Table of Contents
ಕರ್ನಾಟಕದ ಓದುತ್ತಿರುವ puc ವಿದ್ಯಾರ್ಥಿಗಳಿಗೆ ಬಹುಮುಖ್ಯವಾದ 2nd puc Result ಪ್ರಕಟವಾಗುವ ದಿನಾಂಕ ಮತ್ತು ಸಮಯವನ್ನು ಇಲಾಖೆಯ ವತಿಯಿಂದ ನಿಗದಿಪಡಿಸಲಾಗಿದ್ದು, ಈ ಪರೀಕ್ಷೆ ಜೀವನದ ಒಂದು ಮಹತ್ವದ ಹಂತವಾಗಿದೆ. ಈ result ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸ, ವೃತ್ತಿ ಜೀವನ ಹಾಗೂ ಭವಿಷ್ಯದ ದಿಕ್ಕನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. 2026ರಲ್ಲಿನ 2nd ಪಿಯುಸಿ ಫಲಿತಾಂಶವನ್ನು ಸುಲಭವಾಗಿ, ಮತ್ತು ಸರಿಯಾಗಿ ಚೆಕ್ ಮಾಡಬೇಕು ವಿಧಾನವನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಫಲಿತಾಂಶ ಯಾವಾಗ ಪ್ರಕಟವಾಗುತ್ತದೆ?
ಸಾಮಾನ್ಯವಾಗಿ ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿಯು 2nd puc ಪರೀಕ್ಷೆಯ ಫಲಿತಾಂಶವನ್ನು ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಪ್ರಕಟಿಸುವ ಸಾಧ್ಯತೆಗಳಿದ್ದವು. ಈ ಬಾರಿಯ 2026ರ 2nd puc Result ಇದೆ ತಿಂಗಳ ಅಂದರೆ ಏಪ್ರಿಲ್ 09 ರಂದು ಸಂಜೆ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
ಫಲಿತಾಂಶ ಪ್ರಕಟವಾಗುವ ಮೊದಲು ಇಲಾಖೆಯ ವತಿಯಿಂದ ಅಧಿಕಾರಿಗಳು ಮತ್ತು ಶಿಕ್ಷಣ ಸಚಿವರು ಪತ್ರಿಕಾಗೋಷ್ಠಿ ನಡೆಸಿ ರಿಸಲ್ಟ್ ಪ್ರಕಟಿಸುತ್ತಾರೆ.
ಪತ್ರಿಕಾಗೋಷ್ಠಿಯಲ್ಲಿನ ವಿಚಾರಗಳು..
ನಿಗದಿಪಡಿಸಿರುವ ದಿನಾಂಕದಂದು ಇಲಾಖೆಯ ವತಿಯಿಂದ ಶಿಕ್ಷಣ ಸಚಿವರ ಸಮ್ಮುಖದಲ್ಲಿ ನಡೆಯುವ ಸುದ್ದಿಗೋಷ್ಠಿ ಪ್ರಸ್ತುತ ವರ್ಷದಲ್ಲಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಸಾಧನೆ ಅಂದರೆ ರಾಜ್ಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳ ಹೆಸರು ಮತ್ತು ವಿಭಾಗ (ಕಲಾ, ವಾಣಿಜ್ಯ ಮತ್ತು ವಿಜ್ಞಾನ ) ತಿಳಿಸುತ್ತಾರೆ. ಪ್ರಸ್ತುತ ವರ್ಷದ ಉತ್ತಿರ್ಣ ಮತ್ತು ಅನುತ್ತಿರ್ಣ ವಿದ್ಯಾರ್ಥಿಗಳ ಶೇಕಡಾ ಪ್ರಮಾಣವನ್ನು ಮತ್ತು ಜಿಲ್ಲಾವಾರು ವಿದ್ಯಾರ್ಥಿಗಳ ಸಾಧನೆಯನ್ನು ಪ್ರಕಟಿಸುತ್ತಾರೆ.
ತದ ನಂತರದಲ್ಲಿ 2nd puc ವಿದ್ಯಾರ್ಥಿಗಳ ಫಲಿತಾಂಶವನ್ನು ಶಿಕ್ಷಣ ಸಚಿವರು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಾರೆ.
ಫಲಿತಾಂಶವನ್ನು ಚೆಕ್ ಮಾಡುವ ಅಧಿಕೃತ ವೆಬ್ಸೈಟ್ಗಳು
2nd puc ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಈ ಕೆಳಗಿನ ಅಧಿಕೃತ ವೆಬ್ಸೈಟ್ ನ ಮೂಲಕ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು:
karresults.nic.in
ಈ ವೆಬ್ಸೈಟ್ ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯ ಫಲಿತಾಂಶ ಪ್ರಕಟಿಸಲು ಅಧಿಕೃತವಾಗಿ ಪ್ರಾರಂಭಿಸಿವೆ.ಆದ್ದರಿಂದ ಇಲ್ಲಿ ಈ ವರ್ಷ 2026ರ 2nd puc ಫಲಿತಾಂಶವನ್ನು ಪಡೆಯಬಹುದು.
