Table of Contents
ಇತ್ತೀಚಿನ ದಿನಗಳಲ್ಲಿ ಸುರಕ್ಷಿತವಾಗಿ ಹಣವನ್ನು ಗಳಿಸಿ ಉಳಿಸುವುದು ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ.ವಿಶೇಷವಾಗಿ ರಿಸ್ಕ್ ಇಲ್ಲದ “ಸುರಕ್ಷಿತ ಹೂಡಿಕೆ ಯೋಜನೆ” (Safe investment plan) ಗಳಾದ Government Saving Scheme ಹುಡುಕುತ್ತಿರುವವರಿಗೆ post office RD scheme ಒಂದು ಅತ್ಯುತ್ತಮ ಆಯ್ಕೆ ಎಂದರೆ ತಪ್ಪಾಗಲಾರದು.
ತಿಂಗಳಿಗೆ ಕೇವಲ 3,000 ರೂ ಹೂಡಿಕೆ ಮಾಡುವುದರ ಮೂಲಕ 5 ವರ್ಷದಲ್ಲಿ 2 ಲಕ್ಷ ರೂ ಗಳಿಗಿಂತ ಅಧಿಕ ಹಣವನ್ನು ಗಳಿಸುವ ದಾರಿ ಇದರಲ್ಲಿದೆ.post office RD scheme ಎನ್ನುವುದು ಶಿಸ್ತಿನ ಹೂಡಿಕೆ ಯೋಜನೆಯಾಗಿದ್ದು ಕೇಂದ್ರ ಸರ್ಕಾರದ ಭರವಸೆಯೊಂದಿಗೆ ಖಚಿತ ಗಳಿಕೆಯನ್ನು ನೀಡುತ್ತದೆ.
Post Office RD Scheme ಎಂದರೇನು?
ಇದು ಕೇಂದ್ರ ಸರ್ಕಾರದ ಅಧೀನದಲ್ಲಿನ ಅಂಚೆ ಕಚೇರಿ ಅಥವಾ post office ನಲ್ಲಿ ದೊರೆಯುವ RD ಯೋಜನೆಯಾಗಿದೆ.ನೀವು ಪ್ರತಿ ಮಾಸಿಕ ನಿಗದಿತ ಮೊತ್ತವನ್ನು ಹೂಡಿಕೆ ಮಾಡುವುದರ ಮೂಲಕ 5 ವರ್ಷಗಳ ನಂತರ ಒಂದು ಒಳ್ಳೆಯ ಗಳಿಕೆಯ ಮೊತ್ತವನ್ನು ಪಡೆಯಲು ಸಹಕಾರಿಯಾಗುತ್ತದೆ. ಏಕೆಂದರೆ ಇಲ್ಲಿ ಬ್ಯಾಂಕ್ ನಲ್ಲಿನ ಉಳಿತಾಯ ಖಾತೆಗಳಿಗಿಂತ ಅಧಿಕ ಬಡ್ಡಿ ದರ ಹೊಂದಿರುವುದರಿಂದ ಸಾಧ್ಯವಾಗುತ್ತದೆ.
ಈ ಯೋಜನೆಯಲ್ಲಿ
- ತಿಂಗಳಿಗೆ ಒಂದು ನಿರ್ದಿಷ್ಟ ಹಣವನ್ನು ಜಮೆ ಮಾಡಬೇಕು.
- 5 ವರ್ಷಗಳ ಕಾಲ lock in period ನಲ್ಲಿ ಇಡಲಾಗುತ್ತದೆ.
- ಬಡ್ಡಿಯನ್ನು quarterly compounding ಮೂಲಕ ಲೆಕ್ಕ ಹಾಕಲಾಗುವುದರಿಂದ ಅಧಿಕ ಲಾಭ ಗಳಿಕೆಯಾಗುತ್ತದೆ.
- ಕೇಂದ್ರ ಸರ್ಕಾರದ ಭರವಸೆ ಇರುವುದರಿಂದ risk free investment ಆಗಿದೆ.
ಇದು ದೀರ್ಘಾವಧಿ ಹೂಡಿಕೆ ಮಾಡಲು ಅತ್ಯುತ್ತಮ ಮಾರ್ಗವಾಗಿದೆ.
