Table of Contents
Aadhar Card Download :- ಇತ್ತೀಚಿನ ದಿನಗಳನ್ನು ನೋಡಿದರೆ ಡಿಜಿಟಲ್ ನ ಕಾಲಮಾನದಂತೆ ತೋರುತ್ತಿದೆ. ಎಲ್ಲಿ ನೋಡಿದರು ಮೊಬೈಲ್ ಕಂಪ್ಯೂಟರ್ ಬಳಕೆ, ಅಗಾಧವಾಗಿ ಬೆಳೆದ ಈ ಡಿಜಿಟಲ್ ಯುಗ ನಮಗೆ ಬೇಕಾಗುವ ಕೆಲಸವನ್ನು ಕ್ಷಣಮಾತ್ರದಲ್ಲಿ ಆನ್ಲೈನ್ ಮೂಲಕ ಮಾಡಿಕೊಳ್ಳಲು ಸಹಕಾರಿಯಾಗಿದೆ. ಅಂತೆಯೇ ಪ್ರಸ್ತುತ ದಿನಗಳಲ್ಲಿ ತಮ್ಮಲ್ಲಿಯೇ ಎಲ್ಲಾ ಒರಿಜಿನಲ್ ದಾಖಲೆ( ಹಾರ್ಡ್ ಕಾಪಿ ) ಹಿಡಿದು ತಿರುಗುವ ಅವಶ್ಯಕತೆ ಇಲ್ಲಾ. ಎಲ್ಲಾ ದಾಖಲೆಗಳು ಸಹ ಡಿಜಿಟಲೀಕರಣ ಆಗಿದೆ. ಬೇಕಿರುವ ಯಾವುದೇ ದಾಖಲೆಯನ್ನು ಸುಲಭವಾಗಿ ಆನ್ಲೈನ್ ಮೂಲಕ ಪಡೆದುಕೊಳ್ಳಬಹುದು.
ಈಗ ಆಧಾರ್ ಕಾರ್ಡ್ ಎನ್ನುವುದು ಎಲ್ಲರಿಗೂ ಅವಶ್ಯಕವಾದ ಪ್ರಮುಖ ದಾಖಲೆಯಾಗಿದೆ. ಎಲ್ಲಿ ನೋಡಿದರು ಈ ದಾಖಲೆಯನ್ನು ಅವಶ್ಯವಾಗಿ ಕೇಳುತ್ತಾರೆ. ಹಾಗಾಗಿ ಇದನ್ನು ಸುಲಭವಾಗಿ ನಿಮ್ಮ ಮೊಬೈಲ್ ಮೂಲಕ ಕೇವಲ 2 ನಿಮಿಷದಲ್ಲಿ e-adhar card ಪಡೆದುಕೊಳ್ಳಬಹುದು.UIDAI ಅಧಿಕೃತ ಸೇವೆಗಳಲ್ಲಿ ಈ ಸೇವೆಯೂ ಒಂದಾಗಿದೆ.ಕೆಲವೇ ಕ್ಷಣದಲ್ಲಿ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದು.
ಈ ಲೇಖನದಲ್ಲಿ UIDAI ಅಧಿಕೃತ ವೆಬ್ಸೈಟ್ ಮೂಲಕ e-aadhar card ಡೌನ್ಲೋಡ್ ಮಾಡುವ ವಿವರಣೆಯನ್ನು ಸವಿವರವಾಗಿ ನೀಡಲಾಗಿದೆ.
ಮೊಬೈಲ್ ಮೂಲಕ Aadhar Card Download ಮಾಡುವುದು ಹೇಗೆ?
ಈ ಕೆಳಗೆ ವಿವರಿಸಲಾದ ಹಂತಗಳನ್ನು ಅನುಸರಿಸಿ ಮೊಬೈಲ್ ಮೂಲಕ e adhar card ಅನ್ನು ಪಿಡಿಎಫ್ ಡೌನ್ಲೋಡ್(Download Adhar Card Online) ಮಾಡಿಕೊಳ್ಳಬಹುದು.
- Step 01:-UIDAI ಅಧಿಕೃತ ವೆಬ್ಸೈಟ್ ತೆರೆಯಿರಿ.
ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಬ್ರೌಸರ್ ತೆರೆದು ಅಧಿಕೃತ UIDAI ವೆಬ್ಸೈಟ್ ಅನ್ನು ಓಪನ್ ಮಾಡಿ. ನಂತರ ಸೇವೆಗಳ ಲಿಸ್ಟ್ ಅನ್ನು ತೆರೆಯಿರಿ.
- Step 02:- “myAadhar” ಆಯ್ಕೆ ಮಾಡಿಕೊಳ್ಳಿ.
