Table of Contents
ಇವತ್ತಿನ ದಿನಗಳಲ್ಲಿ ಎಲ್ಲಾ ಸರ್ಕಾರಿ ಸೇವೆಗಳು ಬಹಳ ಸುಲಭವಾಗಿ ತಲುಪಲು ಡಿಜಿಟಲೀಕರಣ ಸಹಾಯಕವಾಗಿದೆ. ಸರ್ಕಾರದ ಹಲವು ಸೌಲಭ್ಯಗಳು ಕೇವಲ ಕೆಲವೇ ಕ್ಷಣಗಳಲ್ಲಿ ದೊರೆಯುವಂತಾಗಿದೆ. ಈಗ ನೀವು ನಿಮಗೆ ಬೇಕಾಗಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರ (Caste and Income Certificate) ಪಡೆಯಲು ಕಚೇರಿಗೆ ಅಲೆದಾಡುವ ಅವಶ್ಯಕತೆ ಇಲ್ಲಾ. ನಿಮ್ಮ ಮೊಬೈಲ್ ಮೂಲಕವೇ 10 ನಿಮಿಷಗಳಲ್ಲಿ Online ಅಪ್ಲೈ ಮಾಡಿ ಕೊಂಡು ಈ ದಾಖಲೆಯನ್ನು ಬೇಗನೆ ಪಡೆದುಕೊಳ್ಳಲು ಸಹಕಾರಿಯಾಗಿದೆ.
ಈ ಲೇಖನದಲ್ಲಿ, ಕರ್ನಾಟಕದ ಜನತೆಯು ಸುಲಭವಾಗಿ ಅರ್ಜಿ ತಮಗೆ ಬೇಕಿರುವ ಸರ್ಕಾರಿ ಸೇವೆಗಳನ್ನು ಅಥವಾ ಸರ್ಕಾರಿ ಪ್ರಮಾಣಪತ್ರವನ್ನು ಪಡೆಯಲು ಅನುಸರಿಸುವ ಕ್ರಮವನ್ನು step-by-step ವಿವರಿಸಿದ್ದೇವೆ.
Caste and Income Certificate ಎಂದರೇನು?
ಜಾತಿ ಪ್ರಮಾಣಪತ್ರ ಎಂದರೆ ಸಾಮಾಜಿಕವಾಗಿ ಮೀಸಲಾತಿಗೋಸ್ಕರ ನಿಮ್ಮ ವರ್ಗವನ್ನು ದೃಢೀಕರಿಸುವ ದಾಖಲೆಯಾಗಿದೆ.
ಆದಾಯ ಪ್ರಮಾಣಪತ್ರ ಎಂದರೆ ನಿಮ್ಮ ಕುಟುಂಬದ ವಾರ್ಷಿಕ ಆದಾಯವನ್ನು ದೃಢೀಕರಿಸುವ ದಾಖಲೆಯಾಗಿದೆ.
ಈ ದಾಖಲೆಯೂ ಶಾಲೆ-ಕಾಲೇಜು, scholarship, reservation, ಸರ್ಕಾರಿ ಯೋಜನೆಗಳು ಹಾಗೂ ಸರ್ಕಾರಕ್ಕೆ ಸಂಬಂಧ ಪಟ್ಟ ಯಾವುದೇ ಉಪಯೋಗಕ್ಕೆ ಅಗತ್ಯವಿದೆ.
