Table of Contents
ಮಿಡಲ್ ಕ್ಲಾಸ್ ಜನರು – ನಾವು ಎಲ್ಲರೂ ಯೋಚಿಸುವ ಒಂದೇ ಪ್ರಶ್ನೆ — ಹೆಚ್ಚು ರಿಸ್ಕ್ ಇಲ್ಲದೆ, ತಿಂಗಳಿಗೆ ಸ್ಥಿರ ಆದಾಯ ಬರುತ್ತಾ?ಜಾಬ್ ಯೇ ಇರಲಿ, ಬಿಸಿನೆಸ್ ಯೇ ಇರಲಿ… ಆದಾಯ ನಿಂತರೆ ಜೀವನ ತುಂಬಾ ಕಷ್ಟವಾಗುತ್ತದೆ. ಅದಕ್ಕಾಗಿಯೇ ಇಂದು ಹಲವರು ಪ್ಯಾಸಿವ್ ಇನ್ಕಮ್ (Passive Income) ಕಡೆ ಗಮನ ಕೊಡುತ್ತಿದ್ದಾರೆ.
ಆದರೆ ಇಲ್ಲಿ ಪ್ರಶ್ನೆ ಏನೆಂದರೆ ನಿಜವಾಗಿಯೂ ಏನು ಕೆಲಸ ಮಾಡದೇ ತಿಂಗಳಿಗೆ ₹4,000 ಗಳಿಸೋದು ಸಾಧ್ಯವೇ?
ಹೌದು, ಸಾಧ್ಯ. ಆದರೆ ಇಲ್ಲಿ ಏನು ಇಲ್ಲದೆ ಏನು ಮಾಡಲು ಸಾಧ್ಯವಿಲ್ಲ. ಇಲ್ಲಿ ಕೆಲಸ ಮಾಡದೇ ಏನು ಮಾಡಲು ಆಗದು, ಕೆಲಸ ಖಂಡಿತವಾಗಿಯೂ ಮಾಡಲೇ ಬೇಕು. ಇಲ್ಲಿ ನಿಮ್ಮ ಬದಲು ನಿಮ್ಮ ಹಣ ಕೆಲಸ ಮಾಡುತ್ತದೆ.
ಆದ್ದರಿಂದ ನಿಮ್ಮಲಿನ ಹಣವನ್ನು ದುಡಿಯಲು ಹಾಕಿ. ನಿಮ್ಮ ಬದಲು ನಿಮ್ಮ ಹಣ ನಿಮಗಾಗಿ ದುಡಿಯುತ್ತದೆ.
ಈ ಲೇಖನದಲ್ಲಿ ನೀವು ನಿಮ್ಮ ಹಣದ ಮೂಲಕ ಹೇಗೆ ದುಡಿಯಬಹುದು ಎಂದು ತಿಳಿಯುತ್ತಿರಿ.
ತಿಂಗಳಿಗೆ ₹4000 ಗಳಿಸುವುದು ಹೇಗೆ?
ಮುಖ್ಯವಾಗಿ ನಿಮ್ಮ ಉಳಿತಾಯದ ಹಣದಿಂದಲೇ ನಿಮ್ಮ passive income ನೀಡುವ ಹಾಗೆ ಮಾಡುವುದು ಹೇಗೆ ಎಂದು ತಿಳಿಯೋಣ.
- ತಿಂಗಳಿಗೆ ₹4,000 ಆದಾಯ ಬರಲು ಎಷ್ಟು ಹೂಡಿಕೆ ಬೇಕು?
- ಹೇಗೆ ಲೆಕ್ಕಾಚಾರ ಮಾಡಬೇಕು?
- ಯಾರು -ಯಾರು ಇದರಲ್ಲಿ ಹೂಡಿಕೆ ಮಾಡಬಹುದು?
- ಲಾಭ ಮತ್ತು ನಷ್ಟದ ವಿವರ..
ಪ್ಯಾಸಿವ್ ಇನ್ಕಮ್ ಅಂದ್ರೆ ಏನು?
ಪ್ಯಾಸಿವ್ ಇನ್ಕಮ್ ಅಂದ್ರೆ ನೀವು ಪ್ರತಿದಿನ ಕೆಲಸ ಮಾಡದೇ ಇದ್ದರೂ ಸಹ, ನಿರಂತರವಾಗಿ ನಿಮ್ಮ ಖಾತೆಗೆ ಹಣ ಬರುತ್ತಿರುವುದು.
