750 ಭೂಮಾಪಕರ ನೇಮಕಾತಿ ಯಾವ ಹಂತದಲ್ಲಿದೆ? 1000 ಹೊಸ ಭೂಮಾಪಕರ ನೇಮಕಾತಿ..!

WhatsApp Group Join Now
Telegram Group Join Now

Table of Contents

ರಾಜ್ಯದಲ್ಲಿ ಭೂಮಾಪಕ ಖಾಲಿ ಹುದ್ದೆಯ ಸಂಖ್ಯೆ ಅಧಿಕವಾಗಿ, ಸರ್ಕಾರಿ ಸೇವೆಯಲ್ಲಿ ವ್ಯತ್ಯಯ ಆಗುವ ಸಂಭವ ಇರುವುದರಿಂದ ಪ್ರಸ್ತುತ ಚಾಲ್ತಿಯಲ್ಲಿರುವ ಹುದ್ದೆಯದ 750 ಸರ್ಕಾರಿ ಭೂಮಾಪಕ(Land Surveyor Recruitment 2026) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಬಗ್ಗೆ ಅಧಿವೇಶನದಲ್ಲಿಯೂ ಪ್ರಶ್ನೆಗಳೊಂದಿಗೆ ಕೇಳಲಾಗಿದೆ.

ಪ್ರಸ್ತುತ ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಯಾವ ಹಂತದಲ್ಲಿದೆ. ಮತ್ತು ಹೊಸದಾಗಿ ಹೆಚ್ಚು ಭೂಮಾಪಕರ ಹುದ್ದೆಗಳ ನೇಮಕಾತಿಗೆ ಸರ್ಕಾರದ ಕ್ರಮಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಭೂಮಾಪಕರ ಕೊರತೆಯಿಂದ ಸರ್ಕಾರಿ ಸೇವೆಯಲ್ಲಿನ ಸಮಸ್ಯೆಗಳು

ರಾಜ್ಯದಲ್ಲಿನ ಭೂಮಾಪಕರ ಹುದ್ದೆ ಖಾಲಿಯಿಂದಾಗಿ ಆಡಳಿತಾತ್ಮಕ ತೊಂದರೆಗಳಲ್ಲದೆ,ನೇರವಾಗಿ ಸಾರ್ವಜನಿಕರಿಗೆ ಸಿಗಬೇಕಾದ ಸೇವೆಗಳಿಗೆ ತೊಂದರೆಗಳಾಗುತ್ತದೆ.

  • ಭೂಮಾಪನ ಕಾರ್ಯದಲ್ಲಿ ವಿಳಂಬ
  • ಭೂ ದಾಖಲೆ ತಿದ್ದುಪಡಿ ಪ್ರಕ್ರಿಯೆ ನಿಧಾನ
  • ಜಮೀನು ವಿವಾದಗಳ ನಿವಾರಣೆಯಲ್ಲಿ ವಿಳಂಬ
  • ಭೂಮಿ ಆನ್ಲೈನ್ ಸೇವೆಗಳ ಮೇಲೆ ಪರಿಣಾಮ

ಪ್ರಸ್ತುತ ರಾಜ್ಯದಲ್ಲಿನ ಭೂಮಾಪಕರ ಹುದ್ದೆಗಳ ಸಂಖ್ಯೆ

ಅಧಿವೇಶನದಲ್ಲಿ ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿರುವ ಕಂದಾಯ ಸಚಿವರು ಪ್ರಸ್ತುತ ರಾಜ್ಯದಲ್ಲಿ ಖಾಲಿಯಿರುವ ಮತ್ತು ಕಾರ್ಯ ನಿರ್ವಹಿಸುತ್ತಿರುವ ಭೂಮಾಪಕರ ಹುದ್ದೆಗಳ ಬಗ್ಗೆ ವಿವರಿಸಿದ್ದಾರೆ.

👉 ಇದೆ ತರನಾದ ಹೆಚ್ಚಿನ ಮಾಹಿತಿಗೆ ಈಗಲೇ ನಮ್ಮ ಟೆಲಿಗ್ರಾಂ ಚಾನೆಲ್ ಅನ್ನು ಫಾಲೋ ಮಾಡಿ.
  • ಒಟ್ಟು ಮಂಜೂರಾದ ಭೂಮಾಪಕರ ಹುದ್ದೆಗಳು: 4020
  • ಪ್ರಸ್ತುತ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭೂಮಾಪಕರು: 3059
  • ಖಾಲಿ ಇರುವ ಒಟ್ಟು ಹುದ್ದೆಗಳು: 961
ಭೂಮಾಪಕರ ನೇಮಕಾತಿ 2026
ಭೂಮಾಪಕರ ನೇಮಕಾತಿ 2026

750 ಭೂಮಾಪಕರ ಹುದ್ದೆಯ ನೇಮಕಾತಿ ಪ್ರಕ್ರಿಯೆ ಯಾವ ಹಂತದಲ್ಲಿದೆ?

