Table of Contents
ರಾಜ್ಯದಲ್ಲಿನ ಭೂಮಾಪಕ ಖಾಲಿ ಹುದ್ದೆಗಳ ಸಂಖ್ಯೆ ಅಧಿಕವಾಗಿ, ಸಾರ್ವಜನಿಕರಿಗೆ ಸಿಗುವ ಸರ್ಕಾರಿ ಸೇವೆಯಲ್ಲಿ ವ್ಯತ್ಯಯ ಆಗುವ ಸಂಭವ ಇರುವುದರಿಂದ ಪ್ರಸ್ತುತ ಚಾಲ್ತಿಯಲ್ಲಿರುವ ಮತ್ತು ಅಧಿಸೂಚನೆಯಾಗಿರುವ ಹುದ್ದೆಯಾದ 750 ಸರ್ಕಾರಿ ಭೂಮಾಪಕ (Land Surveyor Recruitment 2026) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಬಗ್ಗೆ ಅಧಿವೇಶನದಲ್ಲಿಯೂ ಪ್ರಶ್ನೆಗಳನ್ನು ಕೇಳಲಾಗಿದೆ.
ಪ್ರಸ್ತುತ ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಯಾವ ಹಂತದಲ್ಲಿದೆ ಮತ್ತು ಹೊಸದಾಗಿ ಹೆಚ್ಚು ಭೂಮಾಪಕರ ಹುದ್ದೆಗಳ ನೇಮಕಾತಿಗೆ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಭೂಮಾಪಕರ(Land Surveyor) ಕೊರತೆಯಿಂದ ಸಾರ್ವಜನಿಕರಿಗೆ ಸರ್ಕಾರಿ ಸೇವೆಯಲ್ಲಿ ಉಂಟಾಗುವ ಸಮಸ್ಯೆಗಳು
ರಾಜ್ಯದಲ್ಲಿನ ಭೂಮಾಪಕರ ಹುದ್ದೆ ಖಾಲಿಯಿಂದಾಗಿ ಆಡಳಿತಾತ್ಮಕ ತೊಂದರೆಗಳಲ್ಲದೆ,ನೇರವಾಗಿ ಸಾರ್ವಜನಿಕರಿಗೆ ಸಿಗಬೇಕಾದ ಸರ್ಕಾರಿ ಸೇವೆಗಳಿಗೂ ಸಹ ತೊಂದರೆ ಊಟಾಗಿದೆ.
- ಭೂಮಾಪನ ಅಂದರೆ ಭೂಮಿಯ ಅಳತೆ ಮಾಡುವ ಕಾರ್ಯದಲ್ಲಿ ವಿಳಂಬ
- ಭೂ ದಾಖಲೆ ತಿದ್ದುಪಡಿ ಪ್ರಕ್ರಿಯೆ ಮಾಡುವ ಕಾರ್ಯದಲ್ಲಿ ನಿಧಾನ
- ಜಮೀನು ವಿವಾದಗಳ ಬಗೆಹರಿಸುವ ಅಥವಾ ನಿವಾರಣೆ ಮಾಡುವ ಕಾರ್ಯದಲ್ಲಿ ವಿಳಂಬ
- ಭೂಮಿ ತಂತ್ರಾಂಶ ಆನ್ಲೈನ್ ಸೇವೆಗಳ ಮೇಲೆ ಪರಿಣಾಮ ನೇರ ಪರಿಣಾಮ ಬಿರುತ್ತದೆ
ಪ್ರಸ್ತುತ ರಾಜ್ಯದಲ್ಲಿನ ಭೂಮಾಪಕರ ಹುದ್ದೆಗಳ ಸಂಖ್ಯೆ
ಇದೇ ಸಂದರ್ಭದಲ್ಲಿ ಸದಸ್ಯರು ಅಧಿವೇಶನದಲ್ಲಿ ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿರುವ ಕಂದಾಯ ಸಚಿವರು ಪ್ರಸ್ತುತ ರಾಜ್ಯದಲ್ಲಿ ಖಾಲಿಯಿರುವ ಮತ್ತು ಕಾರ್ಯ ನಿರ್ವಹಿಸುತ್ತಿರುವ ಭೂಮಾಪಕರ ಹುದ್ದೆಗಳ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.