ಉದಾಹರಣೆಗೆ (Example ) :-
- ಬಾಡಿಗೆ ಆದಾಯ:-
ಇಲ್ಲಿ ನೀವು ಕೆಲಸ ಮಾಡುವ ಪ್ರಮೇಯ ಇರುವುದಿಲ್ಲ. ಒಮ್ಮೆ ಮನೆ ಕಟ್ಟಿಸಿ ಬಾಡಿಗೆ ನೀಡಿದರೆ ಮುಗಿಯಿತು ನಿರಂತರವಾಗಿ ಆದಾಯ ಬರುತ್ತದೆ.
- ಡಿವಿಡೆಂಡ್:-
ಇಲ್ಲಿಯೂ ಸಹ ಕೆಲಸ ಇಲ್ಲದೆ ಆದಾಯ ಬರುತ್ತದೆ. ನಿಮ್ಮ ಹಣವನ್ನು ಇತರೆ ಕಂಪನಿ ಅಥವಾ ಷೇರು ಗಳಲ್ಲಿ ಹೂಡಿಕೆ ಮಾಡಿ. ಸಂಸ್ಥೆಯ ಲಾಭಾಂಶ ಗಳಿಸಬಹುದು.
- ಕೆಲವು ಸುರಕ್ಷಿತ ಹೂಡಿಕೆ ಯೋಜನೆಗಳು:-
ಹೆಚ್ಚಿನ ಸುರಕ್ಷತೆ ಮತ್ತು ಭದ್ರತೆ ನೀಡುವು ಸರ್ಕಾರಿ ಯೋಜನೆಗಳು ಕೂಡ ನಿಗದಿತ ನಿರ್ಧಿಷ್ಟ ಮೊತ್ತವನ್ನು ಆದಾಯವಾಗಿ ಪಡೆಯಬಹುದು.

Post Office Monthly Income Scheme – ಒಳ್ಳೆಯ ಹೂಡಿಕೆ ಯೋಜನೆ
ಹೌದು, ಕಡಿಮೆ ರಿಸ್ಕ್ ಮತ್ತು ಗರಿಷ್ಠ ಲಾಭ ಪಡೆಯಲು ಪೋಸ್ಟ್ ಆಫೀಸ್ ಸ್ಮಾಲ್ ಸೇವಿಂಗ್ ಸ್ಕಿಮ್ (Post Office Small Saving Scheme ) ನಲ್ಲಿ ಒಂದಾಗಿರುವ POMIS ನಲ್ಲಿ ಹೂಡಿಕೆ ಮಾಡಿ ತಿಂಗಳಿಗೆ ಬಡ್ಡಿಯ ಮೊತ್ತವನ್ನು ಪಡೆಯಬಹುದು.
ಪ್ರಸ್ತುತ ಈ ಯೋಜನೆಗೆ ವಾರ್ಷಿಕ 7.4% ಬಡ್ಡಿದರವನ್ನು ನಿಗದಿ ಪಡಿಸಲಾಗಿದೆ.
ಈ ಖಾತೆಯನ್ನು ತೆರೆಯಲು ಕನಿಷ್ಠ 1000 ರೂ ಮತ್ತು ಗರಿಷ್ಠ ಒಂದು ಖಾತೆಗೆ (single account ) 9 ಲಕ್ಷ ರೂ ಹಾಗೂ ಜಂಟಿ ಖಾತೆಗೆ (joint account ) 15 ಲಕ್ಷ ರೂ ಗಳನ್ನು ಹೂಡಿಕೆ ಮಾಡುವ ಮಿತಿಯನ್ನು ಹೇರಲಾಗಿದೆ.
POMIS ಖಾತೆ ತೆರೆಯಲು ಇರಬೇಕಾದ ಅರ್ಹತೆಗಳೇನು?
- ಭಾರತೀಯ ಪ್ರಜೆಯಾಗಿರಬೇಕು
- ವಯಸ್ಕನಾಗಿರಬೇಕು
- ಜಂಟಿ ಖಾತೆ ತೆರೆಯಲು ಗರಿಷ್ಠ 3 ವ್ಯಕ್ತಿಗಳಿಗೆ ಮಿತಿ
- ಇತರೆ ನಿಯಮಗಳು ಒಳಗೊಂಡಂತೆ.
5 ವರ್ಷಗಳ ಲಾಕ್ ಇನ್ ಪಿರಿಯಡ್ ನಲ್ಲಿ ಈ ಖಾತೆಯ ಹೂಡಿಕೆಯು ಇರುತ್ತದೆ.