ಪ್ರಸ್ತುತ ಖಾಲಿಯಿರುವ 961 ಹುದ್ದೆಗಳಲ್ಲಿ 750 ಸರ್ಕಾರಿ ಭೂಮಾಪಕರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಕರ್ನಾಟಕ ಲೋಕಸೇವಾ ಆಯೋಗ ( KPSC)ದಿಂದ ಹೊರಡಿಸಲಾಗಿತ್ತು. ಆದರೆ ನಂತರದಲ್ಲಿ ಕರ್ನಾಟಕ ಸರ್ಕಾರದ ಆದೇಶದನ್ವಯ ನಿಗದಿ ಪಡಿಸಿರುವ ದಿನಾಂಕದ ನಂತರದ ಅಧಿಸೂಚನೆಗೊಂಡ ಹುದ್ದೆಗಳನ್ನು ರದ್ದೂಗೊಳಿಸುವಂತೆ ತಿಲಿಸಲಾಗಿದ್ದು, ಈಗ ಈ 750 ಭೂಮಾಪಕರ ಹುದ್ದೆಯ ನೇಮಕಾತಿ ಪ್ರಕಿಯೆ ಸ್ಥಗಿತಗೊಳಿಸಲಾಗಿತ್ತು.

ನಂತರದಲ್ಲಿನ ಸರ್ಕಾರದ ನಿರ್ದೇಶನದಂತೆ 50% ಮೀಸಲಾತಿಯ ಹೊಸ ಆದೇಶದನ್ವಯ ನೇಮಕಾತಿ ಹುದ್ದೆಗಳ ಹೊಸ ವರ್ಗಿಕರಣಕ್ಕೆ ಚಾಲನೆ ಜೊತೆಗೆ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ರಾಜ್ಯದಲ್ಲಿನ ಖಾಸಗಿ ಭೂಮಾಪಕರ ಹುದ್ದೆಗಳು

ಕಂದಾಯ ಸಚಿವರು ನೀಡಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿನ ಪ್ರಸ್ತುತ ಖಾಸಗಿ ಭೂಮಾಪಕರ ಅಂಕಿ ಅಂಶಗಳು ಹೀಗಿದೆ.

  • ರಾಜ್ಯದಲ್ಲಿ ಒಟ್ಟು ನೋಂದಾಯಿತ ಖಾಸಗಿ ಭೂಮಾಪಕರು: 8995
  • ಪರವಾನಗಿ ರದ್ದಾದವರ ಸಂಖ್ಯೆ: 2103
  • ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವವರು: 6892

ಕಾರ್ಯ ನಿರ್ವಹಿಸುತ್ತಿರುವ ಈ 6892 ಪರವಾನಿಗೆ ಭೂಮಾಪಕರು ಮೋಜಿಣಿ ಮತ್ತು ಇತರೆ ಇಲಾಖೆ ಕಾರ್ಯಗಳನ್ನು ಮಾಡುತ್ತಿದ್ದಾರೆ.ಇವರಿಂದ ಸಾರ್ವಜನಿಕರ ಎಲ್ಲಾ ಇಲಾಖೆ ಸೇವೆಗಳು ಅವಲಂಬಿತಾರಾಗಿದ್ದಾರೆ. ಭೂಮಿ ಮತ್ತು ಮೋಜಿಣಿ ತಂತ್ರಾಂಶದಲ್ಲಿನ ಎಲ್ಲಾ ಪ್ರಮುಖ ಸರ್ವೇ ಮತ್ತು ಇತರೆ ಸರ್ವೇ ದಾಖಲೆಗಳ ಸೇವೆಯನ್ನು ಪರವಾನಿಗೆ ಭೂಮಾಪಕರ ಸಹಾಯದಿಂದ ನಿರ್ವಹಿಸಲಾಗುತ್ತಿದೆ.

ಕರ್ನಾಟಕ ಸರ್ಕಾರದಿಂದ ಹೊಸ ಭೂಮಾಪಕ ಹುದ್ದೆಗಳ ನೇಮಕ…!

ಹೌದು, ಅಧಿವೇಶನದ ಪ್ರಶ್ನೆಗಳಿಗೆ ಉತ್ತರಿಸಿರುವ ಕಂದಾಯ ಸಚಿವರು ಪ್ರಸ್ತುತ ಬಾಕಿ ಉಳಿದಿರುವ 750 ಸರ್ಕಾರಿ ಭೂಮಾಪಕರ ನೇಮಕಾತಿ ಜೊತೆಗೆ 1,000 ಪರವಾನಿಗೆ ಭೂಮಾಪಕರ ನೇಮಕಾತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಹೊಸ ನೇಮಕಾತಿ ಪ್ರಾರಂಭವಾಗಲು ಈ ಹಂತಗಳನ್ನು ದಾಟಬೇಕು.

