10th-12th Exam Study Tips: ಪರೀಕ್ಷೆ ತಯಾರಿ ಮಾಡಲು 10 ಉತ್ತಮ ಸಲಹೆಗಳು

WhatsApp Group Join Now
Telegram Group Join Now

10ನೇ ಮತ್ತು 12ನೇ ತರಗತಿಯ ಅಂತಿಮ ಪರೀಕ್ಷೆಯು(10th-12th Exam) ವಿದ್ಯಾರ್ಥಿ ಜೀವನದ ಅತಿ ಮುಖ್ಯ ಹಂತವಾಗಿದೆ.ಈ ಪರೀಕ್ಷೆಯು ವಿದ್ಯಾರ್ಥಿ ಜೀವನದ ಉತ್ತಮ ಶೈಕ್ಷಣಿಕ ಹಾದಿಯನ್ನು ತೆರೆದುಕೊಳ್ಳಲು ಸಹಾಯ ಮಾಡುತ್ತದೆ.ಇದೆ ಕಾರಣದಿಂದಾಗಿ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಅಥವಾ ಪರೀಕ್ಷೆ ಸಮೀಪಿಸುವ ಸಮಯದಲ್ಲಿ ಒತ್ತಡ ಮತ್ತು ಆತಂಕಕ್ಕೆ ಒಳಗಾಗುತ್ತಾರೆ.

ಆದರೆ ಸರಿಯಾದ ಸ್ಟಡಿ ಪ್ಲಾನಿಂಗ್ ಮತ್ತು ಸಮಯ ನಿರ್ವಹಣೆಯಿಂದ ಉತ್ತಮ ಅಭ್ಯಾಸದ ಜೊತೆಗೆ ಉತ್ತಮ ಅಂಕವನ್ನು ಪರೀಕ್ಷೆಯಲ್ಲಿ ಪಡೆಯಲು ಸಹಕಾರಿಯಾಗುತ್ತದೆ.

ಬಹಳಷ್ಟು ವಿದ್ಯಾರ್ಥಿಗಳು “ಹೆಚ್ಚು ಓದಿದರೆ ಮಾತ್ರ ಹೆಚ್ಚು ಅಂಕಗಳಿಸಬಹುದು ಎಂದು ಭಾವಿಸುತ್ತಾರೆ “. ಆದರೆ ನಿಜಾಂಶ ಏನೆಂದರೆ ಹೆಚ್ಚಿಗೆ ಓದುವುದರಲ್ಲಿಯೂ smart study ಅತಿ ಅವಶ್ಯಕ.

ಈ ಲೇಖನದಲ್ಲಿ 10th-12th exam study tips ಬಗ್ಗೆ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ವಿವರಿಸಲಾಗಿದೆ.

1.ಸ್ಪಷ್ಟವಾದ ಸ್ಟಡಿ ಪ್ಲಾನ್ ಮಾಡಿಕೊಳ್ಳಿ

ಪರೀಕ್ಷೆ ಸಮೀಪಸುತ್ತಿದ್ದಂತೆ ವಿದ್ಯಾರ್ಥಿಗಳು ಓದುವುದರ ಬಗ್ಗೆ ಗೊಂದಲಕ್ಕೆ ಒಳಗಾಗುತ್ತಾರೆ.ಏನು ಓದಬೇಕು, ಎಷ್ಟು ಓದಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಆದ್ದರಿಂದ ಮುಖ್ಯವಾಗಿ ವಿದ್ಯಾರ್ಥಿಗಳು ಒಂದು ಸ್ಪಷ್ಟವಾದ ಅಧ್ಯಯನ ಯೋಜನೆಯನ್ನು (study plane ) ಮಾಡಿಕೊಳ್ಳುವುದು ಮುಖ್ಯ.

10th-12th exam study tips ಗಳಲ್ಲಿ ಮುಖ್ಯವಾಗಿ ಈ ಮೇಲೆ ತಿಳಿಸಿರುವ study plane ಮಾಡಿಕೊಳ್ಳುವುದಾಗಿದೆ.

  • ಯಾವ ವಿಷಯಕ್ಕೆ ಎಷ್ಟು ಸಮಯ ಕೊಡಬೇಕು ಎನ್ನುವುದನ್ನು ನೀವೇ ನಿರ್ಧರಿಸಬೇಕು.
  • ಕಷ್ಟದ ವಿಷಯಕ್ಕೆ ಹೆಚ್ಚಿನ ಸಮಯ ನಿಗದಿಪಡಿಸಬೇಕು.
  • ಪ್ರತಿ ದಿನ ಓದುವ ಯೋಜನೆಯನ್ನು ಅನ್ನು ಮೊದಲೇ ನಿರ್ಧರಿಸಿ.

