Table of Contents
ಸಂದರ್ಶನದ ಮಹತ್ವ
ಸಂದರ್ಶನ(Interview) ಎಂದರೆ ಬರಿಯ ಪ್ರಶ್ನೋತ್ತರದ ಕಾಲಹರಣವಲ್ಲ. ಅದು ವ್ಯಕ್ತಿಯ ವ್ಯಕ್ತಿತ್ವ, ಆಸಕ್ತಿ ಮತ್ತು ಆ ಹುದ್ದೆಗೆ ಆ ವ್ಯಕ್ತಿಯ ಹೊಂದಾಣಿಕೆಯನ್ನು ಪರೀಕ್ಷಿಸುವ ಒಂದು ಪ್ರಕ್ರಿಯೆಯಾಗಿದೆ. ಸಂಸ್ಥೆಗೆ ಆ ಅಭ್ಯರ್ಥಿ ಲಾಭದಾಯಕನಾಗಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಪ್ರಮುಖ ಹಂತವೇ ಸಂದರ್ಶನ.
ಆದ್ದರಿಂದ ಯಾವುದೇ ಅಭ್ಯರ್ಥಿಯು ಸಂದರ್ಶನದ ಬಗ್ಗೆ ಭಯ ಹೊಂದುವ ಬದಲು ಆ ಸಂದರ್ಶನಕ್ಕೆ ನಾನೇನು ನೀಡಬಲ್ಲೆ ಎನ್ನುವುದನ್ನು ಮೊದಲು ತಿಳಿಯಬೇಕು. ಮುಖ್ಯವಾಗಿ ಆ ಸಂದರ್ಶನದಲ್ಲಿ ಈ ಕೆಳಗಿನ ಅಂಶಗಳನ್ನು ನೋಡಿ ನಿಮ್ಮನ್ನು ಅಳೆಯುತ್ತಾರೆ.
ಅವುಗಳೆಂದರೆ:-
- ಕಂಪನಿ ಅಥವಾ ಸಂಸ್ಥೆಯ ಬಗ್ಗೆ ಎಷ್ಟು ತಿಳಿದುಕೊಂಡಿರುವಿರಿ.
- ಜಾಬ್ ರೋಲ್ ನ ಬಗ್ಗೆ ನಿಮ್ಮ ಆಸಕ್ತಿ
- ನಿಮ್ಮ ಶಕ್ತಿಗಳು ಮತ್ತು ನಿರ್ಬಲತೆಗಳು ಇದರಿಂದ ಹುದ್ದೆಗೆ ಆಗುವ ಅನುಕೂಲಗಳು
- ತಾಂತ್ರಿಕ ಮತ್ತು ಪ್ರಚಲಿತ ವಿಷಯದ ಗ್ರಹಿಕೆ
- ಸಂವಹನ, ಕೌಶಲ್ಯ ಮತ್ತು ಆತ್ಮವಿಶ್ವಾಸ
- ಬಾಡಿ ಲ್ಯಾಂಗ್ವೇಜ್ ಮತ್ತು ವೇಷಭೂಷಣ
ಇವೆಲ್ಲವೂ ನಿಮ್ಮ ಸಂದರ್ಶನದ ಬಗ್ಗೆ ಮತ್ತು ನಿಮ್ಮ ವ್ಯಕ್ತಿತ್ವದ ಅನಾವರಣದ ಬಗ್ಗೆ ಬೆಳಕು ಚೆಲ್ಲುತ್ತದೆ. ಇವುಗಳನ್ನು ಸರಿಯಾಗಿ ತಿಳಿದುಕೊಳ್ಳುವುದರಿಂದ ಉತ್ತಮವಾದ ಸಂದರ್ಶನವನ್ನು ನೀಡಿ ನಿಮ್ಮ ನೆಚ್ಚಿನ ಸಂಸ್ಥೆಯಲ್ಲಿ ಹುದ್ದೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದರ ಬಗ್ಗೆ ಒಂದೊದಾಗಿ ತಿಳಿದುಕೊಳ್ಳೋಣ.

