KCET 2026: ಈಗಲೇ ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಿ.

WhatsApp Group Join Now
Telegram Group Join Now

ಕರ್ನಾಟಕ ರಾಜ್ಯದ ಲಕ್ಷಾಂತರ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳು ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. KCET 2026 (Karnataka Common Entrance Test) ಪರೀಕ್ಷೆ ದಿನಾಂಕದೊಂದಿಗೆ ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡಲು ಈಗ Admit Card ಡೌನ್ಲೋಡ್ Link ತೆರೆದುಕೊಂಡಿದೆ.

ಈಗ ಡೌನ್ಲೋಡ್ ಮಾಡುವ ಪ್ರಕ್ರಿಯೆ ಅಧಿಕೃತವಾಗಿ ಪ್ರಾರಂಭವಾಗಿದ್ದೂ, ಇಂಜಿನಿಯರಿಂಗ್, ಮೆಡಿಕಲ್, ಫಾರ್ಮಸಿ ಹಾಗೂ ಇತರ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಈ KCET ಪರೀಕ್ಷೆ, ಪ್ರವೇಶ ಪರೀಕ್ಷೆಯಾಗಿದೆ.

ಈ ಪರೀಕ್ಷೆಯಲ್ಲಿ ಉತ್ತಮ ಅಂಕ ಮತ್ತು ರಾಂಕ್ ಪಡೆಯುವುದರೊಂದಿಗೆ ಉತ್ತಮ ಕಾಲೇಜ್ ನಲ್ಲಿ ಪ್ರವೇಶಾತಿ ಪಡೆಯಬಹುದು. ಈ ಕೆಳಗೆ ವಿವರಿಸಿರುವ ಹಾಗೆ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ Admit Card ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

KCET ಪರೀಕ್ಷೆ 2026ರ ಬಗ್ಗೆ..

ಕರ್ನಾಟಕ ಸರ್ಕಾರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಈ ಪರೀಕ್ಷೆಯನ್ನು ಹೆಸರೇ ಹೇಳುವಂತೆ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (karnataka common Entrance Test).ಇದು ಕರ್ನಾಟಕದಲ್ಲಿ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆಯಲು ಈ ಪರೀಕ್ಷೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು.

KCET 2026ರ UGCET ಅಡ್ಮಿಟ್ ಕಾರ್ಡ್ ಅನ್ನುವುದು ವಿದ್ಯಾರ್ಥಿಯ ಪರೀಕ್ಷೆಗೆ ಪ್ರವೇಶ ಪಡೆಯಲು ಅಗತ್ಯವಾದ ಅಧಿಕೃತ ದಾಖಲೆಯಾಗಿರುವುದರಿಂದ ವಿದ್ಯಾರ್ಥಿಗಳು ಬೇಗನೆ ಅಧಿಕೃತ ವೆಬ್ಸೈಟ್ ನಿಂದ ಈ ಅಡ್ಮಿಟ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಂಡರೆ ಒಳ್ಳೆಯದು.Admit Card ಇಲ್ಲದೆ ಯಾವುದೇ ವಿದ್ಯಾರ್ಥಿಯನ್ನು ಪರೀಕ್ಷೆ ಕೇಂದ್ರದೊಳಗೆ ಪ್ರವೇಶ ನೀಡಲಾಗುವುದಿಲ್ಲ.

KCET 2026 Admit Card ಯಾವಾಗ ಬಿಡುಗಡೆಯಾಗಿದೆ?

ಏಪ್ರಿಲ್ 10ನೇ ತಾರೀಖಿ ನಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ KCET 2026 ರ Admit Card ಅಥವಾ Hall Ticket ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಅನ್ನು ಬಿಡುಗಡೆ ಮಾಡಿದೆ.

ಈ ಲಿಂಕ್ ಬಳಸಿಕೊಂಡು ವಿದ್ಯಾರ್ಥಿಗಳು ನಿಮ್ಮ ಮಾಹಿತಿಯನ್ನು ನಮೂದಿಸುವುದರ ಮೂಲಕ hall ticket ಅಥವಾ ಅಡ್ಮಿಟ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

👉 ಇದೆ ತರನಾದ ಹೆಚ್ಚಿನ ಮಾಹಿತಿಗೆ ಈಗಲೇ ನಮ್ಮ ಟೆಲಿಗ್ರಾಂ ಚಾನೆಲ್ ಅನ್ನು ಫಾಲೋ ಮಾಡಿ.

ಹೇಗೆ ಡೌನ್ಲೋಡ್ ಮಾಡಿಕೊಳ್ಳುವುದು?