ಮೊಬೈಲ್‌ನಲ್ಲಿ Apply ಮಾಡಲು ಬೇಕಾಗುವ ದಾಖಲೆಗಳು
ಮೊಬೈಲ್ ಮೂಲಕ Online apply ಮಾಡುವ ಮೊದಲು ಈ ಕೆಳಗೆ ತಿಳಿಸಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ:
- ಆಧಾರ್ ಕಾರ್ಡ್
- ರೇಷನ್ ಕಾರ್ಡ್ / ಪಡಿತರ ಚೀಟಿ
- ಆಫಿಡೇವಿಟ್ (ಸ್ವಂತ)
- ಶಾಲಾ ವಿದ್ಯಾಭ್ಯಾಸ ದಾಖಲೆ
- ವೋಟರ್ ಐ ಡಿ ಕಾರ್ಡ್
- ಮೊಬೈಲ್ ಸಂಖ್ಯೆ
- ಪಾಸ್‌ಪೋರ್ಟ್ ಸೈಸ್ ಫೋಟೋ
- ಆದಾಯ ಮಾಹಿತಿ
- ಹಳೆಯ ಜಾತಿ ಪ್ರಮಾಣ ಪತ್ರ
- ವಿಳಾಸ ಪುರಾವೆ
- ಇತರೆ

Caste and Income Certificate ಅಪ್ಲೈ ಮಾಡುವ ಸುಲಭ ವಿಧಾನ
ಮೊಬೈಲ್ ಮೂಲಕ ಆನ್ಲೈನ್ ಅಪ್ಲೈ ಮಾಡಲು ಈ ಕೆಳಗಿನ ಹಂತಗಳನ್ನು ಪಾಲಿಸಿ
- ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ.
ನಿಮ್ಮ ಮೊಬೈಲ್ ನಲ್ಲಿನ ಯಾವುದೇ ಬ್ರೌಸರ್ ಮೂಲಕ Nadakacheri portal ಅಧಿಕೃತ ವೆಬ್ಸೈಟ್ ಅನ್ನು ತೆರೆಯಿರಿ.
- Online Application ತೆರೆಯಿರಿ.
ಅಧಿಕೃತ ನಾಡಕಛೇರಿ ವೆಬ್ಸೈಟ್ ತೆರೆದ ನಂತರ ಮೆನು ಬಾರ್ ನಲ್ಲಿರುವ online application ಆಯ್ಕೆಯನ್ನು ಕ್ಲಿಕ್ ಮಾಡಿ.
- Apply Online ಕ್ಲಿಕ್ ಮಾಡಿ.
online appplication ಕ್ಲಿಕ್ ಮಾಡಿದ ನಂತರ ಹಲವಾರು ಉಪ ಆಯ್ಕೆಗಳು ಕಾಣುತ್ತದೆ. ಇದರಲ್ಲಿ Apply Online ಮೇಲೆ ಕ್ಲಿಕ್ ಮಾಡಿ.
- ಮೊಬೈಲ್ ನಂಬರ್ ಬಳಸಿ ಲಾಗಿನ್ ಆಗಿ.
ನಂತರ ಹೊಸ ಟ್ಯಾಬ್ ನಲ್ಲಿ ತೆರೆದುಕೊಳ್ಳುವ ನಾಡಕಛೇರಿ ಪೋರ್ಟಲ್ ನ ನಾಗರೀಕ ಲಾಗಿನ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು ಒಟಿಪಿ ಬಳಸಿ ಲಾಗಿನ್ ಆಗಬೇಕು.
- New Request ತೆರೆಯಿರಿ.
ಲಾಗಿನ್ ಆದ ನಂತರ ಹೊಸ ವಿನಂತಿ (New Request ) ಆಯ್ಕೆಯನ್ನು ಕ್ಲಿಕ್ ಮಾಡಿ.ನಂತರ ಜಾತಿ ಮತ್ತು ಆದಾಯ ಪ್ರಮಾಣಪತ್ರ ಆಯ್ಕೆ ಮಾಡಿ.
- ಅರ್ಜಿ ಭರ್ತಿ ಮಾಡಿ, ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ.
ಅರ್ಜಿಯಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. ಅರ್ಜಿ ಶುಲ್ಕವನ್ನು ಪಾವತಿಸಿ.ನಂತರ ಸ್ವಿಕೃತಿ ಸಂಖ್ಯೆಯನ್ನು ನೆನಪಿಡಿ.
