Interview ನಲ್ಲಿನ 05 ಪ್ರಮುಖ ಪ್ರಶ್ನೆಗಳು: Best Preparation

WhatsApp Group Join Now
Telegram Group Join Now

Table of Contents

ಸಂದರ್ಶನದಲ್ಲಿ (Interview )ಕೇಳಲ್ಪಡುವ ಪ್ರಶ್ನೆಗಳನ್ನು ತಿಳಿದುಕೊಂಡು ನಮ್ಮ ಮುಂದಿನ ಸಂದರ್ಶನಕ್ಕೆ ತಯಾರಿ ಮಾಡುವ ಹಾದಿ ಸರಿಯಾಗಿಯೇ ಇದೆ.ಸಂದರ್ಶಕರಿಗೆ ತಮ್ಮ ಬಗ್ಗೆ ಮತ್ತು ಆ ಸಂಸ್ಥೆಗೆ ಕಾರ್ಯ ನಿರ್ವಹಿಸಲು ನಾವು ಸರಿಯಾದ ವ್ಯಕ್ತಿಯೇ ಎಂದು ತಿಳಿದುಕೊಳ್ಳುಲು ಇರುವ ಒಂದೇ ಒಂದು ಮಾರ್ಗವೆಂದರೆ ಅದುವೇ  ಸಂದರ್ಶನ.

ಎಲ್ಲವನ್ನೂ ತಾನೇ ಮಾಡಿ ಸಾಧಿಸಿ ತೋರುವೆ ಎನ್ನುವ ಹಾದಿ ಕಷ್ಟ ಸಾಧ್ಯ ಮತ್ತು ಎಲ್ಲವನ್ನು ಅನುಭವದಿಂದಲೇ ಪಡೆದು ಸರಿಪಡಿಸಿಕೊಳ್ಳಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಇತರರ ಅನುಭವವನ್ನು ಆಲಿಸಿ, ನಮ್ಮಲ್ಲಿ ಅದನ್ನು ಅಳವಡಿಸಿ ಅಥವಾ ಅನುಸರಿಸುವುದರಿಂದ ಬೇಗನೆ ಸಾಧನೆಯ ಹಾದಿಯನ್ನು ಹಿಡಿದು ಗುರಿ ಮುಟ್ಟಬಹುದಾಗಿದೆ.

ಯಾಕೆ ಸಂದರ್ಶನದ ಸಾಮಾನ್ಯ ಪ್ರಶ್ನೆಗಳ ತಯಾರಿ ಅತಿ ಮುಖ್ಯ? (Why interview’s Common Questions are Important?)

ಈ ಲೇಖನದಿಂದ ಓದುಗರು ಸಂದರ್ಶನದಲ್ಲಿನ  ಸಾಮಾನ್ಯ ಪ್ರಶ್ನೆಗಳು ಹೇಗೆ ಕೇಳುತ್ತಾರೆ ಮತ್ತು ಸಂದರ್ಶನದಲ್ಲಿನ ಏನೆಲ್ಲಾ ಸವಾಲುಗಳು ಎದುರಾಗಬಹುದು ಹಾಗೆಯೇ ಸಂದರ್ಶನದ ಸಾಮಾನ್ಯ ಪ್ರಶ್ನೆಗಳ ಅಭ್ಯಾಸ ಮಾಡುವ ಮೂಲಕ ಸಂದರ್ಶನವನ್ನು ವ್ಯವಸ್ಥಿತವಾಗಿ ನೀಡಲು ಸಹಕಾರಿಯಾಗುವ ಮಾರ್ಗದ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಸಂದರ್ಶನದಲ್ಲಿ ಕೇಳುವ ಸಾಮಾನ್ಯ ಪ್ರಶ್ನೆಗಳು(Common Interview Questions)

1. ನಿಮ್ಮ ಬಗ್ಗೆ ಹೇಳಿ.