Post Office RD Interest Rate 2026 (ಇತ್ತೀಚಿನ ಬಡ್ಡಿದರ)
post office RD interest rate ಸಾಮಾನ್ಯವಾಗಿ ಸರ್ಕಾರವು ಪ್ರತಿ 3 ತಿಂಗಳಿಗೊಮ್ಮೆ ಬಡ್ಡಿದರವನ್ನು ಪರಿಷ್ಕರಿಸುತ್ತಾರೆ.ಪ್ರಸ್ತುತ 2026 ರಲ್ಲಿ 6.7% per annum (ಪ್ರತಿ ವರ್ಷಕ್ಕೆ )ನಿಗದಿಪಡಿಸಲಾಗಿದೆ.
ಇದನ್ನು ಉಳಿತಾಯ ಖಾತೆ (saving account )ಯೊಂದಿಗೆ ಹೋಲಿಸಿದರೆ.
- ಅಧಿಕ ಬಡ್ಡಿ ದರ
- compounding ಯಿಂದಾಗಿ ಲಾಭ.
- ಖಚಿತ ಗಳಿಕೆ ಭರವಸೆ.
ನೀವು ನಿಮ್ಮ ಹೂಡಿಕೆ, ಗಳಿಕೆಯ ಬಡ್ಡಿ ಮತ್ತು ಗಳಿಕೆಯ ಮೊತ್ತ ಎಲ್ಲವನ್ನು RD Calculator ಮೂಲಕ ಸುಲಭವಾಗಿ ಲೆಕ್ಕ ಹಾಕಬಹುದಾಗಿದೆ.
ತಿಂಗಳಿಗೆ ₹3,000 ಹೂಡಿಕೆ ಮಾಡಿದರೆ ಎಷ್ಟು ಹಣ ಸಿಗುತ್ತದೆ?
ನೀವು ತಿಂಗಳಿಗೆ 3,000 ರೂ ಹೂಡಿಕೆ ಮಾಡಲು ನಿರ್ಧರಿಸಿದರೆ,
- ತಿಂಗಳ ಹೂಡಿಕೆ =3,000 ರೂ
- 1 ವರ್ಷದ ಹೂಡಿಕೆ =36,000 ರೂ
- 5 ವರ್ಷದ ಹೂಡಿಕೆ = 1,80,000 ರೂ
5 ವರ್ಷಗಳ ಅವಧಿಗೆ ಬಡ್ಡಿಯು ಸರಿಸುಮಾರು 30,000 ದೊರೆಯುತ್ತದೆ. ಇದರಿಂದಾಗಿ ಮೆಚುರಿಟಿ ಅಮೌಂಟ್ (maturity amount ) 2 ಲಕ್ಷಕ್ಕೂ ಅಧಿಕ ಹಣವನ್ನು ಗಳಿಕೆಯಾಗಿ ಪಡೆಯಬಹುದು.
Estimated RD Maturity Amount = 2,00,000 + ರೂ
ಇದರಿಂದಾಗಿಯೇ Post Office RD scheme ಎನ್ನುವುದು ಮೊದಲ ಬಾರಿಗೆ ಹೂಡಿಕೆ ಆರಂಭಿಸುವವರಿಗೆ ಸೂಕ್ತವಾಗಿದ್ದು ಹೆಚ್ಚು ಜನಪ್ರಿಯವಾಗಿದೆ.
Post Office RD Account ತೆರೆಯುವುದು ಹೇಗೆ?
Post office RD account ತೆರೆಯುವುದು ತುಂಬಾ ಸುಲಭದ ಕೆಲಸವಾಗಿದೆ. ಈ ಕೆಳಗಿನ ಹಂತಗಳನ್ನು ಪಾಲಿಸಿ ನಿಮ್ಮ ಖಾತೆಯನ್ನು ತೆರೆಯಬಹುದಾಗಿದೆ.
Post Office RD Account Open Step by Step process :
- ನಿಮ್ಮ ಹತ್ತಿರದಲ್ಲಿರುವ ಭಾರತೀಯ ಅಂಚೆ ಕಚೇರಿಗೆ ಭೇಟಿ ನೀಡಿ.
- Adhar card, ಭಾವಚಿತ್ರ ಮತ್ತು pan card ನೀಡಿ.
- ಅರ್ಜಿಯನ್ನು ಭರ್ತಿ ಮಾಡಿ.
