Table of Contents
ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಲು ಹಲವು ತರನಾದ ಯೋಜನೆಗಳಿವೆ ಅದರಲ್ಲಿ Post Office KVP Scheme ಅಥವಾ ಕಿಸಾನ್ ಅಭಿವೃದ್ಧಿ ಪತ್ರ (Kisan Vikas Patra Scheme) ಹೆಚ್ಚು ಜನಪ್ರಿಯವಾದ ಯೋಜನೆಯಾಗಿದೆ.
ಈ Post office kvp scheme ನಲ್ಲಿ ಹೂಡಿಕೆ ಮಾಡಿದ ಹಣ ನಿರ್ದಿಷ್ಟ ವರ್ಷದಲ್ಲಿ ಡಬಲ್ ಆಗುತ್ತದೆ.ಆದ್ದರಿಂದ ದೀರ್ಘಾವಧಿಯ ಸುರಕ್ಷಿತವಾದ ಹೂಡಿಕೆ ಯೋಜನೆಯನ್ನು ಹುಡುಕುತ್ತಿರುವವರಾಗಿದ್ದರೆ ಇದು ಉತ್ತಮ ಆಯ್ಕೆಯಾಗಿದೆ.
ಕಿಸಾನ್ ಅಭಿವೃದ್ಧಿ ಪತ್ರ (KVP) ಯೋಜನೆ ಎಂದರೇನು?
kisan vikas patra scheme ಭಾರತ ಸರ್ಕಾರದ post office ಹಲವು ಯೋಜನೆಗಳಲ್ಲಿ ಇದು ಒಂದಾಗಿದೆ.ಇದು ನಾಗರಿಕರಿಗೆ ದೀರ್ಘಾವಧಿಯ ಹೂಡಿಕೆಗೆ ಸಹಕಾರಿಯಾಗಿದೆ ಹಾಗೆಯೇ ಉತ್ತಮ ಗಳಿಕೆಗೂ ಸಹ ಪೂರಕವಾಗಿದೆ.
ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣವು ನಿರ್ದಿಷ್ಟ ವರ್ಷಕ್ಕೆ ಡಬಲ್ ಆಗುತ್ತದೆ. ಇದರ ಪ್ರಮುಖ ಲಕ್ಷಣವೆಂದರೆ ಇದು ಭಾರತ ಸರ್ಕಾರದ ಅಧೀನದಲ್ಲಿನ post office ನ ಸುರಕ್ಷಿತ ಹೂಡಿಕೆಯ ಯೋಜನೆಯಾಗಿದೆ.
ಪೋಸ್ಟ್ ಆಫೀಸ್ KVP ಯೋಜನೆಯ ಮುಖ್ಯ ಲಕ್ಷಣಗಳು
ಈ ಯೋಜನೆಯಲ್ಲಿ ಕನಿಷ್ಠ ಹೂಡಿಕೆ ಮೊತ್ತ 1000 ರೂ ಆಗಿದೆ. ಆದರೆ ಯಾವುದೇ ಗರಿಷ್ಠ ಹೂಡಿಕೆ ಮಿತಿಯನ್ನು ವಿಧಿಸಿಲ್ಲ.ನೀವು ಬಯಸಿದಷ್ಟು ಹಣವನ್ನು ಹೂಡಿಕೆ ಮಾಡಿ ಲಾಭ ಗಳಿಸಬಹುದು.
ಎಲ್ಲಾ post office ಗಳಲ್ಲಿಯೂ ಈ ಯೋಜನೆಯ ಪ್ರಯೋಜನೆಯನ್ನು ಪಡೆಯಬಹುದು.
ಕೇಂದ್ರ ಸರ್ಕಾರದ bembalitaಬೆಂಬಲಿತ ಯೋಜೆಯಾಗಿರುವುದರಿಂದ ಅತಿ ಹೆಚ್ಚಾಗಿನ ಸುರಕ್ಷತೆಯನ್ನು ಹೊಂದಿರುತ್ತದೆ.ಇದರಿಂದ ನಿಮ್ಮ ಹಣಕ್ಕೆ ಮತ್ತು ಗಳಿಕೆಯ ಲಾಭಕ್ಕೆ ಖಚಿತ ಅಥವಾ ಗ್ಯಾರಂಟಿ ಹೊಂದಿರುತ್ತದೆ.