ಅವಧಿ ಮುಗಿಯುವ ಮೊದಲೇ ಖಾತೆಯನ್ನು ಕೊನೆ ಗೊಳಿಸಲು(premature closure) ಹಲವು ನಿಯಮಗಳನ್ನು ವಿಧಿಸಲಾಗಿದೆ. ಅದರಲ್ಲಿನ ನಿಯಮಗಳನ್ನು ಅಧಿಕೃತ ಭಾರತೀಯ ಅಂಚೆ(Indian Post) ವೆಬ್ಸೈಟ್ ನಲ್ಲಿ ನೋಡಬಹುದಾಗಿದೆ.
ತಿಂಗಳಿಗೆ ₹4,000 ಪಡೆಯಲು ನಾವು ಎಷ್ಟು ಹೂಡಿಕೆ ಮಾಡಬೇಕು?
ಮುಖ್ಯವಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ತಿಂಗಳಿಗೆ ₹4000 ಗಳನ್ನು ಗಳಿಸಲು ಸರಿಸುಮಾರು 7 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.
ವಾರ್ಷಿಕ 7.4% ಬಡ್ಡಿದರವನ್ನು ತೆಗೆದುಕೊಂಡರೆ, ನೀವು ಹೂಡಿಕೆ ಮಾಡುವ 7 ಲಕ್ಷ ರೂಪಾಯಿಗೆ ಸರಿಸುಮಾರು 4317 ರೂ ತಿಂಗಳಿಗೆ ಪಡೆಯಬಹುದು.
ಲೆಕ್ಕ :-
7,00,000×7.4%=51800(ವಾರ್ಷಿಕ ಆದಾಯ )
51800÷12 ತಿಂಗಳು = 4317 ರೂ /ತಿಂಗಳು

ಬೇರೆ ಹೂಡಿಕೆಯ ಮೊತ್ತಕ್ಕೆ ಎಷ್ಟು ಹಣ ಸಿಗುತ್ತದೆ?
| ಹೂಡಿಕೆ ಮೊತ್ತ | ತಿಂಗಳ ಆದಾಯ (ಅಂದಾಜು ) |
| 1 ಲಕ್ಷ | 617 |
| 2 ಲಕ್ಷ | 1233 |
| 3 ಲಕ್ಷ | 1850 |
| 5 ಲಕ್ಷ | 3083 |
| 7 ಲಕ್ಷ | 4317 |
| 9 ಲಕ್ಷ | 5550 |
ಈ ಮೇಲಿನ ಟೇಬಲ್ ನಲ್ಲಿ ನೀಡಿರುವ ಮಾಹಿತಿ ಆಧರಿಸಿ ನಿಮಗೆ ಸೂಕ್ತವಾದ ಹೂಡಿಕೆ ಮೊತ್ತವನ್ನು POMIS ಸ್ಕೀಮ್ ನಲ್ಲಿ ಹೂಡಿಕೆ ಮಾಡಿ ತಿಂಗಳಿಗೆ ನಿಗದಿ ಪಡಿಸಿರುವ ಆದಾಯವನ್ನು ಗಳಿಸಬಹುದು.
ಯಾರು ಇದರಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು?
ಈ ರೀತಿಯ ಹೂಡಿಕೆ ಎಲ್ಲರಿಗೂ ಸೂಕ್ತವಲ್ಲ, ಆದರೆ ಈ ಕೆಳಗೆ ತಿಳಿಸಿರುವ ವ್ಯಕ್ತಿಗಳು ಇದನ್ನು ಉತ್ತಮ passive income ಆಗಿ ತೆಗೆದುಕೊಳ್ಳಬಹುದು.
ಇವರಿಗೆ ಸೂಕ್ತ :-
- ನಿವೃತ್ತರಾದವರು (Retired persons)
- ಸ್ಥಿರ ಆದಾಯ ಬಯಸುವವರು
- ಕಡಿಮೆ ರಿಸ್ಕ್ ಇಷ್ಟಪಡುವವರು
- ಮನೆಯಲ್ಲೇ ಕುಳಿತು ಆದಾಯ ಬಯಸುವವರು
ಇವರಿಗೆ ಸೂಕವಲ್ಲ :-
- ಹೆಚ್ಚು ರಿಟರ್ನ್ಸ್ ಬಯಸುವವರು
- ಕಡಿಮೆ ಅವಧಿಗೆ ಆದಾಯ ಬಯಸುವವರು
- ಸಣ್ಣ ವಯಸ್ಕರಿಗೆ ಇದು ಸೂಕ್ತವಲ್ಲ.
