೇಕು.
PM ಕಿಸಾನ್ ಪಾವತಿ ಸ್ಥಿತಿ (Payment Status) ಹೇಗೆ ಪರಿಶೀಲಿಸಬೇಕು?
ರೈತರು pm kisan ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, Beneficiary Status ಮೂಲಕ ನಿಮ್ಮ ನೋಂದಣಿ ಸಂಖ್ಯೆ ನಮೂದಿಸಿ ಹಣ ವರ್ಗಾವಣೆಯ ಸ್ಥಿತಿಯನ್ನು ಪರಿಶೀಲಿಸಬಹುದು.
Jayanth
ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.
About Us →