ಮೊಬೈಲ್‌ನಲ್ಲಿ LPG Gas Booking ಮಾಡುವ ಸಂಪೂರ್ಣ ವಿಧಾನ – 5 ನಿಮಿಷದಲ್ಲಿ ಗ್ಯಾಸ್ ಬುಕ್ ಮಾಡಿ!

WhatsApp Group Join Now
Telegram Group Join Now

ಇಂದಿನ ಡಿಜಿಟಲ್ ಯುಗದಲ್ಲಿ ಬೇಕಾದ ಎಲ್ಲಾ ಸೇವೆಗಳು ಆನ್ಲೈನ್ ಮೂಲಕ ಮೊಬೈಲ್ ನಲ್ಲಿಯೇ ನಡೆಯುತ್ತಿದೆ. ಅಂತೆಯೇ ದಿನಬಳಕೆಯ ಅತಿ ಮುಖ್ಯ ಸೇವೆಯಾದ LPG gas booking ಹಿಂದಿನ ಕಾಲದಲ್ಲಿ ಗ್ಯಾಸ್ ಬುಕ್ ಮಾಡಲು ಗ್ಯಾಸ್ ಏಜನ್ಸಿ ಹತ್ತಿರ ಹೋಗಬೇಕಿತ್ತು. ಇದನ್ನು ಸಹ ಈಗ ಆನ್ಲೈನ್ ಮೂಲಕ ಬುಕ್ ಮಾಡುವ ಸೌಲಭ್ಯವನ್ನು ನೀಡಲಾಗಿದೆ.ಈಗ ಇದು ಕೇವಲ ಕೆಲವೇ ನಿಮಿಷಗಳ ಕೆಲಸವಾಗಿದೆ.

ದೇಶದಲ್ಲಿ ಮುಖ್ಯವಾಗಿ 3 ಕಂಪನಿಗಳು LPG ಸೇವೆಯನ್ನು ಒದಗಿಸುತ್ತಿದೆ. ಅವುಗಳೆಂದರೆ Indane Gas, HP Gas ಮತ್ತು Bharat Gas. ಗ್ರಾಹಕರು ಈ ಕಂಪನಿಗಳ ಗ್ಯಾಸ್ ಬಳಕೆದಾರರಾಗಿದ್ದರೆ, ಈಗ ಸುಲಭವಾಗಿ Online Gas Booking, SMS, Call, WhatsApp ಅಥವಾ Mobile App ಮೂಲಕ ಬುಕ್ ಮಾಡಿಕೊಳ್ಳಬಹುದು.ಈ ಲೇಖನದಲ್ಲಿ ಈ ಬಗ್ಗೆ ವಿವರವಾಗಿ ತಿಳಿಸಿಕೊಡಲಾಗಿದೆ.

LPG Gas Booking ಮಾಡಲು ಬೇಕಾಗುವ ಮಾಹಿತಿ

ನೀವು ಆನ್ಲೈನ್ ಮೂಲಕ ಗ್ಯಾಸ್ ಬುಕ್ ಮಾಡಲು ಬಯಸಿದರೆ ಈ ಕೆಳಗಿನ ಮಾಹಿತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದು ಅವಶ್ಯಕ,

  • ಗ್ರಾಹಕರ LPG ನೋಂದಾಯಿತ ಸಂಖ್ಯೆ(Consumer Number ಅಥವಾ Consumer Register Number)
  • ನೋಂದಾಯಿತ ಮೊಬೈಲ್ ಸಂಖ್ಯೆ (Register Mobile Number )
  • ಗ್ಯಾಸ್ ಏಜನ್ಸಿ ಹೆಸರು
  • LPG ಕಂಪನಿ ಹೆಸರು

ಈ ಮೇಲಿನ ಮಾಹಿತಿಯನ್ನು ನೀವು ಹೊಂದಿದ್ದರೆ ಸುಲಭವಾಗಿ ಆನ್ಲೈನ್ ಮೂಲಕ ನಿಮ್ಮ ಮೊಬೈಲ್ ನಲ್ಲಿಯೇ ಗ್ಯಾಸ್ ಸಿಲಿಂಡರ್ ಬುಕ್ ಮಾಡಿಕೊಳ್ಳಬಹುದು.