ಈ ಯೋಜನೆಯು ಸುರಕ್ಷಿತವೇ?
ಹೌದು, ಇದು ಭಾರತ ಸರ್ಕಾರದ ಭಾರತೀಯ ಅಂಚೆ ಇಲಾಖೆಯ ಸ್ಮಾಲ್ ಸೇವಿಂಗ್ ಸ್ಕೀಮ್ ನಲ್ಲಿ ಬರುವ post office monthly income scheme ಆಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಸುರಕ್ಷತೆ ಮತ್ತು ಭದ್ರತೆಯನ್ನು ನೀಡುತ್ತದೆ.ಹಾಗೆಯೇ ಇದು
- ಶೇರು ಮಾರುಕಟ್ಟೆಯ ಏರಿಳಿತಗಳಿಗೆ ಒಳಗಾಗುವುದಿಲ್ಲ.
- ಆದಾಯ ಸ್ಥಿರವಾಗಿರುತ್ತದೆ.
- ಕೇಂದ್ರ ಸರ್ಕಾರವು ಭದ್ರತೆ ನೀಡುವುದರಿಂದ ನಿಮ್ಮ ಹೂಡಿಕೆ ಹೆಚ್ಚು ಸುರಕ್ಷಿತ.
ಈ ಹೂಡಿಕೆಯ ಅನುಕೂಲ -ಅನಾನುಕೂಲಗಳೇನು?
POMIS ಹೂಡಿಕೆಯ ಅನುಕೂಲಗಳು..
- ಪ್ರತಿ ತಿಂಗಳು ಫಿಕ್ಸೆಡ್ ಆದಾಯವನ್ನು ನೀಡುತ್ತದೆ.
- ಕಡಿಮೆ ರಿಸ್ಕ್ ಹೊಂದಿದೆ.
- ಸುರಕ್ಷಿತ ಹೂಡಿಕೆ.
- ನಿವೃತ್ತರಿಗೆ ಉತ್ತಮ ಆಯ್ಕೆ.
POMIS ಹೂಡಿಕೆಯ ಅನಾನುಕೂಲಗಳು..
- ರಿಟರ್ನ್ಸ್ ಕಡಿಮೆ ಎನ್ನಿಸಬಹುದು.
- ಹಣದುಬ್ಬರಕ್ಕೆ ತಕ್ಕಂತೆ ಲಾಭ ಸಿಗದು.
- ಲಾಂಗ್ ಟರ್ಮ್ ಲಾಕ್ ಇನ್ ಪಿರಿಯಡ್ ಇರುವುದು.
ಮುಖ್ಯವಾಗಿ ಗಮನಿಸಬೇಕಾದ ಅಂಶಗಳು
ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊದಲು ಕೆಲವು ಪ್ರಮುಖ ಅಂಶಗಳನ್ನು ತಿಳಿದು ಹೂಡಿಕೆ ಮಾಡುವುದು ಉತ್ತಮ.
ಈ ಮೇಲೆ ತಿಳಿಸಿರುವ ಬಡ್ಡಿದರ ಮುಂದಿನ ದಿನಗಳಲ್ಲಿ ಬದಲಾಗುವ ಸಾಧ್ಯತೆಗಳಿರುತ್ತದೆ. ಪ್ರಸ್ತುತ ಇರುವ 7.4% ವಾರ್ಷಿಕ ಬಡ್ಡಿದರ ನಂತರದ ದಿನಗಳಲ್ಲಿ ಹೆಚ್ಚು ಆಗಬಹುದು ಕಡಿಮೆಯೂ ಆಗಬಹುದು. ಆದ್ದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಿ.
ಒಮ್ಮೆ ಹೂಡಿಕೆ ಮಾಡಿ, ಮಧ್ಯದಲ್ಲಿ ಹಣ ಹಿಂಪಡೆಯಲು ಹಲವು ನಿಯಮಗಳು ಅಡ್ಡಿ ಪಡಿಸುತ್ತದೆ.
ಈ ಎಲ್ಲಾ ಅಂಶಗಳನ್ನು ಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಲು ಯೋಚಿಸಿ.