- ರಾಜ್ಯದಲ್ಲಿ ಒಟ್ಟು ಮಂಜೂರಾದ ಭೂಮಾಪಕರ ಹುದ್ದೆಗಳು: 4020
- ಪ್ರಸ್ತುತ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭೂಮಾಪಕರು: 3059
- ಖಾಲಿ ಇರುವ ಒಟ್ಟು ಭೂಮಾಪಕರ ಹುದ್ದೆಗಳು: 961
ಈ ಮೇಲೆ ಹೇಳಿರುವ ಎಲ್ಲಾ ಅಂಕಿ ಸಂಖ್ಯೆಗಳು ಸರ್ಕಾರಿ ದಾಖಲೆಗಳಿಂದ ದೊರೆತಿರುತ್ತದೆ.

750 ಭೂಮಾಪಕರ ಹುದ್ದೆಯ ನೇಮಕಾತಿ ಪ್ರಕ್ರಿಯೆ ಯಾವ ಹಂತದಲ್ಲಿದೆ?
ಪ್ರಸ್ತುತ ಖಾಲಿಯಿರುವ 961 ಹುದ್ದೆಗಳಲ್ಲಿ 750 ಸರ್ಕಾರಿ ಭೂಮಾಪಕರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಕರ್ನಾಟಕ ಲೋಕಸೇವಾ ಆಯೋಗ ( KPSC) ದಿಂದ ಹೊರಡಿಸಲಾಗಿತ್ತು. ಆದರೆ ನಂತರದಲ್ಲಿ ಕರ್ನಾಟಕ ಸರ್ಕಾರದ ಆದೇಶದನ್ವಯ ನಿಗದಿ ಪಡಿಸಿರುವ ದಿನಾಂಕದ ನಂತರದ ಅಧಿಸೂಚನೆಗೊಂಡ ಹುದ್ದೆಗಳನ್ನು ರದ್ದುಗೊಳಿಸುವಂತೆ ತಿಲಿಸಲಾಗಿದ್ದು, ಈಗ ಈ 750 ಭೂಮಾಪಕರ ಹುದ್ದೆಯ ನೇಮಕಾತಿ ಪ್ರಕಿಯೆಯನ್ನು ಸ್ಥಗಿತಗೊಳಿಸಲಾಗಿದ್ದು, ನಂತರದಲ್ಲಿ
ಸರ್ಕಾರದ ನಿರ್ದೇಶನದಂತೆ 50% ಮೀಸಲಾತಿಯ ಹೊಸ ಆದೇಶದನ್ವಯ ನೇಮಕಾತಿ ಹುದ್ದೆಗಳ ಹೊಸ ವರ್ಗಿಕರಣಕ್ಕೆ ಚಾಲನೆ ಜೊತೆಗೆ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ.ಸರ್ಕಾರದ ಆದೇಶದನ್ವಯ ತಿಳಿಸಿರುವ ಹುದ್ದೆಗಳಿಗೆ ವರ್ಗಿಕರಣ ಪ್ರಕ್ರಿಯೆ ಮಾಡುವುದು ಚಾಲ್ತಿಯಲ್ಲಿರುತ್ತದೆ.
ರಾಜ್ಯದಲ್ಲಿನ ಖಾಸಗಿ ಭೂಮಾಪಕರ ಹುದ್ದೆಗಳು
ರಾಜ್ಯದಲ್ಲಿ ಸರ್ಕಾರಿ ಭೂ ಮಾಪಕರ ಜೊತೆಗೆ ಖಾಸಗಿ ಅಥವಾ ಲೈಸನ್ಸ್ ಭೂ ಮಾಪಕರು ಸಹ ಇದ್ದರೆ, ರೈತರು ಮೋಜಿಣಿ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿ ಲೈಸನ್ಸ್ ಭೂ ಮಾಪಕರು ಅಥವಾ ಖಾಸಗಿ ಭೂ ಮಾಪಕರ ಮೂಲಕ ತಮ್ಮ ಜಮೀನಿನ ಸರ್ವೇಯನ್ನು ಮಾಡಿಕೊಳ್ಳಬಹುದು. ಪ್ರಸ್ತುತ ಈ ವಿಷಯದ ಬಗ್ಗೆ ಕಂದಾಯ ಸಚಿವರು ನೀಡಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿನ ಪ್ರಸ್ತುತ ಖಾಸಗಿ ಭೂಮಾಪಕರ ಅಂಕಿ ಅಂಶಗಳು ಹೀಗಿದೆ.
