Table of Contents
ಕೇಂದ್ರ ಸರಕಾರದ ಯೋಜನೆಗಳಲ್ಲಿ ಹೆಣ್ಣು ಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸಲು ಹಲವಾರು ಯೋಜನೆಗಳನ್ನು ಆರಂಭಿಸಿದೆ. ಇವುಗಳಲ್ಲಿ ಅತ್ಯಂತ ಜನಪ್ರಿಯ ಯೋಜನೆಗಳೆಂದರೆ ಅದುವೇ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana).
ಈ ಯೋಜನೆಯನೆಯು ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಮದುವೆ ಕಾರ್ಯಗಳ ಖರ್ಚುಗಳಿಗೆ ಹಣದ ಸಹಾಯ ಮಾಡುತ್ತದೆ. Post Office saving scheme ಗಳಲ್ಲಿಯೇ ಇದು ಜನಪ್ರಿಯ ಯೋಜನೆ ಎಂದು ಪರಿಗಣಿಸಲಾಗಿದೆ.
ನೀವು ದಿನಕ್ಕೆ ಕೇವಲ 100 ರೂ ಉಳಿಸಿದರೂ ದೀರ್ಘಕಾಲದಲ್ಲಿ ದೊಡ್ಡ ಮೊತ್ತದ ಹಣ ಪಡೆಯಬಹುದು.ಹೀಗೆ ಉಳಿತಾಯ ಮಾಡಿದ್ದಲ್ಲಿ,ಉಳಿಸಿದ ಈ ಹಣವನ್ನು 21 ವರ್ಷಗಳ ನಂತರದಲ್ಲಿ ಈ ಯೋಜನೆಯಿಂದ ಎಷ್ಟು ಹಣ ಪಡೆಯಬಹುದು? ಎಂಬ ಪ್ರಶ್ನೆ ಮೂಡುತ್ತದೆ.
ಈ ಲೇಖನದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿವರವಾಗಿ ತಿಳಿದುಕೊಳ್ಳೋಣ.ಲೇಖನವನ್ನು ಪೂರ್ಣ ಓದಿ.
ಸುಕನ್ಯಾ ಸಮೃದ್ಧಿ ಯೋಜನೆ ಎಂದರೇನು? (What is Sukanya Samriddhi Yojana)
Sukanya Samriddhi Yojana (SSY)ಯು ಭಾರತ ಸರ್ಕಾರದ small saving scheme ಆಗಿದ್ದು, ಇದನ್ನು 2015 ರಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ (Beti Bachao Beti Padhao) ಯೋಜನೆಯ ಭಾಗವಾಗಿ ಆರಂಭಿಸಲಾಯಿತು.
ಇದರಿಂದ ಹೆಣ್ಣು ಮಕ್ಕಳ ಭವಿಷ್ಯದ ನಿಧಿಯನ್ನು ಸಂಗ್ರಹಿಸಿ ಇಡಲು ದಾರಿಯಾದಂತೆಯಾಗಿದೆ.ಭವಿಷ್ಯದಲ್ಲಿ ಶಿಕ್ಷಣ, ಮದುವೆ ಕಾರ್ಯಕ್ಕೆ ಹಣದ ಸಹಾಯವಾಗುತ್ತದೆ.
ಈ ಯೋಜನೆಯ ಮುಖ್ಯ ಉದ್ದೇಶ
- ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಣ ಸಂಗ್ರಹಿಸುವುದು
- ಹೆಣ್ಣು ಮಕ್ಕಳ ಮದುವೆ ಖರ್ಚಿಗೆ ಹಣ ಸಹಾಯವಾಗಲೆಂದು
- ಪೋಷಕರಿಗೆ ಸುರಕ್ಷಿತ ಹೂಡಿಕೆ ಅವಕಾಶ ನೀಡುವುದು
ಈ ಯೋಜನೆಯ ಲಾಭ ಪಡೆಯಲು ಅಥವಾ ಹೆಚ್ಚಿಗಿನ ಮಾಹಿತಿ ಪಡೆಯಲು ಹತ್ತಿರದ Post Office ಅಥವಾ ರಾಷ್ಟ್ರೀಕೃತ ಬ್ಯಾಂಕ್ (Nationalized banks) ಗಳನ್ನು ವಿಚಾರಿಸಿ.
ಇದೆ ತರನಾದ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಅನ್ನು ಅನುಸರಿಸಿ.
ಈ ಯೋಜನೆಯ ಮುಖ್ಯ ಲಕ್ಷಣಗಳು
ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮುನ್ನ ಅದರ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳುವುದು ಅವಶ್ಯಕ.
