Table of Contents
ಸಂದರ್ಶನದಲ್ಲಿ (Interview )ಕೇಳಲ್ಪಡುವ ಪ್ರಶ್ನೆಗಳನ್ನು ತಿಳಿದುಕೊಂಡು ನಮ್ಮ ಮುಂದಿನ ಸಂದರ್ಶನಕ್ಕೆ ತಯಾರಿ ಮಾಡುವ ಹಾದಿ ಸರಿಯಾಗಿಯೇ ಇದೆ.ಸಂದರ್ಶಕರಿಗೆ ತಮ್ಮ ಬಗ್ಗೆ ಮತ್ತು ಆ ಸಂಸ್ಥೆಗೆ ನಾವು ಸರಿಯಾದ ವ್ಯಕ್ತಿಯೇ ಎಂದು ತಿಳಿದುಕೊಳ್ಳುಲು ಇರುವ ಒಂದೇ ಒಂದು ಮಾರ್ಗವೆಂದರೆ ಅದುವೇ ಸಂದರ್ಶನ.
ಎಲ್ಲವನ್ನೂ ತಾನೇ ಮಾಡಿ ಸಾಧಿಸಿ ತೋರುವೆ ಎನ್ನುವ ಹಾದಿ ಕಷ್ಟ ಸಾಧ್ಯ ಮತ್ತು ಎಲ್ಲವನ್ನು ಅನುಭವದಿಂದಲೇ ಪಡೆದು ಸರಿಪಡಿಸಿಕೊಳ್ಳಲು ಸಮಯವನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಇತರ ಅನುಭವವನ್ನು ಆಲಿಸಿ, ನಮ್ಮಲ್ಲಿ ಅದನ್ನು ಅಳವಡಿಸಿ ಅಥವಾ ಅನುಸರಿಸುವುದರಿಂದ ಬೇಗನೆ ಸಾಧನೆಯ ಹಾದಿಯನ್ನು ಹಿಡಿದು ಗುರಿ ಮುಟ್ಟಬಹುದಾಗಿದೆ.
ಯಾಕೆ ಸಾಮಾನ್ಯ ಪ್ರಶ್ನೆಗಳ ತಯಾರಿ ಅತಿ ಮುಖ್ಯ? (Why Common Questions are Important?)
ಈ ಲೇಖನದಿಂದ ಓದುಗರು ಸಂದರ್ಶನದಲ್ಲಿನ ಸಾಮಾನ್ಯ ಪ್ರಶ್ನೆಗಳು ಹೇಗೆ ಕೇಳುತ್ತಾರೆ ಮತ್ತು ಸಂದರ್ಶನದಲ್ಲಿನ ಏನೆಲ್ಲಾ ಸವಾಲುಗಳು ಎದುರಾಗಬಹುದು ಹಾಗೆಯೇ ಇದನ್ನು ಅಭ್ಯಾಸ ಮಾಡುವ ಮೂಲಕ ಸಂದರ್ಶನವನ್ನು ವ್ಯವಸ್ಥಿತವಾಗಿ ನೀಡಲು ಸಹಕಾರಿಯಾಗುವ ಮಾರ್ಗದ ಬಗ್ಗೆ ತಿಳಿದುಕೊಳ್ಳೋಣ.
ಸಂದರ್ಶನದಲ್ಲಿ ಕೇಳುವ ಸಾಮಾನ್ಯ ಪ್ರಶ್ನೆಗಳು(Common Interview Questions)
1. ನಿಮ್ಮ ಬಗ್ಗೆ ಹೇಳಿ.
ಎಲ್ಲಾ ಸಂದರ್ಶನದಲ್ಲೂ ಸರ್ವೇಸಾಮಾನ್ಯವಾಗಿ ಕೇಳಲ್ಪಡುವ ಪ್ರಶ್ನೆ ಎಂದರೆ ನಿಮ್ಮ ಬಗ್ಗೆ ಹೇಳಿ. ಈ ಪ್ರಶ್ನೆ ಕೇಳಿದಾ ಕ್ಷಣ ಅತಿ ಸಾಮಾನ್ಯ ಪ್ರಶ್ನೆ ಎನ್ನಿಸಬಹುದು ಆದರೂ ಸಹ ಇದೆ ಪ್ರಶ್ನೆಯೇ ಸಂದರ್ಶನಕ್ಕೆ ಮೆರುಗು ನೀಡುವುದರ ಜೊತೆಗೆ ಸಂದರ್ಶಕರಿಗೆ ನಿಮ್ಮ ಬಗ್ಗೆ ಮೊದಲ ಅನಿಸಿಕೆ (FIRST Impression ) ನೀಡಲು ಸಹಕಾರಿಯಾಗುತ್ತದೆ. ಮತ್ತು ಸಂದರ್ಶನದ ಮೇಲೆ ನೇರ ಪರಿಣಾಮ ಬೀರುತ್ತದೆ.
