Table of Contents
IB SA (Intelligence Bureau Security Assistant) Tier 3 Interview ಹಂತವು ನಿಮ್ಮ ಆಯ್ಕೆಯಲ್ಲಿ ಅತ್ಯಂತ ಮುಖ್ಯವಾದ ಹಂತವಾಗಿದೆ. ಈ ಹಂತದಲ್ಲಿ ನಿಮ್ಮ ಜ್ಞಾನವನ್ನು ಮಾತ್ರವಲ್ಲ, ನಿಮ್ಮ ವ್ಯಕ್ತಿತ್ವ, ಆತ್ಮವಿಶ್ವಾಸ ಮತ್ತು ಮಾತನಾಡುವ ಶೈಲಿ ಕೂಡ ಪರೀಕ್ಷಿಸಲಾಗುತ್ತದೆ. ಈ ಲೇಖನದಲ್ಲಿ ನಾವು IB SA Tier 3 Interview ಬಗ್ಗೆ ಕೆಲವು ಸಲಹೆಗಳನ್ನು ತಿಳಿಯೋಣ ಹಾಗೂ ಪ್ರಮುಖ ಪ್ರಶ್ನೆಗಳು, ತಯಾರಿ ಮತ್ತು ಉದ್ಯೋಗ ಗಳಿಸಲು ಬೇಕಾದ ಪ್ರಾಕ್ಟಿಕಲ್ ಜ್ಞಾನವನ್ನು ಅರಿಯೋಣ.
IB SA Tier 3 Interview
IB SA Tier 3 Interview ಎನ್ನುವುದು ಒಂದು ಪರೀಕ್ಷೆಯ ಹಂತವಾಗಿದೆ ಇಲ್ಲಿ ಸಂದರ್ಶನ ಎನ್ನುವುದಕ್ಕೂ ಬದಲಾಗಿ personality test ಅಥವಾ ವ್ಯಕ್ತಿತ್ವ ಪರೀಕ್ಷೆ ಆಗಿದೆ, ಅಭ್ಯರ್ಥಿ ಗಳ ಬಗ್ಗೆ ಮತ್ತು ಅವರ ಭಾಷೆ, ತಿಳುವಳಿಕೆ, ನಿರ್ಧಾರ ಮತ್ತು ನಾಯಕತ್ವ ಗುಣಗಳನ್ನು ಪರೀಕ್ಷಿಸುವ ಒಂದು ಹಂತವಾಗಿದೆ.
ಇಲ್ಲಿ ಮುಖ್ಯವಾಗಿ ಈ ಕೆಳಗಿನ ಅಂಶಗಳನ್ನು ಪರೀಕ್ಷಿಸುತ್ತಾರೆ.
- ಸಂವಹನ ಕೌಶಲ್ಯ
- ಸಾಮಾನ್ಯ ಅರಿವು
- ನಡವಳಿಕೆ ಮತ್ತು
Ib sa Interview ಸಾಮಾನ್ಯವಾಗಿ ಪ್ರಾದೇಶಿಕ ಕಚೇರಿಯಲ್ಲಿ ನಡೆಯುತ್ತದೆ ಮತ್ತು interview panel ನಲ್ಲಿ 4–6 ಅಧಿಕಾರಿಗಳು ಇರಬಹುದು.
IB SA Tier 3 ಸಂದರ್ಶನಕ್ಕೆ ತಯಾರಿ ನಡೆಸುವುದು.
- ನಿಮ್ಮಲ್ಲಿನ Basic Knowledge ಬಲಪಡಿಸಿಕೊಳ್ಳಿ.
ಸಾಮಾನ್ಯವಾಗಿ ಎಲ್ಲಾ Interview ನಲ್ಲಿ ಹೆಚ್ಚು ಕೇಳುವ ಪ್ರಶ್ನೆಗಳು:
- ನಿಮ್ಮ ಬಗ್ಗೆ (Self Introduction)
- ನಿಮ್ಮ education ಬ್ಯಾಕ್ಗ್ರೌಂಡ್ನಿ
- ಮ್ಮ district / state ಬಗ್ಗೆ
- ನಿಮ್ಮ ಸುತ್ತಮುತ್ತಲಿನ ಪ್ರೇಕ್ಷಣಿಯ ಸ್ಥಳದ ಬಗ್ಗೆ
- ನಿಮ್ಮ ಊರಿನ ಅಥವಾ ಜಿಲ್ಲೆಯ ಮುಖ್ಯ ವಿಷಯ ಅಥವಾ ಪ್ರಸಿದ್ಧಿ ಪಡೆದ ಅಂಶಗಳ ಬಗ್ಗೆ.