ಸ್ಟಡಿ ಪ್ಲಾನ್ ಮಾಡುವುದರಿಂದ ಓದಿನಲ್ಲಿ ಸ್ಪಷ್ಟತೆ ಮತ್ತು ಒತ್ತಡ ಕಡಿಮೆಯಾಗುತ್ತದೆ.ಸಮಯವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಲು ಸಹಕಾರಿ.

2.ಪ್ರತಿ ದಿನದ ಗುರಿಯನ್ನು ನಿಗದಿಪಡಿಸಿ

ವಿದ್ಯಾರ್ಥಿಗಳಿಗೆ ಒಮ್ಮೆಲೇ ದೊಡ್ಡ ಪಠ್ಯಕ್ರಮ (Syllabus )ನೋಡಿದಾಕ್ಷಣ ಭಯ ಆಗುವುದು ಸಹಜ. ಅದನ್ನು ನೀಗಿಸಲು ವಿದ್ಯಾರ್ಥಿಗಳು ಪಠ್ಯಕ್ರಮದಲ್ಲಿನ ಮುಖ್ಯ ಭಾಗ ಮತ್ತು ಅತಿ ಮುಖ್ಯ ಭಾಗಗಳನ್ನು ಗುರುತಿಸಕೊಂಡು ಪ್ರತಿನಿತ್ಯ ಆ ಸಣ್ಣ ಸಣ್ಣ ಗುರಿಗಳನ್ನು ಓದಿ ಮುಗಿಸುವ ಯೋಜನೆಯನ್ನು ಮ್ಸಡಿಕೊಳ್ಳುವುದು, ಇದರಿಂದ ದೊಡ್ಡ ಪಠ್ಯಕ್ರಮ ಬೇಗನೆ ಓದಿ ಮುಗಿಸಲು ಸಹಕಾರಿಯಾಗುತ್ತದೆ.

ಉದಾಹರಣೆ (Example):-

  • ಇಂದು ಒಂದು ಅಧ್ಯಾಯ ವನ್ನು ಓದಿ ಮುಗಿಸಬೇಕು.
  • ಇವತ್ತು ಒಂದು ಹಳೆಯ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಯನ್ನು ಬಿಡಿಸಬೇಕು.

ಈ ರೀತಿಯಲ್ಲಿ ಯೋಜನೆಯನ್ನು ಹಾಕಿ ಕೊಳ್ಳುವುದರಿಂದ ಓದಿ ಕೊಳ್ಳಲು ಸುಲಭ ಹಾಗೆಯೇ ಓದಿನಲ್ಲಿ ಪ್ರಗತಿಯನ್ನು ಕಾಣಬಹುದು.

3.ಟೈಮ್ ಟೇಬಲ್ ಅನುಸರಿಸಿ

ಉತ್ತಮ ವಿದ್ಯಾರ್ಥಿಯ ಲಕ್ಷಣವೆಂದರೆ ಮೊದಲು ಸಮಯ ನಿರ್ವಹಣೆ ( Time Management ) ಕಲಿಯಬೇಕು.ವಿದ್ಯಾರ್ಥಿಗಳು ಒಂದು ಸರಳವಾದ ಟೈಮ್ ಟೇಬಲ್ ಅನ್ನು ಮಾಡಿಕೊಂಡು ಅನುಸರಿಸಲು ಪ್ರಾರಂಭಿಸಬೇಕು.ಇದರಲ್ಲಿ

  • ಬೆಳಿಗ್ಗೆ – ಕಠಿಣ ವಿಷಯವನ್ನು
  • ಮಧ್ಯಾಹ್ನ – ರಿವಿಷನ್
  • ಸಂಜೆ – ಪ್ರಶ್ನೆಪತ್ರಿಕೆ ಪ್ರಾಕ್ಟೀಸ್

ನಿಮ್ಮ ಸಮಯಕ್ಕೆ ಮತ್ತು ಅಭ್ಯಾಸಕ್ಕೆ ತಕ್ಕಂತೆ ದಿನದ ಟೈಮ್ ಟೇಬಲ್ ಅನ್ನು ಬದಲಿಸಿಕೊಳ್ಳಬಹುದು.ಟೈಮ್ ಟೇಬಲ್ ಇದ್ದರೆ ಪ್ರತಿ ದಿನದ ಓದು ಸರಿಯಾಗಿ ಸಮಯಕ್ಕೆ ತಕ್ಕಂತೆ ಸಾಗುತ್ತದೆ.

