Table of Contents
ಕರ್ನಾಟಕ ಸರ್ಕಾರದ ಪ್ರಮುಖ ಇಲಾಖೆಗಳಲ್ಲಿ ಒಂದಾದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ VAO ಹುದ್ದೆಗೆ ನೇಮಕಾತಿ ಅಧಿಸೂಚನೆ ಹೊರಡಿಸಲು ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆ ಪ್ರಾರಂಭವಾಗಿರೋ ಬಗ್ಗೆ ಸುದ್ದಿಗಳು ಹರಿದಾಡುತ್ತಿದೆ.
ಗ್ರಾಮ ಮಟ್ಟದ DC ಎಂದೇ ಪ್ರಖ್ಯಾತವಾಗಿರುವ ಗ್ರಾಮ ಆಡಳಿತ ಅಧಿಕಾರಿಯ ಹುದ್ದೆಯು ಗ್ರಾಮದ ಮಟ್ಟದಲ್ಲಿ ಸರ್ಕಾರದ ಪ್ರಮುಖ ವ್ಯಕ್ತಿಯಾಗಿ ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವ ಭೂ ದಾಖಲೆ, ಜನನ ಮತ್ತು ಮರಣ ದಾಖಲೆ, ಕಂದಾಯ ಇಲಾಖೆಯ ಭೂಮಿಯ ದಾಖಲೆ ಮತ್ತು ಅದರ ಜವಾಬ್ದಾರಿಯನ್ನು ಹೊಂದಿರುವುದರಿಂದ ಅತಿ ಪ್ರಮುಖ ಹುದ್ದೆಯಾಗಿ ಪ್ರತಿಬಿಂಬಿಸಿದೆ.
ಈ ಹುದ್ದೆಯು ಹೆಚ್ಚಿನ ಸಮಯದವರೆಗೆ ಖಾಲಿ ಇಟ್ಟು ಸರ್ಕಾರದ ಕೆಲಸ ನಡೆಸಲು ಸಾಧ್ಯವಿಲ್ಲ. ಏಕೆಂದರೆ ದೇಶದಲ್ಲಿ ಹೆಚ್ಚಿನ ಭಾಗದ ಜನ ಗ್ರಾಮದಲ್ಲಿಯೇ ವಾಸವಿರುವುದರಿಂದ ಗ್ರಾಮ ಮಟ್ಟದಲ್ಲಿ ಕೃಷಿ ಆಧಾರಿತ ಕೆಲಸಗಳು, ಕಂದಾಯ ದಾಖಲೆಗಳ ಮೇಲ್ವಿಚಾರಕರು ಮತ್ತು ಸರ್ಕಾರಕ್ಕೆ ಸಂಬಂದಿಸಿದ ಯೋಜನೆಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿಯನ್ನು ಹೊಂದಿರುವುದರಿಂದ ಅತಿ ಜರೂರಾಗಿ ನೇಮಕಾತಿ ಅವಶ್ಯಕ.
Vao Recruitment 2026 ರ ಇತ್ತೀಚಿನ ಅಪ್ಡೇಟ್ ಏನು?
ಕಂದಾಯ ಇಲಾಖೆಯೂ ಹೊಸದಾದ VAO ಅಧಿಸೂಚನೆ ಹೊರಡಿಸಲು ಖಾಲಿ ಇರುವ ಹುದ್ದೆಗಳ ಜೊತೆಗೆ ನಂತರದಲ್ಲಿ ಖಾಲಿಯಾಗಿರುವ ಹುದ್ದೆಗಳ ಬಗ್ಗೆ ಎಲ್ಲಾ ಜಿಲ್ಲೆಯಲ್ಲಿನ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಸಂಖ್ಯೆಯನ್ನು ನೀಡಲು ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ವತಿಯಿಂದ ಮಾಹಿತಿಯನ್ನು ಕೇಳಲಾಗಿದೆ.

ಎಷ್ಟು ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದೆ?