- ರಾಜ್ಯದಲ್ಲಿ ಪ್ರಸ್ತುತ ಒಟ್ಟು ನೋಂದಾಯಿತ ಖಾಸಗಿ ಭೂಮಾಪಕರ ಸಂಖ್ಯೆ: 8995
- ಪ್ರಸ್ತುತ ಪರವಾನಗಿ ರದ್ದಾದ ಭೂಮಾಪಕರ ಸಂಖ್ಯೆ: 2103
- ಪ್ರಸ್ತುತ ಈಗ ಕಾರ್ಯನಿರ್ವಹಿಸುತ್ತಿರುವವರು: 6892
ಕಾರ್ಯ ನಿರ್ವಹಿಸುತ್ತಿರುವ ಈ 6892 ಪರವಾನಿಗೆ ಭೂಮಾಪಕರು ಮೋಜಿಣಿ ಮತ್ತು ಇತರೆ ಇಲಾಖೆ ಕಾರ್ಯಗಳನ್ನು ಮಾಡುತ್ತಿದ್ದಾರೆ.ಇವರಿಂದ ಸಾರ್ವಜನಿಕರ ಇಲಾಖೆಯಎಲ್ಲಾ ಸೇವೆಗಳನ್ನು ಇವರಿಂದ ಪಡೆಯುತ್ತಿದ್ದಾರೆ. ಭೂಮಿ ಮತ್ತು ಮೋಜಿಣಿ ತಂತ್ರಾಂಶದಲ್ಲಿನ ಎಲ್ಲಾ ಪ್ರಮುಖ ಸರ್ವೇ ಮತ್ತು ಇತರೆ ಸರ್ವೇ ದಾಖಲೆಗಳ ಸೇವೆಯನ್ನು ಪರವಾನಿಗೆ ಭೂಮಾಪಕರ ಸಹಾಯದಿಂದ ನಿರ್ವಹಿಸಲಾಗುತ್ತಿದೆ.
ಕರ್ನಾಟಕ ಸರ್ಕಾರದಿಂದ ಹೊಸ ಭೂಮಾಪಕ (Land Surveyor )ಹುದ್ದೆಗಳ ನೇಮಕ…!
ಹೌದು, ಅಧಿವೇಶನದ ಪ್ರಶ್ನೆಗಳಿಗೆ ಉತ್ತರಿಸಿರುವ ಕಂದಾಯ ಸಚಿವರು ಪ್ರಸ್ತುತ ಬಾಕಿ ಉಳಿದಿರುವ 750 ಸರ್ಕಾರಿ ಭೂಮಾಪಕರ ನೇಮಕಾತಿ ಜೊತೆಗೆ 1,000 ಪರವಾನಿಗೆ ಭೂಮಾಪಕರ ನೇಮಕಾತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದರಲ್ಲಿ ಮೇಲೆ ಹೇಳಿರುವ ಸ್ಥಗಿತ ಗೊಂಡ KPSC ಮೂಲಕ ನಡೆಸುವ 750 ಸರ್ಕಾರಿ ಭೂ ಮಾಪಕರು ಮತ್ತು ನಂತರದಲ್ಲಿ 1,000 ಖಾಸಗಿ ಅಥವಾ ಲೈಸನ್ಸ್ ಭೂ ಮಾಪಕರ ನೇಮಕಾತಿ ಮಾಡುತ್ತಾರೆ.