ಈ ಪ್ರಶ್ನೆ ಯನ್ನು ಎಲ್ಲಾ ಸಂದರ್ಶನದಲ್ಲಿಯೂ ಸಾಮಾನ್ಯವಾಗಿ ನಿರೀಕ್ಷಿಸಬಹುದಾಗಿದ್ದು, ನಿಮ್ಮ ಹೆಸರಿನ ಮೂಲಕ ಮಾತು ಆರಂಭಿಸಿ, ನಿಮ್ಮ ಶಿಕ್ಷಣದ ಜೊತೆಗೆ ಶೈಕ್ಷಣಿಕ ಸಂಸ್ಥೆಯ ಬಗ್ಗೆ ಹಾಗೂ ತಂದೆ-ತಾಯಿ ಮತ್ತು ನೇಟಿವ್ ಪ್ಲೇಸ್ ( ಊರು) ಬಗ್ಗೆ ಸಂಕ್ಷಿಪ್ತ ವಾಗಿ ವಿವರಿಸಿದರೆ ಒಳ್ಳೆಯದು. ಅದರ ಜೊತೆಗೆ ನಿಮ್ಮ ಶೈಕ್ಷಣಿಕ ಸಾಧನೆಗಳು ಏನಾದರು ಇದ್ದಾರೆ ಅದರ ಬಗ್ಗೆ ಉಲ್ಲೆಕಿಸಿದರೆ ಉತ್ತಮ.

02. ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಪ್ರಶ್ನೆಗಳು
ಸಂದರ್ಶನದ ಪ್ರಮುಖ ಪ್ರಶ್ನೆಗಳು ನಿಮ್ಮ ವಿದ್ಯಾಭ್ಯಾಸ ಮತ್ತು ನಿಮ್ಮ ಆಸಕ್ತಿ ಗಳ ಮೇಲೆ ಬರುತ್ತದೆ, ಏಕೆಂದರೆ ಆ ಹುದ್ದೆಗೆ ನೀವು ಸರಿಯಾದ ವ್ಯಕ್ತಿಯೇ, ನಿಮ್ಮ ವಿದ್ಯಾಭ್ಯಾಸವೂ ಮತ್ತು ನಿಮ್ಮ ನೈಪುಣ್ಯತೆ ನಿಮ್ಮ ಕೆಲಸವನ್ನು ವ್ಯಸ್ಥಿತವಾಗಿ ನಿರ್ವಹಿಸಲು ಸಹಕರಿಯಾಗಬಹುದೇ ಎನ್ನುವುದನ್ನ ತಿಳಿಸುತ್ತದೆ.
ಪ್ರಮುಖವಾಗಿ ಈ ಹಂತದಲ್ಲಿ ಈ ಕೆಳಗಿನ ಪ್ರಶ್ನೆಗಳನ್ನು ನಿರೀಕ್ಷಿಸಬಹುದು.
- ನಿಮ್ಮ ಪದವಿಯಲ್ಲಿ ಓದಿರುವ ವಿಷಯಗಳ ಮೇಲೆ ಪ್ರಶ್ನೆಗಳು
- ಅಂತೆಯೇ ಅದೇ ಪ್ರಶ್ನೆಗಳನ್ನು ನಿತ್ಯ ಜೇವನಕ್ಕೆ ಹೋಲಿಸಿ ಪ್ರಶ್ನೆಗಳನ್ನು ಕೇಳಬಹುದು.
- ತಾಂತ್ರಿಕ ವಿಷಯವೇನಾದರೂ ಇದ್ದರೆ, ಅದರ ಮೇಲೆ ಸಮಸ್ಯೆಯನ್ನು ನಿಮ್ಮ ಮುಂದೆ ಇರಿಸಿ ಬಗೆಹರಿಸಲು ಕೇಳುತ್ತಾರೆ.