1. ನಿಮ್ಮ ಗುರಿಯನ್ನು ಸ್ಪಷ್ಟಪಡಿಸಿಕೊಳ್ಳುವುದು
ನೀವು ಎಲ್ಲದಕ್ಕೂ ಮೊದಲು ಸಂದರ್ಶನವನ್ನು ಪಡೆಯಬೇಕೆಂಬ ಬಯಕೆ ಹೊಂದಿದ್ದೀರಿ ಎಂದರೆ ನಿಮಗೆ ಆ ಸಂಸ್ಥೆ ಅಥವಾ ಹುದ್ದೆಯ ಬಗ್ಗೆ ಆಸಕ್ತಿ ಇರುವುದು ತೋರಿಸುತ್ತದೆ. ಒಂದು ವೇಳೆ ನಿರಾಸಕ್ತಿಯೊಂದಿಗೆ ಸಂದರ್ಶನ ಎದುರಿಸಲು ಬಂದರೆ ಅದು ನಿಮ್ಮ ಪ್ರತಿಬಿಂಬದಂತೆ ಸಂದರ್ಶನ ಮಾಡುವ ಅನುಭವಿ ಸಂದರ್ಶಕರಿಗೆ ಮೊದಲೇ ತಿಳಿಯುತ್ತದೆ.
ಆದ್ದರಿಂದ ಮೊದಲು ನಿಮ್ಮ ಗುರಿಯನ್ನು ಸ್ಪಷ್ಟಪಡಿಸಿಕೊಂಡು ಆಸಕ್ತಿ ಇರುವ ಕಡೆ ಗಮನ ಕೊಟ್ಟು ಅಲ್ಲಿ ನಿಮ್ಮ ಸಮಯ ನೀಡಿದರೆ ನೀವು ಬೇಗನೆ sucess ಅನ್ನು ಪಡೆಯುತ್ತೀರಿ.ಸ್ಪಷ್ಟ ಗುರಿಯೊಂದಿಗೆ ಸಂದರ್ಶನ ಎದುರಿಸುವುದು ಮೊದಲನೇ ಪಾಠವಾಗಿದೆ.
2. ಕಂಪನಿಯ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.
ಅಭ್ಯರ್ಥಿ ತಾನು ಕೆಲಸ ಮಾಡಲು ಬಯಸುವ ಕಂಪನಿ ಅಥವಾ ಸಂಸ್ಥೆಯ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಸಂದರ್ಶಕರು ಮೊದಲು ಅಭ್ಯರ್ಥಿ ಆಸಕ್ತಿಯ ಜೊತೆಗೆ ನಮ್ಮ ಸಂಸ್ಥೆ ಬಗ್ಗೆ ಜ್ಞಾನವನ್ನು ಹೊಂದಿರುವನೇ ಇಲ್ಲವೇ ಎನ್ನುವುದನ್ನು ಪರೀಕ್ಷಿಸುತ್ತಾರೆ.
ಅಭ್ಯರ್ಥಿಯು ಈ ಕೆಳಗಿನ ಕಂಪನಿ ಅಂಶಗಳನ್ನು ನೋಡಿಕೊಳ್ಳುವುದು ಅತಿ ಮುಖ್ಯ.
- ಕಂಪನಿಯ ಲಾಭ ಮತ್ತು ನಷ್ಟ
- ಕಂಪನಿಯ ಕಾರ್ಯ ವೈಖರಿ
- ಈ ಕಾರ್ಯ ವೈಕರಿಯಿಂದ ಕಂಪನಿಯ ಲಾಭ ಅಥವಾ ನಷ್ಟ ಹೇಗೆ ನಿರ್ಧರಿಸಲ್ಪಟ್ಟಿದೆ.
- ಇವುಗಳನ್ನು ಪರಿಗಣಿಸಿ ನಾನು ಕಂಪನಿ ಅಥವಾ ಸಂಸ್ಥೆಗೆ ಉತ್ತಮವಾದವನ್ನು ಹೇಗೆ ಮತ್ತು ಏನನ್ನು ನೀಡಬಹುದು.
