Table of Contents
ಭಾರತ ಸರ್ಕಾರದ ಗುಪ್ತಚಾರ ಇಲಾಖೆ(intelligence bureau) ದಲ್ಲಿನ ಸೆಕ್ಯೂರಿಟಿ ಅಸಿಸ್ಟೆಂಟ್ (IB SA) ಹುದ್ದೆಗೆ ಸೆಪ್ಟೆಂಬರ್ 29 & 30 ರಂದು ಹಂತ 01( Tier -1 ) ಪರೀಕ್ಷೆಯನ್ನು ದೇಶದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಪರೀಕ್ಷೆ ನಡೆದು ಸುಮಾರು 4 ತಿಂಗಳುಗಳು ಪೂರ್ಣಗೊಂಡಿದ್ದು Tier-2 ಪರೀಕ್ಷೆಗಾಗಿ ಅಭ್ಯರ್ಥಿಗಳು ಕಾಯುತ್ತಿದ್ದರು. ಈಗ ಇಲಾಖೆಯಿಂದಲೇ Tier 2 ಪರೀಕ್ಷೆಗೆ ಆಯ್ಕೆಗೊಂಡ ಅಭ್ಯರ್ಥಿಗಳ ಹೆಸರನ್ನು ಮತ್ತು tier 2 ಪರೀಕ್ಷೆ ನಡೆಸುವ ಅಧಿಕೃತ ದಿನಾಂಕದೊಂದಿಗೆ ಪ್ರವೇಶ ಪತ್ರವನ್ನು (Admit Card ) ಬಿಡುಗಡೆ ಮಾಡಿದ್ದಾರೆ.
IB SA Tier 2 ಪರೀಕ್ಷಾ ದಿನಾಂಕ 2026
ದೇಶದ ಭದ್ರತೆಯ ಜವಾಬ್ದಾರಿ ಹೊತ್ತ ಗುಪ್ತಚಾರ ಇಲಾಖೆಯಲ್ಲಿನ ಸೆಕ್ಯೂರಿಟಿ ಅಸಿಸ್ಟೆಂಟ್ ಹುದ್ದೆಗೆ Tier 2 ಪರೀಕ್ಷೆ ನಡೆಸಲು ಸಂಸ್ಥೆಯ ವತಿಯಿಂದ ಅಧಿಕೃತವಾಗಿ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದ್ದಾರೆ. ಇದೆ ತಿಂಗಳ ಅಂದರೆ ಫೆಬ್ರವರಿ ದಿನಾಂಕ 22 ರಂದು ಪರೀಕ್ಷೆಯನ್ನು ನಡೆಸಲು ಉದ್ದೇಶಿಸಲಾಗಿದೆ. ತನ್ನ ಅಧಿಕೃತ ಜಾಲತಾಣದಲ್ಲಿ (ವೆಬ್ಸೈಟ್ ) ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗಿದೆ.ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಈ ಕೆಳಗೆ ನೀಡಿರುವ ಹಾಗೆ ನಿಮ್ಮ Admit card ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
IB SA Admit Card ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?
- Ministry of Home affairs ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, Tier 2 admit card link ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ಕೇಳುವ ನಿಮ್ಮ User Id ಮತ್ತು ಪಾಸ್ವರ್ಡ್ ನಮೂದಿಸಿ ನಂತರ ಕ್ಯಾಪ್ಚ್ ಕೋಡ್ ನಮೂದಿಸಿ ಲಾಗಿನ್ ಮೇಲೆ ಕ್ಲಿಕ್ ಮಾಡಿ.
- ಲಾಗಿನ್ ಆದ ತಕ್ಷಣ Admit card ಸೆಕ್ಷನ್ ನಲ್ಲಿ admit card ತೋರುತ್ತದೆ ಅದನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿ.

IB SA ಗೆ ಆಯ್ಕೆ ಪ್ರಕ್ರಿಯೆ ಹೇಗೆ?
