ಗ್ರಾಮೀಣ ಯುವಕರಿಗೆ 10 ಉತ್ತಮ ಉದ್ಯೋಗ ಅವಕಾಶಗಳು-Rural Jobs in Karnataka

WhatsApp Group Join Now
Telegram Group Join Now

ಗ್ರಾಮೀಣ ಪ್ರದೇಶಗಳಲ್ಲಿ ಬದುಕುತ್ತಿರುವ ಅನೇಕ ಯುವಕರಿಗೆ ಉದ್ಯೋಗದ(Rural Jobs in Karnataka) ಬಗ್ಗೆ ಹಲವು ತಪ್ಪು ಕಲ್ಪನೆಗಳಿವೆ. ನಾನು ಹೆಚ್ಚು ಓದಿಲ್ಲ, ಏನು ಕೆಲಸ ಮಾಡುವುದು?

ನಿಜ ಹೇಳಬೇಕಾದರೆ, ಇಂದಿನ ಕಾಲದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಇಲ್ಲದಿದ್ದರೂ ಕೂಡ ಉತ್ತಮ ಆದಾಯ ಗಳಿಸಲು ಅನೇಕ ಅವಕಾಶಗಳಿವೆ. ಸರಿಯಾದ ಕೌಶಲ್ಯ, ಸ್ವಲ್ಪ ತರಬೇತಿ ಮತ್ತು ದೃಢನಿರ್ಧಾರ ಇದ್ದರೆ ಸ್ವಂತ ಗ್ರಾಮದಲ್ಲೇ ಯಶಸ್ವಿ ಜೀವನ ಕಟ್ಟಿಕೊಳ್ಳಬಹುದು.

ಈ ಲೇಖನದಲ್ಲಿ, ನಾವು ಕಡಿಮೆ ವಿದ್ಯಾಭ್ಯಾಸ ಹೊಂದಿರುವ ಗ್ರಾಮೀಣ ಯುವಕರಿಗೆ ಸೂಕ್ತವಾದ 10 ಅತ್ಯುತ್ತಮ ಉದ್ಯೋಗಗಳು ಮತ್ತು ಅವುಗಳ ಆದಾಯ, ಆರಂಭಿಸುವ ವಿಧಾನ ಮತ್ತು ಮುಂದೆ ಬೆಳವಣಿಗೆ ಅವಕಾಶಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ.

01.ಹಾಲು ಉತ್ಪಾದನೆ ಮತ್ತು ಡೈರಿ ಫಾರ್ಮಿಂಗ್ ಪ್ರಾರಂಭಿಸುವುದು.

ನಿಮಗೆ ತಿಳಿದಿರುವ ಹಾಗೆ ಮತ್ತು ಹೆಚ್ಚಿನ ಗ್ರಾಮೀಣ ಪ್ರದೇಶದಲ್ಲಿ ದೀರ್ಘಕಾಲಿಕವಾಗಿ ಲಾಭ ನೀಡುವ ಉದ್ಯೋಗಳಾದ ಡೈರಿ ಫಾರ್ಮಿಂಗ್ ಒಂದು ಉತ್ತಮ ಆಯ್ಕೆಯಾಗಿದೆ.

ಏಕೆಂದರೆ ಹಾಲಿಗೆ ಸದಾ ಬೇಡಿಕೆ ಇದ್ದೆ ಇದೇ. ಇದು ದಿನನಿತ್ಯ ಉಪಯೋಗಿಸುವ ವಸ್ತುವಾಗಿದ್ದು ಒಳ್ಳೆಯ ಆದಾಯದ ಜೊತೇ ಸರಕಾರದ ಸಬ್ಸಿಡಿ ಕೂಡ ದೊರೆಯುತ್ತದೆ.