UIDAI ನಲ್ಲಿ myAadhar ಆಯ್ಕೆ ಮಾಡಿಕೊಳ್ಳಿ, ಇಲ್ಲಿ ಬೇಕಿರುವ ಎಲ್ಲಾ ಸೇವೆಗಳು ನಿಮಗೆ ತೋರುತ್ತದೆ.
- Step 03 :- ” Download Adhar “ಆಯ್ಕೆ ಮಾಡಿ.
ನಂತರ ಸೇವೆಗಳ ಲಿಸ್ಟ್ ನಲ್ಲಿ “Download Adhar ” ಮೇಲೆ ಕ್ಲಿಕ್ ಕ್ಲಿಕ್ ಮಾಡಿ.
- Step 04:- ನಿಮ್ಮ ವಿವರವನ್ನು ನಮೂದಿಸಿ.
ಇಲ್ಲಿ 4 ಆಯ್ಕೆಗಳು ನಿಮಗೆ ತೋರುತ್ತದೆ. ಅದರಲ್ಲಿ ನಿಮ್ಮ ಆಯ್ಕೆಯ ಯಾವುದಾದರು ಒಂದನ್ನು ಆಯ್ಕೆ ಮಾಡಿ. ಅದರ ಸಂಖ್ಯೆ ಅಥವಾ ಐ ಡಿ ನಂಬರ್ ಅನ್ನು ನಮೂದಿಸಿ.
- ಆಧಾರ್ ಸಂಖ್ಯೆ (Adhar Number)
- ಎನ್ರೋಲ್ಮೆಂಟ್ ಐ ಡಿ (Enrolment ID Number )
- ವೈರಚುಯಲ್ ಐ ಡಿ ( virtual ID Number )
- SID
ಈ ಮೇಲಿನ ಯಾವುದಾದರು ಒಂದು ಆಯ್ಕೆ ಮಾಡಿ ಅದಕ್ಕೆ ಸಂಬಂದಿಸಿದ ಸಂಖ್ಯೆಯನ್ನು ನಮೂದಿಸಿ ಕ್ಯಾಪ್ಟ ವನ್ನು ಎಂಟರ್ ಮಾಡಿ. Send otp ಮೇಲೆ ಕ್ಲಿಕ್ ಮಾಡಿ.
- Step 05:- OTP ವೆರಿಫಿಕೇಷನ್
ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ otp ಬರುತ್ತದೆ. ಅದನ್ನು ಎಂಟರ್ ಮಾಡಿ. ಸಲ್ಲಿಸಿ.
- Step 06:- ಆಧಾರ್ ಕಾರ್ಡ್ ಡೌನ್ಲೋಡ್.
otp ಸಲ್ಲಿಸಿದ ನಂತರ ಆಟೋಮ್ಯಾಟಿಕ್ ಆಗಿ ನಿಮ್ಮ e adhar card ಪಿಡಿಎಫ್ ತರನಾಗಿ ಡೌನ್ಲೋಡ್ ಆಗುತ್ತದೆ.ಇದು ನಿಮ್ಮ ಮೊಬೈಲ್ ನ ಇಂಟರ್ನಲ್ ಸ್ಟೋರೇಜ್ ನಲ್ಲಿ ಸೇವ್ ಆಗಿರುತ್ತದೆ.
ಇದೆ ತರನಾದ ಮಾಹಿತಿ ಮತ್ತು ಅಪ್ಡೇಟ್ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಅನ್ನು ಅನುಸರಿಸಿ.
e-Adhar Card ಪಿಡಿಎಫ್ ಪಾಸ್ವರ್ಡ್ ಸುರಕ್ಷತೆಯನ್ನು ಹೊಂದಿರುತ್ತದೆ.
ಹೌದು,ನೀವು ಡೌನ್ಲೋಡ್ ಮಾಡಿರುವ ಪಿಡಿಎಫ್ ಫೈಲ್ ಪಾಸ್ವರ್ಡ್ ಸುರಕ್ಷತೆಯನ್ನು ಹೊಂದಿರುತ್ತದೆ. ನೀವು ಪಾಸ್ವರ್ಡ್ ನಮೂದಿಸಿದ ನಂತರವಷ್ಟೇ ಪಿಡಿಎಫ್ ತೆರೆದು ಕೊಳ್ಳುತ್ತದೆ.
ಪಿಡಿಎಫ್ ತೆರೆಯಲು ಈ ಕೆಳಗಿನ ಅಂಶಗಳು ತಿಳಿದುಕೊಳ್ಳಿ.
e-Adhar Card ಪಾಸ್ವರ್ಡ್ ಏನು?