3. ಜಾಬ್ ರೋಲ್(Job Role) ಅರ್ಥ ಮಾಡಿಕೊಳ್ಳುವುದು
ಸಂದರ್ಶನದಲ್ಲಿ ಸಂದರ್ಶಕರು ಮುಖ್ಯವಾಗಿ ಅಭ್ಯರ್ಥಿಯು ತನ್ನ ಜಾಬ್ ಅನ್ನು ಹೇಗೆ ಪರಿಣಾಮಕಾರಿಯಾಗಿ ನಿರ್ವಹಿಸುತ್ತಾನೆ ಎಂದು ಪರೀಕ್ಷಿಸುತ್ತಾರೆ. ಆದ್ದರಿಂದ ಸಂದರ್ಶನಕ್ಕೆ ಹೋಗುವ ಮೊದಲು ಅಭ್ಯರ್ಥಿಯು ಕೆಲಸ ಮಾಡಲು ಇಚ್ಚಿಸುವ ಹುದ್ದೆಯ ಬಗ್ಗೆ ಸಾಕಷ್ಟು ತಿಳಿದುಕೊಳ್ಳುವುದು ಬಹಳ ಅವಶ್ಯಕ.
ಹಾಗೆ ನನ್ನಲ್ಲಿರುವ ಅನುಭವಗಳು ತಾನು ನಿರ್ವಹಿಸಬೇಕೆಂದಿರುವ ಹುದ್ದೆಗೆ ಹೇಗೆ ಸಹಕಾರಿಯಾಗಬಹುದು ಎಂಬುದರ ಬಗ್ಗೆ ಸಂದರ್ಶನದಲ್ಲಿ ಸಂದರ್ಶನಕ್ಕೆ ತಿಳಿಸುವುದರಿಂದ ಸಂದರ್ಶನದಲ್ಲಿ ತೇರ್ಗಡೆ ಹೊಂದಲು ಸಹಾಯಕವಾಗುತ್ತದೆ.
4. ನಿನ್ನ RESUME ಮೊದಲು ನೀನು ಅರಿಯಬೇಕು
ಆಗಲೇ ಹೇಳಿರುವ ಹಾಗೆ ಸಂದರ್ಶನ ಎನ್ನುವುದು ಬರಿಯ ಪ್ರಶ್ನೋತ್ತರದ ಆಟವಲ್ಲ. ನೀನೆ ಇದನ್ನು ಮುನ್ನಡೆಸುವ ಸಾರಥಿಯನ್ನಾಗಿಸಲು ನಿನ್ನ Resume ಸಹಕಾರಿಯಾಗುತ್ತದೆ.
ಸಂದರ್ಶನಕ್ಕೆ ನೀಡಿರುವ RESUME ಆಧಾರದ ಮೇಲೆ ಸಂದರ್ಶಕರು ನಿಮ್ಮನ್ನು ಪ್ರಶ್ನಿಸುತ್ತಾರೆ. ಪ್ರತಿ ಪ್ರಶ್ನೆ Resume ನಿಂದ ಬರಬೇಕೆಂದಿಲ್ಲ. ಆದರೂ ಸಹ Resume ಎನ್ನುವುದು ಸಂದರ್ಶಕರು ಮತ್ತು ನಿಮ್ಮ ಮಧ್ಯದ ಮಾಹಿತಿ ಸೇತುವೆಯಂತೆ ಕಾರ್ಯನಿರ್ವಹಿಸುತ್ತದೆ. ಸಂದರ್ಶಕರಿಗೆ ನಿಮ್ಮ ವಿದ್ಯಾಭ್ಯಾಸ ಆಸಕ್ತಿ ಮತ್ತು ನಿಮ್ಮ ಸಾಧನೆಗಳ ಬಗ್ಗೆ ತಿಳಿಸುವ ಹೊತ್ತಿಗೆಯಾಗಿದೆ.
ಆದ್ದರಿಂದ ಸಂದರ್ಶನಕ್ಕೆ ತೆರಳುವ ಮೊದಲು Resume ನಲ್ಲಿರುವಂತ ಪ್ರತಿ ಅಂಶದ ಮೇಲೆ ನೀವೇ ಪ್ರಶ್ನೆಗಳನ್ನು ಮಾಡಿ ಉತ್ತರಗಳನ್ನು ನೀವೇ ಕಂಡುಕೊಳ್ಳುವುದರಿಂದ ಸಂದರ್ಶನದಲ್ಲಿ ಸಹಕಾರಿಯಾಗುತ್ತದೆ.
ನಮ್ಮ Telegram channel ಅನ್ನು ಸಹ ಅನುಸರಿಸಿ.