4.ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಪರಿಹರಿಸಿ

ಪರೀಕ್ಷೆಯ ಸಮಯದ ಅಧ್ಯಯನದಲ್ಲಿ ಓದಿನ ಜೊತೆಗೆ ಪ್ರಶ್ನೆಪತ್ರಿಕೆಯ ಮಾದರಿಯನ್ನು ತಿಳಿಯಲು ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಯನ್ನು ಬಿಡಿಸುವುದರಿಂದ ಈಗಿನ ಪ್ರಶ್ನೆ ಪತ್ರಿಕೆ ಮಾದರಿಯನ್ನು ತಿಳಿಯಲು ಅನುಕೂಲ ಆಗುತ್ತದೆ.

ಇದಲ್ಲದೆ ಇನ್ನೂ ಹಲವಾರು ಅನುಕೂಲಗಳು ಇವೆ ಅವೆಂದರೆ :

  • ಯಾವ ರೀತಿಯ ಪ್ರಶ್ನೆಗಳು ಪರೀಕ್ಷೆಯಲ್ಲಿ ಬರುತ್ತವೆ ಎಂಬುದು ಗೊತ್ತಾಗುತ್ತದೆ.
  • ಪರೀಕ್ಷೆಯಲ್ಲಿ ಸಮಯ ನಿರ್ವಹಣೆಯಾಗುವುದು ಅಭ್ಯಾಸವಾಗುತ್ತದೆ.
  • ಪರೀಕ್ಷೆ ಬರೆಯಲು ಆತ್ಮ ವಿಶ್ವಾಸ ಹೆಚ್ಚುತ್ತದೆ.

5.ಸ್ವಂತ ನೋಟ್ಸ್ ತಯಾರಿಸುವುದು ಒಳ್ಳೆಯದು

ಓದುವ ಸಮಯ ಕಡಿಮೆ ಇರುವುದರಿಂದ ಎಲ್ಲವನ್ನು ನೋಟ್ಸ್ ಮಾಡಿಕೊಳ್ಳುವುದು ಕಷ್ಟ, ಆದರೂ ಸಹ ಓದಿನ ಜೊತೆಗೆ ಮುಖ್ಯ ಅಂಶಗಳನ್ನು ಸ್ವಂತವಾಗಿ ನೋಟ್ಸ್ ಮಾಡಿಕೊಳ್ಳುವುದು ಒಳ್ಳೆಯದು.ಇದರಿಂದ ಹಲವು ಪ್ರಯೋಜನೆಗಳಿವೆ :

  • ಮುಖ್ಯ ವಿಷಯಗಳು ಸುಲಭವಾಗಿ ನೆನಪಾಗುತ್ತದೆ.
  • ರಿವಿಷನ್ ಮಾಡಲು ಕಡಿಮೆ ಸಮಯ ಸಾಕಾಗುತ್ತದೆ.
  • ಪರೀಕ್ಷೆ ಸಮಯಕ್ಕೆ ಕಡಿಮೆ ಓದು ಹೆಚ್ಚಿನ ಅಂಕ ಗಳಿಕೆಗೆ ಸಹಕಾರಿ.

ಇದರ ಜೊತೆಗೆ ಹೈಲೈಟರ್ ಬಳಸಿದರೆ ಓದಲು ಸಹಾಯವಾಗುತ್ತದೆ.

ಇದೆ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಅನ್ನು ಅನುಸರಿಸಿ.

6.ನಿಯಮಿತ ರಿವಿಷನ್ ಮಾಡಿ

ಒಮ್ಮೆ ಓದಿದ ವಿಷಯನ್ನು ಮರೆಯುವುದು ಸಹಜ ಆದರೆ ಅದೇ ವಿಷಯವನ್ನು ನಿಯಮಿತವಾಗಿ ಓದುತ್ತಾ ಇದ್ದರೆ, ಓದುವ ವಿಷಯ ಹೆಚ್ಚಿನ ಸಮಯ ನೆನಪಿರುತ್ತದೆ.