ಅರ್ಜಿ ಸಲ್ಲಿಸಿದ ನಂತರದ ಹಂತಗಳು
caste and income certificate ಅರ್ಜಿಯನ್ನು ಸಲ್ಲಿಸಿ ಶುಲ್ಕ ಪಾವತಿಸಿದ ನಂತರ ಅರ್ಜಿಯು ಹಂತ ಹಂತವಾಗಿ ಸರ್ಕಾರಿ ಅಧಿಕಾರಿಗಳ ಹಂತದಲ್ಲಿ ಪರಿಶೀಲನೆ ಒಳಪಡುತ್ತದೆ. ಮೊದಲನೆಯದಾಗಿ ಗ್ರಾಮ ಆಡಳಿತ ಅಧಿಕಾರಿ, ನಂತರ RI, ಡೆಪ್ಯೂಟಿ ತಹಸೀಲ್ದಾರ್, ಕೇಸ್ ವರ್ಕರ್ ಹಾಗೂ ತಹಸೀಲ್ದಾರ್.
ಹೀಗೆ ಅರ್ಜಿಯು ವರ್ಗಾವಣೆ ಆಗುತ್ತದೆ. ಕೊನೆಯಲ್ಲಿ ಎಲ್ಲಾ ಮಾಹಿತಿಯು ಸರಿಯಾಗಿದ್ದಲ್ಲಿ ತಹಸೀಲ್ದಾರ್ ರವರ ಅನುಮೋದನೆಯು ದೊರೆತು ಅರ್ಜಿ ಮುದ್ರಣಕ್ಕೆ ಸಿದ್ದಗೊಳ್ಳುತ್ತದೆ.
ಅರ್ಜಿ ಸ್ಥಿತಿಯನ್ನು ತಿಳಿಯುವುದು ಹೇಗೆ?
Caste and income certificate ಗೆ ಅರ್ಜಿ ಸಲ್ಲಿಸಿದ್ದರೆ, ಅರ್ಜಿ ಸ್ಥಿತಿಯನ್ನು ನಾಡಕಛೇರಿ ವೆಬ್ಸೈಟ್ ಮೂಲಕ ತಿಳಿದುಕೊಳ್ಳಬಹುದು.
ಅರ್ಜಿ ಸ್ಥಿತಿಯನ್ನು ಎರಡು ತರನಾಗಿ ತಿಳಿಯಬಹುದು. ಮುಖ್ಯವಾಗಿ ಅರ್ಜಿ ಸ್ಥಿತಿ ತಿಳಿಯಲು ಸ್ವಿಕೃತಿಯ ಸಂಖ್ಯೆ ಬೇಕಾಗುತ್ತದೆ.
- ಆಯ್ಕೆ 01 :- ನಾಡಕಛೇರಿ ವೆಬ್ಸೈಟ್ ನಲ್ಲಿನ ಮೆನು ಬಾರ್ ನ ಸ್ಥಿತಿಯನ್ನು ಪರಿಶೀಲಿಸಿ ಆಯ್ಕೆಯ ಮೂಲಕ ಚೆಕ್ ಮಾಡಬಹುದು.
- ಆಯ್ಕೆ 02 :- ನಾಡಕಛೇರಿ ವೆಬ್ಸೈಟ್ ನಲ್ಲಿನ ನಾಗರೀಕ ಲಾಗಿನ್ ಮಾಡಿದ ನಂತರದಲ್ಲಿ ಅಪ್ಲಿಕೇಶನ್ ಸ್ಟೇಟಸ್ ಮೂಲಕ ಸ್ಥಿತಿಯನ್ನು ತಿಳಿಯಬಹುದು.
ಅರ್ಜಿ ಶುಲ್ಕ ಪಾವತಿ ಮಾಡುವಾಗ ಎಚ್ಚರಿಕೆ ವಹಿಸಿ.
- ಅಧಿಕೃತವಾದ ವೆಬ್ಸೈಟ್ ಅನ್ನು ಮಾತ್ರ ಬಳಸಿ.
ಹೌದು, ಅರ್ಜಿಯನ್ನು ಅಧಿಕೃತ ವೆಬ್ಸೈಟ್ ಮೂಲಕ ಮಾತ್ರ ಸಲ್ಲಿಸಿ. ಹಾಗೂ ಅರ್ಜಿ ಶುಲ್ಕವನ್ನು ಪಾವತಿಸಿ.