5. ತಾಂತ್ರಿಕ ಜ್ಞಾನ ಮತ್ತು ವಿಷಯ ಗ್ರಹಿಕೆ(Technical Knowledge )
ನಿಗದಿಪಡಿಸು ಹುದ್ದೆಗೆ ಸಂಬಂಧಿಸಿದ ತಾಂತ್ರಿಕ ಜ್ಞಾನವನ್ನು ಆಳವಾಗಿ ತಿಳಿದಿರುವುದು ಬಹಳ ಮುಖ್ಯ ಏಕೆಂದರೆ ಸಂದರ್ಶನದಲ್ಲಿ ಒಂದು ಸಮಸ್ಯೆಯನ್ನು ನಿಮ್ಮ ಮುಂದೆ ಇರಿಸಿ ಇದಕ್ಕೆ ಪರಿಹಾರವನ್ನು ತಿಳಿಸಲು ಸಂದರ್ಶಕರು ಕೇಳುವುದುಂಟು.
ಆದ್ದರಿಂದ ಆ ಸಮಯಕ್ಕೆ ಸರಿಯಾದ ಉತ್ತರ ನೀಡಲು ತಾಂತ್ರಿಕ ಜ್ಞಾನವನ್ನು ಆಳವಾಗಿ ತಿಳಿದುಕೊಂಡು ವಿಷಯ ಗ್ರಹಿಕೆ ಮಾಡಿಕೊಳ್ಳುವುದರಿಂದ ಸಂದರ್ಶನನ್ನು ಉತ್ತಮವಾಗಿಸಬಹುದು.

6. ಸಂವಹನ ಕೌಶಲ್ಯ ಮತ್ತು ಆತ್ಮವಿಶ್ವಾಸ
ಅತಿ ಮುಖ್ಯವಾದ ಅಂಶವೆಂದರೆ ಅದುವೇ ಸಂವಹನ ಕೌಶಲ್ಯ. ನಮಗೆ ತಿಳಿದಿರುವಂತೆ ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಈ ಮಾತಿಗೆ ಪೂರಕವಾಗಿ ಸಂವಹನ ಕೌಶಲ್ಯ ಹೊಂದಿರುವ ವ್ಯಕ್ತಿಯು ಆತ್ಮವಿಶ್ವಾಸದೊಂದಿಗೆ ತನ್ನ ಸಂದರ್ಶನವನ್ನು ತಾನೇ ಮುನ್ನಡೆಸಬಲ್ಲ. ಉತ್ತಮವಾದ ವಾಕ್ ಚಾತುರ್ಯ ಒಂದಿದ್ದರೆ ಸಾಕು ಎಂತಹ ಸಮಸ್ಯೆಯನ್ನಾದರೂ ಕ್ಷಣ ಮಾತ್ರದಲ್ಲಿ ವ್ಯವಹರಿಸಬಲ್ಲವನಾಗಿರುತ್ತಾನೆ. ಇದುವೇ ಸಂದರ್ಶನಕ್ಕೆ ಬಹಳ ಮುಖ್ಯವಾದ ಅಂಶವಾಗಿದೆ.
ಸಂದರ್ಶನಕ್ಕೆ ಹೋಗುವ ಅಭ್ಯರ್ಥಿಯು ಸಂವಹನ ಕೌಶಲ್ಯವನ್ನು ಅಭ್ಯಾಸ ಮಾಡಿ ರೂಢಿ ಮಾಡಿಕೊಳ್ಳುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದಾಗಿದೆ.
7. ಬಾಡಿ ಲ್ಯಾಂಗ್ವೇಜ್( Body Language ) ಮತ್ತು ವೇಷಭೂಷಣ( Dressing sense )
ವ್ಯಕ್ತಿಯ ಬೋಡಿ ಲ್ಯಾಂಗ್ವೇಜ್ ಮತ್ತು ಡ್ರೆಸ್ಸಿಂಗ್ ಸೆನ್ಸ್ ನಿಜವಾದ ಅಂತರಾಳವನ್ನು ವ್ಯಕ್ತಪಡಿಸುವಂತಹ ಅಂಶವಾಗಿದೆ. ಆದ್ದರಿಂದ ವ್ಯಕ್ತಿಯು ಉತ್ತಮವಾದ ಬಾಡಿ ಲ್ಯಾಂಗ್ವೇಜ್ ಅನ್ನು ರೂಡಿಸಿಕೊಳ್ಳುವುದು ಮತ್ತು ಸಂದರ್ಶನದ ಸಮಯದಲ್ಲಿ ಉತ್ತಮವಾದ ಡ್ರೆಸ್ ಅನ್ನು ಧರಿಸುವುದರಿಂದ ಸಂದರ್ಶಕರಿಗೆ ಮೊದಲ ನೋಟದಿಂದಲೇ ( First Impression ) ಸಕಾರಾತ್ಮಕ ಅಭಿಪ್ರಾಯ ಹೊಂದಲು ಸಹಕಾರಿಯಾಗುತ್ತದೆ.
