ನರೇಗಾ- ಕೋಳಿ ಶೆಡ್ (Poultry Shed )ನಿರ್ಮಾಣಕ್ಕೆ 60,000 ರೂ ಸಹಾಯಧನ!

WhatsApp Group Join Now
Telegram Group Join Now

Table of Contents

ಗ್ರಾಮೀಣ ಭಾಗದ ಜನರ ಜೀವನಕ್ಕೆ ನೆರವಾಗಲೆಂದೆ ಜಾರಿಗೆ ತರಲಾಗಿರುವ ಪ್ರಮುಖ ಯೋಜನೆಗಳಲ್ಲಿ ಮಹಾತ್ಮಾ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(MGNREGA ) ಒಂದಾಗಿದೆ. ಕೇಂದ್ರ ಸರ್ಕಾರದ ಹಲವು ಜನಪರ ಯೋಜನೆಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಈ ಯೋಜನೆಯು ಗ್ರಾಮೀಣ ಮಹಿಳೆ, ಯುವಕರು ಮತ್ತು ನಿರುದ್ಯೋಗಸ್ಥರಿಗೆ ಸ್ವಾವಲಂಭನೆಯ ಜೀವನ ನಡೆಸಲು ಪೂರಕವಾಗಿದೆ.

ಅದೇ ರೀತಿಯಾಗಿ ನರೇಗಾ ಯೋಜನೆಯಿಂದ ವೈಯಕ್ತಿಕ ಕಾಮಗಾರಿಗಳ ಮೂಲಕ ಸ್ವಂತ ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶಗಳನ್ನು ನೀಡಲಾಗಿದ್ದು, ಪ್ರಸ್ತುತ ಒಂದು ಕುಟುಂಬ ತನ್ನ ಜೀವಿತಾವಧಿಗೆ 5 ಲಕ್ಷ ರೂಪಾಯಿಗಳ ಕಾಮಗಾರಿಗಳನ್ನು ಮಾಡಿಕೊಳ್ಳಬಹುದು.

ನರೇಗಾ ಯೋಜನೆಯಡಿ ಕೋಳಿ ಶೆಡ್ ( Poultry shed) ಕಾಮಗಾರಿ.

ಅಂತಹದೇ ಕಾಮಗಾರಿಗಳಲ್ಲಿ ಕೋಳಿ ಸಾಕಾಣಿಕೆಗಾಗಿ ಶೆಡ್ ನಿರ್ಮಾಣ( poultry shed ) ಮಾಡಲು ಸಹಾಯಧನವನ್ನು ನರೇಗಾ ಯೋಜನೆಗಳ ಮೂಲಕ ನೀಡಲಾಗಿದ್ದು, ಇದರ ಸದುಪಯೋಗವನ್ನು ಗ್ರಾಮೀಣ ಭಾಗದ ರೈತರು, ಮಹಿಳೆಯರು ಮತ್ತು ನಿರುದ್ಯೋಗ ಯುವಕ – ಯುವತಿಯರು ಮಾಡಿಕೊಳ್ಳಬಹುದು.

ಯೋಜನೆಯ ಮುಖ್ಯ ಉದ್ದೇಶ

  • ಗ್ರಾಮೀಣ ಭಾಗದ ಜನರ ಸ್ವಾವಲಂಬನೆ ಜೀವನ ನಡೆಸಲು
  • ಸ್ವಯಂ ಉದ್ಯೋಗ ಹೊಂದಲು
  • ಕಾಮಗಾರಿಯಿಂದ ದಿನಗೂಲಿ ರೀತಿಯಲ್ಲಿ ಆದಾಯ ಪಡೆಯಲು
  • ನಿರುದ್ಯೋಗ ಸಮಸ್ಯೆಯಿಂದ ಗ್ರಾಮೀಣ ಭಾಗದ ಜನರನ್ನು ರಕ್ಷಿಸಲು
  • ಗ್ರಾಮೀಣ ಭಾಗವನ್ನು ಅಭಿವೃದ್ಧಿ ಮಾಡಲು

ಈ ರೀತಿಯಾದ ಪ್ರಮುಖ ಉದ್ದೇಶಗಳೊಂದಿಗೆ ಈ ಯೋಜನೆಯು ರೈತಾಪಿ ಮತ್ತು ನಿರುದ್ಯೋಗಸ್ಥರಿಗೆ ಸಹಾಯಕವಾಗಿದೆ.