ಎಲ್ಲಾ ಸಂದರ್ಶನದಲ್ಲೂ ಸರ್ವೇಸಾಮಾನ್ಯವಾಗಿ ಕೇಳಲ್ಪಡುವ ಅತಿ ಮುಖ್ಯ ಪ್ರಶ್ನೆ ಎಂದರೆ ನಿಮ್ಮ ಬಗ್ಗೆ ಹೇಳಿ. ಈ ಪ್ರಶ್ನೆ ಕೇಳಿದಾ ಕ್ಷಣ ಅತಿ ಸಾಮಾನ್ಯ ಪ್ರಶ್ನೆ ಎನ್ನಿಸಬಹುದು ಆದರೂ ಸಹ ಇದೆ ಪ್ರಶ್ನೆಯೇ ಸಂದರ್ಶನಕ್ಕೆ ಮೆರುಗು ನೀಡುವುದರ ಜೊತೆಗೆ ಸಂದರ್ಶಕರಿಗೆ ನಿಮ್ಮ ಬಗ್ಗೆ ಮೊದಲ ಅನಿಸಿಕೆ (FIRST Impression ) ನೀಡಲು ಸಹಕಾರಿಯಾಗುತ್ತದೆ. ಮತ್ತು ಸಂದರ್ಶನದ ಮೇಲೆ ನೇರ ಪರಿಣಾಮ ಬೀರುತ್ತದೆ.

ಈ ಪ್ರಶ್ನೆಯನ್ನು ಎಲ್ಲಾ ಸಂದರ್ಶನದಲ್ಲಿಯೂ ಸಾಮಾನ್ಯವಾಗಿ ನಿರೀಕ್ಷಿಸಬಹುದಾಗಿದ್ದು, ನಿಮ್ಮ ಹೆಸರಿನ ಮೂಲಕ ಮಾತು ಆರಂಭಿಸಿ, ನಿಮ್ಮ ಶಿಕ್ಷಣದ ಜೊತೆಗೆ ಶೈಕ್ಷಣಿಕ ಸಂಸ್ಥೆಯ ಬಗ್ಗೆ ಹಾಗೂ ತಂದೆ-ತಾಯಿ ಮತ್ತು ನೇಟಿವ್ ಪ್ಲೇಸ್ ( ನಿಮ್ಮ ಊರು) ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರೆ ತುಂಬಾ ಒಳ್ಳೆಯದು. ಅದರ ಜೊತೆಗೆ ನಿಮ್ಮ ಶೈಕ್ಷಣಿಕ ಸಾಧನೆಗಳು ಏನಾದರು ಇದ್ದಾರೆ ಅದರ ಬಗ್ಗೆ ಉಲ್ಲೆಕಿಸಿದರೆ ಉತ್ತಮ.

Interview Tips in Kannada
Interview Tips in Kannada

02. ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಪ್ರಶ್ನೆಗಳು

ಸಂದರ್ಶನದ ಪ್ರಮುಖ ಪ್ರಶ್ನೆಗಳು ನಿಮ್ಮ ವಿದ್ಯಾಭ್ಯಾಸ ಮತ್ತು ನಿಮ್ಮ ಆಸಕ್ತಿ ಗಳ ಮೇಲೆ ಬರುತ್ತದೆ, ಏಕೆಂದರೆ ಆ ಹುದ್ದೆಗೆ ನೀವು ಸರಿಯಾದ ವ್ಯಕ್ತಿಯೇ, ನಿಮ್ಮ ವಿದ್ಯಾಭ್ಯಾಸವೂ ಮತ್ತು ನಿಮ್ಮ ನೈಪುಣ್ಯತೆ ನೀವು ಕೆಲಸವನ್ನು ವ್ಯಸ್ಥಿತವಾಗಿ ನಿರ್ವಹಿಸಲು ಸಹಕರಿಯಾಗಬಹುದೇ ಎನ್ನುವುದನ್ನ ತಿಳಿಸುತ್ತದೆ.

ಪ್ರಮುಖವಾಗಿ ಈ ಹಂತದಲ್ಲಿ ಈ ಕೆಳಗಿನ ಪ್ರಶ್ನೆಗಳನ್ನು ನಿರೀಕ್ಷಿಸಬಹುದು.

