RRB Group D: 22000+ ಹುದ್ದೆಗಳು -10ನೇ ತರಗತಿ ಪಾಸ್ ಆದ್ರೆ ಸಾಕು

WhatsApp Group Join Now
Telegram Group Join Now

ಭಾರತ ಸರ್ಕಾರದ ಪ್ರಮುಖ ಇಲಾಖೆಗಳಲ್ಲಿ ಒಂದಾದ ರೈಲ್ವೆ ಇಲಾಖೆಯಲ್ಲಿ 2026 ನೇ ಸಾಲಿನಲ್ಲಿ ಖಾಲಿಯಿರುವ RRB GROUP D ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಕರೆಯಲಾಗಿದ್ದು. ಅದಕ್ಕೆ ಸಂಬಂದಿಸಿದ ಸರ್ಕಾರಿ ಅಧಿಸೂಚನೆಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಈ ಅಧಿಸೂಚನೆಯಲ್ಲಿ ಒಟ್ಟು 22195 ಹುದ್ದೆಗಳಿದ್ದು, ಹಲವು ತರನಾದ ಕೆಲಸ ಕಾರ್ಯ ನಿರ್ವಹಿಸಿಸುವಂತಹ ಹುದ್ದೆಗಳಿದ್ದು, ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮ್ಮ ಆದ್ಯತೆಗೆ ತಕ್ಕಂತೆ ಹುದ್ದೆಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಬಹುದು.

ಹುದ್ದೆಗಳ ವಿವರ:-

ರೈಲ್ವೆ ಇಲಾಖೆಗಳಲ್ಲಿ 19 ವಲಯಗಳಿದ್ದು. ಅಭ್ಯರ್ಥಿಗಳು ತಮ್ಮ ನೆಚ್ಚಿನ ವಲಯದಲ್ಲಿನ ನೆಚ್ಚಿನ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಪ್ರಸ್ತುತ ಸಾಲಿನ ಅಧಿಸೂಚನೆಯಲ್ಲಿ ನೈರುತ್ಯ ರೈಲ್ವೆ ವಲಯ (ಹುಬ್ಬಳ್ಳಿ) ಯಲ್ಲಿ ಒಟ್ಟು 132 ಹುದ್ದೆಗಳಿವೆ.

ಇತರೆ ವಲಯದಲ್ಲಿನ ಹುದ್ದೆಗಳ ಮಾಹಿತಿಗಾಗಿ ಅಧಿಸೂಚನೆಯನ್ನು ನೋಡಿ.

📄 RRB GROUP D 2026 NOTIFICATION PDF

ವೇತನ :-

ಮೂಲ ವೇತನ 18000 ರೂ (7th cpc pay matrix).

ವಿದ್ಯಾರ್ಹತೆ :-

10ನೇ ತರಗತಿ/ITI/ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ :-

18-33 ವರ್ಷ (ಸಾಮಾನ್ಯ ಅಭ್ಯರ್ಥಿಗಳಿಗೆ).

ಅರ್ಜಿ ಶುಲ್ಕ :-

ಎಲ್ಲಾ ಅಭ್ಯರ್ಥಿಗಳಿಗೆ-500₹

SC, ST, EX-S, PwBD, ಮಹಿಳಾ, ತೃತೀಯಲಿಂಗಿ, EWC or Minorities – 250₹

ಪ್ರಮುಖ ದಿನಾಂಕಗಳು :-

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ:-31/01/2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-02/03/2026

ಅರ್ಜಿ ಶುಲ್ಕ ದ ಕೊನೆಯ ದಿನಾಂಕ:-04/03/2026

ಅರ್ಜಿ ತಿದ್ದುಪಡಿ ದಿನಾಂಕ:-05/03/2026

ಅರ್ಜಿ ಸಲ್ಲಿಸುವ ವಿಧಾನ :-

ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಯು ಅಧಿಕೃತ ವೆಬ್ಸೈಟ್ ಹೋಗಿ ಲಾಗಿನ್ ಮಾಡಿ. ( ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರು ಅಕೌಂಟ್ ಕ್ರಿಯೇಟ್ ಮಾಡಿ. ನಂತರ ಲಾಗಿನ್ ಆಗಿ)RRB Group D 2026 ಅರ್ಜಿ ತೆರೆದು ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ. ಕೇಳಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ, ಪೇಮೆಂಟ್ ಮಾಡಿ ಅರ್ಜಿ ಸಲ್ಲಿಸಿ.

ಪ್ರಮುಖ ದಾಖಲೆಗಳು :-

  • SSLC/ITI ಮಾರ್ಕ್ಸ್ ಕಾರ್ಡ್
  • Adhar ಕಾರ್ಡ್
  • ಮೀಸಲಾತಿ ಪ್ರಮಾಣಪತ್ರ(OBC, EWC ಮತ್ತು ಇತ್ಯಾದಿ)
  • ಇತರೆ ಸರ್ಕಾರಿ ಗುರುತಿನ ಚೀಟಿ
  • ಇತರೆ ದಾಖಲೆಗಳು

ಆಯ್ಕೆ ಪ್ರಕ್ರಿಯೆ :-

ಹಂತ 01- CBT ಪರೀಕ್ಷೆ

CBT ಎಂದರೆ Computer Based Test – ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಕಂಪ್ಯೂಟರ್ ಮೂಲಕ ಪರೀಕ್ಷೆ ಬರೆದ ಅಭ್ಯರ್ಥಿಗಳು ಗಳಿಸಿದ ಅಂಕಗಳ ಮೇಲೆ ಶಾರ್ಟ್ ಲಿಸ್ಟ್ ತಯಾರಿಸಲಾಗುತ್ತದೆ.

