SSC GD 2026: ಪರೀಕ್ಷೆ ದಿನಾಂಕ ಮತ್ತು Hall Ticket -Today Update

WhatsApp Group Join Now
Telegram Group Join Now

ಕೇಂದ್ರ ಸರ್ಕಾರದ ಪ್ರಮುಖ ಮತ್ತು ಹೆಚ್ಚು ಜನಪ್ರಿಯ ನೇಮಕಾತಿಗಳಲ್ಲಿ ಒಂದಾಗಿರುವ SSC GD 2026 ರ ಪರೀಕ್ಷೆಯ ದಿನಾಂಕ ಮುಂದೂಡಿಕೆ, ಪರೀಕ್ಷಾ ಸ್ಲಾಟ್ ಸ್ವ ಆಯ್ಕೆ ಮಾಡಿಕೊಳ್ಳುವುದು ಮತ್ತು ಅಡ್ಮಿಟ್ ಕಾರ್ಡ್ ಬಿಡುಗಡೆಯ ಬಗ್ಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ ( SSC ) ಕಡೆಯಿಂದ ಅಧಿಕೃತ ಮಾಹಿತಿ ನೀಡಲಾಗಿದೆ.

SSC GD 2026 ಪರೀಕ್ಷೆ ದಿನಾಂಕದ ಇತ್ತೀಚಿನ ಅಪ್ಡೇಟ್

SSC ಯು ದಿನಾಂಕ 17 ಫೆಬ್ರವರಿ 2026 ರಂದು ಅಧಿಕೃತವಾಗಿ SSC GD ರ ಪರೀಕ್ಷೆಯ ದಿನಾಂಕ, ಪರೀಕ್ಷೆಯ ಸ್ಲಾಟ್ ಆಯ್ಕೆ ಮತ್ತು ಅಡ್ಮಿಟ್ ಕಾರ್ಡ್ ಬಗ್ಗೆ ಮಾಹಿತಿ ನೀಡಿದ್ದು, ಸದರಿ ಸೂಚನೆಯಲ್ಲಿ ಮೊದಲೇ ನಿಗದಿಪಡಿಸಲಾದ ಪರೀಕ್ಷಾ ದಿನಾಂಕ ( ಈ ಮೊದಲೇ ನಿಗದಿಪಡಿಸಿದ ದಿನಾಂಕ 23-02-2026 ) ವನ್ನು ಮುಂದೂಡಲಾಗಿದೆ ಎಂದು ಸೂಚನೆ ನೀಡಿದೆ.

ಈ ಅಧಿಕೃತ ಸೂಚನೆಯನ್ನು ನೋಡಲು ನಮ್ಮ ಟೆಲಿಗ್ರಾಂ ಗ್ರೂಪ್ ಗೆ ಜಾಯಿನ್ ಆಗಿ.

SSC GD 2026 ಹೊಸ ಪರೀಕ್ಷೆ ದಿನಾಂಕ ಯಾವಾಗ?

ಪ್ರಸ್ತುತ SSC ಕಡೆಯಿಂದ ಬಂದಿರುವ ಮಾಹಿತಿಯಲ್ಲಿ ಹೊಸ ದಿನಾಂಕವನ್ನು ಪ್ರಸ್ತಾಪಿಸಿಲ್ಲ, ಆದರೆ ಹೊಸದಾದ ದಿನಾಂಕದ ಬಗ್ಗೆ ನಂತರದ ದಿನಗಳಲ್ಲಿ ತಿಳಿಸಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಹೊಸ ದಿನಾಂಕವನ್ನು ಸದ್ಯದಲ್ಲೇ ಬಿಡುವ ಸಾಧ್ಯತೆಗಳಿವೆ. ಆದ್ದರಿಂದ ಪರೀಕ್ಷೆಯ ತಯಾರಿಯನ್ನು ಚುರುಕುಗೊಳಿಸುವುದು ಅವಶ್ಯಕ.