ಇದನ್ನು ಮೊದಲು 2-3 ಹಸುಗಳಿಂದ ಪ್ರಾರಂಭಿಸಿ, ನಂತರದಲ್ಲಿ ವಿಸ್ತರಿಸಬಹುದು.ನಿಮ್ಮ ಹತ್ತಿರದ ಹಾಲು ಒಕ್ಕೂಟ ಡೈರಿ ಗೆ ಹಾಲನ್ನು ಮಾರಾಟ ಮಾಡಿ. ಉತ್ತಮ ಆದಾಯ ಗಳಿಸಬಹುದು. ಜೊತೆಗೆ ಇದನ್ನು ಪ್ರಾರಂಭಿಸಲು ಸರ್ಕಾರದಿಂದ ಸಾಲ ಸೌಲಭ್ಯ ಹಾಗೂ ಸಬ್ಸಿಡಿಯಂತಹ ಸಹಾಯಧನಗಳು ಸಹ ನೀಡಲಾಗುತ್ತದೆ.

ಕೊಟ್ಟಿಗೆ ನಿರ್ಮಾಣಕ್ಕೂ ಸಹ ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದ್ದೂ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಇನ್ನೊಂದು ಲೇಖನದಲ್ಲಿ ನೀಡಲಾಗಿದೆ. ಅದನ್ನು ಸಹ ಓದಬಹುದು….

02.ಮೊಬೈಲ್ ರಿಪೇರಿ ಮತ್ತು ಸರ್ವಿಸ್ ಸೆಂಟರ್

ಪ್ರತಿ ಒಬ್ಬರ ಕೈಯಲ್ಲೂ ಮೊಬೈಲ್ ಅನ್ನುವುದು ಸರ್ವೇಸಾಮಾನ್ಯ ಸ್ಮಾರ್ಟ್‌ಫೋನ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಮೊಬೈಲ್ ಫೋನ್ ರಿಪೇರಿ ಕೆಲಸ ಕೂಡ ಸದಾ ಬೇಡಿಕೆಯಿಂದ ಕೂಡಿದೆ.

ಆದ್ದರಿಂದ ಮೊಬೈಲ್ ರಿಪೇರ್ ಅಥವಾ ಅದರ ಬಿಡಿಭಾಗಗಳನ್ನು ಜೋಡಿಸುವ ಸರ್ವಿಸ್ ಸೆಂಟರ್ ಅನ್ನು ತೆರೆದರೆ ಉತ್ತಮ ಆದಾಯವನ್ನು ಗಳಿಸಬಹುದು.ಇದನ್ನು ಪ್ರಾರಂಭಿಸಲು ಮೊದಲು ತರಬೇತಿ ಅತ್ಯಗತ್ಯ, ಆದ್ದರಿಂದ 2-3 ತಿಂಗಳ ಕಾಲ ತರಬೇತಿ ಪಡೆದ ನಂತರ ಒಂದು ಶಾಪ್ ತೆರೆಯುವುದು ಉತ್ತಮ.

👉 ಇದೆ ತರನಾದ ಹೆಚ್ಚಿನ ಮಾಹಿತಿಗೆ ಈಗಲೇ ನಮ್ಮ ಟೆಲಿಗ್ರಾಂ ಚಾನೆಲ್ ಅನ್ನು ಫಾಲೋ ಮಾಡಿ.

ಒದಗಿಸುವ ಸೇವೆಗಳು

  • ಸ್ಕ್ರೀನ್ ರಿಪೇರಿ ಮಾಡುವುದು.
  • ಮೊಬೈಲ್ ಫೋನ್ ಸಾಫ್ಟ್ ವೆರ್ ಅಪ್ಡೇಟ್ ಮಾಡುವುದು
  • ಹೊಸ ಬ್ಯಾಟರಿ ಬದಲಾವಣೆ.
  • ಮೊಬೈಲ್ ಬಿಡಿಭಾಗ ಜೋಡಿಸುವುದು.
  • ಇತರೆ ಇಲೆಕ್ಟ್ರಾನಿಕ್ ವಸ್ತುಗಳ ಮಾರಾಟ
  • ಮೊಬೈಲ್ ರಿಚಾರ್ಜ್ ಮಾಡಿ ಕಮಿಷನ್ ಗಳಿಕೆ.
  • ಇತ್ಯಾದಿ

ಈ ಎಲ್ಲಾ ಸೇವೆಗಳನ್ನು ನೀಡುವುದರಿಂದ ತಿಂಗಳಿಗೆ ₹20,000 ಯಿಂದ ₹50,000 ಗಳನ್ನು ಗಳಿಸಬಹುದು.ಇನ್ನೂ ಹೆಚ್ಚಿನ ಸೇವೆ ನೀಡುವುದರಿಂದ ಅಧಿಕ ಲಾಭಗಳಿಸಬಹುದು.