ಒಳ್ಳೆಯ ವಿಧಾನ :

  • ಪ್ರತಿ ದಿನದ ಕೊನೆಯಲ್ಲಿ ಆ ದಿನದ ವಿಷಯವನ್ನು ಒಮ್ಮೆ ರಿವಿಷನ್ ಮಾಡಿ.
  • ವಾರಕ್ಕೆ ಒಂದು ಬಾರಿ ಇನ್ನೊಮ್ಮೆ ರಿವಿಷನ್ ಮಾಡಿ.

7.ಮೊಬೈಲ್ ಬಳಕೆಯನ್ನು ನಿಯಂತ್ರಿಸಿ

ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಮಯದಲ್ಲಿನ ದೊಡ್ಡ ಡಿಸ್ಟ್ರಾಕ್ಷನ್ ಅಂದರೆ ಅದುವೇ ಮೊಬೈಲ್ ಮತ್ತು ಸೋಶಿಯಲ್ ಮೀಡಿಯಾ ಇದರಿಂದ ಓದುವ ಸಮಯ ಮತ್ತು ಮನಸ್ಥಿತಿ ಹಾಳಾಗುತ್ತದೆ.

ಆದ್ದರಿಂದ :

  • ಓದುವ ಸಮಯದಲ್ಲಿ ಮೊಬೈಲ್ ಅನ್ನು ದೂರ ಇಡಿ.
  • ಸೋಶಿಯಲ್ ಮೀಡಿಯಾ ದಿಂದ ಸ್ವಲ್ಪ ದಿನಗಳ ಕಾಲ ದೂರ ಇರಿ.
  • ಓದಿ ಗೆ ಅತಿ ಅವಶ್ಯಕ ಇದ್ದಾಗ ಮಾತ್ರ ಮೊಬೈಲ್ ಬಳಕೆ ಮಾಡಿ. ಮತ್ತು ಓದಿಗೆ ಸಂಬಂಧ ಪಟ್ಟ ಆಪ್ ಅನ್ನು ಮಾತ್ರ ಬಳಸಿ.
10th-12th Exam
10th-12th Exam Study Tips

8.ಆರೋಗ್ಯಕರ ಜೀವನಶೈಲಿ ಪಾಲಿಸಿ

ಒಳ್ಳೆಯ ಆರೋಗ್ಯ ಇದ್ದರೆ ಮಾತ್ರ ಓದು ಉತ್ತಮವಾಗಿರಲು ಸಾಧ್ಯ. ಆದ್ದರಿಂದ ಪರೀಕ್ಷೆ ಸಮಯದಲ್ಲಿ;

  • ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಿ.
  • ಪೌಷ್ಟಿಕ ಆಹಾರ ಸೇವನೆ ಮಾಡಿ.
  • ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಅವಶ್ಯಕ ಮತ್ತು ಒತ್ತಡ ನಿವಾರಣೆಗೆ ಸಹಕಾರಿ.
  • ನೀರು ಹೆಚ್ಚು ಕುಡಿಯಿರಿ.

9.ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಿ

ಬಹಳಷ್ಟು ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯ ಸಮೀಪ ಬಂದಂತೆ, ಭಯ ಆವರಿಸಿ ಕೊಳ್ಳುತ್ತದೆ ಮತ್ತು ಆತಂಕಕ್ಕೆ ಒಳಗಾಗುತ್ತಾರೆ.ಆತ್ಮವಿಶ್ವಾಸವೇ ಯಶಸ್ಸಿನ ಕೀಲಿ ಎಂಬಂತೆ ಆತ್ಮವಿಶ್ವಾಸ ಒಂದಿದ್ದರೆ ಯಶಸ್ಸನ್ನು ಗಳಿಸಬಹುದು.

10.ಪರೀಕ್ಷೆ ದಿನದ ತಯಾರಿ

ಪರೀಕ್ಷೆ ದಿನದ ಸಿದ್ಧತೆಯೂ ಬಹಳ ಮುಖ್ಯ,ಈ ದಿನ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ದಿನವಾಗಿದೆ.ಆದ್ದರಿಂದ ಪರೀಕ್ಷೆಗೆ ಹೋಗುವ ಮೊದಲು ;

  • ಅಗತ್ಯ ದಾಖಲೆಗಳನ್ನು ಪರಿಶೀಲಿಸಿ
  • ಅಗತ್ಯ ಸಾಮಗ್ರಿಗಳನ್ನು ತಯಾರಿಟ್ಟುಕೊಳ್ಳಿ.
  • ಶಾಂತತೆ ಮತ್ತು ಆತ್ಮವಿಶ್ವಾಸ ನಿಮ್ಮ ಜೊತೆಯಲ್ಲಿರಲಿ.