- ನಿಮಗೆ ಈ ಮೊದಲೇ ಕೆಲಸದ ಅನುಭವವಿದ್ದರೆ ಅದರ ಮೇಲೆ ಪ್ರಶ್ನೆಗಳು
ಹೀಗೆಯೇ ಆ ಹುದ್ದೆಗೆ ನಿಮ್ಮ ಶೈಕ್ಷಣಿಕ ಸಾಮರ್ಥ್ಯ ಪೂರಕವಾಗಿದೆಯೇ,ಇಲ್ಲವೇ ಎಂದು ಪರೀಕ್ಷಿಸುತ್ತಾರೆ.
ನಮ್ಮ Telegram Channel ಅನ್ನು ಸಹ ಅನುಸರಿಸಿ.
03.ನಿಮ್ಮ ಸಾಧನೆಗಳ ಮೇಲೆ ಪ್ರಶ್ನೆಗಳು
ನೀವು ನೀಡಿರುವ Resume ನಲ್ಲಿರುವ ಅಂಶಗಳ ಮೇಲೆ ಸಂದರ್ಶಕರು ನಿಮಗೆ ಪ್ರಶ್ನೆಗಳನ್ನು ಮಾಡುತ್ತಾರೆ. ಹಾಗಾಗಿ Resume ಸಂದರ್ಶನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.ಮೇಲೆ ನೀವೇನಾದರೂ Resume ಅಲ್ಲಿ ನಿಮ್ಮ ಶೈಕ್ಷಣಿಕ ಸಾಧನೆ ಅಥವಾ ಇನ್ನಾವುದೇ ತರಹದ ಸಾಧನೆಗಳನ್ನು ಮಾಡಿರುವ ಬಗ್ಗೆ ಉಲ್ಲೇಖಸಿದ್ದರೆ. ಖಂಡಿತವಾಗಿಯೂ ಅದರ ಮೇಲೆ ಪ್ರಶ್ನೆಗಳನ್ನು ನಿರೀಕ್ಷಿಸಬಹುದು.
04.ಸನ್ನಿವೇಶ ಆಧಾರಿತ ಪ್ರಶ್ನೆಗಳು
ಸನ್ನಿವೇಶ ಆಧಾರಿತ ಪ್ರಶ್ನೆಗಳನ್ನು ಸಾಮಾನ್ಯವಾಗಿ ತಾಂತ್ರಿಕ ಅರ್ಹತೆ ಮೇರೆಗೆ ಕೇಳಿರುವ ಹುದ್ದೆಗಳಿಗೆ ಹೆಚ್ಚಾಗಿ ನಿರೀಕ್ಷಿಸಬಹುದು.
ಒಂದು ಸನ್ನಿವೇಶವನ್ನು ನೀಡಿ ನಿಮ್ಮನ್ನು ಸನ್ನಿವೇಶದ ಒಂದು ಭಾಗವನ್ನಾಗಿ ಮಾಡಿ. ಆ ಸಂದರ್ಭದಲ್ಲಿ ನಿಮ್ಮ ಆಲೋಚನಾ ವಿಧಾನ, ವ್ಯವಹಾರಿಸುವ ರೀತಿ ಮತ್ತು ನಿಮ್ಮ ಭಾವನೆಗಳ ಮೇಲೆ ಸಂದರ್ಶಕರು ಗಮನಿಸುತ್ತಾರೆ.
05. ಭವಿಷ್ಯದ ಗುರಿಗಳ ಬಗ್ಗೆ ಪ್ರಶ್ನೆಗಳು
ನೀವು ಒಂದು ಕಂಪನಿ ಅಥವಾ ಸಂಸ್ಥೆಯಲ್ಲಿ ಕೆಲಸ ಮಾಡವ ಹಂಬಲ ಹೊಂದಿರುವಿರಿ ಎಂದಾದರೆ, ಕಂಪನಿಗೆ ಭವಿಷ್ಯದಲ್ಲಿ ನಿಮ್ಮಿಂದ ಯಾವ ರೀತಿಯ ಕೊಡುಗೆ ನೀಡಬಹುದು ಮತ್ತು ಕಂಪನಿಯ ಏಳಿಗೆಗೆ ಅದು ಹೇಗೆ ಪೂರಕವಾಗುತ್ತದೆ? ಎಂದು ತಿಳಿಯಲು ಸಂದರ್ಶಕರು ಬಯಸುತ್ತಾರೆ.