KVP Scheme ನಡಿಯಲ್ಲಿ ನಾಮಿನಿ ಸೌಲಭ್ಯ (nominee facility )ವನ್ನು ಒದಗಿಸಲಾಗಿದೆ. ಒಂದು ವೇಳೆ ಖಾತೆದಾರರಿಗೆ ಸಮಸ್ಯೆಯದಲ್ಲಿ ಅಥವಾ ಮರಣ ಹೊಂದಿದರೆ nominee ಗೆ ಹಣದ adhikaaraಅಧಿಕಾರ ದೊರೆಯುತ್ತದೆ.
₹50,000 ಹೂಡಿಕೆ ಮಾಡಿದರೆ ಎಷ್ಟು ವರ್ಷದಲ್ಲಿ ಹಣ ಡಬಲ್ ಆಗುತ್ತದೆ?
ಹಣವು ಡಬಲ್ ಆಗಲು ತೆಗೆದು ಕೊಳ್ಳುವ ನಿರ್ದಿಷ್ಟ ಸಮಯ 115 ತಿಂಗಳುಗಳು ಅಥವಾ 9 ವರ್ಷ 7 ತಿಂಗಳು. ಇಷ್ಟು ಅವಧಿಗಳ ಕಾಲ ಹಣವನ್ನು ಹೂಡಿಕೆ ಮಾಡಿದರೆ ಈ ಸಮಯದಲ್ಲಿ ನಿಮ್ಮ ಹಣ ಡಬಲ್ ಆಗುತ್ತದೆ.
ಇಲ್ಲಿ 50,000 ರೂ ಗಳನ್ನು ಹೂಡಿಕೆ ಮಾಡಿದರೆ 115 ತಿಂಗಳಗಳ ನಂತರ ನಿಮಗೆ ಲಭಿಸುವ maturity ಹಣ 1,00,000 ರೂ ಗಳು. ಯಾವುದೇ ಮೊತ್ತವನ್ನು ಹೂಡಿಕೆ ಮಾಡಿದರೆ ಅದರ ಎರಡು ಪಟ್ಟು ಅಂದರೆ ಡಬಲ್ ಹಣವನ್ನು ನಿರ್ದಿಷ್ಟ ಪಡಿಸಿದ ಸಮಯಕ್ಕೆ ದೊರೆಯುತ್ತದೆ.
ಇದೆ ತರನಾದ ಹೆಚ್ಚಿನ ಮಾಹಿತಿಗಾಗಿ ಈಗಲೇ ನಮ್ಮ ಟೆಲಿಗ್ರಾಂ ಚಾನೆಲ್ ಅನ್ನು ಅನುಸರಿಸಿ.
ಪೋಸ್ಟ್ ಆಫೀಸ್ KVP ಬಡ್ಡಿದರ (Interest Rate)
Post Office KVP Scheme ಬಡ್ಡಿದರವನ್ನು ಭಾರತ ಸರ್ಕಾರವು ನಿರ್ಧರಿಸುತ್ತದೆ. ಪ್ರಸ್ತುತ ಈ ಯೋಜನೆಗೆ 7.5% ನಷ್ಟು ವಾರ್ಷಿಕ ಬಡ್ಡಿದರವನ್ನು ನಿಗದಿಪಡಿಸಲಾಗಿದೆ. ಇದು ವಾರ್ಷಿಕ ಚಕ್ರಬಡ್ಡಿ (compounding)ಯಂತೆ ಕಾರ್ಯ ನಿರ್ವಹಿಸುತ್ತದೆ.
ಈ ಮೇಲೆ ತಿಳಿಸಿರುವ ಬಡ್ಡಿ ದರವು ಕಾಲನುಕ್ರಮೇಣ ಬದಲಾಗುತ್ತಿರುತ್ತದೆ. ದಯಮಾಡಿ ಒಮ್ಮೆ ಅಧಿಕೃತ ವೆಬ್ಸೈಟ್ ನಲ್ಲಿ ಪರಿಶೀಲಿಸಿಕೊಳ್ಳಿ.