ಉದಾಹರಣೆ(Examples) :-
“Tell me about Yourself” ಅಥವಾ “ನಿಮ್ಮ ಬಗ್ಗೆ ಹೇಳಿ “
“why do you want to join IB?” ಅಥವಾ “ನೀವು ಯಾಕೆ IB ಸೇರಲು ಬಯಸುತ್ತಿರಿ?”
Tip: ನಿಮ್ಮ ಬಗ್ಗೆ 2-3 ನಿಮಿಷ ಸರಳವಾಗಿ ಮಾತನಾಡುವುದನ್ನು ಪ್ರಾಕ್ಟೀಸ್ ಮಾಡಿ.
- Current Affairs ಅಥವಾ ಪ್ರಚಲಿತ ಘಟನೆಗಳ ಮೇಲೆ ಹಿಡಿತ ಇರಲಿ
IB SA Interview ನಲ್ಲಿ “ಪ್ರಚಲಿತ ಘಟನೆಗಳ” ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯ.ಈ ಕೆಳಗೆ ನೀಡಿರುವ ವಿಷಯದ ಮೇಲೆ ಹೆಚ್ಚಾಗಿ ತಿಳಿದುಕೊಳ್ಳಿ.
- ಭಾರತ ಮತ್ತು ಕರ್ನಾಟಕ ಕ್ಕೆ ಸಂಬಂಧಿಸಿದ ವಿಷಯಗಳು
- ಆಂತರಿಕ ಭದ್ರತೆಯ ಬಗ್ಗೆ ತಿಳುವಳಿಕೆ.
- ಸರ್ಕಾರಿ ಯೋಜನೆಗಳು
- ಅಂತಾರಾಷ್ಟ್ರೀಯ ಮಟ್ಟದ ಭದ್ರತೆ ಬಗ್ಗೆ
ದಿನಾಲೂ 15–20 ನಿಮಿಷಗಳ ಕಾಲ ದಿನಪತ್ರಿಕೆ ಅಥವಾ ಮ್ಯಾಗಜಿನ್ ಓದಿ.

- ನಿಮ್ಮ ಊರು ಮತ್ತು ಜಿಲ್ಲೆಯ ಬಗ್ಗೆ ತಿಳಿದುಕೊಳ್ಳಿ.
ಹೌದು, ಸಂದರ್ಶನ ದಲ್ಲಿ ಅಭ್ಯರ್ಥಿಯು ತನ್ನ ಸುತ್ತಮುತ್ತಲಿನ ವಿಚಾರಗಳ ಬಗ್ಗೆ ಎಷ್ಟು ಅರಿವು ಅಥವಾ ಆಸಕ್ತಿ ಹೊಂದಿದ್ದಾನೆ ಎನ್ನುವುದನ್ನು ತಿಳಿಯಲು ಈ ತರನಾದ ಪ್ರಶ್ನೆಗಳನ್ನು ಕೇಳುತ್ತಾರೆ.
ನಿಮ್ಮ ಊರು ಅಥವಾ ಜಿಲ್ಲೆ ಯಾವ ವಿಷಯ ಅಥವಾ ಸ್ಥಳಗಳು ಹೆಚ್ಚು ಪ್ರಸಿದ್ಧಿ ಪಡೆದಿದೆ ಎನ್ನುವುದನ್ನು ಅರಿತು ಅದರ ಬಗ್ಗೆ ತಿಳಿದುಕೊಳ್ಳಿ.ಅದರ ಇತಿಹಾಸ, ಭೌಗೋಳಿಕ, ರಾಜಕೀಯ, ಎಕನಾಮಿಕ್ಸ್ ಅಥವಾ ದೊಡ್ಡ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುವುದು ಅತಿ ಅವಶ್ಯಕ.