ಹಾಗೆಯೇ ಭವಿಷ್ಯದಲ್ಲಿ ನಿಮ್ಮ ಗುರಿಗಳ ಮೇಲೆ ಸಂದರ್ಶನದಲ್ಲಿ ಪ್ರಶ್ನೆಗಳನ್ನು ಹೆಚ್ಚಿನದ್ದಾಗಿ ಕೇಳಲ್ಪಡುತ್ತದೆ. ಈ ಪ್ರಶ್ನೆಗೆ ಕಂಪನಿ ಅಥವಾ ಸಂಸ್ಥೆಯ ಅಭಿವೃದ್ಧಿ ಗೆ ಪೂರಕವಾಗುವ ರೀತಿಯಲ್ಲಿ ಉತ್ತರವನ್ನು ನೀಡುವುದರಿಂದ ಸಂದರ್ಶನ ಉತ್ತಮ ರೀತಿಯಲ್ಲಿ ಮೂಡಿಬರುತ್ತದೆ.

ಪ್ರಶ್ನೆಗೆ ಉತ್ತರಿಸುವ ಸರಿಯಾದ ಕ್ರಮ ದ ಬಗ್ಗೆ ಸಲಹೆಗಳು.(Tips on the Correct Way to Answer Questions)
- ಕೇಳಿರುವ ಪ್ರಶ್ನೆಗಳಿಗೆ ರಚನಾತ್ಮಕವಾಗಿ (structured )ಉತ್ತರಿಸುವುದು.
- ಉತ್ತರಸುವಾಗ ಸ್ಪಷ್ಟತೆ ಮತ್ತು ಸಂಕ್ಷಿಪ್ತತೆ ಹೊಂದಿರುವುದು ಮುಖ್ಯ.
- ಉದಾಹರಣೆಗಳ ಬಳಕೆ ಮಾಡಿ.
- ನಿಮ್ಮ ಉತ್ತರಗಳು ನಂತರದ ಪ್ರಶ್ನೆಗಳಿಗೆ ದಾರಿ ಮಾಡಿಕೊಡುವ ಹಾಗೆ ಉತ್ತರಿಸುವುದು (ಇದರಿಂದ ನಿಮಗೆ ತಿಳಿದಿರುವ ವಿಷಯವನ್ನು ನೀವೇ ಸಂದರ್ಶಕರಿಗೆ ಪ್ರಶ್ನೆಗಳ ಮೂಲಕ ಕೇಳುವ ಹಾಗೆ ಮಾಡಬಹುದು )
ಸಂದರ್ಶನದಲ್ಲಿನ ಸಾಮಾನ್ಯ ತಪ್ಪುಗಳು (Common Interview Mistakes)
ಎಷ್ಟೇ ಎಚ್ಚರಿಕೆಯೊಂದಿಗೆ ಸಂದರ್ಶನಕ್ಕೆ ತಯಾರಿ ನಡೆಸಿದರು ಕೆಲವಂದು ತಪ್ಪುಗಳು ಆಗುವುದು ಸರ್ವೇ ಸಾಮಾನ್ಯ. ಅದುವೇ ಮಾನವನ ಹುಟ್ಟು ಗುಣವೆಂದರೂ ಸರಿಯೇ… ಆದರೂ ಸಹ ಈ ಕೆಳಗಿನ ತಪ್ಪುಗಳು ಸಂದರ್ಶನದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಅವುಗಳೆಂದರೆ :-
- ಅತಿಯಾದ ಆತ್ಮವಿಶ್ವಾಸ
- ಆಸ್ಪಷ್ಟವಾದ ಉತ್ತರ ಅಥವಾ ಅರ್ಧ-ಮರ್ಧ ಉತ್ತರಿಸುವುದು
- ಕಂಪನಿ ಅಥವಾ ಸಂಸ್ಥೆಯ ಬಗ್ಗೆ ಅಪೂರ್ಣ ಅಥವಾ ತಪ್ಪು ಮಾಹಿತಿಯನ್ನು ಹೊಂದಿರುವುದು
ಕೊನೆಯದಾಗಿ (Conclusion )
ಸಂದರ್ಶನದಲ್ಲಿನ ಸಾಮಾನ್ಯ ಪ್ರಶ್ನೆಗಳ ಅಧ್ಯಯನದಿಂದ ಅರ್ಧ ಸಂದರ್ಶನವನ್ನು ಗೆದ್ದಂತೆಯೇ, ಇದರಿಂದ ಸಂದರ್ಶನವನ್ನು ಎದುರಿಸಲು ಆತ್ಮ ವಿಶ್ವಾಸವೂ ವೃದ್ಧಿಯಾಗುತ್ತದೆ ಮತ್ತು ಮತ್ತಿತರ ಪ್ರಶ್ನೆಗಳಿಗು ಉತ್ತರಿಸಲು ಸಹಕರಿಯಾಗುತ್ತದೆ.