KVP ಯೋಜನೆಯಲ್ಲಿ ಹೂಡಿಕೆ ಮಾಡುವ ಪ್ರಯೋಜನಗಳು
- ಈ ಯೋಜನೆಯು ಭಾರತ ಸರ್ಕಾರ ಬೆಂಬಲಿತ ಯೋಜನೆಯಗಿದ್ದು ಹೆಚ್ಚು ಸುರಕ್ಷಿತವಾಗಿದೆ.
- ಹಣವು ಡಬಲ್ ಆಗುವುದು ಖಚಿತವಾಗಿದ್ದು,ನಿರ್ದಿಷ್ಟ ಅವಧಿಗೆ ಹಣ ಗ್ಯಾರಂಟಿ ಡಬಲ್.
- ಈ ಯೋಜನೆಯ ಪ್ರಯೋಜನ ಪಡೆಯಲು ಸುಲಭವಾಗಿ ಖಾತೆಯನ್ನು ತೆರೆಯಬಹುದು.
- ಟ್ರಾನ್ಸ್ಫರ್ ಸೌಲಭ್ಯ – ಒಂದು ಪೋಸ್ಟ್ ಆಫೀಸ್‌ನಿಂದ ಇನ್ನೊಂದು ಪೋಸ್ಟ್ ಆಫೀಸ್‌ಗೆ ಖಾತೆಯನ್ನು ಸುಲಭವಾಗಿ ಟ್ರಾನ್ಸ್ಫರ್ ಮಾಡಬಹುದು.

ಯಾರು KVP ಯೋಜನೆಯಲ್ಲಿ ಹೂಡಿಕೆ ಮಾಡಬಹುದು?
KVP ಯೋಜನೆಯಡಿಯಲ್ಲಿ ಈ ಕೆಳಗಿನವರು ಹೂಡಿಕೆ ಮಾಡಬಹುದು:
- ಭಾರತೀಯ ನಾಗರಿಕರಾಗಿರಬೇಕು
- 18 ವರ್ಷ ಮೇಲ್ಪಟ್ಟವರು
- 18 ವರ್ಷ ಕೆಳಗಿನ ಮಕ್ಕಳ ಹೆಸರಿನಲ್ಲಿ ಪೋಷಕರು ತೆರೆಯಬಹುದು.
- ಜಂಟಿ ಖಾತೆ ಅಥವಾ joint account ಮೂಲಕ ಇಬ್ಬರು ತೆರೆಯಬಹುದು.
ಪೋಸ್ಟ್ ಆಫೀಸ್ ನಲ್ಲಿ KVP ಖಾತೆ ತೆರೆಯುವ ವಿಧಾನ
ಈ ಕೆಳಗಿನ ಹಂತಗಳನ್ನು ಅನುಸರಿಸಿ ಖಾತೆಯನ್ನು ತೆರೆಯಬಹುದು :-
KVP Account Opening Process
- ನಿಮ್ಮ ಹತ್ತಿರದ post office ಗೆ ಭೇಟಿ ನೀಡಿ.
- KVP ಅರ್ಜಿಯನ್ನು ಭರ್ತಿ ಮಾಡಿ.
- ಬೇಕಾದ ದಾಖಲೆಯನ್ನು ಲಗತ್ತಿಸಿ ಸಲ್ಲಿಸಿ.
- ಹೂಡಿಕೆ ಮೊತ್ತವನ್ನು ಪಾವತಿಸಿ.
ಅದಾದ ನಂತರ ನಿಮ್ಮ KVP Certificate ಅನ್ನು ಪಡೆಯಿರಿ.
KVP ಯೋಜನೆಗೆ ಬೇಕಾಗುವ ದಾಖಲೆಗಳು
KVP ಯೋಜನೆಯಡಿಯಲ್ಲಿ ಖಾತೆ ತೆರೆಯಲು ಬೇಕಾಗುವ ಅಗತ್ಯ ದಾಖಲೆಗಳು :-
- ಆಧಾರ್ ಕಾರ್ಡ್
- pan ಕಾರ್ಡ್
- ವಿಳಾಸದ ಪುರಾವೆ
- ಪಾಸ್ ಪೋರ್ಟ್ ಸೈಜ್ ಫೋಟೋ
ಪೋಸ್ಟ್ ಆಫೀಸ್ KVP ಯೋಜನೆ ಸುರಕ್ಷಿತವೇ?