ಬಾಡಿ ಲ್ಯಾಂಗ್ವೇಜ್ ಅನ್ನು ಒಂದು ದಿನ ಅಥವಾ ಒಂದು ವಾರದಲ್ಲಿ ಅಳವಡಿಸಿಕೊಳ್ಳುವ ಅಂಶವಲ್ಲ ಅದನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಸಂದರ್ಶನದಲ್ಲಿ ಸ್ವಾಭಾವಿಕವಾಗಿ ಕಾಣುತ್ತದೆ.
8.ಸಮಯ ನಿರ್ವಹಣೆ ಮತ್ತು ಶಿಸ್ತು (Time Management and Discipline )
ಇದರ ಬಗ್ಗೆ ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲ. ಏಕೆಂದರೆ ಈ ಅಂಶವನ್ನು ಅಳವಡಿಸಿಕೊಳ್ಳುವುದು ಪ್ರತಿಯೊಬ್ಬನ ಆದ್ಯತೆಯಾಗಬೇಕಾಗಿದೆ ಕೇವಲ ಸಂದರ್ಶನಕ್ಕಾಗಿ ಮಾತ್ರವಲ್ಲದೆ ಇಡೀ ಜೀವನಕ್ಕೂ ಇದರಿಂದ ಅನುಕೂಲಕರವಾಗುತ್ತದೆ.
ಯಶಸ್ವಿ ಸಂದರ್ಶನಕ್ಕೆ ಕೆಲ ಸಲಹೆಗಳು(Interview Tips)
- ಅಗತ್ಯಕ್ಕಿಂತ ಹೆಚ್ಚಿನ ಮಾತನ್ನು ಆಡಬೇಡಿ
- ಕೇಳಿರುವ ಪ್ರಶ್ನೆಗೆ ಸಂಬಂಧಿಸಿದಂತೆ ಬಿಟ್ಟು ಬೇರೆಯದ್ದನ್ನು ಮಾತನಾಡಬೇಡಿ.
- ಸ್ವಾಭಾವಿಕವಾಗಿ ವರ್ತಿಸಿ ಅತಿ ಗಾಂಭೀರ್ಯ ಮತ್ತು ಅತಿ ವಿರಳತೆ ಬೇಡ.
- ಸಂವಹನದ ಮೇಲೆ ನಿಗಾ ವಹಿಸಿ
- ಕಣ್ಣಿನ ಸಂಪರ್ಕ ದೊಂದಿಗೆ (eye contact) ಸಂವಹನ ನಡೆಸಿ,
- ಕೈ ಕಾಲು ಗಳ ಬಗ್ಗೆ ಗಮನವಿರಲಿ. ಸಂದರ್ಶನದಲ್ಲಿ ಅತಿಯಾಗಿ ಕೈಗಳನ್ನು ಬಳಕೆ ಮಾಡಬೇಡಿ.
- ಸಂದರ್ಶನದ ಕೋಣೆಯನ್ನು ಪ್ರವೇಶಿಸುವಾಗ ಅಪ್ಪಣೆ ಪಡೆಯಿರಿ ಮತ್ತು ನಂತರ ಸಂದರ್ಶಕರಿಗೆ ವಂದಿಸಿ (wish them).
ಕೊನೆಯದಾಗಿ
ಸರಿಯಾದ ಸಿದ್ಧತೆ, ಆತ್ಮವಿಶ್ವಾಸ ಮತ್ತು ಸ್ಪಷ್ಟ ಗುರಿಯಿದ್ದರೆ ಯಾವುದೇ ಸಂದರ್ಶನವನ್ನೂ ನಮ್ಮ ಪರವಾಗಿ ತಿರುಗಿಸಬಹುದು.