ಯಾವುದೇ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಬೇಕೆಂದರೆ ಆರ್ಥಿಕ ಇಲಾಖೆಯ ಅನುಮತಿ ಅತಿ ಅವಶ್ಯಕ ಆದ್ದರಿಂದ ಪ್ರಸ್ತುತ ಖಾಲಿಯಾಗಿರುವ ಹುದ್ದೆಗಳಿಗೆ ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ 500 ಹುದ್ದೆಗಳು ಅಥವಾ ಅದಕ್ಕಿಂತ ಹೆಚ್ಚಿನ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸುವ ನಿರೀಕ್ಷೆಯಿದೆ.
ಅಧಿಸೂಚನೆಯ ಅಧಿಕೃತ ಪ್ರಕಟಣೆ ಯಾವಾಗ?
ಸರ್ಕಾರದ ಮಟ್ಟದಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಲು ಸಕಲ ಸಿದ್ಧತೆಗಳು ನಡೆಯುವುದರ ಜೊತೆಗೆ, ಪ್ರಕ್ರಿಯೆಯು ವೇಗವಾಗಿ ಸಾಗುತ್ತಿದೆ.ಎಲ್ಲವೂ ಅಂದುಕೊಂಡಂತೆ ಇದೆ ವೇಗದಲ್ಲಿ ಮುಂದುವರೆದರೆ,ಮುಂದಿನ 03 ರಿಂದ 04 ತಿಂಗಳಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸುವ ಸಾಧ್ಯತೆಗಳಿವೆ.
ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಎದುರಾಗುದುದರಿಂದ ಈ ನೇಮಕಾತಿ ಅಧಿಸೂಚನೆಗಳಿಗೆ ಸ್ವಲ್ಪ ತಡೆಯುಂಟು ಆಗಬಹುದು.
Vao ನೇಮಕಾತಿ 2026 ಅರ್ಹತಾ ಮಾನದಂಡ
ಶೈಕ್ಷಣಿಕ ವಿದ್ಯಾರ್ಹತೆ :-
12ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ನಿಗದಿ ಪಡಿಸಿರುವ ವಿದ್ಯಾರ್ಹತೆ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿರಬೇಕು.
ವಯೋಮಿತಿ :-
ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿಯ ಬಗ್ಗೆ ಅಧಿಸೂಚನೆಯ ನಂತರದಲ್ಲಿ ತಿಳಿಯಲಿದೆ.
ಅರ್ಜಿ ಸಲ್ಲಿಸುವ ವಿಧಾನ
ಸರ್ಕಾರ ಅಧಿಸೂಚನೆ ಹೊರಡಿಸಲು ನೀಡಲಾಗಿರುವ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಗೆ ಹೋಗಿ Vao Recruitment ಅರ್ಜಿಯನ್ನು ತೆರೆದು ಕೇಳಲಾಗಿರುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ, ಎಲ್ಲಾ ಪ್ರಮುಖ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಮತ್ತು ನಿಗದಿಪಡಿಸಿರುವ ಅರ್ಜಿ ಶುಲ್ಕವನ್ನು ತುಂಬಿ ಅರ್ಜಿ ಸಲ್ಲಿಸಿದರಾಯಿತು.
ಅರ್ಜಿ ನಮೂನೆಯನ್ನು ಪ್ರಿಂಟ್ ತೆಗೆದು ಕೊಂಡು ನಿಮ್ಮ ಬಳಿ ಇಟ್ಟುಕೊಳ್ಳುವುದು. ಮುಂದಿನ ದಿನದಲ್ಲಿ ಅವಶ್ಯವಾಗಿ ಬೇಕಾಗುತ್ತದೆ.
ಅರ್ಜಿ ಶುಲ್ಕ :
ಪ್ರಸ್ತುತ ಅಧಿಸೂಚನೆ ಹೊರಡಿಸಿರುವುದಿಲ್ಲ.
ಆಯ್ಕೆ ಪ್ರಕ್ರಿಯೆ :
ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಯನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಸಲಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷಾ ವಿಧಾನ
ಸ್ಪರ್ಧಾತ್ಮಕ ಪರೀಕ್ಷೆಯನ್ನು ಲಿಖಿತವಾಗಿ ಅಂದರೆ ಆಫ್ ಲೈನ್ ಮೂಲಕ OMR ಪ್ರಕಾರವಾಗಿ ನಡೆಸಲಾಗುತ್ತದೆ.ಹಿಂದಿನ ಬಾರಿಯ ನೇಮಕಾತಿಯಲ್ಲಿ 2 ಪ್ರಶ್ನೆ ಪತ್ರಿಕೆಯನ್ನು ನೀಡಲಾಗಿತ್ತು.