- ಸಂವಹನ ಕೌಶಲ್ಯ ಚೆನ್ನಾಗಿರಲಿ.
ಯಾವುದೇ ಸಂದರ್ಶನ ಆಗಿರಲಿ ಅಲ್ಲಿ ಮಾತುಗಾರಿಕೆ ಅಥವಾ ಸಂವಹನ ಅತಿ ಮುಖ್ಯ, ಯಾವ ತರನಾಗಿ ಮಾತನಾಡುತ್ತಾರೆಯೋ ಅದೇ ಆತನ ವ್ಯಕ್ತಿತ್ವ ತೋರಿಕೆಗೆ ಕನ್ನಡಿ ಇದ್ದಂತೆ. ಆದ್ದರಿಂದ ಸಂವಹನ ಕೌಶಲ್ಯ ಚೆನ್ನಾಗಿದ್ದರೆ ಸಂದರ್ಶನವು ಸಹ ಒಳ್ಳೆಯ ರೀತಿಯಲ್ಲಿ ಮೂಡಿಬರುತ್ತದೆ.
ಈ ಕೆಳಗಿನ ಅಂಶಗಳನ್ನು ತಿಳಿದುಕೊಂಡು ನಿಮ್ಮ ಸಂವಹನ ಕೌಶಲ್ಯ ವೃದ್ಧಿಸಿಕೊಳ್ಳಿ.
- ಮಾತನಾಡುವಾಗ ನಿಮ್ಮ ಸ್ವರ ಶುದ್ಧವಾಗಿರಲಿ.
- ಮಾತನಾಡುವ ಭಾಷೆ ಹೆಚ್ಚು ಕಠಿಣವಾಗಿರದೆ ಸುಲಭವಾಗಿ ಅರ್ಥವಾಗುವಂತೆ ಇರಬೇಕು.
- ಆತ್ಮವಿಶ್ವಾಸ ನಮ್ಮ ಮಾತಿನಲ್ಲಿ ತೋರುತ್ತಿರಬೇಕು.
ನಿಮ್ಮ ಸಂವಹನ ಕೌಶಲ್ಯ ವೇಗವಾಗಿ ವೃದ್ಧಿಯಗಲು ನೀವು ಕನ್ನಡಿಯ ಮುಂದೆ ನಿಂತು ನಿಮ್ಮ ಬಗ್ಗೆ ಮತ್ತುಇತರೆ ಅಂಶಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಹೇಳಬೇಕು. ಇದರಿಂದ ಸಂವಹನ ಕೌಶಲ್ಯದ ಜೊತೆಗೆ ಬಾಡಿ ಲ್ಯಾಂಗ್ವೇಜ್ ಕೂಡ ವೃದ್ಧಿಯಾಗುತ್ತದೆ.
- Body Language(ದೇಹದ ಭಾಷೆ) ಮತ್ತು ಆತ್ಮವಿಶ್ವಾಸ
ಎಲ್ಲಾ ಸಂದರ್ಶನದಲ್ಲಿ ಸಂದರ್ಶಕರು ಮುಖ್ಯವಾಗಿ ಗಮನಿಸುವುದು ನಿಮ್ಮ body language ಅಥವಾ ದೇಹದ ಭಾಷೆಯ ಬಗ್ಗೆ.ಇದರಿಂದ ಸಂದರ್ಶನ ಒಳ್ಳೆಯ ರೀತಿಯಲ್ಲಿ ನಡೆಯುತ್ತದೆ ಹಾಗೆಯೇ ಹೆಚ್ಚಿನ ಅಂಕಗಳಿಕೆಗೆ ಸಹಕರಿಯಾಗುತ್ತದೆ.
- ಕಣ್ಣಿನ ಸಂಪರ್ಕದೊಂದಿಗೆ ಮಾತನಾಡಿ.
- ಒಳ್ಳೆಯ ನಗು ಮುಖದೊಂದಿಗೆ ಸಂದರ್ಶನ ಎದುರಿಸಿ.
- ನೇರವಾಗಿ ಕುಳಿತಿಕೊಳ್ಳಿ.
ಸಮಯೋಚಿತ ಪ್ರಶ್ನೆಗಳ ಬಗ್ಗೆ ಅರಿವಿರಲಿ.
