PM kisan 22ನೇ ಕಂತು 2026 – ₹2000 ಬಿಡುಗಡೆ ದಿನಾಂಕ!

WhatsApp Group Join Now
Telegram Group Join Now

PM kisan samman nidhi – ಕೇಂದ್ರ ಸರ್ಕಾರವು ದೇಶದ ರೈತರ ಕೃಷಿಯಲ್ಲಿನ ಸ್ವಾವಲಂಬನೆಗೆ ಮತ್ತು ತಮ್ಮ ಕೃಷಿ ಕೆಲಸಕ್ಕೆ ಪೂರಕ ಖರ್ಚುಗಳಿಗೆ ಸಹಾಯವಾಗಲೆಂದು ಪ್ರಾರಂಭಿಸಿದ ಯೋಜನೆಯಾಗಿದೆ. 2019 ರಲ್ಲಿ ಪ್ರಾರಂಭವಾದ ಈ ಯೋಜನೆ ದೇಶದ ಸರಿ ಸುಮಾರು 11 ಕೋಟಿ ರೈತರಿಗೆ ನೆರವಾಗಿದೆ. ಇಲ್ಲಿಯವರೆಗೆ 21 ಕಂತುಗಳ ಹಣವನ್ನು ರೈತರ ಖಾತೆಗಳಿಗೆ ಜಮೆಯಾಗಿದ್ದು, ಈ ಸಮಯದಲ್ಲಿ  22 ನೇ ಕಂತಿನ 2000₹ ಹಣ ಬಿಡುಗಡೆಯ ಸನಿಹದಲ್ಲಿದೆ.

ಆಗಲೇ ಕೇಳಿರುವ ಹಾಗೆ ರೈತರ ಕೃಷಿ ಕೆಲಸಗಳಿಗೆ ಮತ್ತು ಸಾಮಗ್ರಿಗಳ ಖರ್ಚು ನೀಗಿಸಲು ಸಹಾಯವಾಗುವ ದೃಷ್ಟಿಯಿಂದ ವರ್ಷಕ್ಕೆ 6000₹ ಗಳ ಹಣವನ್ನು ನೇರವಾಗಿ ರೈತರ ಖಾತೆಗಳಿಗೆ DBT ಮೂಲಕ ಹಣ ಜಮೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

PM Kisan 22ನೇ ಕಂತು ಬಿಡುಗಡೆ ದಿನಾಂಕ ಯಾವಾಗ?

ಹಿಂದಿನ ರೂಢಿಯನ್ನು ಗಮನಿಸಿದರೆ ಪ್ರತಿವರ್ಷ 3 ಕಂತುಗಳ ರೂಪದಲ್ಲಿ ಜೂನ್, ಅಕ್ಟೋಬರ್ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ರೈತರಿಗೆ ನೀಡುವುದು ರೂಢಿಯಲ್ಲಿದೆ. ಅದನ್ನೇ ಪರಿಗಣಿಸಿ ಹೇಳುವುದಾದರೆ. ಈ ತಿಂಗಳ (ಫೆಬ್ರುವರಿ ) ಅಂತ್ಯ ಅಥವಾ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ರೈತರ ಖಾತೆಗೆ ನೇರವಾಗಿ DBT ಮೂಲಕ ಜಮೆಯಾಗುವ ಸಾಧ್ಯತೆಗಳಿವೆ.

ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿರುವುದಿಲ್ಲ. ಮತ್ತು ಇದಕ್ಕೆ ಸಂಬಂದಿಸಿದ ಯಾವುದೇ ರೀತಿಯ ಮಾಹಿತಿಗೆ ಪಿಎಂ ಕಿಸಾನ್ ನ ಅಧಿಕೃತ ವೆಬ್ಸೈಟ್ ಭೇಟಿ ಮಾಡುವುದು ಅವಶ್ಯಕ.

Pm kisan

PM Kisan 22ನೇ ಕಂತಿನಲ್ಲಿ ₹2000 ಹಣ ಯಾರಿಗೆ ಸಿಗುತ್ತದೆ?

ಪಿಎಂ ಕಿಸಾನ್ 22 ನೇ ಕಂತಿನ 2000₹ ಹಣವನ್ನು ಪಡೆಯಲು ಬಯಸುವವರು ಈ ಕೆಳಗಿನ ಅರ್ಹತೆಗಳನ್ನು ಹೊಂದಿರುವಿರಾ ಎಂದು ನೋಡಿಕೊಳ್ಳುವುದು.