ಹಂತ 02- PET ಪರೀಕ್ಷೆ

PET ಎಂದರೆ PHYSICAL ENDURANCE TEST – CBT ಮೂಲಕ ಶಾರ್ಟ್ ಲಿಸ್ಟ್ ಆದ 1:3 ಅಭ್ಯರ್ಥಿಗಳಿಗೆ (1 ಹುದ್ದೆಗೆ ಮೂರು ಜನರಂತೆ) ಪರೀಕ್ಷೆ ನಡೆಸಲಾಗುತ್ತದೆ. PET ಪರೀಕ್ಷೆಯಲ್ಲಿ ಈ ಕೆಳಗಿನಂತಿರುತ್ತದೆ.

ಪುರುಷರಿಗೆ ಮಹಿಳೆಯರಿಗೆ
35kg ಭಾರದ ವಸ್ತುವನ್ನು ಹೊತ್ತು 2 ನಿಮಿಷದಲ್ಲಿ 100 ಮೀಟರ್ ಕ್ರಮಿಸಬೇಕು.

ಮತ್ತು

1000 ಮೀಟರ್ ಅನ್ನು 4ನಿಮಿಷ 15ಸೆಕೆಂಡ್ ನಲ್ಲಿ ಓಡಬೇಕು.
20kg ಭಾರದ ವಸ್ತುವನ್ನು ಹೊತ್ತು 2 ನಿಮಿಷದಲ್ಲಿ 100ಮೀಟರ್ ಕ್ರಮಿಸಬೇಕು.

ಮತ್ತು

1000 ಮೀಟರ್ ಅನ್ನು 5 ನಿಮಿಷ 40ಸೆಕೆಂಡ್ ನಲ್ಲಿ ಓಡಬೇಕು.

ಹಂತ 03-ದಾಖಲಾತಿ ಪರಿಶೀಲನೆ :-

CBT ಮತ್ತು PET ಎಲ್ಲಿನ ಅಭ್ಯರ್ಥಿಗಳ ಸಾಮರ್ಥ್ಯದೊಂದಿಗೆ 1:1 ಅನುಪಾತದಲ್ಲಿ ದಾಖಲಾತಿ ಪರಿಶೀಲನೆಗೆ ಕರೆಯಲಾಗುತ್ತದೆ. ಅರ್ಜಿ ಸಲ್ಲಿಸುವ ಸಮಯದಲ್ಲಿ ನೀಡಲಾಗಿರುವ ಎಲ್ಲಾ ಮಾಹಿತಿಗಳಿಗೆ ಪೂರಕವಾಗುವ ದಾಖಲೆಗಳ ಪರಿಶೀಲನೆ ನಡೆಯುತ್ತದೆ.

RRB GROUP D

CBT ಪರೀಕ್ಷೆಯ ಬಗ್ಗೆ

ಅಭ್ಯರ್ಥಿಗಳಿಗೆ 90 ನಿಮಿಷದ ಪರೀಕ್ಷೆಗ ನಡೆಸಲಾಗುವುದು, ಪ್ರತಿ ಪ್ರಶ್ನೆಗೆ 1 ಅಂಕದಂತೆ ಒಟ್ಟು 100 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪರೀಕ್ಷೆಯಲ್ಲಿನ ವಿಷಯಗಳು ಈ ಕೇಳಗಿನಂತಿದೆ:-

ಸಾಮಾನ್ಯ ವಿಜ್ಞಾನ 25 ಅಂಕ
ಗಣಿತ 25 ಅಂಕ
ಸಾಮಾನ್ಯ ಬುದ್ಧಿಮತ್ತೆ ಮತ್ತು ತಾರ್ಕಿಕತೆ30 ಅಂಕ
ಸಾಮಾನ್ಯ ಅರಿವು ಮತ್ತು ಪ್ರಚಲಿತ ಘಟನೆ 20 ಅಂಕ

**ಪ್ರತಿ ತಪ್ಪು ಉತ್ತರಕ್ಕೆ 1/3 ರಷ್ಟು ಅಂಕವನ್ನು ಗಳಿಸಿದ ಅಂಕಗಳಿಂದ ಕಡಿತಗೊಳಿಸಲಾಗುತ್ತದೆ.

ಪೂರ್ಣ ಪ್ರಮಾಣದ ಪಠ್ಯಕ್ರಮ ಮತ್ತು ವಿಷಯಗಳನ್ನು ತಿಳಿಯಲು ದಯವಿಟ್ಟು RRB GROUP D RECRUITMENT 2026 ಯನ್ನು ನೋಡಿ.