2nd PUC Result ಚೆಕ್ ಮಾಡುವ ಸರಿಯಾದ ವಿಧಾನ
- ಮೊದಲು ಈ ಮೇಲೆ ತಿಳಿಸಿರುವ ಅಧಿಕೃತ ವೆಬ್ಸೈಟ್ ಓಪನ್ ಮಾಡಿ.
- ದ್ವಿತೀಯ ಪಿಯುಸಿ ಫಲಿತಾಂಶ 2026 ಅನ್ನು ಕ್ಲಿಕ್ ಮಾಡಿ.
- ನಿಮ್ಮ ನೋಂದಣಿ ಸಂಖ್ಯೆ (Register Number) ಅನ್ನು ನಮೂದಿಸಿ.
- ನಮೂದಿಸಿದ ಮಾಹಿತಿಯನ್ನು ಸಲ್ಲಿಸಿ.
- ನಿಮ್ಮ ದ್ವಿತೀಯ ಪಿಯುಸಿ ಫಲಿತಾಂಶ ಸ್ಕ್ರೀನ್ ಮೇಲೆ ನೋಡಬಹುದು.
- ನಂತರದಲ್ಲಿ ಬೇಕಿದ್ದಲ್ಲಿ ನಿಮ್ಮ ಫಲಿತಾಂಶದ ಪುಟವನ್ನು ಡೌನ್ಲೋಡ್ ಅಥವಾ ಪ್ರಿಂಟ್ ತೆಗೆದುಕೊಳ್ಳಬಹುದು.

ಫಲಿತಾಂಶದಲ್ಲಿ ಯಾವೆಲ್ಲಾ ಅಂಶಗಳು ಕಾಣಸಿಗುತ್ತದೆ.
ಸ್ಕ್ರೀನ್ ಮೇಲೆ ತೋರುವ 2nd PUC Result ನಲ್ಲಿ ಈ ಕೆಳೆಗೆ ತಿಳಿಸುರುವ ಅಂಶಗಳನ್ನು ನೋಡಬಹುದು.
- ವಿದ್ಯಾರ್ಥಿಯ ಹೆಸರು
- ರಿಜಿಸ್ಟರ್ ನಂಬರ್
- ವಿಷಯವಾರು ಅಂಕಗಳು ಮತ್ತು ಅದರ ಒಟ್ಟು ಅಂಕ – ಆಂತರಿಕ ಮತ್ತು ಬಾಹ್ಯ ಅಂಕಗಳು ಬೆರ್ಪಡಿಸಿದ ರೀತಿಯಲ್ಲಿ ನೋಡಬಹುದು.
- ಫಲಿತಾಂಶ – ಪಾಸ್ /ಫೇಲ್
- ಗ್ರೇಡ್ / ಪರ್ಸಂಟೇಜ್
ಫಲಿತಾಂಶ ಚೆಕ್ ಮಾಡುವಾಗ ಈ ಸಲಹೆಗಳನ್ನು ಪಾಲಿಸಿ.
ಫಲಿತಾಂಶ ಪ್ರಕಟವಾದ ಕ್ಷಣದಿಂದ ಕೆಲ ಗಂಟೆಗಳ ತನಕ ವೆಬ್ಸೈಟ್ ಹೆಚ್ಚಿನ ಸರ್ಚ್ ಅಥವಾ ಇಂಟರ್ನೆಟ್ ಲೋಡ್ ನಿಂದಾಗಿ ನಿಧಾನವಾಗಿ ಕಾರ್ಯ ನಿರ್ವಹಿಸಬಹುದು, ಅಥವಾ ಕೆಲ ಕ್ಷಣ ಸರ್ವರ್ ಇಲ್ಲದೆಯೂ ಇರಬಹುದು. ಆದ್ದರಿಂದ ಗಾಬರಿಯಾಗುವ ಅವಶ್ಯಕತೆ ಇಲ್ಲಾ. ನಿಧಾನವಾಗಿ ಸಮಾಧಾನದಿಂದ ನಿಮ್ಮ ಫಲಿತಾಂಶವನ್ನು ಚೆಕ್ ಮಾಡಿ.