  • ನಿಮ್ಮ ಪದವಿಯಲ್ಲಿ ಓದಿರುವ ವಿಷಯಗಳ ಮೇಲೆ ಪ್ರಶ್ನೆಗಳು ಬರಬಹುದು.
  • ಅಂತೆಯೇ ಅದೇ ಪ್ರಶ್ನೆಗಳನ್ನು ನಿತ್ಯ ಜೀವನಕ್ಕೆ ಹೋಲಿಸಿ ಪ್ರಶ್ನೆಗಳನ್ನು ಕೇಳಬಹುದು.
  • ತಾಂತ್ರಿಕ ವಿಷಯವೇನಾದರೂ ಇದ್ದರೆ, ಅದರ ಮೇಲೆ ಕೆಲವು ಸಮಸ್ಯೆಯನ್ನು ನಿಮ್ಮ ಮುಂದೆ ಇರಿಸಿ ಬಗೆಹರಿಸಲು ಕೇಳುತ್ತಾರೆ.
  • ನಿಮಗೆ ಈ ಮೊದಲೇ ಕೆಲಸದ ಅನುಭವವಿದ್ದರೆ ಅದರ ಮೇಲೆ ಪ್ರಶ್ನೆಗಳು ಬರಬಹುದು.

ಹೀಗೆಯೇ ಆ ಹುದ್ದೆಗೆ ನಿಮ್ಮ ಶೈಕ್ಷಣಿಕ ಸಾಮರ್ಥ್ಯ ಪೂರಕವಾಗಿದೆಯೇ,ಇಲ್ಲವೇ ಎಂದು ಈ ಹಂತದಲ್ಲಿ ಪರೀಕ್ಷಿಸುತ್ತಾರೆ.

ಇದೇ ತರನಾದ ಹೆಚ್ಚಿನ ಲೇಖನಗಳನ್ನು ಓದಲು ನಮ್ಮ Telegram Channel ಅನ್ನು ಸಹ ಅನುಸರಿಸಿ.

03.ನಿಮ್ಮ ಶೈಕ್ಷಣಿಕ ಸಾಧನೆ ಅಥವಾ ಇತರೆ ಸಾಧನೆಗಳ ಮೇಲೆ ಪ್ರಶ್ನೆಗಳು

ಮುಖ್ಯವಾಗಿ ನೀವು ನೀಡಿರುವ Resume ನಲ್ಲಿರುವ ಅಂಶಗಳ ಮೇಲೆ ಸಂದರ್ಶಕರು ನಿಮಗೆ ಪ್ರಶ್ನೆಗಳನ್ನು ಮಾಡುತ್ತಾರೆ. ಹಾಗಾಗಿ Resume ಸಂದರ್ಶನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.ಮೇಲೆ ನೀವೇನಾದರೂ Resume ಅಲ್ಲಿ ನಿಮ್ಮ ಶೈಕ್ಷಣಿಕ ಸಾಧನೆ ಅಥವಾ ಇನ್ನಾವುದೇ ತರಹದ ಸಾಧನೆಗಳನ್ನು ಮಾಡಿರುವ ಬಗ್ಗೆ ಉಲ್ಲೇಖಸಿದ್ದರೆ. ಸಂದರ್ಶಕರು ಖಂಡಿತವಾಗಿಯೂ ಅದರ ಮೇಲೆ ಪ್ರಶ್ನೆಗಳನ್ನು ಮಾಡುವುದನ್ನು ನಿರೀಕ್ಷಿಸಬಹುದು.

ಆದ್ದರಿಂದ ಸಂದರ್ಶನಕ್ಕೆ ತೆರಳುವ ಮುನ್ನ ನಿಮ್ಮ resume ನಲ್ಲಿರುವ ನಿಮ್ಮ ಸಾಧನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ. ಹಾಗೆಯೇ ಸಾಧನೆ ಮಾಹಿತಿ ಅಥವಾ ಇತರೆ ಮಾಹಿತಿಯನ್ನು resume ನಲ್ಲಿ ದಾಖಲಿಸುವ ಮೊದಲು ನಿಮ್ಮ ಸಂದರ್ಶನಕ್ಕೆ ಪೂರಕವಾಗುವ ಬಗ್ಗೆ ಯೋಚಿಸಿ ದಾಖಲಿಸಿ.