  • ನಿಮ್ಮ ಭೂ ದಾಖಲೆಗಳು ನಿಮ್ಮ ಹೆಸರಿನಲ್ಲಿಯೇ ಇದೆಯೇ ಎಂದು ಖಾತ್ರಿಪಡಿಸಿಕೊಳ್ಳುವುದು.
  • Adhar Card, Bank passbook ಮತ್ತು ಪಹಣಿಯಲ್ಲಿ ಹೆಸರು ಒಂದೇ ತರನಾಗಿರುವುದರ ಬಗ್ಗೆ ನೋಡಿಕೊಳ್ಳುವುದು ಒಳ್ಳೆಯದು.
  • ಆಧಾರ್ ನಂಬರ್ ಮತ್ತು ಬ್ಯಾಂಕ್ ಅಕೌಂಟ್ ಗೆ seeding ಆಗಿರುವುದರ ಬಗ್ಗೆ ನೋಡಿಕೊಳ್ಳುವುದು.
  • ಮುಖ್ಯವಾಗಿ ekyc ಪೂರ್ಣಗೊಳಿಸಿರುವುದನ್ನು ಗಮನಿಸಿ.

ಈ ನಾಲ್ಕು ಹಂತಗಳು ಪೂರ್ಣಗೊಂಡಿದ್ದರೆ ಈ ಬಾರಿಯ 22ನೇ ಕಂತಿನ ಹಣವು ನಿಮ್ಮ ಖಾತೆಗೆ ಬರುತ್ತದೆ. ಖಚಿತಪಡಿಸಿಕೊಳ್ಳಲು ಅಧಿಕೃತ ವೆಬ್ಸೈಟ್ ನಲ್ಲಿನ Beneficiary List ನಲ್ಲಿ ನಿಮ್ಮ ಹೆಸರನ್ನು ನೋಡಿಕೊಳ್ಳುವುದು.

PM kisan ವೆಬ್ಸೈಟ್ ನಲ್ಲಿ Beneficiary List  ಹೆಸರು ಹುಡುಕುವುದು ಹೇಗೆ?

  • ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವುದು.
  • Farmers Corner ನಲ್ಲಿ Beneficiary List ಕ್ಲಿಕ್ ಮಾಡಿ.
  • ನಂತರ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮ ವನ್ನು ಆಯ್ಕೆ ಮಾಡಿಕೊಂಡು Get Report ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಹೆಸರನ್ನು ಹುಡುಕಿ.
PM kisan

Beneficiary List ನಲ್ಲಿ ಹೆಸರು ಇಲ್ಲದಿದ್ದರೆ ಏನು ಮಾಡಬೇಕು?

ಒಂದು ವೇಳೆ Beneficiary List ನಲ್ಲಿ ನಿಮ್ಮ ಹೆಸರಿಲ್ಲದಿದ್ದಲ್ಲಿ ತಾಲೂಕು ಕೃಷಿ ಇಲಾಖೆ ಕಚೇರಿಯನ್ನು ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಮಾಹಿತಿಯನ್ನು ಪಡೆಯಬಹುದುದಾಗಿದೆ. ಹಾಗೆಯೇ ಈ ಮೇಲೆ ತಿಳಿಸಿರುವ ಯಾವುದೇ ಅರ್ಹತೆಗಳಿಂದ ನೀವು ಅನರ್ಹರಾಗಿರುವ ಬಗ್ಗೆ ಮಾಹಿತಿಯ ಜೊತೆಗೆ ಪರಿಹಾರವನ್ನು ಒದಗಿಸುತ್ತಾರೆ.

ನಿಮ್ಮ ಆಧಾರ್ Seeding ಆಗಿರುವುದನ್ನು ಚೆಕ್ ಮಾಡುವುದು.

My ಆಧಾರ್ Uidai ವೆಬ್ಸೈಟ್ ಗೆ ಹೋಗಿ  services (ಸೇವೆಗಳು )ಆಯ್ಕೆ ಮಾಡಿ.

ಸೇವೆಗಳಲ್ಲಿ Bank seeding status ಮೇಲೆ ಕ್ಲಿಕ್ ಮಾಡಿ.

ನಂತರ ಆಧಾರ್ ನಂಬರ್ ಮತ್ತು ಅಲ್ಲಿರುವ ಕ್ಯಾಪ್ಟ ಕೋಡ್ ನಮೂದಿಸಿ login with otp ಮೇಲೆ ಕ್ಲಿಕ್ ಮಾಡಿ.

ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಗೆ otp ಬರುತ್ತದೆ. ಆ otp ಮೂಲಕ ನಿಮ್ಮ status ತಿಳಿಯ ಬಹುದು.

ekyc ಪೂರ್ಣಗೊಳಿಸಿರುವು

ಪಿಎಂ ಕಿಸಾನ್ ಯೋಜನೆಯಲ್ಲಿ 2000₹ ಗಳ ಸಹಾಯಧನವನ್ನು ಪಡೆಯಲು ekyc ಮಾಡುವುದು ಅತಿ ಅವಶ್ಯಕ, ಇದರಿಂದ ಸಹಾಯಧನ ಮಧ್ಯಾವರ್ತಿಗಳಿಲ್ಲದೆ ನೇರವಾಗಿ ಫಲನುಭವಿಯ ಖಾತೆಗೆ ಜಮೆ ಮಾಡಲು ಸಹಕಾರಿಯಾಗುತ್ತದೆ.

ekyc 03 ಬಗೆನಾಗಿ ಪೂರ್ಣಗೊಳಿಸಬಹುದು.ಒಂದು ವೇಳೆ ನಿಮ್ಮ ekyc ಪೂರ್ಣಗೊಳ್ಳದೆ ಇದ್ದಲ್ಲಿ ಈ ಕೆಳಗಿನ ಯಾವುದೇ ವಿಧಾನದ ಮೂಲಕ ಮಾಡಿಸಬಹುದು.