ಈ ಹುದ್ದೆಗೆ ಮೊದಲು CBT ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದನ್ನೇ Tier 1 ಎಂದು ಕರೆಯಲಾಗುತ್ತದೆ. ಈ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ಮತ್ತು ಮೀಸಲಾತಿಗಳ ಮೇಲೆ Tier 2 ಪರೀಕ್ಷೆಗೆ 1:5 ಅನುಪಾತದಲ್ಲಿ (1 ಹುದ್ದೆಗೆ 5 ಜನರಂತೆ) ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೊಂಡು ಪರೀಕ್ಷೆ ನಡೆಸುತ್ತಾರೆ. ಈ ಪರೀಕ್ಷೆ (Tier 2 ) ಅಂಕಗಳು ಕೇವಲ ಅರ್ಹತೆ ಹೊಂದಿರುವವುದನ್ನು ಪರೀಕ್ಷಿಸಲು ಮಾತ್ರ (Qualifying Only).
Tier 2 ಪರೀಕ್ಷೆಯ ನಂತರದ ಹಂತಗಳು
ಈ ಹಂತ ಪೂರ್ಣಗೊಂಡ ನಂತರ Tier 1 ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಿ 1:1 ಅನುಪಾತದಲ್ಲಿ Interview ಗೆ ಕರೆಯುತ್ತಾರೆ.ತದ ನಂತರ ದಾಖಲಾತಿ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ.
ಪರೀಕ್ಷೆ ಮಾದರಿ
Tier 2 ಲಿಖಿತ ರೂಪದ ಪರೀಕ್ಷೆಯಾಗಿದ್ದು, 50 ಅಂಕಗಳಿಗೆ ನಡೆಸಲಾಗುತ್ತದೆ. ಇಲ್ಲಿ ಪ್ರತಿ ಭಾಗದಿಂದ 500 ಪದಗಳ ಭಾಷಾಂತರ ಮಾಡಬೇಕಿದ್ದು,ಒಂದು ಗಂಟೆಯ ಸಮಯವಕಾಶದಲ್ಲಿ ಸ್ಥಳೀಯ ಭಾಷೆಯಿಂದ ಇಂಗ್ಲಿಷ್ ಗೆ ಹಾಗೂ ಇಂಗ್ಲಿಷ್ ಭಾಷೆಯಿಂದ ಸ್ಥಳೀಯ ಭಾಷೆಗೆ ಭಾಷಾಂತರ ಮಾಡಬೇಕಿರುತ್ತದೆ. ಇದಕ್ಕೆ 50 ಅಂಕಗಳು ನಿಗದಿ ಮಾಡಲಾಗಿದೆ.
Tier 2 ಪ್ರರೀಕ್ಷಾ ತಯಾರಿ ಹೇಗೆ?
- ಮೊಟ್ಟ ಮೊದಲನೆಯದಾಗಿ ಪರೀಕ್ಷೆಯ ಮಾದರಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.
- ಪ್ರತಿ ದಿನ ಒಂದು ಭಾಷಾಂತರವನ್ನು ಮಾಡಿ. ಭಾಷಾಂತರಿಸುವಾಗ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಿ ಮತ್ತು ಅಭ್ಯಾಸ ಮಾಡಿ.
- ಪ್ರಚಲಿತ ಘಟನೆಗಳ ಮೇಲೆ ಸ್ವಲ್ಪ ಗಮನ ಕೊಡಿ. ಇದಕ್ಕೆ ಒಂದು ದಿನ ಪತ್ರಿಕೆಯನ್ನು ದಿನಾಲೂ ಓದಿ.
- ದಿನ ಪತ್ರಿಕೆಯಲ್ಲಿನ ಸಂಪಾದಕಿಯವನ್ನು ಭಾಷಾಂತರಿಸಲು ಪ್ರಯತ್ನಿಸಿ.
- ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಯೊಂದಿಗೆ ನಿಮ್ಮ ಅಭ್ಯಾಸ ಮಾಡಿ.
- ಒಂದೊಂದೇ ಪದಗಳನ್ನು ಭಾಷಾಂತರಿಸುವ ಬದಲು ವಾಕ್ಯ ಗಳನ್ನು ಸ್ಪಷ್ಟವಾಗಿ ಓದುವ ಮತ್ತು ಅರ್ಥವಾಗುವ ಹಾಗೆ ಭಾಷಾಂತರ ಮಾಡಬೇಕು.
- ಸರಳ ಭಾಷೆಯನ್ನು ಬಳಸಿ, ಅತಿ ಕ್ಲಿಷ್ಟಕರವಾದ ಭಾಷೆಯ ಬಳಕೆ ಬೇಡ.