ಬಹಳ ಜನರಿಗೆ ಈ ಬಗ್ಗೆ ಗೊಂದಲ ಇರುತ್ತದೆ. e-Adhar ಡೌನ್ಲೋಡ್ ಮಾಡಿದ ನಂತರ ಪಿಡಿಎಫ್ ತೆರೆದಾಗ ಪಾಸ್ವರ್ಡ್ ಕೇಳುತ್ತದೆ. ಪಾಸ್ವರ್ಡ್ ಯಾವುದು? ಏನನ್ನು ನಮೂದಿಸಬೇಕು? ಎನ್ನುವ ಪ್ರಶ್ನೆಗಳು ಮೂಡುವುದು ಸಹಜ.
ನಿಮ್ಮ e-adhar card ಪಿಡಿಎಫ್ ನ ಪಾಸ್ವರ್ಡ್ ಹೀಗಿರುತ್ತದೆ.
- ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರ (First Four Letters In Capital )
- ನಿಮ್ಮ ಜನ್ಮ ವರ್ಷ (ಹುಟ್ಟಿದ ವರ್ಷ )
ಉದಾಹರಣೆ :-
ನಿಮ್ಮ ಹೆಸರು Rajesh ಎಂದಾದರೆ ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರ -ಅಂದರೆ RAJE (ನೆನಪಿರಲಿ ಅಕ್ಷರ ಕ್ಯಾಪಿಟಲ್ ನಲ್ಲಿರಬೇಕು.)
ಹಾಗೆಯೇ ನಿಮ್ಮ ಹುಟ್ಟಿದ ವರ್ಷ 2001 ಎಂದಾದರೆ -2001 ಎಂದು ನಮೂದಿಸಿ
ಈಗ ನಿಮ್ಮ ಪಾಸ್ವರ್ಡ್ ಹೀಗಿರುತ್ತದೆ :- RAJE2001
ಸೂಚನೆ :- ಒಂದು ವೇಳೆ ನಿಮ್ಮ ಹೆಸರಿನಲ್ಲಿ 3 ಅಕ್ಷರ ಮಾತ್ರ ಇದ್ದಲ್ಲಿ, ಅದನ್ನೇ ನಮೂದಿಸಿ. ಉದಾ :- ANI ಎಂದು ನಿಮ್ಮ ಹೆಸರಾಗಿದ್ದಲ್ಲಿ ANI2001 ಎಂದು ನಮೂದಿಸಿ.

Aadhar ಆಪ್ ಮೂಲಕ ನಿಮ್ಮ ಆಧಾರ್ ಕಾರ್ಡ್ ಪಡೆಯಿರಿ.
ಕೇವಲ UIDAI ಆಧಿಕೃತ ವೆಬ್ಸೈಟ್ ಮೂಲಕ ಮಾತ್ರವಲ್ಲದೆ, ಅಧಿಕೃತ ಮೊಬೈಲ್ ಆಪ್ ಮೂಲಕವು ಕೂಡ ಆಧಾರ್ ಕಾರ್ಡ್ ಅನ್ನು ಪಡೆಯಬಹುದು.
UIDAI ನ ವೆಬ್ಸೈಟ್ ನಲ್ಲಿ ಈ ಆಪ್ ನ ಲಿಂಕ್ ನೀಡಲಾಗಿದೆ. ಅಥವಾ playstore ನಲ್ಲಿಯೂ ಸಹ ಆಪ್ ಅನ್ನು ಹುಡುಕಿ ಪಡೆಯಬಹುದು.
Aadhar card Download ಮಾಡುವ ಮೊದಲು ಇದನ್ನು ತಿಳಿಯಿರಿ.
Aadhar card download ಮಾಡುವ ಮೊದಲು ಮುಖ್ಯವಾಗಿ ಕೆಲವೊಂದು ಅಂಶಗಳನ್ನು ತಿಳಿದುಕೊಳ್ಳುವುದು ಅತ್ಯಾವಶ್ಯಕ, ಏಕೆಂದರೆ ಇದನ್ನು ನೀವು ಪಾಲಿಸದೇ ಇದ್ದಲ್ಲಿ ಆನ್ಲೈನ್ ಮೂಲಕ ಆಧಾರ್ ಡೌನ್ಲೋಡ್ ಮಾಡುವುದು ಸಾಧ್ಯವಿಲ್ಲ.
- ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್ ಗೆ ನೋಂದಣಿಯಾಗಿರಬೇಕು. ಇಲ್ಲದಿದ್ದಲ್ಲಿ e-adhar card ಡೌನ್ಲೋಡ್ ಸೇವೆಯನ್ನು ಪಡೆಯಲು ಸಾಧ್ಯವಿಲ್ಲ.