1.ಖಾತೆ ತೆರೆಯುವ ವಯಸ್ಸು :
ಹೆಣ್ಣು ಮಕ್ಕಳ ವಯಸ್ಸು 10 ವರ್ಷಕ್ಕಿಂತ ಕಡಿಮೆ ಇರಬೇಕು.
2.ಕನಿಷ್ಠ ಹೂಡಿಕೆ ಹಣ :
ಒಂದು ಹಣಕಾಸಿನ ವರ್ಷದಲ್ಲಿ ಕನಿಷ್ಠ 250 ರೂ ಹೂಡಿಕೆ ಮಾಡಬೇಕು.
3.ಗರಿಷ್ಠ ಹೂಡಿಕೆ ಹಣ :
ಒಂದು ಹಣಕಾಸಿನ ವರ್ಷದಲ್ಲಿ ಗರಿಷ್ಠ 1,50,000 ರೂ ಹೂಡಿಕೆ ಮಾಡಬಹುದು.
4.ಖಾತೆಯ ಅವಧಿ :
ಈ ಯೋಜನೆಯ maturity period 21 ವರ್ಷಗಳು.
5.ಬಡ್ಡಿದರ :
ಸರ್ಕಾರವು ಕಾಲಕಾಲಕ್ಕೆ ನಿಗದಿ ಪಡಿಸುವ ಬಡ್ಡಿದರವು ದೊರೆಯುತ್ತದೆ.
ದಿನಕ್ಕೆ ₹100 ಉಳಿಸಿದರೆ ಎಷ್ಟು ಹಣ ಸಿಗುತ್ತದೆ?
ನೀವು ದಿನಕ್ಕೆ ₹100 ಉಳಿಸಿದರೆ ಒಂದು ತಿಂಗಳಿಗೆ 3,000₹ ಮತ್ತು ವರ್ಷಕ್ಕೆ 36,000₹ ಗಳು ಉಳಿತಾಯ ಅಥವಾ ಹೂಡಿಕೆ ಮಾಡಿದಂತಾಗುತ್ತದೆ.
ಈ ರೀತಿಯಾಗಿ 15 ವರ್ಷ ಹೂಡಿಕೆ ಮಾಡಿದರೆ ಆಯ್ತು,ನೀವು ಹೂಡಿಕೆ ಮಾಡಿದ ಒಟ್ಟು ಹಣ 5,40,000₹ ಆಗಿರುತ್ತದೆ. ಈ ಹಣಕ್ಕೆ ಚಕ್ರ ಬಡ್ಡಿ ಅಥವಾ compounding interest ದೊರೆಯುತ್ತದೆ. ಆದ್ದರಿಂದ 21 ವರ್ಷಗಳ ನಂತರ ದೊಡ್ಡ ಮೊತ್ತದ ಹಣ ಸಿಗುತ್ತದೆ.
ಒಂದು ವೇಳೆ ನೀವು 2026 ರಲ್ಲಿ ₹100 ದಿನಕ್ಕೆ ಅಂದರೆ ವರ್ಷಕ್ಕೆ 36,000₹ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, 15 ವರ್ಷದ ಹೂಡಿಕೆಯ ಅವಧಿಯ ನಂತರ ಒಟ್ಟು ಹೂಡಿಕೆಯ ಹಣ 5,40,000₹ ಆಗುತ್ತದೆ.ನಿಮ್ಮ maturity period 2047 (21 ವರ್ಷಗಳ ನಂತರ ) ಆಗಿರುತ್ತದೆ. ಆ ನಂತರ ದೊರೆತಿರುವ ಬಡ್ಡಿ ಹಣ ಸುಮಾರು 11 ಲಕ್ಷಕ್ಕೂ ಅಧಿಕ ಮತ್ತು maturity ಒಟ್ಟು ಹಣ 16 ಲಕ್ಷಕ್ಕೂ ಅಧಿಕ ದೊರೆಯುತ್ತದೆ.(ಪ್ರಸ್ತುತ ಬಡ್ಡಿ ದರ 8.2% ವನ್ನು ಪರಿಗಣಿಸಿ.)
Compound interest ಕಾರಣದಿಂದಾಗಿ ಹಣವು ದೀರ್ಘಕಾಲದಲ್ಲಿ ವೇಗವಾಗಿ ಹೆಚ್ಚಾಗುತ್ತದೆ.ಕೊನೆಯಲ್ಲಿ ದೊಡ್ಡ ಮೊತ್ತವನ್ನು ಪಡೆಯಬಹುದು.