ಸಂದರ್ಶಕರು ಪ್ರಶ್ನೆಗಳನ್ನು ಕೇಳುವಾಗ ಅಭ್ಯರ್ಥಿಯು ಮಾನಸಿಕವಾಗಿ ಎಷ್ಟು ಭಲಿಷ್ಠನಾಗಿದ್ದಾನೆ ಮತ್ತು ಆತನು ಕೆಲಸದ ಒತ್ತಡವನ್ನು ಹೇಗೆ ನಿರ್ವಹಿಸಬಲ್ಲ ಎನ್ನುವ ಬಗ್ಗೆ ಪ್ರಶ್ನೆಗಳ ಮೂಲಕ ಪರೀಕ್ಷಿಸುತ್ತಾರೆ.
ಹಾಗೆಯೇ ಗುಂಪು ಕೆಲಸ (team work ) ನಲ್ಲಿ ನೀವು ಹೇಗೆ ಮತ್ತು ಏನನ್ನು ಕೆಲಸ ಮಾಡುವಿರಿ ಎನ್ನುವುದನ್ನು ಸಹ ಸಂದರ್ಶಕರು ತಿಳಿಯಲು ನಿಮ್ಮನ್ನು ಪ್ರಶ್ನಿಸುತ್ತಾರೆ.
IB SA Tier 3 interview ಗೆ ಕೆಲವು ಸಲಹೆಗಳನ್ನು
- ಪ್ರಾಮಾಣಿಕವಾಗಿ ಉತ್ತರ ನೀಡಿ. ಅನುಭವಿ ಸಂದರ್ಶಕರು ಸುಲಭವಾಗಿ ನಿಮ್ಮ ಸುಳ್ಳನ್ನು ಗುರುತಿಸುತ್ತಾರೆ. ಪ್ರಾಮಾಣಿಕತೆ ಎಲ್ಲಾದಕ್ಕು ಮಿಗಿಲು.
- ಕಠಿಣ ಪದಗಳ ಭಾಷೆ ಬಳಕೆ ಬೇಡ, ಸುಲಭವಾಗಿ ಅರ್ಥವಾಗುವ ಮತ್ತು ಸರಳ ಭಾಷೆ ಬಳಸಿ.
- ಗೊತ್ತಿಲ್ಲ ವಿಷಯ ಇದ್ದಲ್ಲಿ, ಗೊತ್ತಿಲ್ಲ, ಇದನ್ನು ತಿಳಿದುಕೊಳ್ಳುತ್ತೇನೆ. ಎಂದು ಹೇಳಿ. ಸುಮ್ಮನೆ ಗೊತ್ತಿಲ್ಲದ ವಿಷಯವನ್ನು ಸಂದರ್ಶನದಲ್ಲಿ ಹೇಳಬೇಡಿ.
- ಒಳ್ಳೆಯ ಉಡುಗೆ ತೊಟ್ಟು ಸಂದರ್ಶನ ಎದುರಿಸಿ. ಇದು ಕೂಡ ಮೊದಲ ನೋಟದಲ್ಲಿ ಒಳ್ಳೆಯ ಭಾವನೆ ಮೂಡಲು ಸಹಾಯ ಮಾಡುತ್ತದೆ.
- ಸಮಯ ನಿರ್ವಹಣೆ ಅತಿ ಮುಖ್ಯ ಸಂದರ್ಶನಕ್ಕೆ ತೆರಳುವಾಗ ಸ್ವಲ್ಪ ಮೊದಲೇ ನಿಮ್ಮ ಕೇಂದ್ರವನ್ನು ತಲುಪಿ, ಅವಸರ ಮಾಡಿಕೊಂಡಲ್ಲಿ ಮಾನಸಿಕವಾಗಿ ಸಿದ್ದವಾಗಲೂ ಸಮಯ ತೆಗೆದುಕೊಳ್ಳುತ್ತದೆ. ಸಂದರ್ಶನದಲ್ಲಿಯೂ ಪ್ರಶ್ನೆಗೆ ಉತ್ತರಿಸಲು ಅವಸರ ಬೇಡ, ಆರಾಮಾಗಿ ಉತ್ತರಿಸಿ.