04.ಕೆಲವು ಸನ್ನಿವೇಶ ಆಧಾರಿತ ಪ್ರಶ್ನೆಗಳು

ಸನ್ನಿವೇಶ ಆಧಾರಿತ ಪ್ರಶ್ನೆಗಳನ್ನು ಸಾಮಾನ್ಯವಾಗಿ ತಾಂತ್ರಿಕ ಅರ್ಹತೆ ಮೇರೆಗೆ ಕರೆದಿರುವ ಹುದ್ದೆಗಳಿಗೆ ಹೆಚ್ಚಾಗಿ ಪ್ರಶ್ನೆಗಳನ್ನು ನಿರೀಕ್ಷಿಸಬಹುದು.ಇಲ್ಲಿ ಆ ಹುದ್ದೆಗೆ ನಿಮ್ಮ ನಿಲುವು ಮತ್ತು ನಿಮ್ಮ ಹೊಂದಾಣಿಕೆಯನ್ನು ಪರೀಕ್ಷಿಸಲು ಈ ತರನಾದ ಪ್ರಶ್ನೆಗಳನ್ನು ಕೇಳುತ್ತಾರೆ.

ಇಲ್ಲಿ ಒಂದು ಸನ್ನಿವೇಶವನ್ನು ನೀಡಿ ನಿಮ್ಮನ್ನು ಸನ್ನಿವೇಶದ ಒಂದು ಭಾಗವನ್ನಾಗಿ ಮಾಡಿ. ಆ ಸಂದರ್ಭದಲ್ಲಿ ನಿಮ್ಮ ಆಲೋಚನಾ ವಿಧಾನ, ವ್ಯವಹಾರಿಸುವ ರೀತಿ ಮತ್ತು ನಿಮ್ಮ ಭಾವನೆಗಳ ಮೇಲೆ ಸಂದರ್ಶಕರು ಮುಖ್ಯವಾಗಿ ಗಮನಿಸುತ್ತಾರೆ.

ಹಾಗೆಯೇ ಇಲ್ಲಿ ನಿಮ್ಮ presence of mind ಅನ್ನು ಚೆಕ್ ಮಾಡುತ್ತಾರೆ. ಉತ್ತಮ ಸಂದರ್ಶನ ನೀಡಲು ಈ ಎಲ್ಲಾ ಅಂಶಗಳ ಮೇಲೆ ಹೋಂ ವರ್ಕ್ ಮಾಡುವುದು ಅತಿ ಅವಶ್ಯಕ.

05. ಭವಿಷ್ಯದ ಗುರಿಗಳ ಬಗ್ಗೆ ಪ್ರಶ್ನೆಗಳು

ನೀವು ಒಂದು ಕಂಪನಿ ಅಥವಾ ಸಂಸ್ಥೆಯಲ್ಲಿ ಕೆಲಸ ಮಾಡವ ಹಂಬಲ ಹೊಂದಿರುವಿರಿ ಎಂದಾದರೆ, ಕಂಪನಿಗೆ ಭವಿಷ್ಯದಲ್ಲಿ ನಿಮ್ಮಿಂದ ಯಾವ ರೀತಿಯ ಕೊಡುಗೆ ನೀಡಬಹುದು ಮತ್ತು ಕಂಪನಿಯ ಏಳಿಗೆಗೆ ಅದು ಹೇಗೆ ಪೂರಕವಾಗುತ್ತದೆ? ಎಂದು ತಿಳಿಯಲು ಸಂದರ್ಶಕರು ಬಯಸುತ್ತಾರೆ.

ಹಾಗೆಯೇ ಭವಿಷ್ಯದಲ್ಲಿ ನಿಮ್ಮ ಗುರಿಗಳ ಮೇಲೆ ಸಂದರ್ಶನದಲ್ಲಿ ಪ್ರಶ್ನೆಗಳನ್ನು ಹೆಚ್ಚಿನದ್ದಾಗಿ ಕೇಳಲ್ಪಡುತ್ತದೆ. ಈ ಪ್ರಶ್ನೆಗೆ ಕಂಪನಿ ಅಥವಾ ಸಂಸ್ಥೆಯ ಅಭಿವೃದ್ಧಿ ಗೆ ಪೂರಕವಾಗುವ ರೀತಿಯಲ್ಲಿ ಉತ್ತರವನ್ನು ನೀಡುವುದರಿಂದ ಸಂದರ್ಶನ ಉತ್ತಮ ರೀತಿಯಲ್ಲಿ ಮೂಡಿಬರುತ್ತದೆ.