ಹೊಸ ನೇಮಕಾತಿ ಪ್ರಾರಂಭವಾಗಲು ಈ ಹಂತಗಳನ್ನು ದಾಟಬೇಕು.
ಹೊಸ ನೇಮಕಾತಿ ಆಗಿಂದ್ದಾಗೆ ಆಗುವ ಕಾರ್ಯವಲ್ಲ,ಇದಕ್ಕೆ ತುಂಬಾ ಹಂತಗಳು ದಾಟಿದ ನಂತರ ನೇಮಕಾತಿ ಅಧಿಸೂಚನೆ ಆಗುತ್ತದೆ. ಅದರಲ್ಲಿ ಈ ಕೆಳಗೆ ಪ್ರಮುಖ ಹಾಗೂ ಮುಖ್ಯ ಹಂತಗಳನ್ನು ನೀಡಲಾಗಿದೆ.
- ಇಲಾಖೆಗೆ ಬೇಕಿರುವ ಹುದ್ದೆಗಳ ಬಗ್ಗೆ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಅನುಮೋದನೆಗೆ ಕಳುಹಿಸಬೇಕು.
- ಆರ್ಥಿಕ ಇಲಾಖೆಯು ಅನುಮೋದನೆ ನೀಡುವುದು.
- ಆರ್ಥಿಕ ಇಲಾಖೆ ತಿಳಿಸಿರುವ ಹುದ್ದೆಗಳಿಗೆ ಪರೀಕ್ಷೆ ನಡೆಸಲು ಪ್ರಾಧಿಕಾರದ ಆಯ್ಕೆ.
- ಮೀಸಲಾತಿ ಅನ್ವಯ ಹುದ್ದೆಗಳ ಹಂಚಿಕೆ ಮತ್ತು ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ.
- ನೇಮಕಾತಿ ಪ್ರಾಧಿಕಾರದಿಂದ ಹೊಸ ಅಧಿಸೂಚನೆ ಪ್ರಕಟ.

ಹೊಸ ನೇಮಕಾತಿ ಅಧಿಸೂಚನೆಯ(Land Surveyor Recruitment 2026)ನಂತರದ ಹಂತಗಳು
- ಅರ್ಜಿ ಅಹ್ವಾನ -ಅರ್ಜಿ ಸ್ವೀಕಾರ
- ಪ್ರಾಧಿಕಾರದಿಂದ ಪರೀಕ್ಷೆ ನಡೆಸಲಾಗುತ್ತದೆ.
- ಆಯ್ಕೆ ಪಟ್ಟಿ ಬಿಡುಗಡೆ.
- ದಾಖಲಾತಿ ಪರಿಶೀಲನೆ ಮತ್ತು ತರಬೇತಿ.
- ನಂತರದಲ್ಲಿ ಪೋಸ್ಟಿಂಗ್ ಮಾಡಿ,ಸೇವೆ ನೀಡುವುದು
ಭೂಮಾಪಕರ ಕೊರತೆಯಿಂದ ಜನರಿಗಾಗುವ ಸಮಸ್ಯೆಗಳೇನು?
- ಭೂ ಮಾಪನ ಅಥವಾ ಭೂಮಿ ಸರ್ವೇಯಲ್ಲಿ ವಿಳಂಬ.
- ರೈತರ RTC / ಪಹಣಿಯಲ್ಲಿನ ತಿದ್ದುಪಡಿಗೆ ಇದರಿಂದ ಅಡ್ಡಿ.
- ಜಮೀನು ವಿವಾದ ಹೆಚ್ಚಳ -ರೈತರಿಗೆ ಸಮಸ್ಯೆ
- ಆನ್ಲೈನ್ ಸೇವೆಗಳು ಸಹ ನಿಯಮಿತವಾಗುತ್ತದೆ.
- ಕೆಲಸದ ಒತ್ತಡದಿಂದ ಇತರೆ ಕಾರ್ಯ ಮಾಡಲಾಗದು.