ಸಂದರ್ಶನವನ್ನು ಪರಿಣಾಮಕಾರಿಯಾಗಿ ನೀಡಲು ಪೂರ್ವ ತಯಾರಿ ಅತ್ಯಗತ್ಯ ಆದ್ದರಿಂದ ಅಣುಕು ಸಂದರ್ಶನವನ್ನು ನೀಡುವುದರಿಂದ ಈ ಮೇಲೆ ಹೇಳಿರುವ ಹಾಗೆ ಪ್ರಶ್ನೆಗಳಿಗೆ ಉತ್ತರಿಸುವ ಸರಿಯಾದ ಕ್ರಮ, ಸಾಮಾನ್ಯ ತಪ್ಪುಗಳ ಬಗ್ಗೆ ಅರಿವು ಮತ್ತು ನಮ್ಮ ನಡುವಳಿಕೆ ಮೇಲೆ ಗಮನ ಹರಿಸಲು ಸಹಾಯ ಮಾಡುತ್ತದೆ.
ಸಂದರ್ಶನಕ್ಕೆ ತಯಾರಿ ಹೇಗೆ ಆರಂಭಿಸಬೇಕು?(How should I start preparing for an interview?)
ಸಂದರ್ಶನಕ್ಕೆ ತಯಾರಿ ಆರಂಭಿಸಲು ಮೊದಲು ಕಂಪನಿಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಬೇಕು. ನಂತರ ನಿಮ್ಮ ರೆಸ್ಯೂಮ್‌ಯನ್ನು ಕಂಪನಿಯ ಅಥವಾ ಸಂಸ್ಥೆಯ ಬೇಡಿಕೆಗಳಿಗೆ ತಕ್ಕಂತೆ ತಯಾರಿಸಬೇಕು. ರೆಸ್ಯೂಮ್‌ಯ ಎಲ್ಲಾ ಅಂಶಗಳನ್ನು ತಿಳಿದುಕೊಂಡಿರಬೇಕು. ಸಾಮಾನ್ಯ ಹಾಗೂ ತಾಂತ್ರಿಕ ಪ್ರಶ್ನೆಗಳ ಅಭ್ಯಾಸ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
ಉತ್ತಮ ರೆಸ್ಯೂಮ್‌ನಲ್ಲಿ ಯಾವ ಅಂಶಗಳು ಇರಬೇಕು?(What are the key elements of a good resume?)
ಒಂದು ಉತ್ತಮ ರೆಸ್ಯೂಮ್‌ನಲ್ಲಿ ನಿಮ್ಮ ಶಿಕ್ಷಣ, ಕೆಲಸದ ಅನುಭವ, ಕೌಶಲ್ಯಗಳು ಮತ್ತು ಸಾಧನೆಗಳನ್ನು ಸ್ಪಷ್ಟವಾಗಿ ಉಲ್ಲೇಖಸಬೇಕು. ಅನಾವಶ್ಯಕ ಮಾಹಿತಿಯನ್ನು ಬಳಸದೆ ಸರಳ ಮತ್ತು ವೃತ್ತಿಪರ ವಿನ್ಯಾಸವನ್ನು ಬಳಸುವುದು ಉತ್ತಮ.
ಸಂದರ್ಶನದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು ಹೇಗೆ?(How can I improve my confidence during an interview?)
ಸಂದರ್ಶನಕ್ಕೆ ಹೋಗುವ ಮೊದಲು ಅಣಕು ಸಂದರ್ಶನ (mock interview) ನೀಡುವುದರಿಂದ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಸ್ಪಷ್ಟವಾಗಿ ಮಾತನಾಡುವುದು, ಶಾಂತವಾಗಿರುವುದು ಮತ್ತು ಕಣ್ಣಿನ ಸಂಪರ್ಕದೊಂದಿಗೆ ಉತ್ತರಿಸುವುದು ವಿಶ್ವಾಸ ಹೆಚ್ಚಿಸುತ್ತದೆ.
Jayanth
ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.
About Us →