ಕೊನೆಯದಾಗಿ
ಮನೆಯಲ್ಲಿಯೇ ಇದ್ದುಕೊಂಡು ತಿಂಗಳಿಗೆ ₹4000 ದುಡಿಯುವುದು ಕಷ್ಟವಲ್ಲ, ಆದರೆ ಏನು ಕೆಲಸವನ್ನೇ ಮಾಡದೇ ದುಡ್ಡು ದುಡಿಯಲು ಸಾಧ್ಯವಿಲ್ಲ. ಇಲ್ಲಿ ನಿಮ್ಮ ಹಣವನ್ನು ದುಡಿಯಲು ಕಳುಹಿಸಿ ಅಂದರೆ ಹೂಡಿಕೆ ಮಾಡಿ ನಿರ್ದಿಷ್ಟ ಪಡಿಸಿರುವ ಆದಾಯವನ್ನು ಪಡೆಯಬಹುದು.
POMIS ಒಂದು ಉತ್ತಮ ಹೂಡಿಕೆಯ ಜೊತೆಗೆ ನಿಯಮಿತ ಆದಾಯ ಗಳಿಸಲು ಒಳ್ಳೆಯ ಯೋಜನೆಯಾಗಿದೆ.ಆದರೆ ಇದು ಎಲ್ಲಾ ವ್ಯಕ್ತಿಗಳಿಗೂ ಒಂದೇ ತರನಾಗಿ ಅನ್ವಯಿಸುವುದಿಲ್ಲ.
ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಕೇವಲ ಶಿಕ್ಷಣ ಮತ್ತು ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿ ಮಾತ್ರವಾಗಿದೆ. ಇದು ಯಾವುದೇ ರೀತಿಯ ಹಣಕಾಸು (Financial) ಹೂಡಿಕೆ ಸಲಹೆ (Investment Advice) ಅಲ್ಲ. ಹೂಡಿಕೆ ಮಾಡುವ ಮೊದಲು ನಿಮ್ಮ ವೈಯಕ್ತಿಕ ಹಣಕಾಸು ಸ್ಥಿತಿ, ಗುರಿಗಳು ಹಾಗೂ ಅಪಾಯ ಸಾಮರ್ಥ್ಯವನ್ನು ಪರಿಗಣಿಸಿ, ಅಗತ್ಯವಿದ್ದಲ್ಲಿ ಪ್ರಮಾಣಿತ ಹಣಕಾಸು ಸಲಹೆಗಾರರ (Financial Advisor) ಸಲಹೆ ಪಡೆಯಿರಿ. ಬಡ್ಡಿದರಗಳು ಹಾಗೂ ಯೋಜನೆ ನಿಯಮಗಳು ಕಾಲಾನುಸಾರ ಬದಲಾಗಬಹುದು.
POMIS ಸ್ಕೀಮ್ ನಲ್ಲಿ ತಿಂಗಳಿಗೆ ₹4,000 ಪಡೆಯಲು ಎಷ್ಟು ಹಣ ಹೂಡಿಕೆ ಮಾಡಬೇಕು?
ಪ್ರಸ್ತುತ ಇರುವ ವಾರ್ಷಿಕ ಬಡ್ಡಿದರ 7.4% ರ ಪ್ರಕಾರ ಸರಿ ಸುಮಾರು 7ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಬೇಕು.
POMIS ಸ್ಕೀಮ್ ನಲ್ಲಿ ಹೂಡಿಕೆ ಮಾಡುವುದು ಸುರಕ್ಷಿತವೇ?
ಹೌದು, ಇದು ಕೇಂದ್ರ ಸರ್ಕಾರದ ಅಂಚೆಯಲ್ಲಿನ ಸ್ಮಾಲ್ ಸೇವಿಂಗ್ ಸ್ಕೀಮ್ ಆಗಿರುವುದರಿಂದ ಹೆಚ್ಚಿನ ಸುರಕ್ಷತೆ ಮತ್ತು ಭದ್ರತೆ ಇದೆ.
POMIS ನ ಹಣ ಪ್ರತೀ ತಿಂಗಳು ಯಾವಾಗ ಮತ್ತು ಹೇಗೆ ಸಿಗುತ್ತದೆ?
ಪ್ರತಿ ತಿಂಗಳು ನಿಗದಿತ ದಿನಾಂಕಕ್ಕೆ, ನಿಮ್ಮ ಹೂಡಿಕೆಯ ಆದಾಯವನ್ನು ಖಾತೆಗೆ ಜಮೆ ಮಾಡಲಾಗುತ್ತದೆ.
Jayanth
ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.
About Us →