Common Questions in Interview
Common Questions in Interview

ಪ್ರಶ್ನೆಗೆ ಉತ್ತರಿಸುವ ಸರಿಯಾದ ಕ್ರಮ ದ ಬಗ್ಗೆ ಸಲಹೆಗಳು.(Tips on the Correct Way to Answer Questions)

  • ಸಂದರ್ಶಕರು ಕೇಳಿರುವ ಪ್ರಶ್ನೆಗಳಿಗೆ ನೀವು ರಚನಾತ್ಮಕವಾಗಿ (structured )ಉತ್ತರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.
  • ಪ್ರಶ್ನೆಗಳಿಗೆ ಉತ್ತರಸುವಾಗ ಸ್ಪಷ್ಟತೆ ಮತ್ತು ಸಂಕ್ಷಿಪ್ತತೆ ಹೊಂದಿರುವುದು ಅತ್ಯಗತ್ಯ.
  • ಕೆಲವು ಬಾರಿ ಉತ್ತರವು ಹೆಚ್ಚು ವಾಸ್ತವಿಕವಾಗಿ ತೊರ್ಪಡಿಸಲು ಉದಾಹರಣೆಗಳ ಬಳಕೆ ಮಾಡಿ ಸಂದರ್ಶಕರಿಗೆ ಮನವರಿಕೆ ಮಾಡಿ.
  • ನಿಮ್ಮಈಗಿನ ಉತ್ತರಗಳು ನಂತರದ ಪ್ರಶ್ನೆಗಳಿಗೆ ದಾರಿ ಮಾಡಿಕೊಡುವ ಹಾಗೆ ಉತ್ತರಿಸುವುದು (ಇದರಿಂದ ನಿಮಗೆ ತಿಳಿದಿರುವ ವಿಷಯವನ್ನು ನೀವೇ ಸಂದರ್ಶಕರಿಗೆ ಪ್ರಶ್ನೆಗಳ ಮೂಲಕ ಕೇಳುವ ಹಾಗೆ ಮಾಡಬಹುದು, ಇದು ಸಂದರ್ಶನದ ಹಾದಿಯನ್ನು ನೀವೇ ಮಾಡಿಕೊಂಡು ಮುಂದುವರೆಯುವಂತೆ ಮಾಡುತ್ತದೆ.)

ಸಂದರ್ಶನದಲ್ಲಿ ಆಗುವ ಸಾಮಾನ್ಯ ತಪ್ಪುಗಳು (Common Mistakes in interview)

ಎಷ್ಟೇ ಎಚ್ಚರಿಕೆಯೊಂದಿಗೆ ಸಂದರ್ಶನಕ್ಕೆ ತಯಾರಿ ನಡೆಸಿದರು ಕೆಲವಂದು ತಪ್ಪುಗಳು ಆಗುವುದು ಸರ್ವೇ ಸಾಮಾನ್ಯ. ಅದುವೇ ಮಾನವನ ಹುಟ್ಟು ಗುಣವೆಂದರೂ ಸರಿಯೇ… ಆದರೂ ಸಹ ಈ ಕೆಳಗಿನ ತಪ್ಪುಗಳು ಸಂದರ್ಶನದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ.ಅದನ್ನು ಸರಿಪಡಿಸಿಕೊಂಡು ಆತ್ಮವಿಶ್ವಾಸದಿಂದ ಸಂದರ್ಶನವನ್ನು ನೀಡಿದಲ್ಲಿ ಪರಿಣಾಮಕಾರಿ ಸಂದರ್ಶನವಾಗುತ್ತದೆ. ಸಂದರ್ಶನದ ಮೇಲೆ ನೇರ ನಕಾರಾತ್ಮಕ ಪರಿಣಾಮ ಬೀರುವ ಅಂಶಗಳೆಂದರೆ :-

