Table of Contents
ಪ್ರಸ್ತುತ ದಿನಮಾನದಲ್ಲಿ ಸಣ್ಣ ಪ್ರಮಾಣದ ಉಳಿತಾಯವು ಕೂಡ ದೊಡ್ಡ ಭವಿಷ್ಯ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ. ವಿಶೇಷವಾಗಿ, ಭದ್ರತೆ ಹಾಗೂ ಖಚಿತ ಲಾಭ ನೀಡುವ ಯೋಜನೆಗಳ ಬಗ್ಗೆ ಜನರಿಗೆ ಹೆಚ್ಚಿನ ಆಸಕ್ತಿ ಇದೆ. ಅದರಲ್ಲಿಯೂ ಪ್ರಮುಖವಾಗಿ ಗಮನ ಸೆಳೆಯುವ ಯೋಜನೆ ಎಂದರೆ ಅದುವೇ Post Office RD Savings.
ಹಾಗಾದರೆ, ನೀವು ದಿನಕ್ಕೆ ₹200 ಉಳಿಸಿದರೆ 5 ವರ್ಷಗಳಲ್ಲಿ ಎಷ್ಟು ಹಣ ಸಿಗುತ್ತದೆ? ಈ ಲೇಖನದಲ್ಲಿ ಇದರ ಸಂಪೂರ್ಣ ಲೆಕ್ಕ, ಬಡ್ಡಿದರ, ಲಾಭ ಮತ್ತು ಯೋಜನೆಯ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳೋಣ.
Post Office RD ಉಳಿತಾಯದ ಬಗ್ಗೆ..
Post Office RD (Recurring Deposit) ಒಂದು ಸರಳ ಮತ್ತು ಸುರಕ್ಷಿತ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಪ್ರತೀ ತಿಂಗಳು ಒಂದು ನಿಗದಿತ ನಿರ್ದಿಷ್ಟ ಪಡಿಸಿದ ಮೊತ್ತವನ್ನು ಜಮೆ ಮಾಡಬಹುದು. 5 ವರ್ಷಗಳ ನಂತರ ನೀವು ಮೂಲ ಜಮೆಯಾದ ಹಣದ ಜೊತೆಗೆ ಬಡ್ಡಿಯನ್ನು ಕೂಡ ಪಡೆಯುತ್ತೀರಿ.
ಮುಖ್ಯ ಲಕ್ಷಣಗಳು:
- ಕನಿಷ್ಠ ಜಮೆ ಹಣ: ₹100
- ಅವಧಿ: 5 ವರ್ಷ
- ಸರ್ಕಾರದ ಭದ್ರತೆ
- ಸ್ಥಿರ ಬಡ್ಡಿದರ- ಬಡ್ಡಿದರವು ಕೇಂದ್ರ ಸರ್ಕಾರದ ನಿರ್ಧಾರದಂತೆ.
ಈ ಯೋಜನೆಯು ವಿಶೇಷವಾಗಿ ಸಣ್ಣ ಉಳಿತಾಯ ಹೂಡಿಕೆ ಹುಡುಕುತ್ತಿರುವವರಿಗಾಗಿ ಉತ್ತಮ ಆಯ್ಕೆಯಾಗಿ ತೋರುತ್ತದೆ.
ಒಂದು ದಿನಕ್ಕೆ ₹200 ಉಳಿಸಿದ್ರೆ ತಿಂಗಳಿಗೆ ಎಷ್ಟು ಆಗುತ್ತದೆ?
ನಾವು ದಿನಕ್ಕೆ ₹200 ಉಳಿತಾಯ ಮಾಡುತ್ತ ಹೋದರೆ, ತಿಂಗಳಿಗೆ:
₹200 × 30 ದಿನ = ₹6000 (ತಿಂಗಳಿಗೆ)
ಅಂದರೆ ನೀವು ಪ್ರತಿ ತಿಂಗಳು ₹6000 ಅನ್ನು Post Office RD ಯೋಜನೆಯಲ್ಲಿ ಹೂಡಿಕೆ ಮಾಡಬೇಕು.ಇಲ್ಲಿ RD ಯೋಜನೆಯು ತಿಂಗಳ ಕಂತುಗಳ ರೂಪದಲ್ಲಿ ಹೂಡಿಕೆ ಮಾಡಲು ಅವಕಾಶ ನೀಡುವುದರಿಂದ ದಿನದ ಉಳಿತಾಯವನ್ನು ಒಂದು ಗೂಡಿಸಿ ತಿಂಗಳಿಗೆ RD ಖಾತೆಗೆ ಜಮೆ ಮಾಡಬೇಕು.