ಸಂದರ್ಶನವನ್ನು ಉತ್ತಮ ವನ್ನಾಗಿಸುವುದು ನಮ್ಮ ಕೈಯಲ್ಲಿ ಇರುವುದರಿಂದ ಅಭ್ಯರ್ಥಿಯ ವ್ಯಕ್ತಿತ್ವವೇ ಸಂದರ್ಶನವನ್ನು ಉತ್ತಮವಾಗಿಸಲು ಇರುವ ಸಾಧನವಾಗಿದೆ.ಆದ್ದರಿಂದ ಸಂದರ್ಶನಕ್ಕೆ ಹೋಗುವ ಮೊದಲು ಸರಿಯಾದ ಹೋಂವರ್ಕ್ ಮಾಡುವುದು ಅತಿ ಮುಖ್ಯ.
ಸಂದರ್ಶನಕ್ಕೆ ಹೇಗೆ ಸಿದ್ಧರಾಗಬೇಕು?(How should I prepare for an interview?)
ಸಂದರ್ಶನಕ್ಕೆ ಸಿದ್ಧರಾಗಲು ಮೊದಲು ಹುದ್ದೆ, ಕಂಪನಿ/ಸಂಸ್ಥೆ ಮತ್ತು ನಿಮ್ಮ Resume ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ. ತಾಂತ್ರಿಕ ಜ್ಞಾನ, ಸಂವಹನ ಕೌಶಲ್ಯ, ಆತ್ಮವಿಶ್ವಾಸ ಮತ್ತು ಬಾಡಿ ಲ್ಯಾಂಗ್ವೇಜ್ ಅಭ್ಯಾಸ ಮಾಡಿಕೊಳ್ಳಿ. ಸಮಯ ನಿರ್ವಹಣೆ ಮತ್ತು ಶಿಸ್ತು ಪಾಲಿಸುವುದೂ ಮುಖ್ಯ.
ಸಂದರ್ಶನ ಸಮಯದಲ್ಲಿ ಒತ್ತಡವನ್ನು ಹೇಗೆ ನಿಯಂತ್ರಿಸಬಹುದು?(How can I control stress during an interview?)
ಸಂದರ್ಶನಕ್ಕೆ ಕೆಲವು ಗಂಟೆಗಳ ಮೊದಲು ಸಮಾಧಾನದಿಂದ ಕುಳಿತುಕೊಳ್ಳಿ,ಆಳವಾದ ಉಸಿರಾಟದಿಂದ ಒತ್ತಡ ನಿರ್ವಹಣೆಗೆ ಸಹಕರಿಯಾಗುತ್ತದೆ.ಆತ್ಮವಿಶ್ವಾಸ ಮತ್ತು ದೃಢಸಂಕಲ್ಪ ಎಲ್ಲವನ್ನು ಜಯಿಸುವ ಮೂಲ ಮಂತ್ರ ಎನ್ನುವುದನ್ನು ನೆನಪಿಸಿಕೊಳ್ಳಿ.
Resume ಯು ಸಂದರ್ಶನಕ್ಕೆ ಹೇಗೆ ಸಹಕಾರಿ?(How a Resume helps in an interview)
Resume ಅಭ್ಯರ್ಥಿಯ ವಿದ್ಯಾಭ್ಯಾಸ, ಅನುಭವ ಮತ್ತು ಸಾಧನೆಗಳನ್ನು ಸಂದರ್ಶಕರಿಗೆ ಪರಿಚಯಿಸುವ ಸೇತುವೆಯಂತೆ ಕಾರ್ಯನಿರ್ವಹಿಸುತ್ತದೆ. ಸಂದರ್ಶನದಲ್ಲಿ ಪ್ರತಿ ಪ್ರಶ್ನೆ Resume ಆಧಾರದ ಮೇಲೆ ಬರುತ್ತದೆ, ಆದ್ದರಿಂದ Resume ನಲ್ಲಿನ ಎಲ್ಲಾ ಅಂಶಗಳನ್ನು ಸ್ವತಃ ತಿಳಿದಿರಬೇಕು ಮತ್ತು ಅದರ ಮೇಲೆ ಮೊದಲೇ ತಯಾರಿ ಮಾಡಿಕೊಂಡಿರಬೇಕು.
Jayanth
ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.
About Us →