  • ಅತಿಯಾದ ಆತ್ಮವಿಶ್ವಾಸ ಹೊಂದಿರುವುದು.
  • ಸಂದರ್ಶನದಲ್ಲಿ ಉತ್ತರಿಸುವಾಗ ಅಸ್ಪಷ್ಟವಾದ ಉತ್ತರ ಅಥವಾ ಅರ್ಧ-ಮರ್ಧ ಉತ್ತರಿಸುವುದು
  • ಕಂಪನಿ ಅಥವಾ ಸಂಸ್ಥೆಯ ಬಗ್ಗೆ ಅಪೂರ್ಣ ಅಥವಾ ತಪ್ಪು ಮಾಹಿತಿಯನ್ನು ಹೊಂದಿರುವ ಬಗ್ಗೆ ತಪ್ಪು ಮಾಹಿತಿಯನ್ನು ಸಂದರ್ಶನದಲ್ಲಿ ನೀಡುವುದು.
  • ಗೊತ್ತಿಲ್ಲದ ಮಾಹಿತಿಯನ್ನು, ತಪ್ಪು ಮಾಹಿತಯೊಂದಿಗೆ ಉತ್ತರಿಸುವುದು.
  • ಬಾಡಿ ಲ್ಯಾಂಗ್ವೇಜ್ ಕೂಡ ಈ ಸಮಯದಲ್ಲಿ ನಕಾರಾತ್ಮಕವಾಗಿ ತೋರುತ್ತದೆ.
Interview
Interview

ಕೊನೆಯದಾಗಿ (Conclusion )

ಸಂದರ್ಶನದಲ್ಲಿನ ಸಾಮಾನ್ಯ ಪ್ರಶ್ನೆಗಳ ಅಧ್ಯಯನದಿಂದ ಅರ್ಧ ಸಂದರ್ಶನವನ್ನು ಗೆದ್ದಂತೆಯೇ, ಇದರಿಂದ ಸಂದರ್ಶನವನ್ನು ಎದುರಿಸಲು ಆತ್ಮ ವಿಶ್ವಾಸವೂ ವೃದ್ಧಿಯಾಗುತ್ತದೆ ಮತ್ತು ಮತ್ತಿತರ ಪ್ರಶ್ನೆಗಳಿಗು ಉತ್ತರಿಸಲು ಸಹಕರಿಯಾಗುತ್ತದೆ.

ಸಂದರ್ಶನವನ್ನು ಪರಿಣಾಮಕಾರಿಯಾಗಿ ನೀಡಲು ಪೂರ್ವ ತಯಾರಿ ಅತ್ಯಗತ್ಯ ಆದ್ದರಿಂದ ಅಣುಕು ಸಂದರ್ಶನವನ್ನು ನೀಡುವುದರಿಂದ ಈ ಮೇಲೆ ಹೇಳಿರುವ ಹಾಗೆ ಪ್ರಶ್ನೆಗಳಿಗೆ ಉತ್ತರಿಸುವ ಸರಿಯಾದ ಕ್ರಮ, ಸಾಮಾನ್ಯ ತಪ್ಪುಗಳ ಬಗ್ಗೆ ಅರಿವು ಮತ್ತು ನಮ್ಮ ನಡುವಳಿಕೆ ಮೇಲೆ ಗಮನ ಹರಿಸಲು ಸಹಾಯ ಮಾಡುತ್ತದೆ.

ಅಣುಕು ಪರೀಕ್ಷೆ ಅಥವಾ ಸಂದರ್ಶನ ಪ್ರತಿ ತಯಾರಿಯಲ್ಲಿಯೂ ಉತ್ತಮ ಅಂಶಗಳನ್ನು ತಿಳಿದುಕೊಂಡು ಮುಖ್ಯ ಹಂತದಲ್ಲಿ ಉತ್ತಮ ಸಂದರ್ಶನ ನೀಡಲು ಅನುವು ಮಾಡಿಕೊಡುತ್ತದೆ.



ಸಂದರ್ಶನಕ್ಕೆ ಹೇಗೆ ತಯಾರಿ ಆರಂಭಿಸಬೇಕು?(How should I start preparing for an interview?)