03.ಎಲೆಕ್ಟ್ರಿಷಿಯನ್ (Electrician Work)

ಗ್ರಾಮೀಣ ಪ್ರದೇಶದಲ್ಲಿ ಕೃಷಿ ಆಧಾರಿತ ಕುಟುಂಬಗಳು, ಇರುವುದರಿಂದ ಹಾಗೆಯೇ, ಕೃಷಿ ಪಂಪ್‌ಗಳು, ಬೋರ್‌ವೆಲ್ ಗಳ ಸಂಖ್ಯೆ ಅಧಿಕವಾಗಿರುವುದರಿಂದ ಎಲೆಕ್ಟ್ರಿಷನ್ ಕೆಲಸ ಮಾಡುವವರನ್ನು ಹುಡುಕುತ್ತಿರುತ್ತಾರೆ. ಆದ್ದರಿಂದಲೇ ಗ್ರಾಮೀಣ ಭಾಗದಲ್ಲಿ(Rural Jobs In Karnataka) ಈ ಕೌಶಲ್ಯ ಕಲಿತಿರುವ ವ್ಯಕ್ತಿ ಒಳ್ಳೆಯ ಆದಾಯವನ್ನು ಗಳಿಸಬಹುದು.

ಇದನ್ನು ಕಲಿಯಲು ಮುಖ್ಯವಾಗಿ ಇದಕ್ಕಾಗಿಯೇ ಇರುವ ITI ಕೋರ್ಸ್ ಮಾಡಿರ್ಬೇಕು ಇಲ್ಲವಾದಲ್ಲಿ 3 ಅಥವಾ 6 ತಿಂಗಳ ಕಾಲ ತರಬೇತಿ ಪಡೆದು ಅನುಭವ ಗಳಿಸಿ ಕೂಡ ನಿಮ್ಮ ಕೆಲಸವನ್ನು ಪ್ರಾರಂಭಿಸಬಹುದು.

Top 10 Rural Jobs in Karnataka
Top 10 Rural Jobs in Karnataka

ಯಾವೆಲ್ಲ ಕೆಲಸಗಳು ತಿಳಿದಿರಬೇಕು?

  • ವೈರಿಂಗ್ ಮಾಡುವುದು.
  • ಮೋಟಾರ್ ರಿಪೇರ್ ಮಾಡುವುದು.
  • ಸೋಲಾರ್ ಪ್ಯಾನೆಲ್ ಇನ್ಸ್ಟಾಲೇಷನ್(ಹೊಸ ಮತ್ತು ಹಳೆಯ )
  • ಇತರೆ ಇಲೆಕ್ಟ್ರಾನಿಕ್ ಉಪಕರಣಗಳ ಬಗ್ಗೆ ಜ್ಞಾನ ಹೊಂದಿರಬೇಕು.