ಮೊಬೈಲ್‌ನಲ್ಲಿ LPG Gas Booking ಮಾಡುವ ವಿಧಾನ

ಇತ್ತೀಚಿಗಿನ ದಿನಗಳಲ್ಲಿ ಎಲ್ಲರು ಸಹ ಮೊಬೈಲ್ ಬಳಕೆಯ ಬಗ್ಗೆ ಜ್ಞಾನವನ್ನು ಹೊಂದಿಯೇ ಇರುತ್ತಾರೆ. ಈಗಿನ ದಿನಗಳಲ್ಲಿ ಮೊಬೈಲ್ ಮೂಲಕ ಎಲ್ಲಾ ತಮ್ಮ ಅಗತ್ಯ ಸೇವೆಗಳನ್ನು ಪಡೆಯುತ್ತಾ ಇರುತ್ತಾರೆ. ಅದರಲ್ಲಿಯೂ ಫುಡ್,ಶಾಪಿಂಗ್ ಮತ್ತು ಟ್ರಾವೆಲ್ ಈ ಎಲ್ಲಾ ಸೇವೆಗಳು ಕೂಡ ಈಗ ಬೆರಳ ತುದಿಯಲ್ಲಿ ದೊರೆಯುತ್ತದೆ. ಅದರಂತೆಯೇ ದಿನನಿತ್ಯದ ಅಗತ್ಯ ಸೇವೆಯಾದ LPG gas booking ಕೂಡ ಮೊಬೈಲ್ ನಲ್ಲಿ ಬುಕ್ ಮಾಡಿ, ಸೇವೆಯನ್ನು ಅತಿ ಬೇಗನೆ ಪಡೆಯಬಹುದು.

ಮೊಬೈಲ್ ನಲ್ಲಿ ಯಾವ ರೀತಿಯಾಗಿ LPG gas booking ಮಾಡಬಹುದು ಎಂಬ ಬಗ್ಗೆ ಕೆಳಗೆ ತಿಳಿಸಲಾಗಿದೆ.

1.Mobile App ಮೂಲಕ LPG ಗ್ಯಾಸ್ ಬುಕಿಂಗ್ ಮಾಡುವುದು

ಬಹುತೇಕ ಎಲ್ಲಾ LPG ಸೇವೆ ಒದಗಿಸುವ ಕಂಪನಿಗಳು ತಮ್ಮದೇಯಾದ ಮೊಬೈಲ್ ಅಪ್ಲಿಕೇಶನ್ ಗಳನ್ನು ಹೊಂದಿರುತ್ತದೆ.ಈ ಆಪ್ ಬಳಸಿಕೊಂಡು ಗ್ರಾಹಕರು ಅಥವಾ ಬಳಕೆದಾರರು ತಮ್ಮಗ್ಯಾಸ್ ಅನ್ನು ಬೇಗನೆ ಬುಕ್ ಮಾಡಿಕೊಳ್ಳಬಹುದು.