- ಕನಿಷ್ಠ 100 ರೂ ಗಳಿಂದ ಹೂಡಿಕೆ ಪ್ರಾರಂಭಿಸಬಹುದು.ನಿಮ್ಮ ಹೂಡಿಕೆ ಹಣವನ್ನು ನಿರ್ಧರಿಸಿ ಖಾತೆಗೆ ಜಮೆ ಮಾಡಿ.
- Nominee details ನೀಡಿ.
- passbook ಪಡೆಯಿರಿ ಮತ್ತು ಸರಿಯಾದ ಸಮಯಕ್ಕೆ ಹಣವನ್ನು ಹೂಡಿಕೆ ಮಾಡಿ.

Post Office RD Scheme ಪ್ರಮುಖ ಲಾಭಗಳು
ಈ ಯೋಜನೆಯನ್ನು Best investment plan for beginners ಎಂದು ಕರೆಯುತ್ತಾರೆ. ಕಾರಣ :
- ಸರ್ಕಾರದ ಭದ್ರತೆ ಮತ್ತು ಭರವಸೆ
- Risk free investment
- ಅತಿ ಕಡಿಮೆ ಅಂದರೆ ಕೇವಲ 100 ರೂ ಗಳಿಂದಲೂ ಹೂಡಿಕೆ ಆರಂಭಿಸಬಹುದು.
- ಹೂಡಿಕೆಯ ಹವ್ಯಾಸ ಬೆಳೆಯುತ್ತದೆ.
- ಖಚಿತ ಮತ್ತು ನಿರ್ದಿಷ್ಟ ಬಡ್ಡಿ ದರ.
ಇದು ಮಾರುಕಟ್ಟೆಯ ಯಾವುದೇ ಏರಿಳಿತಗಳಿಂದ ತೊಂದರೆಗೊಳಗಾಗುವುದಿಲ್ಲ.ಆದ್ದರಿಂದ ಮೊದಲ ಬಾರಿಗೆ ಹೂಡಿಕೆ ಮಾಡಲು ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ.
RD Scheme ಯಾರಿಗೆ ಸೂಕ್ತ?
ಈ post office RD scheme ಅಥವಾ monthly saving scheme ವಿಶೇಷವಾಗಿ ಇವರಿಗೆ ಸೂಕ್ತವಾಗಿದೆ.
- salaried Employees
- ವಿದ್ಯಾರ್ಥಿಗಳು
- Housewives
- ಸಣ್ಣ ವ್ಯಾಪಾರಸ್ಥರು
- ಮೊದಲ ಬಾರಿಗೆ ಹೂಡಿಕೆ ಮಾಡಲು ಬಯಸುವವರಿಗೆ
ತಿಂಗಳಿಗೆ ಅಲ್ಪ ಸ್ವಲ್ಪ ಹಣ ಉಳಿಸಲು ಬಯಸುವವರಿಗೆ ಇದು ಅತ್ಯುತ್ತಮ monthly savings scheme ಆಗಿದೆ.
ಈ ತಪ್ಪುಗಳನ್ನು ಮಾಡಬೇಡಿ.
RD account ಪ್ರಾರಂಭಿಸುವ ಮೊದಲು ಇದನ್ನು ತಿಳಿದುಕೊಳ್ಳಿ.
- ತಿಂಗಳ ಹೂಡಿಕೆ ಮೊತ್ತ ತಪ್ಪಿದರೆ penalty ಇರುತ್ತದೆ.
- ಬಡ್ಡಿ,ತೆರಿಗೆ ಪಾವತಿಗೆ ಒಳಪಡಬಹುದು.
- Premature closure ಸೌಲಭ್ಯ
ಇವೆಲ್ಲವನ್ನೂ ಮೊದಲೇ ತಿಳಿದರೆ ನಿಮ್ಮ investment planning ಇನ್ನಷ್ಟು ಸುಲಭವಾಗುತ್ತದೆ.
ಇದೆ ತರಹದ ಮಾಹಿತಿಯನ್ನು ಪಡೆಯಲು ಈಗಲೇ ನಮ್ಮ ಟೆಲಿಗ್ರಾಂ ಚಾನೆಲ್ ಅನ್ನು ಅನುಸರಿಸಿ.