ಅರ್ಜಿ ಸಲ್ಲಿಕೆಯಲ್ಲಿ ಗಮನಿಸಬೇಕಾದ ಅಂಶಗಳು

  • ಅರ್ಜಿ ಸಲ್ಲಿಕೆ ಸಮಯದಲ್ಲಿ ಎಲ್ಲಾ ಮಾಹಿತಿಯನ್ನು ಪರಿಪೂರ್ಣವಾಗಿ ಸತ್ಯವಾದ ಮಾಹಿತಿಯನ್ನು ನೀಡುವುದು.
  • Upload ಮಾಡಲು ಕೇಳುವ ದಾಖಲೆ ಅಥವಾ ಸಹಿಯನ್ನು ಫೋಟೋ ತೆಗೆದು ಸರಿಯಾಗಿ ಕಾಣುವ ರೀತಿಯಲ್ಲಿ upload ಮಾಡುವುದು.
  • ಅರ್ಜಿಯನ್ನು ಕೊನೆಯ ದಿನಾಂಕಕ್ಕೂ 3-4 ದಿನ ಮೊದಲೇ ಸಲ್ಲಿಸುವುದು. ಕೊನೆಯ ದಿನದಂದು ಸರ್ವರ್ ಸಮಸ್ಯೆ ಇರುತ್ತದೆ.
  • ನಿಮ್ಮ ಪರೀಕ್ಷೆ ಮಾಧ್ಯಮ ವನ್ನು ಸರಿಯಾಗಿ ಆಯ್ಕೆ ಮಾಡಿ.

ಪರೀಕ್ಷೆ ತಯಾರಿಗೆ ಪ್ರಮುಖ ಸಲಹೆಗಳು

  • ಪಠ್ಯಕ್ರಮಕ್ಕೆ ತಕ್ಕಂತೆ ಪರೀಕ್ಷೆಯ ಅಧ್ಯಯನ ಮಾಡಿ.
  • ಅಧ್ಯಯನದ ಜೊತೆಗೆ ರಿವಿಶನ್ ಅವಶ್ಯವಾಗಿ ಮಾಡಿ.
  • ಅತಿ ಪ್ರಮುಖ ವಿಷಯವನ್ನು ಗುರುತಿಸಿ, ಹೆಚ್ಚಿನ ಗಮನ ಕೊಡಿ.
  • ಪಠ್ಯಕ್ರಮದಲ್ಲಿ ನೀಡಿರುವ ವಿಷಯದಲ್ಲಿ ನೀಡಿರುವ ಅಂಕಗಳಿಗೆ ತಕ್ಕಂತೆ ಅಧ್ಯಯನ ಮಾಡಿ.
  • ಸಾಮಾನ್ಯ ಬುದ್ಧಿಮತ್ತೆ ಮತ್ತು ತಾರ್ಕಿಕತೆ ಮತ್ತು ಗಣಿತ ಈ ವಿಷಯಗಳನ್ನು ಅಭ್ಯಾಸ ಮಾಡಿ.
  • ಅಣುಕು ಪರೀಕ್ಷೆಯನ್ನು(Mock Test) ಪಡೆಯುವುದು ಒಳ್ಳೆಯದು.

RRB Group D Recruitment 2026 ಅಧಿಸೂಚನೆ ಅರ್ಜಿ ಪ್ರಾರಂಭ ದಿನಾಂಕ ಯಾವುದು?

RRB Group D 2026 ರ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಪ್ರಾರಂಭಿಕ ದಿನಾಂಕ 31 ಜನವರಿ 2026.

RRB Group D ನೇಮಕಾತಿ 2026ಕ್ಕೆ ಯಾರು ಅರ್ಜಿ ಸಲ್ಲಿಸಬಹುದು?

RRB Group D 2026ಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಮಾನ್ಯತೆ ಪಡೆದ ಬೋರ್ಡ್‌ನಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ ITI / NAC ಪ್ರಮಾಣಪತ್ರ ಹೊಂದಿರಬೇಕು. ಅಭ್ಯರ್ಥಿಗಳ ವಯಸ್ಸು ಸಾಮಾನ್ಯವಾಗಿ 18 ರಿಂದ 33 ವರ್ಷಗಳ ನಡುವೆ ಇರಬೇಕು.

RRB Group D ಹುದ್ದೆಗಳ ಸಂಬಳ ಎಷ್ಟು ಇದೆ?

RRB Group D ಹುದ್ದೆಯು ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ಪೇ ಲೆವೆಲ್–1 ಅಡಿಯಲ್ಲಿ ಬರುತ್ತವೆ. ಆದ್ದರಿಂದ 18000 ಮೂಲ ವೇತನದ ಜೊತೆಗೆ ಇತರೆ ಭತ್ಯಗಳನ್ನು ಸಹ ನೀಡಲಾಗುತ್ತದೆ.

About Content Writer
Jayanth

Jayanth

ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.

About Us →
WhatsApp Group Join Now
Telegram Group Join Now

Leave a Comment