04.ಟೈಲರಿಂಗ್ & ಗಾರ್ಮೆಂಟ್ ಕೆಲಸ

ಟೈಲರಿಂಗ್ ಒಂದು ಕಡಿಮೆ ಹೂಡಿಕೆ ಮತ್ತು ಅಧಿಕ ಲಾಭ ಗಳಿಸುವ ಉದ್ಯೋಗವಾಗಿದೆ. ಸ್ಥಿರ ಆದಾಯ ನೀಡುವ ಈ ಕೆಲಸವನ್ನು ಮುಖ್ಯವಾಗಿ ಗ್ರಾಮೀಣ ಭಾಗದ ಮಹಿಳೆಯರು ಮಾಡುವುದರಿಂದ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ನೀಡುವ ಉದ್ಯಮವಾಗಿದೆ. ಇದು ಮುಖ್ಯವಾಗಿ ಮನೆಯಲ್ಲಿಯೇ ಇರುವ ಮಹಿಳೆಯರು ಅಥವಾ ಹೆಣ್ಣು ಮಕ್ಕಳು, ಹಾಗೆಯೇ ಪುರುಷರು ಕೂಡ ಮಾಡಬಹುದಾದ ಅತ್ಯುತ್ತಮ ಕೆಲಸವಾಗಿದೆ.

ಇದನ್ನು ಪ್ರಾರಂಭಿಸಲು ಮೊದಲು ಇದರ ಮೇಲೆ ತರಬೇತಿ ಪಡೆದುಕೊಳ್ಳುವುದು ಮುಖ್ಯ ನಂತರದಲ್ಲಿ ಒಳ್ಳೆಯ ಹೋಲಿಗೆ ಯಂತ್ರವನ್ನು ಖರೀದಿಸಿ ನಿಮ್ಮ ಸಮೀಪದ ಗ್ರಾಹಕರಿಗೆ ಸೇವೆ ಒದಗಿಸಿ ಆದಾಯ ಗಳಿಸಿ.

05.ಟ್ರಾಕ್ಟರ್ ಅಥವಾ ಲೋಡಿಂಗ್ ವಾಹನ ಚಾಲನೆ

ಗ್ರಾಮೀಣ ಭಾಗದಲ್ಲಿ ಕೃಷಿ ಕಾರ್ಯಗಳು ಅತ್ಯಧಿಕಾ ರೀತಿಯಲ್ಲಿ ನಡೆಯುತ್ತದೆ. ಆದ್ದರಿಂದ ಇಲ್ಲಿ ಟ್ರ್ಯಾಕ್ಟರ್ ಅಥವಾ ಲೋಡಿಂಗ್ ವಾಹನಗಳ ಚಾಲಕರಿಗೆ ತುಂಬಾ ಬೇಡಿಕೆ ಇದೆ.ಮತ್ತು ಒಳ್ಳೆಯ ಬಾಡಿಗೆ ಪಡೆದು ಆದಾಯವನ್ನು ಗಳಿಸಬಹುದು.

ಇದಕ್ಕೆ ಅನುಭವದ ಜೊತೆಗೆ ಡ್ರೈವಿಂಗ್ ಲೈಸನ್ಸ್ ಇರುವುದು ಮುಖ್ಯ ಹಾಗೆಯೇ ನಿಮ್ಮ ಬಳಿ ಹೆಚ್ಚಿನ ಹಣ ಇಲ್ಲದಿದ್ದಲ್ಲಿ ಇತರರ ವಾಹನವನ್ನು ಚಾಲನೆ ಮಾಡಿ ಹಣವನ್ನು ಗಳಿಸಬಹುದು.

ಈ ಕೆಲಸಗಳು ಗೊತ್ತಿರಬೇಕು.

  • ಜಮೀನು ಅಥವಾ ಗದ್ದೆಯನ್ನು ಉಳುಮೆ ಮಾಡುವುದು
  • ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ಸಾಗಿಸುವುದು.
  • ಭಾರಿ ವಾಹನದ ಮೂಲಕ ಲೋಡ್ಗಳನ್ನು ಸಾಗಿಸುವುದು.

06.ಮೀನು ಸಾಕಣೆ (Fish Farming Business)

ಈ ಉದ್ಯೋಗ ಮಾಡಲು ಹೆಚ್ಚು ಜಮೀನಿನ ಅವಶ್ಯಕತೆ ಇಲ್ಲಾ.ಕಡಿಮೆ ಜಾಗದಲ್ಲಿಯೇ ಹೆಚ್ಚಿನ ಆದಾಯ ಕೊಡಬಹುದಾದ ಉದ್ಯೋಗ ಏನಾದರು ಇದ್ದಲ್ಲಿ ಅದು ಇದೇ.. ಮೀನು ಸಾಕಾಣಿಕೆ ಇಂದ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುವ ರೈತರಿದ್ದಾರೆ.