ಬುಕಿಂಗ್ ಮಾಡುವ ಹಂತ ಹೀಗಿದೆ:-

  1. ನೀವು ಬಳಕೆ maduttiruvaಮಾಡುತ್ತಿರುವ LPG ಕಂಪನಿಯ ಮೊಬೈಲ್ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
  2. ಮೊದಲ ಬಾರಿಗೆ ಬಳಕೆ ಮಾಡುತ್ತಿದ್ದಲ್ಲಿ ರಿಜಿಸ್ಟರ್ ಆಗಿರಿ. ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮೂಲಕ ಲಾಗಿನ್ ಆಗಿರಿ.
  3. ಗ್ರಾಹಕರ ಸಂಖ್ಯೆ ತೋರುತ್ತದೆ, ಒಂದು ವೇಳೆ ತೋರದಿದ್ದಲ್ಲಿ ಸಂಖ್ಯೆಯನ್ನು ನಮೂದಿಸಬೇಕು.
  4. ಮೆನು ನಲ್ಲಿ Book Cylinder ಮೇಲೆ ಕ್ಲಿಕ್ ಮಾಡಿ.
  5. Booking ಅನ್ನು confirm ಮಾಡಿ.

ಈ ಮೂಲಕವಾಗಿ ಕೇವಲ 3-5 ನಿಮಿಷಗಳಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಿಕೊಳ್ಳಬಹುದು.

ಇದೆ ತರನಾದ ಹೆಚ್ಚಿನ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಅನ್ನು ಅನುಸರಿಸಿ.

2.Call ಮೂಲಕ LPG ಗ್ಯಾಸ್ ಬುಕಿಂಗ್

ಗ್ಯಾಸ್ ಬುಕ್ ಮಾಡಲು ಬಳಸುವ atiಅತಿ ಸರಳ ವಿಧಾನ ಮತ್ತು ಜನಪ್ರಿಯ ವಿಧಾನವೆಂದರೆ ಅದುವೇ Call ಮೂಲಕ LPG gas booking ಮಾಡುವುದು. ಇದು ಅತಿ ಸುಲಭ ಮತ್ತು ಸರಳವಾಗಿರುವುದರಿಂದ ಜನರು ಈ ಸೇವೆಯನ್ನು ಹೆಚ್ಚಾಗಿ ಬಳಸುತ್ತಾರೆ.ಇದನ್ನು IVRS ಬುಕಿಂಗ್ ಸರ್ವಿಸ್ ಎಂದು ಕೂಡ ಕರೆಯುತ್ತಾರೆ.

ಬುಕಿಂಗ್ ಮಾಡುವ ಹಂತ ಹೀಗಿದೆ:-

  1. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ LPG ಬುಕಿಂಗ್ ನಂಬರ್ ಗೆ ಕರೆ ಮಾಡಿ.
  2. ಕರೆಯಲ್ಲಿ ತಿಸಿಸುವ IVRS ಸೂಚನೆಗಳನ್ನು ಪಾಲಿಸಿ
  3. ಬುಕಿಂಗ್ ಮಾಡಲು confirmation ಕೇಳಿದಾಗ ನಿಮ್ಮ ಸಮ್ಮತಿ ನೀಡಿ.
  4. ನಿಮ್ಮ ಗ್ಯಾಸ್ ಸಿಲಿಂಡರ್ ಬುಕ್ ಆಗುತ್ತದೆ.

ಇದಾದ ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬುಕಿಂಗ್ Confirmation ಮೆಸೇಜ್ ಬರುತ್ತದೆ.

3.SMS ಮೂಲಕ LPG ಗ್ಯಾಸ್ ಬುಕಿಂಗ್

ಇದು ಸಹ ಒಂದು ಸರಳ ವಿಧಾನವಾಗಿದೆ.ಮೊಬೈಲ್ ನಲ್ಲಿನ sms ಸೇವೆಯ ಮೂಲಕ gasಗ್ಯಾಸ್ ಬುಕ್ ಮಾಡಿಕೊಳ್ಳುವ ಬಗ್ಗೆ ತಿಳಿಯೋಣ.

ಬುಕಿಂಗ್ ಮಾಡುವ ಹಂತ ಹೀಗಿದೆ:-

  1. ನಿಮ್ಮ ಮೊಬೈಲ್ ನಲ್ಲಿ sms ಸೇವೆಯನ್ನು ತೆರೆಯಿರಿ.
  2. LPG ಕಂಪನಿ ಸೂಚಿಸಿರುವ format ತರನಾಗಿ ಸಂದೇಶವನ್ನು ಬರೆಯಿರಿ.
  3. ನಂತರ ಸಂದೇಶವನ್ನು LPG ಬುಕಿಂಗ್ ನಂಬರ್ ಗೆ ಕಳುಹಿಸಿ.