ಸಂದರ್ಶನದಲ್ಲಿ ವಾತಾವರಣ ಹೇಗೆ ಇರುತ್ತದೆ?
ಬಹಳಷ್ಟು ಜನರು ಹೇಳುವಂತೆ :
- Interview ಸುಲಭವಾಗಿಯೇ ಇರುತ್ತದೆ ಆದರೆ ಸ್ವಲ್ಪ ಟ್ರಿಕ್
- ಸಾಮಾನ್ಯವಾಗಿ ಸಂದರ್ಶಕರು supportive ಆಗಿರುತ್ತಾರೆ
- ಆತ್ಮವಿಶ್ವಾಸ ಮುಖ್ಯ, ನಿಮ್ಮ ವಿಚಾರವನ್ನು ಸರಳವಾಗಿ ಸಂದರ್ಶಕರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿ.
ಸಂದರ್ಶನದಲ್ಲಿ ಈ ತಪ್ಪುಗಳನ್ನು ಮಾಡಬೇಡಿ.
ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಎಲ್ಲಾ ತಿಳಿದಿದ್ದರೂ ಕೇಳಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ. ಹೆಚ್ಚಿನ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡದಿರುವುದೇ ಒಳ್ಳೆಯದು.
body language ಉತ್ತಮವಾಗಿರಲಿ ಇಲ್ಲದಿದ್ದಲ್ಲಿ, ಸಂದರ್ಶನದಲ್ಲಿ ಉತ್ತಮ ಅಂಕಗಳಿಕೆಗೆ ತೊಂದರೆಯಾಗುತ್ತದೆ.
ಪ್ರಚಲಿತ ಘಟನೆಗಳ ಬಗ್ಗೆ ಅರಿವಿಲ್ಲದೆ ಇರುವುದು ಕೂಡ ಸಂದರ್ಶನ ಚೆನ್ನಾಗಿ ಆಗದೇ ಇರುವುದಕ್ಕೆ ಮುಖ್ಯ ಕಾರಣವಾಗುತ್ತದೆ.
ಉತ್ತರಿಸುವಾಗ ಸ್ವಷ್ಟವಾಗಿ ಉತ್ತರಿಸಿ, ನೆನಪಿಸಿ ಕೊಂಡು ಉತ್ತರಿಸುವ ಅಭ್ಯಾಸವನ್ನು ಬಿಟ್ಟುಬಿಡಿ. ಇದು ಸಂದರ್ಶನದಲ್ಲಿ ನಕಾರಾತ್ಮಕ ಪ್ರಭಾವ ಬೀರುತ್ತದೆ.
IB SA Tier 3 Interview ಗೆ ಸಿದ್ಧರಾಗಲು ಏನು ಮಾಡಬೇಕು?
ದಿನಾಲೂ ಪ್ರಚಲಿತ ಘಟನೆಗಳನ್ನು ಓದಿರಿ,ನಿಮ್ಮ ಬಗ್ಗೆ ಹೆಚ್ಚಿನ ಅಂಶಗಳನ್ನು ತಿಳಿದುಕೊಳ್ಳಿ,Mock interviews ನೀಡಿರಿ.ನಿಮ್ಮ ಜಿಲ್ಲೆ ಮತ್ತು ಹಿನ್ನಲೆ ಬಗ್ಗೆ ತಿಳಿದುಕೊಳ್ಳಿ,ಆತ್ಮವಿಶ್ವಾಸ ಮತ್ತು ಕ್ಲಾರಿಟಿ ತುಂಬಾ ಮುಖ್ಯ.
IB SA Tier 3 Interview ಎಂದರೇನು?
IB SA Tier 3 Interview ಒಂದು personality test ಆಗಿದ್ದು, ಇದರಲ್ಲಿ ನಿಮ್ಮ ಸಂವಹನ ಕೌಶಲ್ಯ,ಆತ್ಮವಿಶ್ವಾಸ, ಸಾಮಾನ್ಯ ಅರಿವು ಮತ್ತು ನಡುವಳಿಕೆ ಅನ್ನು ಪರೀಕ್ಷಿಸಲಾಗುತ್ತದೆ.
Jayanth
ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.
About Us →