ಇದನ್ನು ಪ್ರಾರಂಭಿಸಲು ಕೆರೆ ನಿರ್ಮಾಣ ಅಥವಾ ಕೃತಕ ಟ್ಯಾಂಕ್ ನಿರ್ಮಾಣ ಮಾಡಿಕೊಳ್ಳಬೇಕು. ನಂತರ ಮೀನು ಮರಿಗಳನ್ನು ಖರೀದಿಸಿ ಅದನ್ನು ಟ್ಯಾಂಕ್ ನಲ್ಲಿರಿಸಿ ಸಾಕಾಣಿಕೆ ಮಾಡಬೇಕು. ಮುಖ್ಯವಾಗಿ ಆಹಾರವನ್ನು ನೀಡುವುದೇ, ಹೆಚ್ಚಿನ ಖರ್ಚಿಗೆ ಕಾರಣ ತದ ನಂತರದಲ್ಲಿ ಇದರ ಮಾರಾಟದ ಮೂಲಕ ಅಧಿಕ ಲಾಭಗಳಿಸಬಹುದು.

ಕೆರೆ ಅಥವಾ ಟ್ಯಾಂಕ್ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ.ತರಬೇತಿ ಪಡೆದು ಈ ಉದ್ಯೋಗ ಪ್ರಾರಂಸುವುದು ಸೂಕ್ತವಾಗಿದೆ.

07.ಫೋಟೋಗ್ರಾಫಿ & ವಿಡಿಯೋಗ್ರಾಫಿ

ಈಗ ಎಲ್ಲಾ ಸಭಾ ಸಮಾರಂಭಗಳಲ್ಲಿಯೂ ಫೋಟೋ ಅಥವಾ ವಿಡಿಯೋ ಚಿತ್ರೀಕರಣ ಮಾಡುವುದು ಸಹಜ.ಗ್ರಾಮಗಳಲ್ಲಿ ಮದುವೆ, ಹಬ್ಬ, ಕಾರ್ಯಕ್ರಮಗಳಿಗೆ ಫೋಟೋಗ್ರಾಫರ್ ಬೇಡಿಕೆ ಹೆಚ್ಚಾಗಿದೆ.ಆದ್ದರಿಂದ ಈ ಉದ್ಯೋಗವನ್ನು ಮಾಡುವುದರಿಂದ ಆದಾಯವನ್ನು ಗಳಿಸಬಹುದು.

ಇದಕ್ಕೆ ಮುಖ್ಯವಾಗಿ ಒಳ್ಳೆಯ ಕ್ಯಾಮೆರಾ ಹೊಂದುಯುದು ಅನಿವಾರ್ಯ ಆದ್ದರಿಂದ ಮೊದಲು ಉತ್ತಮವಾದ ಕ್ಯಾಮೆರಾ ವನ್ನು ಖರೀದಿಸಿ ಹಾಗೆಯೇ ಬೇಸಿಕ್ ಎಡಿಟಿಂಗ್ ಕೌಶಲ್ಯವನ್ನು ಕಲಿತುಕೊಳ್ಳಿ.

ಯಾವೆಲ್ಲಾ ಕೆಲಸಗಳು ದೊರೆಯುತ್ತದೆ?

  • ಮದುವೆ ಶೂಟ್ ಹಾಗೂ ಮದುವೆ ಮೊದಲು ಮತ್ತು ನಂತರದ ಫೋಟೋ ಶೂಟ್ (pre wedding and post wedding shoot)
  • ಮುಖ್ಯ ಕಾರ್ಯಕ್ರಮ ವಿಡಿಯೋ ಚಿತ್ರೀಕರಣ
  • ಫೋಟೋ ಆಲ್ಬಮ್ ಮತ್ತು ವಿಡಿಯೋ ಡಿಜಿಟಲ್ ಉಪಕರಣ (ಪೆನ್ಡ್ರೈವ್)

ಡ್ರೋನ್ ನಂತಹ ದುಬಾರಿ ಉಪಕರಣಗಳ ಬಳಕೆ ಮಾಡಿ ಚಿತ್ರೀಕರಣ ಮಾಡಿದರೆ ಅಧಿಕ ಲಾಭಗಳಿಸಬಹುದು.