- OTP ಇಲ್ಲದೆ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಲು ಮೊಬೈಲ್ ಮೂಲಕ ಸಾಧ್ಯವಿಲ್ಲ.
- ಯಾವಾಗಲು UIDAI ಅಧಿಕೃತ ವೆಬ್ಸೈಟ್ ಅಥವಾ Aadhar ಆಪ್ ಅನ್ನು ಮಾತ್ರ ಬಳಸಿ.
ಈ ಮೇಲಿನ ಹಂತಗಳು ಮತ್ತು ಸಲಹೆಗಳನ್ನು ಪಾಲಿಸುವುದರಿಂದ ಸುಲಭವಾಗಿ ಆನ್ಲೈನ್ ಮೂಲಕ Aadhar card download ಮಾಡಿಕೊಳ್ಳಬಹುದು.
ಕೊನೆಯದಾಗಿ
ದಿನನಿತ್ಯದ ಇತರೆ ಕಾರ್ಯ, ಸರ್ಕಾರಿ ಕೆಲಸಗಳಿಗೆ ಆಧಾರ್ ಕಾರ್ಡ್ ಅವಶ್ಯವಾಗಿ ಬೇಕಾಗಿದೆ. ಒಂದು ವೇಳೆ ನಿಮ್ಮ ಬಳಿ ಒರಿಜಿನಲ್ ಹಾರ್ಡ್ ಕಾಪಿ ಇಲ್ಲದೆ ಇದ್ದಲ್ಲಿ, ಆಧಾರ್ ಸಂಖ್ಯೆ ಮತ್ತು otp ಬಳಸಿ ತಕ್ಷಣವೇ ನಿಮ್ಮ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು.
👉ಈ ಲೇಖನ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.🙌
Aadhar Card download ಮಾಡಲು OTP ಅವಶ್ಯಕವೇ?
ಹೌದು, aadhar card download ಮಾಡಲು OTP ಅತ್ಯಾವಶ್ಯಕ.ಇದ್ದದಿದ್ದಲ್ಲಿ ಆಧಾರ್ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು.
UIDAI ಮೂಲಕ Aadhar Card Download ಸುರಕ್ಷಿತವೇ?
ಹೌದು, UIDAI ಮೂಲಕ Aadhar card download ಮಾಡುವುದು ಸುರಕ್ಷಿತವಾಗಿದೆ.ಮತ್ತು ಈ ಮೂಲಕ ಮಾತ್ರ ಆಧಾರ್ ಡೌನ್ಲೋಡ್ ಮಾಡಿಕೊಳ್ಳಿ.
ಮೊಬೈಲ್ ನಂಬರ್ ನೋಂದಾಯಿಸದೆ aadhar card download ಸಾಧ್ಯವೇ?
ಇಲ್ಲಾ, ಸಾಮಾನ್ಯವಾಗಿ ಮೊಬೈಲ್ ಮೂಲಕ aadhar download ಮಾಡಲು ಮೊಬೈಲ್ ನಂಬರ್ ನೋಂದಾಯಿಸುವುದು ಅವಶ್ಯ. ಇಲ್ಲದಿದ್ದಲ್ಲಿ ಆಧಾರ್ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು.
e-Aadhar Download ಉಚಿತವೇ?
ಹೌದು, UIDAI ಮೂಲಕ Aadhar card download ಮಾಡಿಕೊಳ್ಳುವುದು ಸಂಪೂರ್ಣ ಉಚಿತವಾಗಿದೆ.
Aadhar Download ಆದ ನಂತರ ಪ್ರಿಂಟ್ ತೆಗೆದುಕೊಳ್ಳಬಹುದಾ?
ಹೌದು, Aadhar download ಮಾಡಿಕೊಂಡ ನಂತರ ಆ pdf ಅನ್ನು ಪ್ರಿಂಟ್ ತೆಗೆದುಕೊಳ್ಳಬಹುದು. ಇದು ಒರಿಜಿನಲ್ ಕಾರ್ಡ್ ನಂತೆಯೇ ಮಾನ್ಯವಾಗಿದೆ.
Aadhar Download ಆದ ನಂತರ edit ಮಾಡಬಹುದಾ?
ಇಲ್ಲಾ, aadhar download ಮಾಡಿದ ನಂತರ ಇದನ್ನು edit ಮಾಡಲು ಬರುವುದಿಲ್ಲ. ಒಂದು ವೇಳೆ ಬೇರೆಯ ಬದಲಾವಣೆ ಮಾಡಲು ಬಯಸಿದರೆ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬೇಕು.
Jayanth
ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.
About Us →