- ಪೇಮೆಂಟ್ ಒಟಿಪಿ(otp) ಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಅರ್ಜಿ ಶುಲ್ಕ ಪಾವತಿಯಲ್ಲಿ ಪೇಮೆಂಟ್ ಮಾಡುವಾಗ ಒಟಿಪಿ ಬಂದಲ್ಲಿ ಇದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಇದರಿಂದ ಆರ್ಥಿಕ ನಷ್ಟವಾಗುವ ಸಂಭವವಿರುತ್ತದೆ.
- ನಿರ್ಧರಿತ ಶುಲ್ಕವನ್ನು ಪಾವತಿಸುತ್ತಿರುವುದನ್ನು ಪರೀಕ್ಷಿಸಿಕೊಳ್ಳಿ.
ಅರ್ಜಿ ಶುಲ್ಕವು ಅಧಿಕೃತ ವಾಗಿ ಮೊದಲು ನಿರ್ಧಾರಿತ ಶುಲ್ಕವೇ ಇದೆಯೇ ಎನ್ನುವುದನ್ನು ಪರೀಕ್ಷಿಸಿಕೊಳ್ಳಿ.
- ಪೇಮೆಂಟ್ ಯಶಸ್ವಿಯಾಗಿ ಪಾವತಿಸಿದ ನಂತರ receipt ಅನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ.
ಪೇಮೆಂಟ್ ಆದ ನಂತರ ಬಂದಿರುವ ಪೇಮೆಂಟ್ receipt ಅನ್ನು ಜೋಪಾನವಾಗಿ ನಿಮ್ಮಲ್ಲಿ ಇಟ್ಟುಕೊಳ್ಳಿ.
- ಸಾರ್ವಜನಿಕ wifi ಅನ್ನು ಬಳಸಬೇಡಿ.
ಮುಖ್ಯವಾಗಿ ಅರ್ಜಿ ಶುಲ್ಕ ಪಾವತಿಸುವಾಗ ಸಾರ್ವಜನಿಕ wifi ಅನ್ನು ಬಳಸಬೇಡಿ. ಇದರಿಂದಲೂ ಸಹ ನಿಮಗೆ ಆರ್ಥಿಕ ನಷ್ಟ ಉಂಟಾಗುವ ಸಂಭವವಿದೆ.

ಅರ್ಜಿ ಅನುಮೋದನೆ ನಂತರ ಅರ್ಜಿ ಮುದ್ರಣ ಹೇಗೆ?
ಅರ್ಜಿಯು ಎಲ್ಲಾ ಹಂತಗಳಲ್ಲಿ ಪರಿಶೀಲನೆಗೊಂಡು, ತಹಸೀಲ್ದಾರ್ ರವರ ಅನುಮೋದನೆ ದೊರೆತ ನಂತರ ಜಾತಿ ಮತ್ತು ಆದಾಯ ಪ್ರಮಾಣಪತ್ರವು ಮುದ್ರಣಕ್ಕೆ ಸಿದ್ದಗೋಳ್ಳುತ್ತದೆ.
ಈ ಪ್ರಮಾಣಪತ್ರವನ್ನು ಪ್ರಿಂಟ್ ಅಥವಾ ಮುದ್ರಿಸಲು ನಾಡಕಛೇರಿ ನಾಗರಿಕರ ಲಾಗಿನ್ ನಲ್ಲಿ ಲಾಗಿನ್ ಆಗಿ,ಮೆನು ಬಾರ್ ನಲ್ಲಿರುವ ಪ್ರಿಂಟ್ ಅಥವಾ ಮುದ್ರಿಸಿ ಒಪ್ಶನ್ ಅನ್ನು ಆಯ್ಕೆ ಮಾಡಿಕೊಳ್ಳಿ. ಇಲ್ಲಿ ನಿಮ್ಮ ಅನುಮೋದನೆಗೊಂಡ ಅರ್ಜಿಯು ತೋರುತ್ತದೆ. ನಿಮ್ಮ ಪ್ರಮಾಣಪತ್ರವನ್ನು ಆಯ್ಕೆ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
ನಿಮ್ಮ ಪ್ರಮಾಣಪತ್ರವನ್ನು ಮರುಮುದ್ರಣ ಅಥವಾ Reprint ಮಾಡಲು ಮೆನು ಬಾರ್ ನಲ್ಲಿನ ಮರು ಮುದ್ರಣ ಆಪ್ಷನ್ ಅನ್ನು ಆಯ್ಕೆ ಮಾಡಿಕೊಳ್ಳಿ.