08.ಸಣ್ಣ ವ್ಯಾಪಾರ (Small Business Ideas)

ಗ್ರಾಮದಲ್ಲಿ ಸಣ್ಣ ವ್ಯಾಪಾರ ಆರಂಭಿಸುವುದು ಸುರಕ್ಷಿತ ಮತ್ತು ಲಾಭದಾಯಕವು ಆಗಿದೆ. ಇದರಿಂದ ಒಂದು ಒಳ್ಳೆಯ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ.

ಉದಾಹರಣೆಗೆ :-

  • ಟೀ ಸ್ಟಾಲ್ ಮಾಡಿ ಮಾರಾಟ
  • ಗ್ರಾಮೀಣ ಪ್ರದೇಶದಲ್ಲಿ ಕಿರಾಣಿ ಅಂಗಡಿ ಮಾಡುವುದು
  • ತರಕಾರಿ ಮತ್ತು ಹಣ್ಣು ಮಾರಾಟದ ಅಂಗಡಿ
  • ಇತ್ಯಾದಿ

ಜನರ ಹೆಚ್ಚು ವ್ಯವಹಾರ ಮಾಡುವ ಪ್ರದೇಶವನ್ನು ನೋಡಿ, ನಿಮ್ಮ ಅಂಗಡಿಯನ್ನು ಪ್ರಾರಂಭಿಸಿ. ಮುಖ್ಯವಾಗಿ ಮಾರುಕಟ್ಟೆಯಂತಹ ಪ್ರದ್ರಶವನ್ನು ಆಯ್ಕೆ ಮಾಡಿಕೊಳ್ಳಿ. ದಿನನಿತ್ಯದ ವಸ್ತುಗಳು ನಿಮ್ಮ ಅಂಗಡಿಯಲ್ಲಿ ಸಿಗುವಂತೆ ನೋಡಿಕೊಳ್ಳಿ.

Best Jobs For Rural Area
Best Jobs For Rural Area

09.ಸೈಬರ್ / ಗ್ರಾಹಕ ಸೇವಾ ಕೇಂದ್ರ / ಗ್ರಾಮ ಒನ್ ತೆರೆಯುವುದು.

ಇಂದಿನ ದಿನಗಳಲ್ಲಿ ಸರ್ಕಾರದ ಪ್ರತಿಯೊಂದು ಯೋಜನೆ, ಉದ್ಯೋಗ, ಶಿಕ್ಷಣ ಸಂಬಂಧಿಸಿದ ಕಾರ್ಯಗಳು ಇಂಟರ್ನೆಟ್ ಮೂಲಕವೇ ನಡೆಯುತ್ತದೆ. ಆದ್ದರಿಂದಲೇ ಗ್ರಾಮೀಣ ಭಾಗದಲ್ಲಿ ಸೈಬರ್ ಸೆಂಟರ್ ಅನ್ನು ತೆರೆಯುವುದರಿಂದಲೂ ಸಹ ಒಳ್ಳೆಯ ಆದಾಯವನ್ನು ಗಳಿಸಬಹುದು.

ಇದನ್ನು ಮುಖ್ಯವಾಗಿ, ಶಾಲೆ, ಬ್ಯಾಂಕ್,ಗ್ರಾಮ ಪಂಚಾಯತ್ ಮತ್ತು ಇತರೆ ಸರ್ಕಾರಿ ಕಚೇರಿಗಳಾದ ನೆಮ್ಮದಿ ಕೇಂದ್ರ, ತಹಸೀಲ್ದಾರ್ ಕಚೇರಿ ಹತ್ತಿರ ಪ್ರಾರಂಸುವುದು ಸೂಕ್ತ.