ಕೋಳಿ ಸಾಕಾಣಿಕೆಯಿಂದಾಗುವ ಪ್ರಯೋಜನೆಗಳು

  • ಕೋಳಿಯು ಹೆಚ್ಚಿನ ಪ್ರಮಾಣದಲ್ಲಿ ಆಹಾರವಾಗಿ ಬಳಸಲಾಗುತ್ತಿದೆ.
  • ಇಕ್ಕಯು ಗೊಬ್ಬರವಾಗಿ ತೋಟ, ಹೊಲ ಗಳಿಗೆ ಬಳಕೆಯಾಗುತ್ತದೆ.
  • ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಸ್ಥಿರ ಆದಾಯವನ್ನು ಪಡೆಯಬಹುದು.
  • ಬೇಗನೆ ಬೆಳವಣಿಗೆ ಹೊಂದಿ ಮಾರಾಟ ಮಾಡಲು ಪ್ರಾರಂಭಿಸಬಹುದು.
  • ಕೋಳಿ ಮೊಟ್ಟೆಯ ಮಾರಾಟದಿಂದಲೂ ಸಹ ಅಧಿಕ ಲಾಭಗಳಿಸ ಬಹುದು.

ಕೋಳಿ ಮೊಟ್ಟೆಯಿಂದ ಆದಾಯ

ಕೇವಲ ಕೋಳಿಯ ಮೂಲಕವಲ್ಲದೆ, ಮೊಟ್ಟೆಯ ಮೂಲಕವೂ ಸಹ ಹೆಚ್ಚಿಗಿನ ಆದಾಯವನ್ನು ಗಳಿಸಬಹುದು. ಮೊಟ್ಟೆ ಕೋಳಿಯನ್ನೇ ಸಾಕುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆಯನ್ನು ಗಳಿಸಿ ಮಾರಾಟ ಮಾಡಬಹುದಾಗಿದೆ.

ಮಾರುಕಟ್ಟೆಯ ಅವಕಾಶಗಳಾವುವು?

  • ಸ್ಥಳೀಯ ಅಂಗಡಿಗಳಿಗೆ ಅಥವಾ ಹೋಟೆಲ್ಗಳಿಗೆ ಮಾರಾಟ ಮಾಡುವುದು.
  • ಸ್ಥಳೀಯ ಸಂತೆಗಳಲ್ಲಿ ಮಾರಾಟ.
  • ಮದುವೆ ಮತ್ತು ಇತರೆ ಸಮಾರಂಭ ಅವಧಿಯಲ್ಲಿ ಮಾರಾಟವಾಗುತ್ತದೆ.
  • ಸೋಶಿಯಲ್ ಮೀಡಿಯಾ ಮೂಲಕ ಮಾರುಕಟ್ಟೆಯನ್ನು ವೃದ್ಧಿಸಿಕೊಳ್ಳಬಹುದು.

ನರೇಗಾ ಯೋಜನೆಯಿಂದ poultry shed ಕಾಮಗಾರಿಗೆ ಸಿಗುವ ಸಹಾಯಧನ

ಪ್ರಸ್ತುತ ದಿನಗಳಲ್ಲಿ ನರೇಗಾ ಯೋಜನೆಯ ಅಡಿಯಲ್ಲಿ ಕೋಳಿ ಶೆಡ್ ನಿರ್ಮಾಣಕ್ಕೆ  60,000 ರೂಪಾಯಿಗಳ ಸಹಾಯಧನವನ್ನು ನೀಡಲಾಗುತ್ತಿದ್ದೂ ಇದರಲ್ಲಿ ಸಾಮಗ್ರಿಗಳು ಮತ್ತು ಕಾಮಗಾರಿ ವೆಚ್ಚಗಳು ಒಳಗೊಂಡಿರುತ್ತದೆ.

Poultry shed

ನಿರ್ಮಾಣದಲ್ಲಿ ಈ ಕೆಳಗಿನ ಹಂತವನ್ನು ಪಾಲಿಸಿ.