5 ವರ್ಷದಲ್ಲಿ ಹೂಡಿಕೆ ಮಾಡಿದ ಒಟ್ಟು ಮೊತ್ತ ಎಷ್ಟು?
5 ವರ್ಷ ಎಂದರೆ 60 ತಿಂಗಳುಗಳು
ಪ್ರತಿ ತಿಂಗಳು ₹6000 ದಂತೆ 60 ತಿಂಗಳುಗಳ ಕಾಲ ಹೂಡಿಕೆ ಮಾಡುತ್ತ ಹೋದರೆ. 5 ವರ್ಷಗಳ ಬಳಿಕ ಒಟ್ಟು ಹೂಡಿಕೆ ಮಾಡಿರುವ ಮೊತ್ತ 3,60,000₹
Post Office RD savings ಯೋಜನೆಯ ಬಡ್ಡಿದರ (Interest Rate)
ಪ್ರಸ್ತುತ ಪೋಸ್ಟ್ ಆಫೀಸ್ RD ಯೋಜನೆಯ ಬಡ್ಡಿದರವು 5 ವರ್ಷಗಳ ಅವಧಿಗೆ 6.7% ವಾರ್ಷಿಕ ಬಡ್ಡಿದರ ನಿಗದಿ ಪಡಿಸಲಾಗಿದೆ.ಅದರಂತೆ ಈ ಬಡ್ಡಿದರವು ಕೇಂದ್ರ ಸರ್ಕಾರದ ಆದೇಶ ಮೇಲೆ ಹೆಚ್ಚು ಕಡಿಮೆ ಆಗುವ ಸಾಧ್ಯತೆಗಳಿವೆ.
ಹಾಗೆಯೇ ಪೋಸ್ಟ್ ಆಫೀಸ್ RD ಯೋಜನೆಯ ಬಡ್ಡಿಯು ತ್ರೈ ಮಾಸಿಕ ಅಂದರೆ 3 ತಿಂಗಳಿಗೆ ಒಮ್ಮೆ ಖಾತೆಗೆ ಜಮೆಯಾಗುತ್ತದೆ. (Quarterly Compounding ). ಇದರಿಂದ ಬಡ್ಡಿದರ ವು ಚಕ್ರಬಡ್ಡಿಯಂತೆ ವರ್ತಿಸಿ ಹೆಚ್ಚಿನ ಲಾಭ ಗಳಿಕೆಗೆ ಸಹಾಯಕವಾಗುತ್ತದೆ.
5 ವರ್ಷಗಳ ನಂತರ ದೊರಕುವ ಒಟ್ಟು ಗಳಿಕೆಯ ಮೊತ್ತ ಎಷ್ಟು?
ಪ್ರತಿ ತಿಂಗಳು ₹6,000 ದಂತೆ 5 ವರ್ಷಗಳ ಕಾಲ RD ಯೋಜನೆಯಲ್ಲಿ ಹೂಡಿಕೆ ಮಾಡಿದರೆ :
ಒಟ್ಟು ಹೂಡಿಕೆ ಮಾಡಿದ ಹಣ : ₹3,60,000
ಅಂದಾಜು ಬಡ್ಡಿ : ₹68,197
ಒಟ್ಟು ಗಳಿಕೆಯ ಹಣ : ₹4,28,196
ಸಣ್ಣ ಸಣ್ಣ ಉಳಿತಾಯದ ಹೂಡಿಕೆಯೂ ದೀರ್ಘ ಕಾಲಕ್ಕೆ ಹೆಚ್ಚಿನ ಗಳಿಕೆಯನ್ನು ತಲುಪಲು ಸಹಕಾರಿ. ಇದೆ ತರನಾಗಿ ದಿನಕ್ಕೆ ಹೆಚ್ಚಿನ ಉಳಿತಾಯದೊಂದಿಗೆ ಹೆಚ್ಚಿನ ಲಾಭವನ್ನು ಗಳಿಸಬಹುದು.