ಅರ್ಜಿ ಅನುಮೋದನೆ ಅಥವಾ ತಿರಸ್ಕರಿಸಲು ಗರಿಷ್ಠ ಸಮಯವಕಾಶ.
caste and income certificate ಅರ್ಜಿಯು ಪರಿಶೀಲನೆಗೆ ಒಳಪಟ್ಟು ಅಧಿಕಾರಿಗಳಿಂದ ಅನುಮೋದನೆ ಅಥವಾ ತಿರಸ್ಕೃತ ಕ್ಕೆ ಸಕಾಲದ ಗರಿಷ್ಠ ಸಮಯ 21 ದಿನಗಳನ್ನು ನಿಗದಿಪಡಿಸಲಾಗಿದೆ.
ಈ ವೇಳೆಯಲ್ಲಿ ಅರ್ಜಿಯ ಎಲ್ಲಾ ಮಾಹಿತಿ ಮತ್ತು ನೀವು ಅಪ್ಲೋಡ್ ಮಾಡಿರುವ ದಾಖಲೆಯ ಮಾಹಿತಿಯನ್ನು ಪರಿಶೀಲಿಸಿ. ಎಲ್ಲವು ಸರಿಯಾಗಿದ್ದರೆ ಈ ಸಮಯವಕಾಶದ ಮೊದಲೇ ಅರ್ಜಿಯನ್ನು ಅನುಮೋದನೆ ಅಥವಾ ತಿರಸ್ಕೃತ ಒಳಪಡಿಸಲಾಗುತ್ತದೆ.
ಮೊದಲೇ ಪಡೆದಿರುವ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡುವುದು ಹೇಗೆ?
ಈ ಮೊದಲೇ ಪಡೆದಿರುವ ಪ್ರಮಾಣಪತ್ರವನ್ನು ಮರು ಮುದ್ರಣ ಅಥವಾ ಕಳೆದು ಹೋಗಿರುವ ಪ್ರಮಾಣಪತ್ರವನ್ನು ಪಡೆದು ಕೊಳ್ಳಲು ಈ ಕೆಳಗಿನ ಹಂತಗಳನ್ನು ಪಾಲಿಸಿ.
ಅರ್ಜಿ ಸಲ್ಲಿಸುವಾಗ ನೀವು ಪಡಿತರ ಚೀಟಿ ಹೊಂದಿರುವಿರಾ? ಎಂದು ಕೇಳಿದಾಗ, ಹೌದು ಎಂದು ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ನಮೂದಿಸಿ ಮುಂದುವರೆಸಿರಿ. ನಂತರ ನಿಮ್ಮ ರೇಷನ್ ಕಾರ್ಡ್ ನಲ್ಲಿನ ಎಲ್ಲಾ ವ್ಯಕ್ತಿಗಳ ಹೆಸರು ತೋರುತ್ತದೆ. ನಿಮ್ಮ ಹೆಸರನ್ನು ಆಯ್ಕೆ ಮಾಡಿ ಕೊಳ್ಳಿ. ನಿಮ್ಮ ಹೆಸರಿನಲ್ಲಿನ ಪ್ರಸ್ತುತ ಮಾನ್ಯವಿರುವ caste and income certificate ಕಾಣುತ್ತದೆ.
ಈ ಪ್ರಮಾಣಪತ್ರ ಬೇಕಿದ್ದಲ್ಲಿ ಅಲ್ಲಿಯೇ ಮರುಮುದ್ರಣಕ್ಕೆ ಆಯ್ಕೆ ಇದ್ದೂ, ಮುದ್ರಿಸಿಕೊಳ್ಳಬಹುದು.