Admit Card ಬಿಡುಗಡೆ ದಿನಾಂಕ

ಸ್ಟಾಫ್ ಸೆಲೆಕ್ಷನ್ ಕಮಿಷನ್ ಕಡೆಯಿಂದ ಅಧಿಕೃತವಾಗಿ ನೀಡಿರುವ ಸೂಚನಾ ಪತ್ರದಂತೆ ಪರೀಕ್ಷೆ ದಿನಾಂಕಕ್ಕೂ 8 ರಿಂದ 10 ದಿನಗಳ ಮೊದಲೇ ಸ್ಥಳ ಸೂಚನೆ ( city intimation ) ಅನ್ನು ಬಿಡಲಾಗುವುದು ಹಾಗೆಯೇ ಪರೀಕ್ಷಾ ದಿನಾಂಕದ 2 ರಿಂದ 3 ದಿನಗಳ ಮೊದಲು ಅಡ್ಮಿಟ್ ಕಾರ್ಡ್ ಅನ್ನು ಅಭ್ಯರ್ಥಿಗಳು ಪಡೆಯಬಹುದು ಎಂದು ತಿಳಿಸಿದೆ.

City Intimation ನೋಡುವುದು ಮತ್ತು Admit card ಡೌನ್ಲೋಡ್ ಮಾಡುವುದು ಹೇಗೆ?

ಸ್ಟಾಫ್ ಸೆಲೆಕ್ಷನ್ ಕಮಿಷನ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಈ ಕೆಳಗಿನ ಹಂತಗಳನ್ನು ಪಾಲಿಸುವುದರ ಮೂಲಕ ತಿಳಿಯಬಹುದು.

  • SSC ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  • ಲಾಗಿನ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ username ಮತ್ತು ಪಾಸ್ವರ್ಡ್ ಜೊತೆಗೆ ಕ್ಯಾಪ್ಟ ಕೋಡ್ ನಮೂದಿಸಿ ಲಾಗಿನ್ ಮೇಲೆ ಕ್ಲಿಕ್ ಮಾಡಿ.
  • ನಂತರ Admission Certificate ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಪರೀಕ್ಷೆಯ ಹೆಸರನ್ನು ಮತ್ತು ವರ್ಷವನ್ನು ಆಯ್ಕೆ ಮಾಡಿ.
  • city live ಅಥವಾ ಅಡ್ಮಿಟ್ ಕಾರ್ಡ್ ಬಿಡುಗಡೆಯಾಗಿದ್ದರೆ ಅಲ್ಲಿಯೇ ತೋರುತ್ತದೆ.
  • ನಂತರ ಬೇಕಿದ್ದರೆ ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಬಹುದು.

ಇಲ್ಲಿಯ ತನಕ 2026 ರ SSC GD ರ City Live ಮತ್ತು ಅಡ್ಮಿಟ್ ಕಾರ್ಡ್ ಬಿಡುಗಡೆಯಾಗದ ಕಾರಣ ಅಧಿಕೃತ ವೆಬ್ಸೈಟ್ ನಲ್ಲಿ ತೋರಿಕೆಯಾಗುತ್ತಿಲ್ಲ.

ಆಯ್ಕೆ ಪ್ರಕ್ರಿಯೆ (SSC GD Selection Process)

ಈ ನೇಮಕಾತಿಯನ್ನು ಕೇಂದ್ರ ಸರ್ಕಾರದ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಅವರು ನಡೆಸುತ್ತಾರೆ. ಪ್ರಸ್ತುತ ಈ ನೇಮಕಾತಿಗೆ 3 ಹಂತಗಳ ನೇಮಕಾತಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