ಮೊದಲು ಸುಲಭ ಪ್ರಶ್ನೆಗಳಿಗೆ ಉತ್ತರ ಬರೆಯಿರಿ, ನಂತರ ಕಠಿಣ ಪ್ರಶ್ನೆಗಳಿಗೆ ಸಮಯ ನೀಡಿ.ಸಮಯ ನಿರ್ವಹಣೆ ಮಾಡುವುದು 10th-12th Exam ನಲ್ಲಿ ಅತಿ ಅವಶ್ಯಕ.

ಕೊನೆಯದಾಗಿ

10th-12th Exam ವಿದ್ಯಾರ್ಥಿ ಜೀವನದ ಮಹತ್ವದ ಹಂತವಾಗಿದೆ.ಸರಿಯಾದ ತಯಾರಿಯಿಂದ ಅದನ್ನು ಸುಲಭವಾಗಿ ಎದುರಿಸಿ, ಜೀವನಕ್ಕೆ ಒಳ್ಳೆಯ ಮಾರ್ಗ ಕಂಡುಕೊಳ್ಳಲು ಸಹಾಯವಾಗುತ್ತದೆ.ಉತ್ತಮ ಸ್ಟಡಿ ಪ್ಲಾನ್, ನಿಯಮಿತ ರಿವಿಷನ್, ಹಿಂದಿನ ಪ್ರಶ್ನೆಪತ್ರಿಕೆಗಳ ಅಭ್ಯಾಸ ಮತ್ತು ಆರೋಗ್ಯಕರ ಜೀವನಶೈಲಿ ಈ ಎಲ್ಲವುಗಳು ನಿಮ್ಮ ಯಶಸ್ಸಿಗೆ ಸಹಾಯ ಮಾಡುತ್ತವೆ.

ಪರೀಕ್ಷೆ ಸಮಯದಲ್ಲಿ ಒತ್ತಡಕ್ಕೊಳಗಾಗದೆ ಆತ್ಮವಿಶ್ವಾಸದಿಂದ ಮತ್ತು ಸಮರ್ಥವಾಗಿ ಓದಿದರೆ ಅತ್ಯುತ್ತಮ ಫಲಿತಾಂಶಗಳನ್ನು ಪಡೆಯಬಹುದು. ಈ 10 ಸಲಹೆಗಳನ್ನು ಅನುಸರಿಸಿ ನೀವು ನಿಮ್ಮ 10th-12th Exam ನಲ್ಲಿ ಯಶಸ್ಸನ್ನು ಪಡೆಯಬಹುದು.


10th-12th exam ಸಮಯದಲ್ಲಿ ಒತ್ತಡವನ್ನು ಹೇಗೆ ಕಡಿಮೆ ಮಾಡಬಹುದು?

ಸಾಕಷ್ಟು ನಿದ್ರೆ ಮಾಡುವುದು, ಆರೋಗ್ಯಕರವಾದ ಆಹಾರ ಸೇವಿಸುವುದು, ಸಣ್ಣ ವಿರಾಮಗಳನ್ನು ತೆಗೆದುಕೊಳ್ಳುವುದು ಮತ್ತು ಓದುವುದು, ಸಕಾರಾತ್ಮಕ ಮನೋಭಾವವನ್ನು ಇಟ್ಟುಕೊಳ್ಳುವುದು ಮತ್ತು ವ್ಯಾಯಾಮ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಓದುವುದು ಏಕೆ ಮುಖ್ಯ?

ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡುವುದರಿಂದ ಪರೀಕ್ಷೆಯ ಮಾದರಿ ಗೊತ್ತಾಗುತ್ತದೆ ಹಾಗೆಯೇ ಸಮಯ ನಿರ್ವಹಣೆ ಕಲಿಯಬಹುದು ಮತ್ತು ಪರೀಕ್ಷೆಯನ್ನು ಎದುರಿಸುವ ಆತ್ಮವಿಶ್ವಾಸ ಹೆಚ್ಚುತ್ತದೆ.

About Content Writer
Jayanth

Jayanth

ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.

About Us →
WhatsApp Group Join Now
Telegram Group Join Now

Leave a Comment