- ಸಾರ್ವಜನಿಕರ ಸಮಯ ವ್ಯರ್ಥ
- ಕಚೇರಿಗೆ ಹೆಚ್ಚಾಗಿ ಅಲೆದಾಡುವ ಸಮಸ್ಯೆ
ಈ ಸಮಸ್ಯೆಗಳಿಗೆ ಪರಿಹಾರ
ಸರ್ಕಾರ ಕೈಗೊಳ್ಳಬೇಕಿರುವ ಕ್ರಮಗಳನ್ನು ಅತಿ ಬೇಗನೆ ತೆಗೆದುಕೊಳ್ಳಬೇಕು.
ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು
ಪ್ರಸ್ತುತ ಸ್ಥಗಿತಗೊಂಡಿರುವ 750 ಸರ್ಕಾರಿ ಭೂಮಾಪಕರ(land Surveyor Recruitment 2026) ಹುದ್ದೆಗಳಿಗೆ ಅಧಿಸೂಚನೆಗೊಂಡ ನೇಮಕಾತಿಗೆ ವೇಗ ನೀಡಬೇಕು.
ಹೊಸದಾಗಿ 1,000 ಭೂಮಾಪಕರ ಹುದ್ದೆ ಭರ್ತಿಗೆ ಕ್ರಮ ಕೈಗೊಂಡು ಬೇಗನೆ ನೇಮಕಾತಿ ಮಾಡಿಕೊಳ್ಳಬೇಕು.

ಕೊನೆಯದಾಗಿ
ರಾಜ್ಯದಲ್ಲಿ ಭೂಮಾಪಕರ ಕೊರತೆಯಿಂದ ಸಾರ್ವಜನಿಕರ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯ ಆಗುತ್ತಿದ್ದೂ ಇವು ಆಡಳಿತಾತ್ಮಕ ಸವಾಲಾಗಿ ಪರಿಣಮಿಸಿದೆ. ಇದರಲ್ಲಿಯೂ 750 ಸರ್ಕಾರಿ ಭೂಮಾಪಕರ ಹುದ್ದೆಗಳ ನೇಮಕಾತಿ ಸ್ಥಗಿತಗೊಂಡಿರುವುದು ಸಮಸ್ಯೆ ಗಂಭೀರಗೊಳಿಸಿದೆ. ಅದರಲ್ಲಿಯೂ 1000 ಹೊಸ ಪರವಾನಿಗೆ ಭೂಮಾಪಕರ ನೇಮಕಾತಿ ಉದ್ಯೋಗಕಾಂಕ್ಷಿಗಳಿಗೆ ಖುಷಿ ನೀಡುವ ವಿಚಾರವಾಗಿದೆ.
ಮೇಲೆ ಹೇಳಿರುವ ಸ್ಥಗಿತಗಿಂಡ 750 ಹುದ್ದೆಯ ಸರ್ಕಾರಿ ಭೂ ಮಾಪಕ ನೇಮಕಾತಿಗೆ ಚಾಲನೆ ನೀಡಿ. ಎಲ್ಲಾ ಹಂತ ಮುಗಿಸಿ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಿ, ಸೇವೆ ಪಡೆದುಕೊಳ್ಳುವುದು, ಇದರಿಂದ ಸಾರ್ವಜನಿಕರಿಗೆ ನಿಗದಿತ ಸಮಯಕ್ಕೆ ಸೇವೆ ದೊರೆಯುತ್ತದೆ.
ಇದನ್ನು ಬೇಗನೆ ನೇಮಕಾತಿ ಅಧಿಸೂಚನೆ ಹೊರಡಿಸಿ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ನೀಡಿ, ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡಿ ಸಾರ್ವಜನಿಕರಿಗೆ ಉತ್ತಮ ರೀತಿಯ ಸೇವೆ ಒದಗಿಸುವಲ್ಲಿ ಸರ್ಕಾರ ಈ ಕೂಡಲೇ ಬೇಕಿರುವ ಕ್ರಮಗಳನ್ನು ಕೈಗೊಳ್ಳಬೇಕು.
750 ಭೂಮಾಪಕರ ನೇಮಕಾತಿ ಯಾಕೆ ಸ್ಥಗಿತಗೊಂಡಿದೆ?