ಸುಕನ್ಯಾ ಸಮೃದ್ಧಿ ಯೋಜನೆಯಿಂದಾಗುವ ಪ್ರಮುಖ ಲಾಭಗಳು
ಹೆಚ್ಚು ಬಡ್ಡಿದರ ( High Interest Rate ) : ಸಾಮಾನ್ಯವಾಗಿ ಈ ಯೋಜನೆಗೆ ಹೆಚ್ಚಿಗಿನ ಬಡ್ಡಿಯನ್ನು ಪಡೆಯಬಹುದು.
ಸರ್ಕಾರದ ಸುರಕ್ಷತೆ ( Government Guarantee ) : ಈ ಯೋಜನೆಯನ್ನು post office ಅಥವಾ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ತೆರೆಯುವುದರಿಂದ ಹಾಗೂ ಕೇಂದ್ರ ಸರ್ಕಾರದ ನೇರ ಯೋಜನೆಯಾಗಿರುವುದರಿಂದ ಸುರಕ್ಷತೆ ಇರುತ್ತದೆ.
ತೆರಿಗೆ ಲಾಭ (Tax Benefit ) : ಈ ಯೋಜನೆಯಿಂದ ಬರುವ ಲಾಭವು ಅಥವಾ ಬಡ್ಡಿಯು ತೆರಿಗೆ ರಿಯಾಯಿತಿ ಇರುತ್ತದೆ.
ಮಗಳ ಭವಿಷ್ಯ ಸುರಕ್ಷಿತ : ಈ ಯೋಜನೆಯು ಮಗಳ ಹೆಚ್ಚಿನ ವಿದ್ಯಾಭ್ಯಾಸ ಅಥವಾ ಮದುವೆಯ ಖರ್ಚಿಗೆ ಸಹಾಯವಾಗುತ್ತದೆ.
ಸುಕನ್ಯಾ ಸಮೃದ್ಧಿ ಖಾತೆ ಹೇಗೆ ತೆರೆಯುವುದು?
ಈ ಯೋಜನೆಯ ಖಾತೆ ತೆರೆಯುವುದು ತುಂಬಾ ಸುಲಭ ;
Step-by-Step Process
- ನಿಮ್ಮ ಹತ್ತಿರದ post office ಅಥವಾ ರಾಷ್ಟ್ರೀಕೃತ ಬ್ಯಾಂಕ್ ಗೆ ಭೇಟಿ ನೀಡಿ.
- Sukanya Samriddhi ಯೋಜನೆಯ account Opening form ಪಡೆದು ಭರ್ತಿ ಮಾಡಿ.
- ಮಗಳ ಜನನ ಪ್ರಮಾಣ ಪತ್ರವನ್ನು ಲಗತ್ತಿಸಿ ಮತ್ತು ಇತರೆ ಪೂರಕ ದಾಖಲೆಗಳನ್ನು ಸಲ್ಲಿಸಿ.
- ಪೋಷಕರ ಆಧಾರ್ ಮತ್ತು ಪಾನ್ ಕಾರ್ಡ್ ನೀಡಿ.
- ನಿಮ್ಮ ಹೂಡಿಕೆಯ ಮೊತ್ತವನ್ನು ಪಾವತಿಸಿ.
ಈ ರೀತಿಯಾಗಿ ಈ ಯೋಜನೆಯ ಖಾತೆಯನ್ನು ಸುಲಭವಾಗಿ ತೆರೆಯಬಹುದು.
ಈ ಯೋಜನೆಯ ಪ್ರಮುಖ ನಿಯಮಗಳು
- ಒಂದು ಹೆಣ್ಣು ಮಗುವಿಗೆ ಒಂದು ಖಾತೆ ಮಾತ್ರ.
- ಒಂದು ಕುಟುಂಬವು ಎರಡು ಹೆಣ್ಣು ಮಕ್ಕಳಿಗೆ ತಲಾ ಒಂದರಂತೆ ಎರಡು ಖಾತೆಯನ್ನು ತೆರೆಯಬಹುದು.
- 15 ವರ್ಷದವರೆಗೆ ಹಣ ಹೂಡಿಕೆ ಮಾಡಬೇಕು.
- 21 ವರ್ಷದ ನಂತರ maturity ಆಗುತ್ತದೆ.
Withdrawal ಸೌಲಭ್ಯ
ಈ ಯೋಜನೆಯಲ್ಲಿ ಹಣ ಹಿಂತೆಗೆದುಕೊಳ್ಳುವ ಸೌಲಭ್ಯವಿದೆ.ಅಂದರೆ ಹೆಣ್ಣು ಮಗುವಿಗೆ 18 ವರ್ಷದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆ (Higher Education ) ಸ್ವಲ್ಪ ಪ್ರಮಾಣದ ಹಣವನ್ನು ಹಿಂಪಡೆಯಬಹುದು.