ಈ ಯೋಜನೆಯು ಯಾರಿಗೆ ಸೂಕ್ತ?
ಈ ಸಣ್ಣ ಉಳಿತಾಯ(post office RD savings) ಯೋಜನೆಯು ಸುರಕ್ಷತೆಯ ಹೂಡಿಕೆ ಮತ್ತು ಸ್ಥಿರ ಬಡ್ಡಿ ದರ ವನ್ನು ನೀಡುವ ಯೋಜನೆ ಹುಡುಕುವವರಿಗೆ ಸೂಕ್ತವಾಗಿದೆ. ಅದರಲ್ಲಿಯೂ
- ವಿದ್ಯಾರ್ಥಿಗಳಿಗೆ
- ಗ್ರಹಿಣಿಯರಿಗೆ
- ಸಂಬಳ ಪಡೆಯುವ ಉದ್ಯೋಗಿಗಳಿಗೆ
- ಸಣ್ಣ ಪುಟ್ಟ ವ್ಯಾಪಾರಿಗಳು
- ಕಡಿಮೆ ರಿಸ್ಕ್ ಬಯಸುವ ಎಲ್ಲರಿಗೂ
ಹಾಗೆಯೇ ನಿಮ್ಮ ಉಳಿತಾಯದ ಹೂಡಿಕೆಯಲ್ಲಿ ಸ್ವಲ್ಪ ಭಾಗ ಕಡಿಮೆ ರಿಸ್ಕ್ ನಲ್ಲಿ ಇಡಲು ಬಯಸುವ ವ್ಯಕ್ತಿಗಳು ಸಹ ಕೇಂದ್ರ ಸರ್ಕಾರದ ಅಧೀನದಲ್ಲಿನ ಈ ಪೋಸ್ಟ್ ಆಫೀಸ್ RD ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಪೋಸ್ಟ್ ಆಫೀಸ್ RD v/s ಬ್ಯಾಂಕ್ RD -ಯಾವುದು ಉತ್ತಮ?
| ಅಂಶ | ಪೋಸ್ಟ್ ಆಫೀಸ್ RD | ಬ್ಯಾಂಕ್ RD |
| ಭದ್ರತೆ | ಹೆಚ್ಚು (ಕೇಂದ್ರ ಸರ್ಕಾರ ) | ಮಧ್ಯಮ |
| ಬಡ್ಡಿ | ಹೆಚ್ಚಿನ ಸಮಯ ಸ್ಥಿರವಾಗಿ | ಬದಲಾಗಬಹುದು |
| ರಿಸ್ಕ್ | Almost ಜೀರೋ | ಕಡಿಮೆ |
| ರಿಟರ್ನ್ | ಸ್ಥಿರ | ಸ್ವಲ್ಪ ಬದಲಾಗಬಹುದು |
ಅಧಿಕ ಲಾಭ ಪಡೆಯಲು ಕೆಲವು ಟಿಪ್ಸ್ ಗಳು
- ಸರಿಯಾದ ಸಮಯಕ್ಕೆ ಹಣವನ್ನು ಜಮೆ ಮಾಡಿ.
ಲೇಟ್ ಫೀ ತಪ್ಪಿಸಬಹುದು, ಇದರಿಂದ ಲಾಭದ ಪ್ರಮಾಣ ಜಾಸ್ತಿಯಾಗುತ್ತದೆ.
- RD ಯನ್ನು ಮುಂದುವರೆಸಿ.
5 ವರ್ಷ ಪೂರ್ಣಗೊಂಡ ನಂತರವು RD ಯನ್ನು ಮುಂದುವರೆಸಿ, ಇದರಿಂದ ಹೆಚ್ಚಿನ ಬಡ್ಡಿ ಪಡೆಯಲು ಸಹಕಾರಿಯಾಗುತ್ತದೆ.
- ಹೂಡಿಕೆಯ ಮೊತ್ತವನ್ನು ಹೆಚ್ಚಿಸಿ -ಅಧಿಕ ಗಳಿಸಿ.