ಕರ್ನಾಟಕ ಸರ್ಕಾರದ ಸುತ್ತೋಲೆಗಳ ಪ್ರಕಾರ 750 ಸರ್ಕಾರಿ ಭೂಮಾಪಕ ಹುದ್ದೆಯ ನೇಮಕಾತಿ ಅಧಿಸೂಚನೆಯನ್ನು ಸ್ಥಗಿತಗೊಳಿಸಲಾಗಿದೆ.
ರಾಜ್ಯದಲ್ಲಿ ಒಟ್ಟು ಎಷ್ಟು ಸರ್ಕಾರಿ ಭೂಮಾಪಕರ ಹುದ್ದೆಗಳು ಖಾಲಿ ಇವೆ?
ಒಟ್ಟು ಮಂಜೂರಾದ 4020 ಹುದ್ದೆಗಳ ಪೈಕಿ 961ಹುದ್ದೆಗಳು ಖಾಲಿಯಿವೆ. ಇದರಲ್ಲಿ 750 ಸರ್ಕಾರಿ ಭೂಮಾಪಕ ಹುದ್ದೆಗೆ ಈಗಾಗಲೇ ಅಧಿಸೂಚನೆ ಹೊರಡಿಸಿ ಅರ್ಜಿ ಸ್ವೀಕರಿಸಲಾಗಿದೆ. ನಂತರದಲ್ಲಿ ಈ 750 ಹುದ್ದೆಯ ನೇಮಕಾತಿಯನ್ನು ಸರ್ಕಾರದ ಸುತ್ತೋಲೆ ಪ್ರಕಾರವಾಗಿ ಸ್ಥಗಿತಗೊಳಿಸಲಾಗಿದೆ.
1000 ಹೊಸ ಪರವಾನಿಗೆ ಭೂಮಾಪಕರ ನೇಮಕಾತಿ 2026 ಯಾವಾಗ ನಡೆಯಲಿದೆ?
1000 ಹೊಸ ಪರವಾನಿಗೆ ಭೂಮಾಪಕರ ಹುದ್ದೆಯ ಭರ್ತಿಗೆ ಈಗಾಗಲೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಂತರದಲ್ಲಿ ಈ ಹುದ್ದೆಯ ಭರ್ತಿಗೆ ಕ್ರಮವಹಿಸಲಾಗುವುದು.
ಭೂಮಾಪಕರ ಕೊರತೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳೇನು?
ಭೂಮಾಪಕರ ಕೊರತೆಯಿಂದ ಭೂಮಾಪನ ಅಥವಾ ಸರ್ವೇ ವಿಳಂಬ, RTC ತಿದ್ದುಪಡಿಯಲ್ಲಿ ತಡ, ರೈತರ ಜಮೀನು ಗಡಿ ವಿವಾದಗಳು ಹಾಗೂ ಸರ್ಕಾರಿ ಸೇವೆಗಳ ವಿಳಂಬ.
Jayanth
'NAMMA CAREER’ ಬ್ಲಾಗಿಂಗ್ ವೆಬ್ಸೈಟ್ ನ Founder ಮತ್ತು Writer ಆದ ನಾನು, ಕಳೆದ 6 ವರ್ಷಗಳಿಂದ Content Writer ಆಗಿ ಕೆಲಸದ ಅನುಭವ ಹೊಂದಿದ್ದೇನೆ. ಈ ಬ್ಲಾಗ್ ವೆಬ್ಸೈಟ್ನಲ್ಲಿ ಶಿಕ್ಷಣ, ಉದ್ಯೋಗ, ಸರ್ಕಾರಿ ಯೋಜನೆಗಳು ಹಾಗೂ ಸಾರ್ವಜನಿಕರಿಗೆ ಉಪಯುಕ್ತವಾಗುವ ಮಾಹಿತಿಗಳನ್ನು ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಬರೆದು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಓದುಗರಿಗೆ ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ನೀಡುವುದೇ ನನ್ನ ಮುಖ್ಯ ಉದ್ದೇಶವಾಗಿದೆ.
About Us →