ಸರಿಯಾದ ರಿಜಿಸ್ಟರ್ ನಂಬರ್ ಅನ್ನು ನಮೂದಿಸಿ, ಇಲ್ಲವಾದಲ್ಲಿ ಫಲಿತಾಂಶ ತೋರುವುದಿಲ್ಲ. ನಿಮ್ಮ ಪ್ರವೇಶ ಪತ್ರ ಅಥವಾ ಹಾಲ್ ಟಿಕೆಟ್ ಅನ್ನು ಕೈಯಲ್ಲಿ ಹಿಡಿದು ಅಲ್ಲಿನ ನೋಂದಣಿ ಸಂಖ್ಯೆಯನ್ನು ನಮೂದಿಸಿ ಚೆಕ್ ಮಾಡಿ.
ಫಲಿತಾಂಶವನ್ನು ಚೆಕ್ ಮಾಡಿದ ನಂತರ ಅದನ್ನು ಡೌನ್ಲೋಡ್ ಅಥವಾ ಪ್ರಿಂಟ್ ತೆಗೆದುಕೊಳ್ಳಿ. ಇದು ಮುಂದಿನ ದಿನಗಳಲ್ಲಿ ರೆಫರೆನ್ಸ್ ಆಗಿ ಸಹಾಯಕ್ಕೆ ಬರುತ್ತದೆ.
ಫಲಿತಾಂಶ ಚೆಕ್ ಮಾಡುವಾಗ ಯಾವುದೇ ಸಮಸ್ಯೆ ಕಂಡು ಬಂದರೆ ಕೂಡಲೇ ನಿಮ್ಮ ಕಾಲೇಜ್ ಅನ್ನು ಸಂಪರ್ಕಿಸಿ.
ರೀ ವ್ಯಾಲ್ಯುವೇಶನ್ ಮತ್ತು ಸಪ್ಲಿಮೆಂಟರಿ ಸಂಬಂಧಿಸಿದ ಮಾಹಿತಿ
ವಿದ್ಯಾರ್ಥಿಗಳು 2nd PUC Result ಚೆಕ್ ಮಾಡಿಕೊಂಡ ನಂತರ ನಿಮಗೆ ನೀಡಿರುವ ಅಂಕಗಳು ಸಮಂಜಸ ಅನ್ನಿಸದೆ ಇದ್ದಲ್ಲಿ. ರೀ ವ್ಯಾಲ್ಯುವೇಶನ್ಗೆ ಅಪ್ಲೈ ಮಾಡುವ ಅವಕಾಶವನ್ನು ನೀಡಲಾಗಿದೆ.
ಹಾಗೆಯೇ ಒಂದು ವೇಳೆ ಯಾವುದೇ ವಿಷಯದಲ್ಲಿ ಫೇಲ್ ಅಥವಾ ಅನುತ್ತಿರ್ಣ ರಾಗಿದ್ದಲ್ಲಿ ನಿಮಗೆ ಸಪ್ಲಿಮೆಂಟರಿ ಪರೀಕ್ಷೆಯನ್ನು ಇಲಾಖೆಯ ವತಿಯಿಂದ ನಡೆಸಲಾಗುತ್ತದೆ.
ಇದರ ಮೂಲಕ ನಿಮ್ಮ ಫಲುತಾಂಶವನ್ನು ಸುಧಾರಿಸಿಕೊಳ್ಳುವುದರ ಜೊತೆಗೆ ಉತ್ತಿರ್ಣ ವಾಗಲು ಇನ್ನೊಂದು ಅವಕಾಶ ದೊರೆತಂತಾಗುತ್ತದೆ.
ಫಲಿತಾಂಶವನ್ನು ತಿಳಿದ ನಂತರ ವಿದ್ಯಾರ್ಥಿಗಳು ಮತ್ತು ಪಾಲಕರು ಮಾಡಬೇಕಿರುವುದು
ಫಲಿತಾಂಶ ಪ್ರಕಟಿಸಿದ ನಂತರ ವಿದ್ಯಾರ್ಥಿಗಳು ಎಲ್ಲವನ್ನು ಒಂದೇ ತರನಾಗಿ ತೆಗೆದುಕೊಳ್ಳಬೇಕು. ಉತ್ತಿರ್ಣ ಅನುತ್ತಿರ್ಣ ಎಲ್ಲವು ಜೀವನದಲ್ಲಿ ಇರುವಂತದ್ದೇ, ಎಲ್ಲದಕ್ಕೂ ಸಮಯ ತೆಗೆದುಕೊಳ್ಳುತ್ತದೆ. ಒಂದು ವೇಳೆ ಪರೀಕ್ಷೆಯಲ್ಲಿ ಫೇಲ್ ಆದಲ್ಲಿ ಇನ್ನೊಮ್ಮೆ ಪರೀಕ್ಷೆ ನೀಡಿ. ನಿಮ್ಮ ಫಲಿತಾಂಶವನ್ನು ಉತ್ತಿರ್ಣ ವಾಗಿಸಿಕೊಳ್ಳಿ.