- ಪತ್ರಿಕೆ -1 ಸಾಮಾನ್ಯ ಅಧ್ಯಯನ / GK
- ಪತ್ರಿಕೆ -2 ಸಾಮಾನ್ಯ ಕನ್ನಡ,ಸಾಮಾನ್ಯ ಇಂಗ್ಲಿಷ್ ಮತ್ತು ಕಂಪ್ಯೂಟರ್ ವಿಷಯವನ್ನು ಒಳಗೊಂಡಿರುತ್ತದೆ.
ಅದರಂತೆ ಈ ಬಾರಿಯೂ ಪರೀಕ್ಷೆ ನಡೆಸಬಹುದಾಗಿದೆ.
ಪ್ರಶ್ನೆ ಪತ್ರಿಕೆ 100 ಅಂಕ ಮತ್ತು 100 ಪ್ರಶ್ನೆಗಳನ್ನು ಒಳಗೊಂಡಿದ್ದು ಒಟ್ಟು 200 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.ಇದರಲ್ಲಿ ಋಣಾತ್ಮಕ ಅಂಕ (Negative Marking) ಇದ್ದು ಪ್ರತಿ ತಪ್ಪಾದ ಉತ್ತರಕ್ಕೆ 1/4 ಅಂಕವನ್ನು ಗಳಿಸಿದ ಅಂಕದಿಂದ ಕಡಿತಗೊಳಿಸಲಾಗುತ್ತದೆ.

ಪಠ್ಯಕ್ರಮ
ಆಗಲೇ ಹೇಳಿರುವಂತೆ ಈ ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿದ್ದು, ಪತ್ರಿಕೆ -1 ಸಾಮಾನ್ಯ ಅಧ್ಯಯನದಲ್ಲಿ ಪ್ರಚಲಿತ ಘಟನೆಗಳು, ದೈನಂದಿನ ಗ್ರಹಿಕೆ ವಿಚಾರ,ಭಾರತದ ಇತಿಹಾಸ ವಿಶೇಷವಾಗಿ ಕರ್ನಾಟಕ ಇತಿಹಾಸ, ಭಾರತದ ಭೂಗೋಳ ಶಾಸ್ತ್ರ ವಿಶೇಷವಾಗಿ ಕರ್ನಾಟಕ ಭೂಗೋಳ ಶಾಸ್ತ್ರ, ಭಾರತದ ಸಂವಿಧಾನ, ಪ್ರಾದೇಶಿಕ ಆಡಳಿತ ವಿಷಯ,RDPR ಮತ್ತು ಸಹಕಾರಿ ಸಂಸ್ಥೆ,ಕರ್ನಾಟಕ ಆರ್ಥಿಕತೆ ಮತ್ತು ಕರ್ನಾಟಕ ಪರಿಸರ ಸಮಸ್ಯೆ ಮತ್ತು ಅಭಿವೃದ್ಧಿ -ಈ ಎಲ್ಲಾ ವಿಷಯಗಳ ಮೇಲೆ ಪ್ರಶ್ನೆಗಳು ಬರುತ್ತದೆ.
ಪತ್ರಿಕೆ -2 ರಲ್ಲಿ ಸಾಮಾನ್ಯ ಕನ್ನಡ -ಕನ್ನಡ ಸಾಹಿತ್ಯ, ಇತಿಹಾಸ ಮತ್ತು ವ್ಯಾಕರಣಗಳ ಮೇಲೆ ಪ್ರಶ್ನೆಗಳು ಬರುತ್ತದೆ. ಸಾಮಾನ್ಯ ಇಂಗ್ಲಿಷ್ ನಲ್ಲಿ ವ್ಯಾಕರಣ (Grammar), ಶಬ್ದಕೋಶ(vocabulary ) ಮತ್ತು ಗ್ರಹಿಕೆ(comprehension) ವಿಷಯಗಳ ಮೇಲೆ ಮತ್ತು ಕಂಪ್ಯೂಟರ್ ಭಾಗದಲ್ಲಿ -ಕಂಪ್ಯೂಟರ್ ಸಂಬಂದಿಸಿದ ಹೆಚ್ಚಿನ ವಿಷಯಗಳ ಮೇಲೆ ಪ್ರಶ್ನೆಗಳು ಬರುತ್ತದೆ.