KCET 2026 Admit Card ಅನ್ನು ಆನ್‌ಲೈನ್ ಮೂಲಕ ಅಧಿಕೃತ ವೆಬ್ಸೈಟ್ ನಲ್ಲಿ ಮಾತ್ರ ಡೌನ್ಲೋಡ್ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳು ತಮ್ಮ ಅರ್ಜಿ ಸಂಖ್ಯೆ (Application Number) ಮತ್ತು ಪಾಸ್ವರ್ಡ್ ಬಳಸಿಕೊಂಡು otp ಮೂಲಕ ಲಾಗಿನ್ ಆಗಿ ಅಡ್ಮಿಟ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.

ಪ್ರಮುಖ ವಿಷಯ: Admit Card ಅನ್ನು ಪೋಸ್ಟ್ ಮೂಲಕ ಅಥವಾ ಬೇರೆ ಯಾವುದೇ ವಿಧಾನದಲ್ಲಿ ನಿಮ್ಮ ವಿಳಾಸಕ್ಕೆ ಕಳುಹಿಸಲಾಗುವುದಿಲ್ಲ.

ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡುವ ಸಂಪೂರ್ಣ ಮಾಹಿತಿ.

  • 1.KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  • 2.”KCET 2026 Admit Card Download” ಲಿಂಕ್ ಕ್ಲಿಕ್ ಮಾಡಿ
  • 3.Application Number ಮತ್ತು ಪಾಸ್ವರ್ಡ್ ನಮೂದಿಸಿ
  • 4.ಕ್ಯಾಪ್ಚ್ ಕೋಡ್ ಎಂಟರ್ ಮಾಡಿ.
  • 5.Submit ಬಟನ್ ಒತ್ತಿ
  • 6.ನಂತರ otp ನಮೂದಿಸಿ ಸಲ್ಲಿಸಿ
  • 7.ನಿಮ್ಮ Admit Card ಸ್ಕ್ರೀನ್‌ನಲ್ಲಿ ಕಾಣಿಸುತ್ತದೆ
  • 8.Download ಮಾಡಿ ಮತ್ತು print ತೆಗೆದುಕೊಳ್ಳಿ.

KCET 2026 Admit Card ನಲ್ಲಿ ಈ ಎಲ್ಲಾ ಅಂಶಗಳನ್ನು ಗಮನಿಸಿ.

ನೀವು ನಿಮ್ಮ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿದ ನಂತರ, ಅದರಲ್ಲಿ ನಮೂದಾಗಿರುವ ಎಲ್ಲಾ ಮಾಹಿತಿಗಳನ್ನು ಒಮ್ಮೆ ಚೆಕ್ ಮಾಡಿಕೊಳ್ಳುವುದು ಬಹಳ ಮುಖ್ಯ. ಸಾಮಾನ್ಯವಾಗಿ ಈ ಅಡ್ಮಿಟ್ ಕಾರ್ಡ್ ನಲ್ಲಿ ಈ ಕೆಳಗಿನ ವಿವರಗಳು ನೀಡಿರುತ್ತಾರೆ.

KCET 2026 EXAM ADMIT CARD
KCET 2026 EXAM ADMIT CARD
  1. ವಿದ್ಯಾರ್ಥಿಯ ಪೂರ್ಣ ಹೆಸರು
  2. ಅರ್ಜಿ ಸಂಖ್ಯೆ(Application Number)
  3. ರೋಲ್ ನಂಬರ್(Roll Number )
  4. ಪರೀಕ್ಷಾ ದಿನಾಂಕ ಮತ್ತು ಸಮಯ
  5. ಪರೀಕ್ಷಾ ಕೇಂದ್ರದ ವಿಳಾಸ
  6. ವಿದ್ಯಾರ್ಥಿಯ ಫೋಟೋ ಮತ್ತು ಸಹಿ
  7. ಮುಖ್ಯ ಸೂಚನೆಗಳು
  8. ಇತ್ಯಾದಿ.

ಈ ಮೇಲೆ ತಿಳಿಸಿರುವ ನಿಮ್ಮ ಯಾವುದೇ ಮಾಹಿತಿ ತಪ್ಪು ಎಂದು ಕಂಡುಬಂದಲ್ಲಿ ಕೂಡಲೇ KEA ಸಹಾಯವಾಣಿಗೆ ಕರೆ ಮಾಡಿ.