OTP ಮುಖಾಂತರ — ಅಧಿಕೃತ ವೆಬ್ಸೈಟ್ ನಲ್ಲಿ ekyc ಪೇಜ್ ಗೆ ಭೇಟಿ ನೀಡಿ. ಆಧಾರ್ ನಂಬರ್ ಮತ್ತು OTP ನಮೂದಿಸುವುದರ ಮೂಲಕ ಮಾಡಿ.

ಬೈಯೋಮೆಟ್ರಿಕ್ ಮೂಲಕ — CSC ಕೇಂದ್ರಕ್ಕೆ ತೆರಳಿ ekyc ಪೂರ್ಣಗೊಳಿಸಿಕೊಳ್ಳಿ.

Face Authentication ಮೂಲಕ — ಪಿಎಂ ಕಿಸಾನ್ ಮತ್ತು ಆಧಾರ್ ಫೇಸ್ RD ಆಪ್ playstore ಮೂಲಕ ಡೌನ್ಲೋಡ್ ಮಾಡಿ.ಆಧಾರ್ ನಂಬರ್ ಮತ್ತು ಮುಖವನ್ನು ಚಿತ್ರೀಕರಿಸುವುದರ ಮೂಲಕ ಪೂರ್ಣಗೊಳಿಸಬಹುದು.

ನಿಮ್ಮ ಹಳೆಯ ಕಂತಿನ ಸ್ಥಿತಿಯನ್ನು ತಿಳಿಯಲು.

  • ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವುದು.
  • Farmers Corner ನಲ್ಲಿ Know Your Status ಕ್ಲಿಕ್ ಮಾಡಿ.
  • ನಿಮ್ಮ ರಿಜಿಸ್ಟರ್ ನಂಬರ್ ಮತ್ತು ಕ್ಯಾಪ್ಟ ಕೋಡ್ ನಮೂದಿಸಿ.
  • ನಂತರ ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಗೆ otp ಬರುತ್ತದೆ. ಅದನ್ನು ನಮೂದಿಸಿ ನಿಮ್ಮ ಸ್ಥಿತಿಯನ್ನು ನೋಡಬಹುದು.

ಇಲ್ಲಿ ನಿಮ್ಮ ಹಿಂದಿನ ಎಲ್ಲಾ ಕಂತುಗಳ ಬಗ್ಗೆ ಮಾಹಿತಿಯನ್ನು ನೋಡಬಹುದು. ಹಾಗೆಯೇ ನಿಮ್ಮ ekyc ಪೂರ್ಣಗೊಂಡಿದೆಯೋ ಇಲ್ಲವೋ ಮತ್ತು ಆಧಾರ್ seeding ಆಗಿದೆಯೋ ಇಲ್ಲವೋ ಎಲ್ಲವನ್ನು ವೀಕ್ಷಿಸಬಹುದು.


PM Kisan 22ನೇ ಕಂತು ಯಾವಾಗ ಬಿಡುಗಡೆಯಾಗುತ್ತದೆ?

ಪ್ರಸ್ತುತ 22ನೇ ಕಂತಿನ ಹಣ ಬಿಡುಗಡೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇರುವುದಿಲ್ಲ. ಪ್ರತಿ ವರ್ಷದಂತೆ ಫೆಬ್ರುವರಿ ತಿಂಗಳಿನಲ್ಲಿ ಜಮೆ ಮಾಡುವುದು ರೂಢಿ.

PM Kisan 22ನೇ ಕಂತಿನ ಸ್ಥಿತಿ ಹೇಗೆ ಪರಿಶೀಲಿಸಬೇಕು?

PM Kisan ಅಧಿಕೃತ ವೆಬ್ಸೈಟ್ ಗೆ ಹೋಗಿ — Know Your Status ಕ್ಲಿಕ್ ಮಾಡಿ —- ರಿಜಿಸ್ಟರ್ ನಂಬರ್ ಮತ್ತು ಕ್ಯಾಪ್ಟ ನಮೂದಿಸಿ — ನಿಮ್ಮ ಸ್ಥಿತಿ ತಿಳಿಯಿರಿ.

PM Kisan eKYC ಕಡ್ಡಾಯವೇ?

ಹೌದು. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಫಲಾನುಭವಿ ekyc ಕಡ್ಡಾಯವಾಗಿದೆ.ekyc ಮಾಡದೇ ಇದ್ದಲ್ಲಿ ಮುಂದಿನ ಕಂತಿನ ಹಣ ತಡೆಹಿಡಿಯುವ ಸಾಧ್ಯತೆ ಇದೆ.

About Content Writer
Jayanth

Jayanth

ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.

About Us →
WhatsApp Group Join Now
Telegram Group Join Now

Leave a Comment