ಪಾಲಕರು ಸಹ ಮಕ್ಕಳಿಗೆ ಪ್ರೋತ್ಸಾಹ ನೀಡಿ ಅವರ ಜೊತೆ ನಿತ್ತು ಅವರ ಮುಂದಿನ ಜೀವನ ರೂಪಿಸುವಲ್ಲಿ ಸಹಕರಿಸಬೇಕು.

ಬಹು ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಸಲಹೆಗಳು
- ಫಲಿತಾಂಶ ಏನೇ ಆಗಿರಲಿ ಆತ್ಮವಿಶ್ವಾಸ ಒಂದಿದ್ದರೆ ಏನು ಬೇಕಾದರೂ ಸಾಧಿಸಬಹುದು, ಧೈರ್ಯಗುಂದುವ ಅವಶ್ಯಕತೆ ಇಲ್ಲಾ.
- ನಿಮ್ಮ ಆಸಕ್ತಿ ಮತ್ತು ಸಾಮರ್ಥ್ಯವನ್ನು ನೋಡಿಕೊಂಡು, ಮುಂದಿನ ಹೆಜ್ಜೆಯನ್ನು ಇಡಿ.
- ನಿಮ್ಮ ಮುಂದಿನ ಶೈಕ್ಷಣಿಕ ಜೀವನದ ಬಗ್ಗೆ ಯಾವುದೇ ತರನಾದ ಪ್ರಶ್ನೆಗಳಿದ್ದಲ್ಲಿ ಪಾಲಕರು ಅಥವಾ ಶಿಕ್ಷಕರ ಸಲಹೆಗಳನ್ನು ಪಡೆಯಿರಿ.
- ಒತ್ತಡಕ್ಕೆ ಒಳಗಾಗುವ ಅವಶ್ಯಕತೆ ಇಲ್ಲಾ, ಎಲ್ಲದಕ್ಕೂ ಸಮಯ ಬರಬೇಕು.
ಕೊನೆಯದಾಗಿ
2ನೇ puc ಫಲಿತಾಂಶವು ಶೈಕ್ಷಣಿಕ ಜೀವನದ ಅತ್ಯಂತ ಮಹತ್ವದ ಮೈಲಿಗಲ್ಲು. ಆದರೆ ಇದೇ ಅಂತಿಮ ಗುರಿಯಲ್ಲ.ಸರಿಯಾದ ಮಾಹಿತಿ, ಸರಿಯಾದ ನಿರ್ಧಾರ ಮತ್ತು ಆತ್ಮವಿಶ್ವಾಸ – ಧೈರ್ಯದಿಂದ ಮುಂದುವರಿದರೆ ಯಶಸ್ಸು ನಿಮ್ಮದೇ.
2nd puc result ಅನ್ನು ಯಾವ ವೆಬ್ಸೈಟ್ ನಲ್ಲಿ ಚೆಕ್ ಮಾಡಬೇಕು?
ಶಿಕ್ಷಣ ಇಲಾಖೆಯ ಫಲಿತಾಂಶದ ಅಧಿಕೃತ ವೆಬ್ಸೈಟ್ ಆದ karresults.nic.in ಮೂಲಕ 2nd puc Result 2026 ಅನ್ನು ಚೆಕ್ ಮಾಡಬಹುದು.
2nd puc result ಚೆಕ್ ಮಾಡಲು ಬೇಕಿರುವ ಅಗತ್ಯ ಮಾಹಿತಿಗಳಾವುವು?
ಫಲಿತಾಂಶ ಚೆಕ್ ಮಾಡಲು ಮುಖ್ಯವಾಗಿ ನಿಮ್ಮ ನೋಂದಣಿ ಸಂಖ್ಯೆ (Register Number) ಮತ್ತು ವೈಯಕ್ತಿಕ ಮಾಹಿತಿ(DOB ಅಥವಾ ಹೆಸರು) ಅತ್ಯಗತ್ಯ..
2nd puc 2026 ರ ಪೂರಕ ಪರೀಕ್ಷೆ (Supplementary Exam) ಯಾವಾಗ ನಡೆಸಲಾಗುತ್ತದೆ?
ಫಲಿತಾಂಶ ಪ್ರಕಟಿಸಿ ನಂತರದಲ್ಲಿ ಕೆಲವೇ ತಿಂಗಳುಗಳಲ್ಲಿ ನಡೆಸಲಾಗುತ್ತದೆ.
Jayanth
ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.
About Us →