  • ಇಲಾಖೆಗೆ ಬೇಕಿರುವ ಹುದ್ದೆಗಳ ಬಗ್ಗೆ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಅನುಮೋದನೆಗೆ ಕಳುಹಿಸಬೇಕು.
  • ಆರ್ಥಿಕ ಇಲಾಖೆಯು ಅನುಮೋದನೆ ನೀಡುವುದು.
  • ಆರ್ಥಿಕ ಇಲಾಖೆ ತಿಳಿಸಿರುವ ಹುದ್ದೆಗಳಿಗೆ ಪರೀಕ್ಷೆ ನಡೆಸಲು ಪ್ರಾಧಿಕಾರದ ಆಯ್ಕೆ.
  • ಮೀಸಲಾತಿ ಅನ್ವಯ ಹುದ್ದೆಗಳ ಹಂಚಿಕೆ ಮತ್ತು ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ.
  • ಪ್ರಾಧಿಕಾರದಿಂದ ಅಧಿಸೂಚನೆ

ಹೊಸ ನೇಮಕಾತಿ ಅಧಿಸೂಚನೆಯ(Land Surveyor Recruitment 2026)ನಂತರದ ಹಂತಗಳು

  • ಅರ್ಜಿ ಅಹ್ವಾನ -ಅರ್ಜಿ ಸ್ವೀಕಾರ
  • ಪ್ರಾಧಿಕಾರದಿಂದ ಪರೀಕ್ಷೆ ನಡೆಸಲಾಗುತ್ತದೆ.
  • ಆಯ್ಕೆ ಪಟ್ಟಿ ಬಿಡುಗಡೆ.
  • ದಾಖಲಾತಿ ಪರಿಶೀಲನೆ ಮತ್ತು ತರಬೇತಿ.

ಭೂಮಾಪಕರ ಕೊರತೆಯಿಂದ ಜನರಿಗಾಗುವ ಸಮಸ್ಯೆಗಳೇನು?

  1. ಭೂ ಮಾಪನ ಅಥವಾ ಭೂಮಿ ಸರ್ವೇ ಯಲ್ಲಿ ವಿಳಂಬ.
  2. RTC / ಪಹಣಿಯಲ್ಲಿನ ತಿದ್ದುಪಡಿಗೆ ಅಡ್ಡಿ.
  3. ಜಮೀನು ವಿವಾದ ಹೆಚ್ಚಳ -ರೈತರಿಗೆ ಸಮಸ್ಯೆ
  4. ಆನ್ಲೈನ್ ಸೇವೆಗಳು ಸಹ ನಿಯಮಿತವಾಗುತ್ತದೆ.
  5. ಕೆಲಸದ ಒತ್ತಡದಿಂದ ಇತರೆ ಕಾರ್ಯ ಮಾಡಲಾಗದು.
  6. ಸಾರ್ವಜನಿಕರ ಸಮಯ ವ್ಯರ್ಥ
  7. ಕಚೇರಿಗೆ ಹೆಚ್ಚಾಗಿ ಅಲೆದಾಡುವ ಸಮಸ್ಯೆ
Land Surveyor office
Land Surveyor office

ಈ ಸಮಸ್ಯೆಗಳಿಗೆ ಪರಿಹಾರ

ಸರ್ಕಾರ ಕೈಗೊಳ್ಳಬೇಕಿರುವ ಕ್ರಮಗಳನ್ನು ಅತಿ ಬೇಗನೆ ತೆಗೆದುಕೊಳ್ಳಬೇಕು.

ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು

ಪ್ರಸ್ತುತ ಸ್ಥಗಿತಗೊಂಡಿರುವ 750 ಸರ್ಕಾರಿ ಭೂಮಾಪಕರ(land Surveyor Recruitment 2026) ಹುದ್ದೆಗಳಿಗೆ ಅಧಿಸೂಚನೆಗೊಂಡ ನೇಮಕಾತಿಗೆ ವೇಗ ನೀಡಬೇಕು.

ಹೊಸದಾಗಿ 1,000 ಭೂಮಾಪಕರ ಹುದ್ದೆ ಭರ್ತಿಗೆ ಕ್ರಮ ಕೈಗೊಂಡು ಬೇಗನೆ ನೇಮಕಾತಿ ಮಾಡಿಕೊಳ್ಳಬೇಕು.