KCET 2026 Admit Card ಡೌನ್ಲೋಡ್ ಮಾಡುವಾಗ ಎದುರಿಸುವ ಸಮಸ್ಯೆಗಳು

Admit Card ಡೌನ್‌ಲೋಡ್ ಮಾಡುವ ಸಮಯದಲ್ಲಿ ವಿದ್ಯಾರ್ಥಿಗಳು ಕೆಲವು ಸಾಮಾನ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವುಗಳೆಂದರೆ:

  • 1. ಲಾಗಿನ್ ಮಾಡುವಲ್ಲಿ ಸಮಸ್ಯೆಕಂಡು ಬರುವುದು

ತಪ್ಪಾದ Application Number ನಮೂದಿಸಿ ಲಾಗಿನ್  ಮಾಡಲು ಪ್ರಯತ್ನಿಸುವುದು.ನಿಮ್ಮ ಅರ್ಜಿಯನ್ನು ಪರಿಶೀಲಿಸಿ ಅರ್ಜಿ ಸಂಖ್ಯೆಯನ್ನು ನಮೂದಿಸಿ.ಪಾಸ್ವರ್ಡ್ ಅನ್ನು ಸರಿಯಾಗಿ ನಮೂದಿಸಿ.

  • 2. ಅಧಿಕೃತ ವೆಬ್‌ಸೈಟ್ ಲೋಡ್ ಆಗದೆ ಇರುವುದು ಅಥವಾ ಸರ್ವರ್ ಸಮಸ್ಯೆ

ಎಲ್ಲಾ ವಿದ್ಯಾರ್ಥಿಗಳು ಒಮ್ಮೆಲೇ ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಲು ಪ್ರಯತ್ನಿಸುವುದರಿಂದ ವೆಬ್ಸೈಟ್ ಮೇಲೆ ಒತ್ತಡ beಹೆಚ್ಚು ಟ್ರಾಫಿಕ್ ಇರುವ ಸಮಯದಲ್ಲಿ ವೆಬ್‌ಸೈಟ್ ನಿಧಾನವಾಗಬಹುದುಬೆಳಗಿನಜಾವ ಅಥವಾ ತಡ ರಾತ್ರಿ ಸಮಯದಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಪ್ರಯತ್ನಿಸಿ.

  • 3. Admit Card ಡೌನ್‌ಲೋಡ್ ಆಗದೆ ಇರುವುದು

ಒಂದು ವೇಳೆ ನೀವು ಬಳಸುತ್ತಿರುವ ಬ್ರೌಸರ್ ನಿಂದ ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡಲು ಸಾಧ್ಯವಾಗದೆ ಇದ್ದಲ್ಲಿ ಬೇರೆ ಬ್ರೌಸರ್ ಬಳಸಿ. ಕೆಲವೊಂದು ಬ್ರೌಸರ್ ಮೂಲಕ ಡೌನ್ಲೋಡ್ ಮಾಡಲು ಆಗದೇ ಇರಬಹುದು. (Use Chrome, Edge) ಹಾಗೆಯೇ ನಿಮ್ಮ Internet connection ಅನ್ನು ಪರಿಶೀಲಿಸಿ ನೋಡಿ.

ಪರೀಕ್ಷಾ ದಿನದಂದು ಈ ವಿಷಯವನ್ನು ನೆನಪಿಡಿ.

KCET ಪರೀಕ್ಷೆ ದಿನದಂದು ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳು ಈ ವಿಷಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು:

  • Admit Card ಅನ್ನು  ಕಡ್ಡಾಯವಾಗಿ ಪ್ರಿಂಟ್ ತೆಗೆದುಕೊಂಡು ಹೋಗಿ
  • ಒಂದು Valid Govt ID Proof (Aadhar Card, PAN Card) ಅನ್ನು ತೆಗೆದುಕೊಂಡು ಹೋಗಿ.
  • ಪರೀಕ್ಷಾ ಕೇಂದ್ರಕ್ಕೆ ಕನಿಷ್ಠ 1 ಗಂಟೆ ಮೊದಲು ತಲುಪಬೇಕು
  • ಮೊಬೈಲ್ ಫೋನ್, ಸ್ಮಾರ್ಟ್ ವಾಚ್ ಗಳನ್ನು ತೆಗೆದುಕೊಂಡು ಹೋಗಬೇಡಿ,ಇದನ್ನು KEA ನಿಷೇಧಿಸಿದೆ.
  • kea ನೀಡಿರುವ Dress code ಅನ್ನು ತಪ್ಪದೆ ಪಾಲಿಸಬೇಕು.