ಬುಕಿಂಗ್ ಕನ್ಫರ್ಮ್ ಆದ ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಮೆಸೇಜ್ ಬರುತ್ತದೆ.

LPG GAS BOOKING
LPG GAS BOOKING

4.WhatsApp ಮೂಲಕ LPG ಗ್ಯಾಸ್ ಬುಕಿಂಗ್

ಇತ್ತೀಚೆಗೆ ಬಹುತೇಕ ಎಲ್ಲಾ LPG ಸೇವೆ ಒದಗಿಸುವ ಕಂಪನಿಗಳು WhatsApp Gas Booking ಸೇವೆಯನ್ನು ಪ್ರಾರಂಭಿಸಿವೆ. ಇದರಿಂದ ಗ್ರಾಹಕರು ತುಂಬಾ ಸುಲಭವಾಗಿ ಮತ್ತು ಸರಳವಾಗಿ ಗ್ಯಾಸನ್ನು ಬುಕ್ ಮಾಡಬಹುದು.

ಬುಕಿಂಗ್ ಮಾಡುವ ಹಂತ ಹೀಗಿದೆ:-

  1. ನಿಮ್ಮ LPG ಕಂಪನಿಯ WHATSAPP ನಂಬರ್ ಅನ್ನು ಪಡೆದು, ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳಿ.
  2. ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ WHATSAPP ಓಪನ್ ಮಾಡಿ. ನಿಮ್ಮ LPG ಕಂಪನಿಯ ನಂಬರ್ ಗೆ Hi ಮೆಸೇಜ್ ಹಾಕಿ.
  3. ನಂತರ ಹಲವು ತರನಾದ ಆಪ್ಷನ್ ತೆರೆಯುತ್ತದೆ.
  4. book cylinder ಮೇಲೆ ಕ್ಲಿಕ್ ಮಾಡಿ. ಬುಕ್ ಮಾಡಿಕೊಳ್ಳಬಹುದು.

ಈ ವಿಧಾನವು ಬೇಗನೆ Gas Booking ಮಾಡಲು ಅತ್ಯಂತ ಸರಳವಾದ ಮಾರ್ಗವಾಗಿದೆ.

5.Missed Call ಮೂಲಕ LPG ಗ್ಯಾಸ್ ಬುಕಿಂಗ್ ಮಾಡುವುದು

ಕೆಲವು LPG ಕಂಪನಿಗಳು ಬುಕಿಂಗ್ ಸೇವೆಯಲ್ಲಿ Missed Call Gas Booking ಸೇವೆಯನ್ನು ಕೂಡ ಒದಗಿಸುತ್ತಿವೆ.

ಬುಕಿಂಗ್ ಮಾಡುವ ಹಂತ ಹೀಗಿದೆ:-

  1. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮೂಲಕ LPG missed call ಸರ್ವಿಸ್ ನಂಬರ್ ಗೆ ಕಾಲ್ ಮಾಡಿ.
  2. ಸ್ವಯಂಚಾಲಿತವಾಗಿ ನಿಮ್ಮ ಕರೆ ಡಿಸ್ಕನೆಕ್ಟ್ ಆಗುತ್ತದೆ.
  3. ನಿಮ್ಮ ಬುಕಿಂಗ್ ಕನ್ಫರ್ಮ್ ಆಗುತ್ತದೆ

6.Online LPG ಗ್ಯಾಸ್ ಬುಕಿಂಗ್ ಹೇಗೆ ಮಾಡುವುದು?

ಬುಕಿಂಗ್ ಮಾಡುವ ಹಂತ ಹೀಗಿದೆ:-

LPG ಕಂಪನಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. Register ಆಗಿ.