10.ಮೊಬೈಲ್ ಆಧಾರಿತ ಉದ್ಯೋಗಗಳು (Online Income)

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮೂಲಕ ಹಣ ಸಂಪಾದನೆ ಮಾಡಬಹುದಾಗಿದೆ. ಯಾವುದೇ ಮಧ್ಯವರ್ತಿ ಸಹಾಯ ವಿಲ್ಲದೆ ಮನೆಯಲ್ಲಿಯೇ ಇದ್ದುಕೊಂಡು ಮೊಬೈಲ್ ಫೋನ್ ಮೂಲಕ ಹಣವನ್ನು ಸಂಪಡಿಸಬಹುದು. ಆದರೂ ಇದಕ್ಕೆ ಕೆಲವೊಂದು ಕೌಶಲ್ಯಗಳು ಹೊಂದಿರುವುದು ಮುಖ್ಯ ಹಾಗೆಯೇ ತಾಳ್ಮೆ ಅತಿ ಅವಶ್ಯಕ.

ಉದಾಹರಣೆಗೆ :-

  • ಯೌಟ್ಯೂಬ್ ಚಾನೆಲ್ ಮಾಡಿ ಹಣ ಗಳಿಸಿ
  • freelancing ಮೂಲಕ ಗಳಿಕೆ
  • ಆನ್ಲೈನ್ ಕೋಚಿಂಗ್ ಮಾಡಿ
  • ಇತ್ಯಾದಿ

ಕೊನೆಯದಾಗಿ

ಕಡಿಮೆ ವಿದ್ಯಾಭ್ಯಾಸ ಎಂದರೆ ಜೀವನದಲ್ಲಿ ಅವಕಾಶಗಳು ಇಲ್ಲ ಎಂದು ತಿಯುವುದು ಮೂರ್ಖತನ. ಇಂದಿನ ಕಾಲದಲ್ಲಿ ಕೌಶಲ್ಯ ಹಾಗೂ ಕೆಲಸ ಸೇರಿ ಸಕ್ಸಸ್ ಪಡೆಯಬಹುದು.

ಗ್ರಾಮೀಣ ಯುವಕರು ಈ ಮೇಲೆ ತಿಳಿಸಿರುವ ಉದ್ಯೋಗಗಳನ್ನು (Rural Jobs in karnataka )ಡಿಕೊಂಡು ಸರಿಯಾಗಿ ಪ್ರಯತ್ನ ಮಾಡಿ, ತಮ್ಮ ಊರಲ್ಲೇ ಉತ್ತಮ ಆದಾಯ ಗಳಿಸಿ ಗೌರವಯುತ ಜೀವನ ನಡೆಸಬಹುದಾಗಿದೆ.


ಹೈನುಗಾರಿಕೆ ಅಥವಾ ಡೈರಿ ಫಾರ್ಮ್ ಮಾಡಲು ಸರ್ಕಾರದಿಂದ ಸಹಾಯಧನ ಸಿಗುತ್ತದೆಯೇ?

ಹೌದು, ಸರ್ಕಾರದಿಂದ ಹಾಗೂ ಬ್ಯಾಂಕ್ ಗಳ ಮೂಲಕ ಸಾಲ ಸೌಲಭ್ಯ ಮತ್ತು ಸಬ್ಸಿಡಿ ದೊರಕುತ್ತದೆ.

ಗ್ರಾಮ ಒನ್ ಕೇಂದ್ರಗಳನ್ನು ಎಲ್ಲಿ ತೆರೆಯಬೇಕು?

ನಿಮ್ಮ ಗ್ರಾಮ ಪಂಚಾಯತ್, ಬ್ಯಾಂಕ್, ಸರ್ಕಾರಿ ಕಚೇರಿಗಳ ಸಮೀಪದಲ್ಲಿ ತೆರೆಯುವುದರಿಂದ ಅಧಿಕ ಲಾಭಗಳಿಸಬಹುದು.

About Content Writer
Jayanth

Jayanth

ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.

About Us →
WhatsApp Group Join Now
Telegram Group Join Now

Leave a Comment