ಒಂದು ವೇಳೆ ಪರೀಕ್ಷೆಯ ಮಾರ್ಗಸೂಚಿ ಅಥವಾ ಸೂಚನೆಯನ್ನು ಪಾಲಿಸುವಲ್ಲಿ ತಪ್ಪಿದ್ದಲ್ಲಿ ಡಿಸ್ಕ್ವೇಲಿಪೈ ಮಾಡುವ ಸಾಧ್ಯತೆಗಳು ಇವೆ.

KCET 2026 STUDY TIPS
KCET 2026 STUDY TIPS

KCET 2026 ಅಧ್ಯಯನ ಮಾಡುತ್ತಿರುವವರು ಈ ಅಂಶಗಳನ್ನು ನೆನಪಿಡಿ.

ಕೇವಲ ಓದುವುದು ಮಾತ್ರ ಮುಖ್ಯವಲ್ಲ, ವಿಷಯವನ್ನು ತಿಳಿದುಕೊಳ್ಳುವುದು, ಹಾಗೂ ಸಮಯ ಪ್ರಜ್ಞೆ ಎಲ್ಲವು ಒಳಗೊಂಡ ಓದು ನಿಮ್ಮದಾಗಬೇಕು. ಆದ್ದರಿಂದ ಈ ಕೆಳಗಿನ ಅಂಶಗಳನ್ನು ನೆನಪಿಡಿ.

  • ಸಮಯ ನಿರ್ವಹಣೆಯೊಂದಿಗೆ ಓದು, ಉತ್ತಮ ಅಂಕಗಳಿಕೆಗೆ ಸಹಾಯ ಆದ್ದರಿಂದ ಓದುವಾಗ ಟೈಮ್ ಟೇಬಲ್ ಅಥವಾ ವೇಳಾಪಟ್ಟಿ ಮಾಡಿ. ವಿಷಯಗಳ ವಿಂಗಡಣೆ ಮೂಲಕ ಪ್ರತಿ ವಿಷಯದ ಮೇಲೂ ಹಿಡಿತ ಸಾಧಿಸಿದ್ದಲ್ಲಿ ಪರೀಕ್ಷಾಯಲ್ಲಿ ಉತ್ತಮ ಮಾರ್ಕ್ಸ್ ಗಳಿಸಬಹುದು.
  • KCET ಪರೀಕ್ಷೆಗೆ NCERT ಬುಕ್ ಅನ್ನು ರೆಫರ್ ಮಾಡಿ.
  • ಓದಿನ ಜೊತೆಗೆ ಪುನರ್ಮನನ ಮಾಡುವುದು ಅತಿ ಅವಶ್ಯಕ
  • ಫೋಕಸ್ ಎನ್ನುವುದು ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗಿರುವುದು. ಒಂದೇ ಕಡೆ(ಓದು) ನಿಮ್ಮ ಗಮನವಿರಲಿ
  • ಸಾಧ್ಯವಾದಲ್ಲಿ mock test ಅಥವಾ ಅಣುಕು ಪರೀಕ್ಷೆಯನ್ನು ತೆಗೆದುಕೊಳ್ಳಿ.

ಕೊನೆಯದಾಗಿ

ಈ ಬಾರಿಯ UGCET ಪರೀಕ್ಷೆಯ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡುವ ಲಿಂಕ್ ಓಪನ್ ಆಗಿದೆ, ಕೂಡಲೇ ವಿದ್ಯಾರ್ಥಿಗಳು ಮೇಲೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಬೇಗನೆ ನಿಮ್ಮ ನಿಮ್ಮ ಅಡ್ಮಿಟ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.


KCET 2026 Admit Card ಡೌನ್ಲೋಡ್ ಮಾಡುವ ವಿಧಾನ.

ಅಧಿಕೃತ KEA ವೆಬ್ಸೈಟ್ ಗೆ ಭೇಟಿ ನೀಡಿ. ಅರ್ಜಿ ಸಂಖ್ಯೆ ಮತ್ತು ಪಾಸ್ವರ್ಡ್ ನಮೂದಿಸಿ. Otp ಮೂಲಕ ಲಾಗಿನ್ ಆಗಿ, ನಿಮ್ಮ admit card ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

KCET 2026 ರ ಪರೀಕ್ಷಾ ದಿನಾಂಕ ಯಾವುದು?

ಏಪ್ರಿಲ್ 23 ಮತ್ತು 24 ಅನ್ನು KCET 2026 ರ ಪರೀಕ್ಷೆ ದಿನಾಂಕವನ್ನಾಗಿ ನಿಗದಿಪಡಿಸಲಾಗಿದೆ.

About Content Writer
Jayanth

Jayanth

ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.

About Us →
WhatsApp Group Join Now
Telegram Group Join Now

Leave a Comment