ನಂತರ ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಅಥವಾ user ನೇಮ್ ಬಳಸಿ ಲಾಗಿನ್ ಆಗಿರಿ

book cylinder ಮೇಲೆ ಕ್ಲಿಕ್ ಮಾಡಿ.

ನಿಮ್ಮ ಗ್ಯಾಸ್ ಸಿಲಿಂಡರ್ ಬುಕ್ ಆಗುತ್ತದೆ.

ಗ್ಯಾಸ್ ಬುಕಿಂಗ್ ಸ್ಟೇಟಸ್ ಚೆಕ್ ಮಾಡುವ ವಿಧಾನ

ಗ್ಯಾಸ್ ಬುಕ್ ಮಾಡಿದ ನಂತರ ಅದರ ಸ್ಥಿತಿಯನ್ನು ತಿಳಿದುಕೊಳ್ಳಲು ಈ ಕೆಳಗಿನ ವಿಧಾನಗಳನ್ನು ಬಳಸಿ ತಿಳಿದುಕೊಳ್ಳಬಹುದು :

  • LPG ಗ್ಯಾಸ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  • ಮೊಬೈಲ್ ಆಪ್ ಮೂಲಕ
  • sms ಸರ್ವಿಸ್ ಮೂಲಕ
  • customer ಕೇರ್ ನಂಬರ್ ಮೂಲಕ

ನಿಮ್ಮ ಸಿಲಿಂಡರ್ ಬುಕಿಂಗ್ ಸ್ಥಿತಿಯನ್ನು ಕ್ಷಣ ಮಾತ್ರದಲ್ಲಿ ತಿಳಿಯಬಹುದು.

ಗ್ಯಾಸ್ ಬುಕಿಂಗ್ ಮಾಡುವಾಗ ಗಮನಿಸಬೇಕಾದ ವಿಷಯಗಳು

ಗ್ಯಾಸ್ ಬುಕ್ ಮಾಡುವಾಗ ಪ್ರಮುಖ ವಿಷಯಗಳನ್ನು ಗಮನದಲ್ಲಿಡಬೇಕು.ಅವುಗಳೆಂದರೆ :

ರೆಜಿಸ್ಟರ್ ಮೊಬೈಲ್ ನಂಬರ್ ಅತಿ ಅವಶ್ಯಕ ಆದ್ದರಿಂದ ನಿಮ್ಮ ಬಳಿಯೇ ಇಟ್ಟುಕೊಳ್ಳಿ

ಗ್ರಾಹಕ ಸಂಖ್ಯೆಯನ್ನು ಹೊಂದಿರುವುದು ಅತಿ ಅವಶ್ಯಕ

ಗ್ಯಾಸ್ ಕನ್ಫರ್ಮ್ ಆದ ಮೇಲೆ id ಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಅಧಿಕೃತ ಮಾಹಿತಿ ಮತ್ತು ಅಧಿಕೃತ ಆಪ್ ಅಥವಾ ವೆಬ್ಸೈಟ್ ಮೂಲಕ ಮಾತ್ರ ಬುಕ್ ಮಾಡಿ.

ಇವುಗಳನ್ನು ಪಾಲಿಸಿದರೆ ನಿಮ್ಮ LPG Gas Booking ಸರಳವಾಗಿ ಮಾಡಬಹುದು.