SSC GD 2026

1.CBT ಪರೀಕ್ಷೆ

ನೇಮಕಾತಿ ಅಧಿಸೂಚನೆಯ ನಂತರ ಅರ್ಜಿ ಸಲ್ಲಿಸಿ ಆಯ್ಕೆ ಪ್ರಕ್ರಿಯೆಯ ಮೊದಲ ಹಂತವನ್ನು ಪ್ರಾರಂಭಿಸುತ್ತಾರೆ. ಅದುವೇ CBT ಪರೀಕ್ಷೆ ಅಂದರೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ಎಂದು ಬಹು ಆಯ್ಕೆ ಮಾದರಿಯ ಪ್ರಶ್ನೆ ಪತ್ರಿಕೆಯಾಗಿದ್ದು,ಕಂಪ್ಯೂಟರ್ ಸಹಾಯದಿಂದ ಈ ಪರೀಕ್ಷೆ ನಡೆಯುದರಿಂದ ಇದಕ್ಕೆ CBT ಪರೀಕ್ಷೆ ಎಂದು ಕರೆಯುತ್ತಾರೆ.

ಇಲ್ಲಿ ಒಟ್ಟು 4 ಭಾಗಗಳಲ್ಲಿ 80 ಪ್ರಶ್ನೆಗಳನ್ನು ಕೇಳಲಾಗುತ್ತದೆ.ಪ್ರತಿ ಪ್ರಶ್ನೆಗೆ 2 ಅಂಕದಂತೆ ಒಟ್ಟು 160 ಅಂಕಗಳಿಗೆ 60 ನಿಮಿಷಗಳ ಸಮಯವಕಾಶದೊಂದಿಗೆ ಪರೀಕ್ಷೆ ನಡೆಸಲಾಗುತ್ತದೆ.

ಈ ಕೆಳಗಿನಂತೆ ವಿಷಯಗಳಿಗೆ ಅಂಕಗಳನ್ನು ಹಂಚಿಕೆ ಮಾಡಲಾಗಿದೆ.

ಸಾಮಾನ್ಯ ಬುದ್ದಿಮತ್ತೆ ಮತ್ತು ತಾರ್ಕಿಕ 20 ಪ್ರಶ್ನೆಗಳು
ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಅರಿವು 20 ಪ್ರಶ್ನೆಗಳು
ಗಣಿತ 20 ಪ್ರಶ್ನೆಗಳು
ಇಂಗ್ಲಿಷ್ / ಹಿಂದಿ 20 ಪ್ರಶ್ನೆಗಳು

2.ದೈಹಿಕ ಸಾಮರ್ಥ್ಯ ಮತ್ತು ದೈಹಿಕ ಸಹಿಷ್ಣುತೆ ಪರೀಕ್ಷೆ

ಮೇಲೆ ತಿಳಿಸಿರುವ ಹಾಗೆ CBT ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳ ಮೇಲೆ ಎರಡನೇ ಹಂತವಾದ ದೈಹಿಕ ಸಾಮರ್ಥ್ಯ ಮತ್ತು ದೈಹಿಕ ಸಹಿಷ್ಣುತೆ ಪರೀಕ್ಷೆಗೆ ಆಯ್ಕೆ ಪಟ್ಟಿಯನ್ನು ಬಿಡಲಾಗುತ್ತದೆ.

ಈ ಹಂತದಲ್ಲಿ ಅಭ್ಯರ್ಥಿಯ ದೈಹಿಕ ಸಾಮರ್ಥ್ಯ ವನ್ನು ಎತ್ತರ, ತೂಕ ಮತ್ತು ಎದೆಯ ಸುತ್ತಳತೆಯೊಂದಿಗೆ (chest ) ಅಳತೆ ಮಾಡಿ ಪರೀಕ್ಷಿಸಲಾಗುತ್ತದೆ. ಹಾಗೆಯೇ ಅಭ್ಯರ್ಥಿಯ ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಪುರುಷ ಅಭ್ಯರ್ಥಿಗಳಿಗೆ 5 ಕಿಲೋಮೀಟರ್ ದೂರವನ್ನು 24 ನಿಮಿಷಗಳಲ್ಲಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ 1.6 ಕಿಲೋಮೀಟರ್ ದೂರವನ್ನು 8 ನಿಮಿಷ 30 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಬೇಕು.