ಕೊನೆಯದಾಗಿ

ರಾಜ್ಯದಲ್ಲಿ ಭೂಮಾಪಕರ ಕೊರತೆಯಿಂದ ಸಾರ್ವಜನಿಕರ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯ ಆಗುತ್ತಿದ್ದೂ ಇವು ಆಡಳಿತಾತ್ಮಕ ಸವಾಲಾಗಿ ಪರಿಣಮಿಸಿದೆ. ಇದರಲ್ಲಿಯೂ 750 ಸರ್ಕಾರಿ ಭೂಮಾಪಕರ ಹುದ್ದೆಗಳ ನೇಮಕಾತಿ ಸ್ಥಗಿತಗೊಂಡಿರುವುದು ಸಮಸ್ಯೆಯನ್ನು ಗಂಭೀರಗೊಳಿಸಿದೆ. ಅದಾಗಿಯೂ ಸಹ 1000 ಹೊಸ ಪರವಾನಿಗೆ ಭೂಮಾಪಕರ ನೇಮಕಾತಿ ಉದ್ಯೋಗಕಾಂಕ್ಷಿಗಳಿಗೆ ಭರವಸೆ ನೀಡುತ್ತಿದೆ.

ಇದನ್ನು ಬೇಗನೆ ನೇಮಕಾತಿ ಅಧಿಸೂಚನೆ ಹೊರಡಿಸಿ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ನೀಡಿ, ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡಿ ಸಾರ್ವಜನಿಕರಿಗೆ ಉತ್ತಮ ರೀತಿಯ ಸೇವೆ ಒದಗಿಸುವಲ್ಲಿ ಸರ್ಕಾರ ಈ ಕೂಡಲೇ ಬೇಕಿರುವ ಕ್ರಮಗಳನ್ನು ಕೈಗೊಳ್ಳಬೇಕು.


750 ಭೂಮಾಪಕರ ನೇಮಕಾತಿ ಯಾಕೆ ಸ್ಥಗಿತಗೊಂಡಿದೆ?

ಕರ್ನಾಟಕ ಸರ್ಕಾರದ ಸುತ್ತೋಲೆಗಳ ಪ್ರಕಾರ 750 ಸರ್ಕಾರಿ ಭೂಮಾಪಕ ಹುದ್ದೆಯ ನೇಮಕಾತಿ ಅಧಿಸೂಚನೆಯನ್ನು ಸ್ಥಗಿತಗೊಳಿಸಲಾಗಿದೆ.

ರಾಜ್ಯದಲ್ಲಿ ಒಟ್ಟು ಎಷ್ಟು ಸರ್ಕಾರಿ ಭೂಮಾಪಕರ ಹುದ್ದೆಗಳು ಖಾಲಿ ಇವೆ?

ಒಟ್ಟು ಮಂಜೂರಾದ 4020 ಹುದ್ದೆಗಳ ಪೈಕಿ 961ಹುದ್ದೆಗಳು ಖಾಲಿಯಿವೆ. ಇದರಲ್ಲಿ 750 ಸರ್ಕಾರಿ ಭೂಮಾಪಕ ಹುದ್ದೆಗೆ ಈಗಾಗಲೇ ಅಧಿಸೂಚನೆ ಹೊರಡಿಸಿ ಅರ್ಜಿ ಸ್ವೀಕರಿಸಲಾಗಿದೆ. ನಂತರದಲ್ಲಿ ಈ 750 ಹುದ್ದೆಯ ನೇಮಕಾತಿಯನ್ನು ಸರ್ಕಾರದ ಸುತ್ತೋಲೆ ಪ್ರಕಾರವಾಗಿ ಸ್ಥಗಿತಗೊಳಿಸಲಾಗಿದೆ.

1000 ಹೊಸ ಪರವಾನಿಗೆ ಭೂಮಾಪಕರ ನೇಮಕಾತಿ 2026 ಯಾವಾಗ ನಡೆಯಲಿದೆ?

1000 ಹೊಸ ಪರವಾನಿಗೆ ಭೂಮಾಪಕರ ಹುದ್ದೆಯ ಭರ್ತಿಗೆ ಈಗಾಗಲೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಂತರದಲ್ಲಿ ಈ ಹುದ್ದೆಯ ಭರ್ತಿಗೆ ಕ್ರಮವಹಿಸಲಾಗುವುದು.

ಭೂಮಾಪಕರ ಕೊರತೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳೇನು?

ಭೂಮಾಪಕರ ಕೊರತೆಯಿಂದ ಭೂಮಾಪನ ಅಥವಾ ಸರ್ವೇ ವಿಳಂಬ, RTC ತಿದ್ದುಪಡಿಯಲ್ಲಿ ತಡ, ರೈತರ ಜಮೀನು ಗಡಿ ವಿವಾದಗಳು ಹಾಗೂ ಸರ್ಕಾರಿ ಸೇವೆಗಳ ವಿಳಂಬ.

About Content Writer
Jayanth

Jayanth

ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.

About Us →
WhatsApp Group Join Now
Telegram Group Join Now

Leave a Comment