ಅವಶ್ಯಕವಾದ ಮುಖ್ಯ ಸೂಚನೆಗಳು
- ಪ್ರವೇಶ ಪತ್ರದಲ್ಲಿ ಕೇಳಿರುವ ಎಲ್ಲಾ ಸೂಚನೆಗಳನ್ನು ಚಾಚು ತಪ್ಪದೆ ಪಾಲಿಸಿ.
- ಪರೀಕ್ಷೆಗೆ ಮುಖ್ಯವಾಗಿ ಪ್ರವೇಶ ಪತ್ರ ಮತ್ತು ಸರ್ಕಾರಿ ಗುರುತಿನ ಚೀಟಿಗಳಾದ ಆಧಾರ್, ಪಾನ್ ಕಾರ್ಡ್ ನಂತಹ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗುವುದು ಅವಶ್ಯಕ.
- ರಿಪೋರ್ಟಿಂಗ್ ಟೈಮ್ ಗಿಂತ ಒಂದು ಗಂಟೆ ಮೊದಲೇ ಪರೀಕ್ಷಾ ಕೇಂದ್ರವನ್ನು ತಲುಪಿ.
- ನಿಷೇದಿತಾ ವಸ್ತುಗಳನ್ನು ಯಾವುದೇ ಕಾರಣಕ್ಕೂ ಬಳಸಬೇಡಿ.
- ಪರೀಕ್ಷೆ ಬರೆಯಲು ಒಳ್ಳೆಯ ಪೆನ್ ಬಳಕೆ ಮಾಡಿ.
- ಪರೀಕ್ಷೆ ಕೊಠಡಿ ಮೇಲ್ವಿಚಾರಕರ ಸೂಚನೆಗಳನ್ನು ಪಾಲಿಸಿ.
ಅಣುಕು ಪರೀಕ್ಷೆ(Mock Test) ತೆಗೆದುಕೊಳ್ಳಿ.
ಯಾವಾಗಲು ಪರೀಕ್ಷೆ ನಡೆಸಲು ಹೆಚ್ಚಿನ ಸಮಯವಕಾಶ ಸಿಕ್ಕಾಗ ಪರೀಕ್ಷೆಯ ಮಾದರಿ ಮತ್ತು ಪ್ರಸ್ತುತ ಇರುವ ಟ್ರೆಂಡ್ ಬಗ್ಗೆ ತಿಳಿದುಕೊಳ್ಳಲು ಕೋಚಿಂಗ್ ಸೆಂಟರ್ ಗಳು ತಮ್ಮ ಕೇಂದ್ರದಲ್ಲಿ mock test ಅಥವಾ ಆಣುಕು ಪರೀಕ್ಷೆಯನ್ನು ಆನ್ಲೈನ್ ಅಥವಾ ಆಫ್ ಲೈನ್ ರಲ್ಲಿಯೂ ನಡೆಸುತ್ತಾರೆ ಆ ಸಮಯದಲ್ಲಿ ನಿಮ್ಮ ತಯಾರಿಯ ಕ್ರಮ ಸರಿಯಾಗಿದೆಯೇ, ಎಷ್ಟು ತಯಾರಿ ನಡೆಸಿದ್ದೀರಿ? ನಿಮ್ಮ ಓದಿರುವ ವಿಷಯ ಪ್ರಸ್ತುತ ಟ್ರೆಂಡ್ ಗೆ ಸರಿಯಾಗಿ ಇದೆಯೇ? ಎನ್ನುವುದನ್ನು ಅಣುಕು ಪರೀಕ್ಷೆಯಿಂದ ತಿಳಿದುಕೊಳ್ಳಬಹುದು, ವಿದ್ಯಾರ್ಥಿಗಳು ಸಾಧ್ಯವಾದಲ್ಲಿ ಅಣುಕು ಪರೀಕ್ಷೆಯನ್ನು ತೆಗೆದುಕೊಳ್ಳುವುದು ಉತ್ತಮ.