3.ವೈದ್ಯಕೀಯ ಮತ್ತು ದಾಖಲೆ ಪರಿಶೀಲನೆ

ಮೇಲಿನ ಹಂತವನ್ನು ಪೂರ್ಣ ಗೊಳಿಸಿದವರನ್ನು ಹುದ್ದೆಗಳ ಅನುಪಾತದ ಮೇಲೆ ಮೂರನೇ ಹಂತಕ್ಕೆ ಆಯ್ಕೆ ಪಟ್ಟಿಯನ್ನು ಬಿಡಲಾಗುತ್ತದೆ.

ಈ ಹಂತದಲ್ಲಿ ಅಭ್ಯರ್ಥಿಯ ಪೂರ್ಣ ಶಾರೀರಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಜೊತೆಗೆ ಅರ್ಜಿ ಸಲ್ಲಿಕೆಯ ಸಮಯದಲ್ಲಿ ನೀಡಿರುವ ಎಲ್ಲಾ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತದೆ.

ಈ ಮೇಲಿನ 3 ಹಂತಗಳನ್ನು ಪೂರ್ಣಗೊಳಿಸಿದ ಮೇಲೆ ಆ ನೇಮಕಾತಿಯಲ್ಲಿ ನೀಡಲಾದ ಹುದ್ದೆಗಳ ಸಂಖ್ಯೆಗನುಗುಣವಾಗಿ ಅಂತಿಮ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.


SSC GD 2026 ಪರೀಕ್ಷೆ ಯಾವಾಗ? ( When is SSC GD 2026 Exam? )

SSC ಕಡೆಯಿಂದ ಇನ್ನೂ ಪರೀಕ್ಷಾ ದಿನಾಂಕದ ಬಗ್ಗೆ ಯಾವುದೇ ಪ್ರಕಟಣೆ ಬಂದಿಲ್ಲ.ಅಭ್ಯರ್ಥಿಗಳು ಆಗಾಗ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವುದರಿಂದ ತಿಳಿಯಬಹುದು.

SSC GD 2026 ಪರೀಕ್ಷೆ ಮುಂದೂಡಲ್ಪಟ್ಟಿದೆಯೇ? ( Is SSC GD 2026 Exam Postponed? )

ಹೌದು, 2026 ರ SSC GD ನೇಮಕಾತಿಯ ನಿಗದಿ ಪಡಿಸಿರುವ ದಿನಾಂಕವನ್ನು ಬದಲಿಸಿ ನಂತರ ತಿಳಿಸುವ ದಿನಾಂಕದವರೆಗೆ ಮುಂದೂಡಲಾಗಿದೆ.

SSC GD 2026 ಅಡ್ಮಿಟ್ ಕಾರ್ಡ್ ಯಾವಾಗ ಬಿಡುಗಡೆ ಆಗುತ್ತದೆ? ( When will SSC GD 2026 Admit Card be released? )

SSC ಕಡೆಯಿಂದ ಅಧಿಕೃತ ಪರೀಕ್ಷಾ ದಿನಾಂಕ ಪ್ರಕಟಗೊಂಡಾಗ, ಪರೀಕ್ಷಾ ದಿನಾಂಕಕ್ಕೂ 2 ರಿಂದ 3 ದಿನಗಳ ಮೊದಲು ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವಿರುತ್ತದೆ.

SSC GD Admit Card ಅನ್ನು ಹೇಗೆ ಡೌನ್‌ಲೋಡ್ ಮಾಡುವುದು? ( How to download SSC GD Admit Card? )

SSC ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ — ಲಾಗಿನ್ ಮಾಡಿ — Admission Certificate ಗೆ ಹೋಗಿ — ಪರೀಕ್ಷೆ ಮತ್ತು ವರ್ಷವನ್ನು ಆಯ್ಕೆ ಮಾಡಿ — ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಿ.

About Content Writer
Jayanth

Jayanth

ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.

About Us →
WhatsApp Group Join Now
Telegram Group Join Now

Leave a Comment