ಅರ್ಜಿ ತಿರಸ್ಕೃತ ಆಗದೇ ಇರಲು ಕೆಲವು ಸಲಹೆಗಳು
ಸರಿಯಾದ ಮಾಹಿತಿಯನ್ನು ನಮೂದಿಸಿ.
ದಾಖಲೆ ಅಪ್ಲೋಡ್ ಮಾಡುವಾಗ ಸ್ವಷ್ಟವಾಗಿ ತೋರುವ ದಾಖಲೆಯನ್ನು ಅಪ್ಲೋಡ್ ಮಾಡಿ.
ನಿಮ್ಮ ಪ್ರಸ್ತುತ ಆದಾಯದ ಮಾಹಿತಿಯನ್ನು ಸರಿಯಾಗಿ ನೀಡಿ.
ಅಪ್ಲಿಕೇಶನ್ ಸಲ್ಲಿಸುವ ಮೊದಲು ನಿಮ್ಮ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿಕೊಳ್ಳಿ.
ಮೊಬೈಲ್ ಮೂಲಕ ಅರ್ಜಿ ಸಲ್ಲಿಕೆಯಿಂದ ಆಗುವ ಪ್ರಯೋಜನಗಳು
- ಸಮಯ ಉಳಿತಾಯ
- ವೆಚ್ಚ ಕಡಿಮೆ
- ಯಾವ ಸಮಯದಲ್ಲಿಯೂ ಅರ್ಜಿ ಸಲ್ಲಿಸಿ
- ಸುಲಭವಾಗಿ ಅರ್ಜಿ ಸಲ್ಲಿಸಿ
- ಸುರಕ್ಷತೆ ಹೊಂದಿರುತ್ತದೆ.
ಕೊನೆಯದಾಗಿ
ಅರ್ಜಿ ಸಲ್ಲಿಸಲು ಬಯಸಿದ್ದಲ್ಲಿ ಮೇಲಿನ ಹಂತವನ್ನು ಪಾಲಿಸಿ ಬೇಗನೆ ಅರ್ಜಿಯನ್ನು ಮೊಬೈಲ್ ಮೂಲಕ ಅಪ್ಲೈ ಮಾಡಿಕೊಳ್ಳಬಹುದು.ಸರಿಯಾದ ಮಾಹಿತಿ ಮತ್ತು ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಯಾವುದೇ ಅರ್ಜಿಯು ತಿರಸ್ಕರಿಸಲ್ಪಡುವುದಿಲ್ಲ. ಮತ್ತು ಬೇಗನೆ ಅನುಮೋದನೆ ದೊರೆಯುತ್ತದೆ.
Caste and income certificate ಅನುಮೋದನೆ ಅಥವಾ ತಿರಸ್ಕರಿಸಲು ತಗಲುವ ಗರಿಷ್ಠ ಸಮಯ?
ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಲು ಸಕಾಲ ಸಮಯ ನಿಗದಿ ಗರಿಷ್ಠ 21 ದಿನಗಳು.
ಮೊಬೈಲ್ ಮೂಲಕ ಅಪ್ಲೈ ಮಾಡಬಹುದೇ?
ಹೌದು, ಮೊಬೈಲ್ ಮೂಲಕ ನಾಡಕಛೇರಿ ನಾಗರೀಕ ಲಾಗಿನ್ ಮಾಡಿ ಅರ್ಜಿ ಸಲ್ಲಿಸಬಹುದು.
ಅಪ್ಲಿಕೇಶನ್ ತಿರಸ್ಕೃತ ಆಗುವುದನ್ನು ಹೇಗೆ ತಪ್ಪಿಸುವುದು?
ಸರಿಯಾದ ಮಾಹಿತಿ ಮತ್ತು ದಾಖಲೆಯನ್ನು ಅರ್ಜಿಯೊಂದಿಗೆ ಸಲ್ಲಿಸುವುದರಿಂದ ಅರ್ಜಿ ತಿರಸ್ಕೃತ ಪ್ರಮಾಣ ಕಡಿಮೆ ಇರುತ್ತದೆ.
Jayanth
ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.
About Us →