ಸಂದರ್ಶನಕ್ಕೆ ತಯಾರಿ ಆರಂಭಿಸಲು ಮೊದಲು ಕಂಪನಿಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಬೇಕು. ನಂತರ ನಿಮ್ಮ ರೆಸ್ಯೂಮ್‌ಯನ್ನು ಕಂಪನಿಯ ಅಥವಾ ಸಂಸ್ಥೆಯ ಬೇಡಿಕೆಗಳಿಗೆ ತಕ್ಕಂತೆ ತಯಾರಿಸಬೇಕು. ರೆಸ್ಯೂಮ್‌ಯ ಎಲ್ಲಾ ಅಂಶಗಳನ್ನು ತಿಳಿದುಕೊಂಡಿರಬೇಕು. ಸಾಮಾನ್ಯ ಹಾಗೂ ತಾಂತ್ರಿಕ ಪ್ರಶ್ನೆಗಳ ಅಭ್ಯಾಸ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಉತ್ತಮ ರೆಸ್ಯೂಮ್‌ನಲ್ಲಿ ಯಾವೆಲ್ಲಾ ಅಂಶಗಳು ಇರಬೇಕು?(What are the key elements of a good resume?)

ಒಂದು ಉತ್ತಮ ರೆಸ್ಯೂಮ್‌ನಲ್ಲಿ ನಿಮ್ಮ ಶಿಕ್ಷಣ, ಕೆಲಸದ ಅನುಭವ, ಕೌಶಲ್ಯಗಳು ಮತ್ತು ಸಾಧನೆಗಳನ್ನು ಸ್ಪಷ್ಟವಾಗಿ ಉಲ್ಲೇಖಸಬೇಕು. ಅನಾವಶ್ಯಕ ಮಾಹಿತಿಯನ್ನು ಬಳಸದೆ ಸರಳ ಮತ್ತು ವೃತ್ತಿಪರ ವಿನ್ಯಾಸವನ್ನು ಬಳಸುವುದು ಉತ್ತಮ.

ಸಂದರ್ಶನದಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದು ಹೇಗೆ?(How can improve confidence during an interview?)

ಸಂದರ್ಶನಕ್ಕೆ ಹೋಗುವ ಮೊದಲು ಅಣಕು ಸಂದರ್ಶನ (mock interview) ನೀಡುವುದರಿಂದ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಸ್ಪಷ್ಟವಾಗಿ ಮಾತನಾಡುವುದು, ಶಾಂತವಾಗಿರುವುದು ಮತ್ತು ಕಣ್ಣಿನ ಸಂಪರ್ಕದೊಂದಿಗೆ ಉತ್ತರಿಸುವುದು ವಿಶ್ವಾಸ ಹೆಚ್ಚಿಸುತ್ತದೆ.

ಸಂದರ್ಶನದಲ್ಲಿ ಅಣುಕು ಸಂದರ್ಶನ ಹೇಗೆ ಸಹಕಾರಿ? (How is a mock interview helpful in an interview? )

ಸಂದರ್ಶನದ ಅನುಭವ ಮತ್ತು ಅರಿವು ಪಡೆಯಲು ಅಣುಕು ಸಂದರ್ಶನವನ್ನು ಪಡೆಯುವುದು ಮುಖ್ಯ. ಇದರಿಂದ ನಂತರದಲ್ಲಿ ಸಂದರ್ಶನವನ್ನು ಎದುರಿಸಲು ಸಹಾಯವಾಗುತ್ತದೆ.

About Content Writer
Jayanth

Jayanth

'NAMMA CAREER’ ಬ್ಲಾಗಿಂಗ್ ವೆಬ್ಸೈಟ್ ನ Founder ಮತ್ತು Writer ಆದ ನಾನು, ಕಳೆದ 6 ವರ್ಷಗಳಿಂದ Content Writer ಆಗಿ ಕೆಲಸದ ಅನುಭವ ಹೊಂದಿದ್ದೇನೆ. ಈ ಬ್ಲಾಗ್ ವೆಬ್ಸೈಟ್‌ನಲ್ಲಿ ಶಿಕ್ಷಣ, ಉದ್ಯೋಗ, ಸರ್ಕಾರಿ ಯೋಜನೆಗಳು ಹಾಗೂ ಸಾರ್ವಜನಿಕರಿಗೆ ಉಪಯುಕ್ತವಾಗುವ ಮಾಹಿತಿಗಳನ್ನು ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಬರೆದು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಓದುಗರಿಗೆ ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ನೀಡುವುದೇ ನನ್ನ ಮುಖ್ಯ ಉದ್ದೇಶವಾಗಿದೆ.

About Us →
WhatsApp Group Join Now
Telegram Group Join Now

Leave a Comment