ಈ ಯೋಜನೆಯಲ್ಲಿ ಯಾರು ಹೂಡಿಕೆ ಮಾಡಬಹುದು?
ಸುಕನ್ಯಾ ಸಮೃದ್ಧಿ ಯೋಜನೆಯು ಈ ಕೆಳಗಿನವರಿಗೆ ವಿಶೇಷವಾಗಿ ಸೂಕ್ತವಾಗಿದೆ.
- ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಲು ಬಯಸುವ ಪಾಲಕರು ಅಥವಾ ಪೋಷಕರು
- ದೀರ್ಘಕಾಲದ ಹೂಡಿಕೆ ಬಯಸುವವರು
- ಸುರಕ್ಷತೆ ಅಥವಾ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುವವರು.
ಕೊನೆಯದಾಗಿ
ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ದೀರ್ಘಕಾಲದ ಹೂಡಿಕೆಗೆ ಉತ್ತಮ ಆಯ್ಕೆ ಎಂದರೆ ಅದುವೇ ಸುಕನ್ಯಾ ಸಮೃದ್ಧಿ ಯೋಜನೆಯಾಗಿದೆ(Sukanya Samriddhi Yojana).
ನೀವು ದಿನಕ್ಕೆ ಕೇವಲ 100₹ ಜೊತೆಗೆ ಹೂಡಿಕೆ ಮಾಡಿದರೆ ದೀರ್ಘಕಾಲದ maturity ಕಾಲದ ನಂತರ ಲಕ್ಷಾಂತರ ರೂಪಾಯಿಗಳನ್ನು ಪಡೆಯಬಹುದು.ಆದ್ದರಿಂದ ನಿಮ್ಮ ಮಗಳ ಭವಿಷ್ಯವನ್ನು ಸುರಕ್ಷಿತಗೊಳಿಸಲು ಈ ಯೋಜನೆ ಅತ್ಯುತ್ತಮ ಆಯ್ಕೆಯಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಕನಿಷ್ಠ ಮತ್ತು ಗರಿಷ್ಠ ಹೂಡಿಕೆ ಎಷ್ಟು?
ಈ ಯೋಜನೆಯಲ್ಲಿ ವರ್ಷಕ್ಕೆ ಕನಿಷ್ಠ 250₹ ಮತ್ತು ಗರಿಷ್ಠ 1.5 ಲಕ್ಷ ರೂಪಾಯಿಗಳು ನಿಗದಿಪಡಿಸಿದೆ.
ಸುಕನ್ಯಾ ಸಮೃದ್ಧಿ ಯೋಜನೆಯ maturity period ಎಷ್ಟು?
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ maturity period 21 ವರ್ಷಗಳು. ಆದರೆ 15 ವರ್ಷಗಳವರೆಗೆ ಮಾತ್ರ ಹಣ ಹೂಡಿಕೆ ಮಾಡಬೇಕು.
ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯಲು ವಯಸ್ಸು ಎಷ್ಟಾಗಿರಬೇಕು?
ಖಾತೆ ತೆರೆಯಲು ಬಯಸುವ ಹೆಣ್ಣು ಮಗುವಿಗೆ 10 ವರ್ಷಕ್ಕಿಂತ ಕಡಿಮೆ ವಯಸ್ಸಾಗಿರಬೇಕು.
ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಕೇವಲ ಶಿಕ್ಷಣ ಮತ್ತು ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿ ಮಾತ್ರವಾಗಿದೆ. ಇದು ಯಾವುದೇ ರೀತಿಯ ಹಣಕಾಸು (Financial) ಹೂಡಿಕೆ ಸಲಹೆ (Investment Advice) ಅಲ್ಲ. ಹೂಡಿಕೆ ಮಾಡುವ ಮೊದಲು ನಿಮ್ಮ ವೈಯಕ್ತಿಕ ಹಣಕಾಸು ಸ್ಥಿತಿ, ಗುರಿಗಳು ಹಾಗೂ ಅಪಾಯ ಸಾಮರ್ಥ್ಯವನ್ನು ಪರಿಗಣಿಸಿ, ಅಗತ್ಯವಿದ್ದಲ್ಲಿ ಪ್ರಮಾಣಿತ ಹಣಕಾಸು ಸಲಹೆಗಾರರ (Financial Advisor) ಸಲಹೆ ಪಡೆಯಿರಿ. ಬಡ್ಡಿದರಗಳು ಹಾಗೂ ಯೋಜನೆ ನಿಯಮಗಳು ಕಾಲಾನುಸಾರ ಬದಲಾಗಬಹುದು.
Jayanth
ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.
About Us →