  • ಒಳ್ಳೆಯ ಗಾಳಿ ಮತ್ತು ಬೆಳಕು ಇರುವ ಜಾಗವನ್ನು ಆಯ್ಕೆ ಮಾಡುವುದು.
  • ನೆಲ ಸಮತಟ್ಟಾಗಿಸಿ ಅಡಿಪಾಯ ಮತ್ತು ಗೋಡೆಗಳ ನಿರ್ಮಾಣ
  • ರಕ್ಷಣೆಗಾಗಿ ತಂತಿ ಜಾಲ ವನ್ನು ಬಳಕೆಮಾಡುವುದು
  • ಶುದ್ಧವಾದ ನೀರಿನ ಆಕರವನ್ನು ಹೊಂದಿರುವುದು ಮತ್ತು ಬಳಕೆ ಮಾಡಿಕೊಳ್ಳುವುದು.

ಸೂಚನೆ :- ಇದೆ ತರಹದ ಹೆಚ್ಚಿನ ಮಾಹಿತಿಯನ್ನು ಪಡೆಯಲು ಈಗಲೇ ನಮ್ಮ ಟೆಲಿಗ್ರಾಂ ಚಾನೆಲ್ ಅನ್ನು ಅನುಸರಿಸಿ.

ಸಹಾಯಧನ ಪಡೆಯಲು ಯಾರು ಅರ್ಹರು?

  • ರೇಷನ್ ಕಾರ್ಡ್  ಹೊಂದಿರಬೇಕು.
  • ಜಾಬ್ ಕಾರ್ಡ್  ಹೊಂದಿರಬೇಕು
  • ಶೆಡ್ ನಿರ್ಮಾಣ ಮಾಡಲು ಸೂಕ್ತವಾದ ಜಾಗದ ವ್ಯವಸ್ಥೆಯನ್ನು ಹೊಂದಿರಬೇಕು.
  • Sc ST OBC ಮತ್ತು ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಹಾಗೂ ರೈತರಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು.

ಅವಶ್ಯಕವಾಗಿ ಬೇಕಾಗುವ ದಾಖಲೆಗಳು

ಅರ್ಜಿ ಸಲ್ಲಿಸಲು ಮುಖ್ಯವಾಗಿ ಈ ಕೆಳಗಿನ ದಾಖಲೆಗಳನ್ನು ಹೊಂದಿದ್ದು, ಅರ್ಜಿ ಸಲ್ಲಿಸುವಾಗ ಲಗತ್ತಿಸಿ ಕಚೇರಿಗೆ ನೀಡಬೇಕು.

  • ಜಾಬ್ ಕಾರ್ಡ್
  • ರೇಷನ್ ಕಾರ್ಡ್
  • ಆಧಾರ್ ಕಾರ್ಡ್
  • RTC ಪ್ರತಿ
  • ಭಾವಚಿತ್ರ
  • ಮೊಬೈಲ್ ನಂಬರ್
  • ಪಶುವೈದ್ಯರಿಂದ ಪಡೆದ ದೃಡೀಕರಣ ಪತ್ರ

ಕೋಳಿ ಶೆಡ್ ನಿರ್ಮಾಣ ಮಾಡಲು ಬಯಸುವ ನೀವು ಮೊದಲು ಪಶು ವೈದ್ಯಧಿಕಾರಿಗಳಿಂದ ದೃಡೀಕರಣ ಪತ್ರವನ್ನು ಪಡೆದು ಕೊಳ್ಳುವುದು ಅತಿ ಅವಶ್ಯಕ.

Poultry shed ನಿರ್ಮಾಣಕ್ಕೆ ಅರ್ಜಿ ಸಲ್ಲಿಸುವ ವಿಧಾನ.

ಈ ಮೇಲೆ ತಿಳಿಸಿರುವ ಎಲ್ಲಾ ದಾಖಲೆಗಳನ್ನು ತಗೆದುಕೊಂಡು ನಿಮ್ಮ ಗ್ರಾಮ ಪಂಚಾಯತಿಯನ್ನು ಭೇಟಿ ಮಾಡಿ.

ಅಧಿಕಾರಿಗಳಲ್ಲಿ ನರೇಗಾ ಯೋಜನೆಯಡಿಯಲ್ಲಿ ಕೋಳಿ ಶೆಡ್ ನಿರ್ಮಾಣ ಮಾಡಲು ಅರ್ಜಿ ಸಲ್ಲಿಸುವ ಮಾಹಿತಿಯನ್ನು ಕೇಳಿ ಪಡೆಯಿರಿ.

ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ(PDO) ನೀವು ನರೇಗಾ ಯೋಜನೆಯ ವೈಯಕ್ತಿಕ ಕಾಮಗಾರಿಯಡಿ ಕೋಳಿ ಶೆಡ್ ನಿರ್ಮಾಣ ಮಾಡಿಕೊಳ್ಳಲು ಆಸಕ್ತಿ ಹೊಂದಿರುವುದಾಗಿ ಅರ್ಜಿ ಯನ್ನು ಸಲ್ಲಿಸಿ.

ಎಲ್ಲಾ ಪೂರಕ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಿ.

ನಿಮ್ಮ ಕಾಮಗಾರಿಯ ಅನುಮೋದನೆ ಮತ್ತು ಸ್ಥಳ ಪರಿಶೀಲನೆ ಮಾಡುತ್ತಾರೆ.

ನಂತರ ಶೆಡ್ ನಿರ್ಮಾಣ ಕಾರ್ಯ ಪ್ರಾರಂಭಿಸಿ, ಹಂತ ಹಂತವಾಗಿ ಸಹಾಯಧನವನ್ನು ನೇರವಾಗಿ ಖಾತೆಗೆ ಜಮೆ ಮಾಡಲಾಗುತ್ತದೆ.


ನರೇಗಾ ಕೋಳಿ ಶೆಡ್‌ಗೆ ಎಷ್ಟು ಸಹಾಯಧನ ಸಿಗುತ್ತದೆ?(How much subsidy is provided for Poultry Shed under MGNREGA?)

ಪ್ರಸ್ತುತ ನರೇಗಾ ಯೋಜನೆಯಡಿಯಲ್ಲಿ ಕೋಳಿ ಶೆಡ್ ನಿರ್ಮಾಣಕ್ಕೆ 60,000 ರೂ ಗಳನ್ನು ನೀಡಲಾಗುತ್ತಿದೆ. ಇದು ಸಾಮಗ್ರಿ ಮತ್ತು ಕಾಮಗಾರಿ ವೆಚ್ಚಗಳನ್ನು ಒಳಗೊಂಡಿದೆ.

ನರೇಗಾ ಕೋಳಿ ಶೆಡ್ ಯೋಜನೆಗೆ ಯಾರು ಅರ್ಹರು?(Who is eligible for Poultry Shed scheme under MGNREGA?)

ಮಾನ್ಯವಾದ ರೇಷನ್ ಕಾರ್ಡ್ ಮತ್ತು ಜಾಬ್ ಕಾರ್ಡ್ ಹೊಂದಿರುವ ಶೆಡ್ ನಿರ್ಮಾಣಕ್ಕೆ ಜಮೀನು ಹೊಂದಿರುವ ರೈತರು, ಮಹಿಳೆಯರು ಮತ್ತು ಯುವಕ ಯುವತಿಯರು ಗಳು ಅರ್ಹರಿರುತ್ತಾರೆ.

ನರೇಗಾ ಕೋಳಿ ಶೆಡ್‌ಗೆ ಅರ್ಜಿ ಹೇಗೆ ಸಲ್ಲಿಸಬೇಕು?(How to apply for Poultry Shed under MGNREGA?)

ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿದರೆ ಆಯ್ತು.

ಸಹಾಯಧನ ಎಷ್ಟು ದಿನಗಳಲ್ಲಿ ದೊರೆಯುತ್ತದೆ?(How long does it take to receive the subsidy amount?)

ಅರ್ಜಿ ಅನುಮೋದನೆಯಾದ ನಂತರದಲ್ಲಿ ನಿರ್ಮಾಣ ಕಾರ್ಯ ಪ್ರಾರಂಭಿಸಿದ ಮೇಲೆ ಹಂತ ಹಂತವಾಗಿ ಸಹಾಯಧನ ಖಾತೆಗೆ ಜಮೆ ಮಾಡಲಾಗುತ್ತದೆ.

About Content Writer
Jayanth

Jayanth

ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.

About Us →
WhatsApp Group Join Now
Telegram Group Join Now

Leave a Comment