ನಿಗದಿ ಪಡಿಸಿದ ಮೊತ್ತಕ್ಕೆ ಅಂಚೆ ಕಚೇರಿ ಸಂಪರ್ಕಿಸಿ ಹೂಡಿಕೆ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಿ ಹೂಡಿಕೆ ಜಾಸ್ತಿ ಮಾಡಿದ್ದಲ್ಲಿ ಗಳಿಕೆಯ ಪ್ರಮಾಣ ಹೆಚ್ಚಿಗೆ ಆಗುತ್ತದೆ.
RD ಯನ್ನು 5 ವರ್ಷದ ನಂತರವೂ ಮುಂದುವರೆಸಿ ಲಾಭ ಪಡೆಯಿರಿ.
ಹೌದು,ಪೋಸ್ಟ್ ಆಫೀಸ್ RD ಯೋಜನೆಯು 5 ವರ್ಷಗಳ ನಂತರದಲ್ಲಿ ಮತ್ತೆ ಮುಂದುವರೆಸುವಂತಿದ್ದಲ್ಲಿ ಅದಕ್ಕೆ ಅವಕಾಶವನ್ನು ನೀಡಲಾಗಿದೆ. ಮತ್ತೆ 5 ವರ್ಷಗಳ ಕಾಲ RD ಯೋಜನೆಯನ್ನು ವಿಸ್ತರಿಸಿಕೊಳ್ಳಬಹುದು. ಇಲ್ಲಿ ಕಾಂಪೌಂಡಿಂಗ್ ನಿಂದಾಗಿ ಲಾಭದ ಪ್ರಮಾಣ ಹೆಚ್ಚಿಗೆ ಇರುತ್ತದೆ.
5 ವರ್ಷದ ಒಟ್ಟು ಹಣ (ಹೂಡಿಕೆ ಹಣ + ಬಡ್ಡಿಯ ಹಣ ) ಇದರ ಮೇಲೆಯೂ ಸಹ ಬಡ್ಡಿ ದೊರೆಯುವುದರಿಂದ 10 ವರ್ಷದ ಕೊನೆಯಲ್ಲಿ ಲಾಭದ ಪ್ರಮಾಣ ಜಾಸ್ತಿ ಇರುತ್ತದೆ.
ಈ ಸಾಮಾನ್ಯ ತಪ್ಪುಗಳನ್ನು ಮಾಡಬೇಡಿ.
- ಹೂಡಿಕೆಯ ಮಧ್ಯದಲ್ಲಿ ಖಾತೆಯನ್ನು ಮುಚ್ಚುವುದು.
- ನಿಯಮಿತವಾಗಿ ಹೂಡಿಕೆ ಅಥವಾ ಠೇವಣಿ ಜಮೆ ಮಾಡದಿರುವುದು.
- ಕಡಿಮೆ ಅವಧಿಗೆ ಲಾಭ ನಿರೀಕ್ಷೆ ಮಾಡುವುದು.
ಪೋಸ್ಟ್ ಆಫೀಸ್ ನಲ್ಲಿ ₹200 ಗಳ RD ಉಳಿತಾಯ ಮಾಡುವುದು ಸಣ್ಣ ವಿಷಯದಂತೆ ತೋರಬಹುದು. ಆದರೆ ಅದೇ ಸಣ್ಣ ಮೊತ್ತ 5 ಅಥವಾ 10 ವರ್ಷಗಳ ನಂತರ ಒಂದು ಒಳ್ಳೆಯ ಗಳಿಕೆಯನ್ನು ನೀಡುತ್ತದೆ. Compounding ನಿಂದಾಗಿ ಗಳಿಕೆಯ ಪ್ರಮಾಣ ಅದ್ಭುತವಾಗಿ ಕಾಣುತ್ತದೆ. ಏಕೆಂದರೆ ಇಲ್ಲಿ ಬಡ್ಡಿಯ ಮೇಲೇಯೂ ಸಹ ಬಡ್ಡಿ ನೀಡಿ. ಹೂಡಿಕೆಯ ಹಣ ಮತ್ತು ಬಡ್ಡಿಯ ಹಣ ಎಲ್ಲವು ಸೇರಿ ದೊಡ್ಡ ಮೊತ್ತ ನಿಮ್ಮ ಕೈ ಸೇರುತ್ತದೆ.