ಹೌದು.post office KVP scheme ಭಾರತ ಸರ್ಕಾರದ ಬೆಂಬಲ ಹೊಂದಿರುವ post office ಯೋಜನೆ ಆಗಿರುವುದರಿಂದ ಇದು ಅತ್ಯಂತ ಸುರಕ್ಷಿತವಾಗಿದೆ.
ಆದ್ದರಿಂದ ಗ್ರಾಮೀಣ ಪ್ರದೇಶದ ಜನರು ಮತ್ತು ದೀರ್ಘಕಾಲದ ಹೂಡಿಕೆ ಮಾಡಲು ಬಯಸುವವರು ಈ ಯೋಜನೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ.
ಕೊನೆಯದಾಗಿ
Post Office KVP Scheme ಸುರಕ್ಷಿತ ಹಾಗೂ ದೀರ್ಘಕಾಲದ ಹೂಡಿಕೆ ಮಾಡಲು ಉತ್ತಮ ಆಯ್ಕೆಯಾಗಿದೆ. ₹1000 ರಿಂದಲೇ ಹೂಡಿಕೆ ಆರಂಭಿಸಬಹುದು ಮತ್ತು ನಿರ್ದಿಷ್ಟ ಅವಧಿಯ ನಂತರ ನಿಮ್ಮ ಹಣ ಡಬಲ್ ಆಗುತ್ತದೆ.
ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಿ ಅಧಿಕ ಮೊತ್ತದ ಲಾಭವನ್ನು ಪಡೆಯಬಹುದು.
Post Office KVP scheme ನಲ್ಲಿ ಕನಿಷ್ಠ ಹೂಡಿಕೆ ಎಷ್ಟು?
ಕನಿಷ್ಠ ಹೂಡಿಕೆ ಮೊತ್ತ 1000 ರೂ, ಹಾಗೂ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇಲ್ಲಾ.
KVP ಯೋಜನೆಯಲ್ಲಿ ಹಣ ಡಬಲ್ ಆಗಲು ಎಷ್ಟು ವರ್ಷ ಬೇಕು?
ಸಾಮಾನ್ಯವಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿ 115 ತಿಂಗಳಗಳ ನಂತರ ಹೂಡಿಕೆ ಮಾಡಿದ ಹಣ ಡಬಲ್ ಆಗುತ್ತದೆ.
Post Office KVP Scheme ಸುರಕ್ಷಿತವೇ?
ಹೌದು, ಇದು ಭಾರತ ಸರ್ಕಾರದ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಒಂದಾಗಿರುವುದರಿಂದ ಬಹಳ ಸುರಕ್ಷಿತವಾದ ಹೂಡಿಕೆ ಯೋಜನೆಯಾಗಿದೆ.
ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಕೇವಲ ಶಿಕ್ಷಣ ಮತ್ತು ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿ ಮಾತ್ರವಾಗಿದೆ. ಇದು ಯಾವುದೇ ರೀತಿಯ ಹಣಕಾಸು (Financial) ಹೂಡಿಕೆ ಸಲಹೆ (Investment Advice) ಅಲ್ಲ. ಹೂಡಿಕೆ ಮಾಡುವ ಮೊದಲು ನಿಮ್ಮ ವೈಯಕ್ತಿಕ ಹಣಕಾಸು ಸ್ಥಿತಿ, ಗುರಿಗಳು ಹಾಗೂ ಅಪಾಯ ಸಾಮರ್ಥ್ಯವನ್ನು ಪರಿಗಣಿಸಿ, ಅಗತ್ಯವಿದ್ದಲ್ಲಿ ಪ್ರಮಾಣಿತ ಹಣಕಾಸು ಸಲಹೆಗಾರರ (Financial Advisor) ಸಲಹೆ ಪಡೆಯಿರಿ. ಬಡ್ಡಿದರಗಳು ಹಾಗೂ ಯೋಜನೆ ನಿಯಮಗಳು ಕಾಲಾನುಸಾರ ಬದಲಾಗಬಹುದು.
Jayanth
ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.
About Us →