ಅಣುಕು ಪರೀಕ್ಷೆ IB SA Tier 2 ಗೆ ಹೇಗೆ ಸಹಕಾರಿ
- ಪ್ರಸ್ತುತ ದಿನಗಳ ದಿನಪತ್ರಿಕೆಯ ಸಂಪಾದಕ ಪುಟಗಳ ಅನುವಾದ ಮಾಡಲು mock test ನಲ್ಲಿ ನೀಡುತ್ತಾರೆ.
- ಹೆಚ್ಚಿನ ಪರೀಕ್ಷೆಯ ಅನುವಾದ ವಿಷಯಗಳು ಇಲ್ಲಿಂದಲೇ ಬರುವ ಸಾಧ್ಯತೆಗಳು ಹೆಚ್ಚು.
- mock test ನಂತರ ಕೀ ಆನ್ಸರ್ ನೀಡುವುದರಿಂದ ಸ್ವ ಮೌಲ್ಯಮಾಪನ ಮಾಡಿ ನಿಮ್ಮ ತಪ್ಪು ತಿದ್ದಿ ಕೊಳ್ಳಲು ಸಹಕಾರಿ.
- ನಿಮ್ಮ ಪರೀಕ್ಷೆಯಲ್ಲಿನ ಸಮಯ ನಿರ್ವಹಣೆಗೆ ಈ ಅಣುಕು ಪರೀಕ್ಷೆ ಸಹಾಯ ಮಾಡುತ್ತದೆ.
- ಪರೀಕ್ಷಾ ಕೊಠಡಿಯ ಅನುಭವದ ಜೊತೆಗೆ ಒತ್ತಡ ಮತ್ತು ಭಯ ನಿವಾರಣೆಗೆ ಸಹಾಯವಾಗುತ್ತದೆ.
IB SA Tier 2 Exam Date 2025 ಯಾವಾಗ?
Tier 2 ಪರೀಕ್ಷಾ ದಿನಾಂಕವನ್ನು ಫೆಬ್ರವರಿ 22,2026 ರಂದು ನಡೆಸಲು ನಿಗದಿಪಡಿಸಲಾಗಿದೆ.
IB SA Tier 2 Admit Card ಹೇಗೆ ಡೌನ್ಲೋಡ್ ಮಾಡುವುದು?
ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, Tier 2 admit card link ಮಖಾಂತರ ನಿಮ್ಮ user Id ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಮಾಡಿ. ಅಡ್ಮಿಟ್ ಕಾರ್ಡ್ ವಿಭಾಗದಲ್ಲಿ ನಿಮ್ಮ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
IB SA Tier 2 Exam pattern ಹೇಗೆ?
ಒಂದು ಗಂಟೆಯ ಅವಧಿಯಲ್ಲಿ 50 ಅಂಕಗಳಿಗೆ 500 ಪದಗಳ ಭಾಷಾಂತರ ಮಾಡಬೇಕಿದ್ದು, ಸ್ಥಳೀಯ ಭಾಷೆಯಿಂದ ಇಂಗ್ಲಿಷ್ ಗೆ ಮತ್ತು ಇಂಗ್ಲಿಷ್ ಭಾಷೆಯಿಂದ ಸ್ಥಳೀಯ ಭಾಷೆಗೆ ಭಾಷಾಂತರ ಮಾಡಬೇಕು.
Jayanth
'NAMMA CAREER’ ಬ್ಲಾಗಿಂಗ್ ವೆಬ್ಸೈಟ್ ನ Founder ಮತ್ತು Writer ಆದ ನಾನು, ಕಳೆದ 6 ವರ್ಷಗಳಿಂದ Content Writer ಆಗಿ ಕೆಲಸದ ಅನುಭವ ಹೊಂದಿದ್ದೇನೆ. ಈ ಬ್ಲಾಗ್ ವೆಬ್ಸೈಟ್ನಲ್ಲಿ ಶಿಕ್ಷಣ, ಉದ್ಯೋಗ, ಸರ್ಕಾರಿ ಯೋಜನೆಗಳು ಹಾಗೂ ಸಾರ್ವಜನಿಕರಿಗೆ ಉಪಯುಕ್ತವಾಗುವ ಮಾಹಿತಿಗಳನ್ನು ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಬರೆದು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಓದುಗರಿಗೆ ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ನೀಡುವುದೇ ನನ್ನ ಮುಖ್ಯ ಉದ್ದೇಶವಾಗಿದೆ.
About Us →