ಈ ಬಗ್ಗೆ ಹೆಚ್ಚಿನ ಲೆಕ್ಕಾಚಾರಕ್ಕೆ Post Office RD Calculator ಅನ್ನು ಬಳಸಿ ನಿಮ್ಮ ಅಗತ್ಯತೆಯನ್ನು ಹೊಂದಾಣಿಕೆ ಮಾಡಿಕೊಂಡು ಹೂಡಿಕೆಯ ಹಣವನ್ನು ನಿರ್ಧಾರಿಸಬಹುದು.
ಕೊನೆಯದಾಗಿ
ನೀವು ಸುರಕ್ಷತೆ, ಭದ್ರತೆ ಮತ್ತು ಸ್ಥಿರವಾದ ಹೂಡಿಕೆಯ ಮಾರ್ಗವನ್ನು ಹುಡುಕುತ್ತಿದ್ದರೆ, ಖಂಡಿತವಾಗಿಯೂ Post Office RD savings ಸ್ಕೀಮ್ ಒಂದು ಒಳ್ಳೆಯ ಆಯ್ಕೆಯಾಗಿದೆ.ದಿನಕ್ಕೆ 200₹ ಗಳನ್ನು ಉಳಿತಾಯ ಮಾಡಿ.ಪೋಸ್ಟ್ ಆಫೀಸ್ RD ಸ್ಕೀಮ್ ಮೂಲಕ ₹4+ ಲಕ್ಷ ಗಳಿಸಬಹುದು.ಸಣ್ಣ ಉಳಿತಾಯವು ದೊಡ್ಡ ಭವಿಷ್ಯವನ್ನು ನಿರ್ಮಿಸುತ್ತದೆ.
ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಕೇವಲ ಶಿಕ್ಷಣ ಮತ್ತು ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿ ಮಾತ್ರವಾಗಿದೆ. ಇದು ಯಾವುದೇ ರೀತಿಯ ಹಣಕಾಸು (Financial) ಹೂಡಿಕೆ ಸಲಹೆ (Investment Advice) ಅಲ್ಲ. ಹೂಡಿಕೆ ಮಾಡುವ ಮೊದಲು ನಿಮ್ಮ ವೈಯಕ್ತಿಕ ಹಣಕಾಸು ಸ್ಥಿತಿ, ಗುರಿಗಳು ಹಾಗೂ ಅಪಾಯ ಸಾಮರ್ಥ್ಯವನ್ನು ಪರಿಗಣಿಸಿ, ಅಗತ್ಯವಿದ್ದಲ್ಲಿ ಪ್ರಮಾಣಿತ ಹಣಕಾಸು ಸಲಹೆಗಾರರ (Financial Advisor) ಸಲಹೆ ಪಡೆಯಿರಿ. ಬಡ್ಡಿದರಗಳು ಹಾಗೂ ಯೋಜನೆ ನಿಯಮಗಳು ಕಾಲಾನುಸಾರ ಬದಲಾಗಬಹುದು.
post office RD ಯೋಜನೆಯ ಅವಧಿ ಎಷ್ಟು ವರ್ಷಗಳು?
ಪೋಸ್ಟ್ ಆಫೀಸ್ RD ಯೋಜನೆಯ ಅವಧಿ ಸಾಮಾನ್ಯವಾಗಿ 5 ವರ್ಷಗಳು, ವಿಸ್ತರಿಸುವ ಮನಸ್ಸಿದ್ದಲ್ಲಿ ಮತ್ತೆ 5 ವರ್ಷಗಳಿಗೆ ವಿಸ್ತರಿಸಿಕೊಳ್ಳಬಹುದು.
post office RD ಯೋಜನೆಯ ಬಡ್ಡಿಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
ಪೋಸ್ಟ್ ಆಫೀಸ್ RD ಯೋಜನೆಯ ಬಡ್ಡಿಯನ್ನು ತ್ರೈಮಾಸಿಕವಾಗಿ (Quarterly Compounding ) ಲೆಕ್ಕ ಹಾಕಲಾಗುತ್ತದೆ.
post office RD savings ಲಾಭದಾಯಕವೇ?
ಹೌದು, ಕಡಿಮೆ ರಿಸ್ಕ್ ಮತ್ತು ಭದ್ರತೆಯ ದೃಷ್ಟಿಯಿಂದ ಈ ಯೋಜನೆಯು ಲಾಭದಾಯಕವಾಗಿ ಕಾಣುತ್ತದೆ.
Jayanth
ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.
About Us →