ಬೇಕಾಗುವ ಪ್ರಮುಖ ದಾಖಲೆಗಳು
- 10ನೇ ತರಗತಿ ಅಂಕಪಟ್ಟಿ
- 12ನೇ ತರಗತಿ ಅಂಕಪಟ್ಟಿ ಅಥವಾ ತತ್ಸಮಾನ ಅಂಕಪಟ್ಟಿ
- ಮೀಸಲಾತಿ ಕೋರಿಕೆಗಾಗಿ – ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ಪ್ರಮಾಣ ಪತ್ರ,ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ಮತ್ತು ಇತ್ಯಾದಿ
- ಭಾವಚಿತ್ರ
- ಸಹಿ
ಅಭ್ಯರ್ಥಿಗಳು ಈಗ ಏನು ಮಾಡಬೇಕು?
ನೇಮಕಾತಿ ಅದಿಸೂಚನೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು ನಿಮ್ಮ ನಿಮ್ಮ ಅಧ್ಯಯನವನ್ನು ಚುರುಕುಗೊಳಿಸಿ, ಯಾವುದೇ ಕ್ಷಣದಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಬಹುದು. ತದನಂತರದಲ್ಲಿ ಪರೀಕ್ಷೆಗೆ ಹೆಚ್ಚಿನ ಸಮಯಾವಕಾಶ ಸಿಗಲಾರದು. ಆದ್ದರಿಂದ ಅಭ್ಯರ್ಥಿಯು ಅಧಿಸೂಚನೆಗೂ ಮೊದಲೇ ಎಲ್ಲಾ ವಿಷಯದ ಸಮಗ್ರ ಅಧ್ಯಯನವನ್ನು ಮಾಡಿಕೊಳ್ಳುವುದು ಒಳ್ಳೆಯದು.
ಅಭ್ಯರ್ಥಿಗಳಿಗೆ ಪರೀಕ್ಷಾ ಸಲಹೆಗಳು
- ಎರಡು ಪತ್ರಿಕೆಗಳಿಗೆ ಸಮಾನವಾದ ಪ್ರಾಮುಖ್ಯತೆ ನೀಡಿ
- ಪತ್ರಿಕೆ 2 ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಎನ್ನುವುದನ್ನು ನೆನಪಿಡಿ.
- ಆಳವಾದ ಅಧ್ಯಯನದಿಂದ ಮಾತ್ರ ಉತ್ತಮ ಅಂಕ ಗಳಿಸಬಹುದು
- ಅಧ್ಯಯನಕ್ಕೆ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ ಸಹಾಯ ಪಡೆಯಿರಿ.
VAO ನೇಮಕಾತಿಗೆ ಅರ್ಜಿ ಸಲ್ಲಿಸಲು ಯಾವ ಅರ್ಹತೆ ಬೇಕು?
Vao ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು, 12ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
VAO 2026 ರ ನೇಮಕಾತಿ ಅಧಿಕೃತ ಪ್ರಕಟಣೆ ಯಾವಾಗ?
Vao Recruitment 2026 ರ ಅಧಿಕೃತ ಪ್ರಕಟಣೆಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ದೊರೆತಿರುವುದಿಲ್ಲ.
Vao Recruitment 2026 ರ ಹುದ್ದೆಗಳ ಸಂಖ್ಯೆ ಎಷ್ಟು?
Vao 2026 ರಲ್ಲಿ ಸರಿ ಸುಮಾರು 500 ಅಥವಾ ಅದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಬಹುದಾಗಿದೆ.
Jayanth
ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.
About Us →