ಆನ್ಲೈನ್ ನಲ್ಲಿ ಗ್ಯಾಸ್ ಬುಕಿಂಗ್ ಮಾಡುವುದರಿಂದ ಪ್ರಯೋಜನಗಳು

ಮೊಬೈಲ್ ಮೂಲಕ ಆನ್ಲೈನ್ ನಲ್ಲಿ ಗ್ಯಾಸನ್ನು ಬುಕ್ ಮಾಡುವುದರಿಂದ ಹಲವು ಪ್ರಯೋಜನಗಳಿವೆ.ಅವುಗಳೆಂದರೆ :

  • ಗ್ರಾಹಕರಿಗೆ ಹೆಚ್ಚಿನ ಸಮಯ ಉಳಿಸುತ್ತದೆ
  • ಏಜೆನ್ಸಿಗೆ ಹೋಗಿ ಗ್ಯಾಸ್ ಬುಕ್ ಮಾಡುವ ಅಗತ್ಯವಿಲ್ಲ
  • ಕೆಲವೇ ನಿಮಿಷಗಳಲ್ಲಿ ಬುಕ್ಕಿಂಗ್ ಮಾಡಬಹುದು
  • Booking status online ನಲ್ಲಿ ಪರಿಶೀಲಿಸಬಹುದು
  • WhatsApp ಮತ್ತು mobile app ಮೂಲಕ ಸುಲಭ ಸೇವೆ

ಇದರಿಂದ Digital Gas Booking System ಗ್ರಾಹಕರಿಗೆ ಬಹಳ ಉಪಯುಕ್ತವಾಗಿದೆ.


LPG ಗ್ಯಾಸ್ ಬುಕ್ ಮಾಡಲು Booking number ಏನು?

ಪ್ರತಿ LPG ಗ್ಯಾಸ್ ಕಂಪನಿಯು ತನ್ನದೇ ಆದ ಆನ್ಲೈನ್ ಗ್ಯಾಸ್ ಬುಕಿಂಗ್ ನಂಬರ್ ಹೊಂದಿರುತ್ತದೆ. ಇದರಿಂದ ಗ್ರಾಹಕರು ಮೊಬೈಲ್ ನಲ್ಲಿ ತಮ್ಮ ಗ್ಯಾಸ್ ಬುಕ್ ಮಾಡಿ ಕೊಳ್ಳಬಹುದು.

Online Gas Booking ಮಾಡಬಹುದೇ?

ಹೌದು, ಈಗ ಆನ್ಲೈನ್ ಮೂಲಕ ಗ್ಯಾಸ್ ಬುಕ್ ಮಾಡುವ ಸೌಲಭ್ಯವನ್ನು ಎಲ್ಲಾ LPG ಗ್ಯಾಸ್ ಕಂಪನಿಗಳು ನೀಡುತ್ತಿದ್ದಾರೆ.

WhatsApp ಮೂಲಕ gas booking ಸಾಧ್ಯವೇ?

ಹೌದು,ಹಲವು ಕಂಪನಿಗಳು ಈ ಸೌಲಭ್ಯವನ್ನು ನೀಡಿದ್ದಾರೆ.

About Content Writer
Jayanth

Jayanth

'NAMMA CAREER’ ಬ್ಲಾಗಿಂಗ್ ವೆಬ್ಸೈಟ್ ನ Founder ಮತ್ತು Writer ಆದ ನಾನು, ಕಳೆದ 6 ವರ್ಷಗಳಿಂದ Content Writer ಆಗಿ ಕೆಲಸದ ಅನುಭವ ಹೊಂದಿದ್ದೇನೆ. ಈ ಬ್ಲಾಗ್ ವೆಬ್ಸೈಟ್‌ನಲ್ಲಿ ಶಿಕ್ಷಣ, ಉದ್ಯೋಗ, ಸರ್ಕಾರಿ ಯೋಜನೆಗಳು ಹಾಗೂ ಸಾರ್ವಜನಿಕರಿಗೆ ಉಪಯುಕ್ತವಾಗುವ ಮಾಹಿತಿಗಳನ್ನು ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಬರೆದು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಓದುಗರಿಗೆ ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ನೀಡುವುದೇ ನನ್ನ ಮುಖ್ಯ ಉದ್ದೇಶವಾಗಿದೆ.

About Us →
WhatsApp Group Join Now
Telegram Group Join Now

Leave a Comment