ಕೊನೆಯದಾಗಿ
ಪ್ರತಿ ತಿಂಗಳು 3,000 ರೂ ಹೂಡಿಕೆ ಸಣ್ಣ ವಿಷಯವಾಗಿ ಕಾಣಬಹುದು ಆದರೆ 5 ವರ್ಷಗಳ ನಂತರ ಬಡ್ಡಿಯ ಜೊತೆಗೆ ಗಳಿಕೆ ಹಣ 2 ಲಕ್ಷಕ್ಕೂ ಅಧಿಕವಾಗಿರುತ್ತದೆ.post office RD scheme ಸರಳ,ಸುರಕ್ಷಿತ ಮತ್ತು ಶಿಸ್ತಿನ ಹೂಡಿಕೆಯಾಗಿದ್ದು,ಹೂಡಿಕೆ ಪ್ರಾರಂಭಿಸಲು ಬರುವ ಮೊದಲಿಗರಿಗೆ ಅತ್ಯುತ್ತಮವಾಗಿದೆ.ಮಾರುಕಟ್ಟೆಯ ಏರಿಳಿತ ಇಲ್ಲದೆ guaranteed return ಪಡೆಯಲು ಬಯಸುವವರು ಈ ಗವರ್ನಮೆಂಟ್ monthly Saving Scheme ಆಯ್ಕೆ ಮಾಡಬಹುದು.
Post office RD scheme ನಲ್ಲಿ minimum deposit ಎಷ್ಟು? | What is minimum amount in Post Office RD?
post office RD scheme ನಲ್ಲಿ ಕನಿಷ್ಠ 100 ರೂ ಯಿಂದ ಹೂಡಿಕೆ ಪ್ರಾರಂಭಿಸಬಹುದು.ನಂತರ 10 ರ multiple ನಂತೆ ಹೂಡಿಕೆಯನ್ನು ತಿಂಗಳಿಗೆ ಜಮೆ ಮಾಡಬಹುದು.
RD account safe investment ಆಗಿದೆಯಾ? | Is Post Office RD a safe investment?
ಹೌದು ಖಂಡಿತವಾಗಿಯೂ Post Office RD scheme ಸುರಕ್ಷಿತವಾದ ಹೂಡಿಕೆಯ ಯೋಜನೆಯಾಗಿದೆ. ಇದು ಕೇಂದ್ರ ಸರ್ಕಾರದ ಭದ್ರತೆ ಮತ್ತು ಭರವಸೆಯನ್ನು ಹೊಂದಿದೆ.
RD account ಅನ್ನು ಮಧ್ಯದಲ್ಲಿ ಮುಚ್ಚಬಹುದಾ? | Can we close RD account before maturity?
ಹೌದು, ಸಾಮಾನ್ಯವಾಗಿ Post office RD scheme ಅನ್ನು 3 ವರ್ಷಗಳ ನಂತರ premature closure ಮಾಡಲು ಅವಕಾಶವನ್ನು ನೀಡಲಾಗಿದೆ.ಕೆಲವು ನಿಯಮಗಳು ಅನ್ವಯಿಸುತ್ತದೆ.
ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಕೇವಲ ಶಿಕ್ಷಣ ಮತ್ತು ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿ ಮಾತ್ರವಾಗಿದೆ. ಇದು ಯಾವುದೇ ರೀತಿಯ ಹಣಕಾಸು (Financial) ಹೂಡಿಕೆ ಸಲಹೆ (Investment Advice) ಅಲ್ಲ. ಹೂಡಿಕೆ ಮಾಡುವ ಮೊದಲು ನಿಮ್ಮ ವೈಯಕ್ತಿಕ ಹಣಕಾಸು ಸ್ಥಿತಿ, ಗುರಿಗಳು ಹಾಗೂ ಅಪಾಯ ಸಾಮರ್ಥ್ಯವನ್ನು ಪರಿಗಣಿಸಿ, ಅಗತ್ಯವಿದ್ದಲ್ಲಿ ಪ್ರಮಾಣಿತ ಹಣಕಾಸು ಸಲಹೆಗಾರರ (Financial Advisor) ಸಲಹೆ ಪಡೆಯಿರಿ. ಬಡ್ಡಿದರಗಳು ಹಾಗೂ ಯೋಜನೆ ನಿಯಮಗಳು ಕಾಲಾನುಸಾರ ಬದಲಾಗಬಹುದು.
Jayanth
ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.
About Us →