SSC GD Slot Booking ಇಂದು ಕೊನೆ ದಿನ – ಈ ತಪ್ಪು ಮಾಡಿದ್ರೆ ಅವಕಾಶ ಕಳೆದುಕೊಳ್ಳ್ತೀರ!

WhatsApp Group Join Now
Telegram Group Join Now

ಭಾರತದಾದ್ಯಂತ ಲಕ್ಷಾಂತರ ಅಭ್ಯರ್ಥಿಗಳು ಕಾಯುತ್ತಿದ್ದ ಪ್ರಮುಖ ಅಪ್‌ಡೇಟ್ ಇದೀಗ ಬಂದಿದೆ. ಯುವ ಮನಸ್ಸುಗಳ ಮಿಡಿತ SSC GD Slot Booking ಆರಂಭವಾಗಿದೆ.ಅಭ್ಯರ್ಥಿಗಳು ತಮ್ಮ ಪರೀಕ್ಷಾ ಸಮಯವನ್ನು ಆಯ್ಕೆ ಮಾಡುವ ಅವಕಾಶ SSC ಈಗ ನೀಡಿದೆ. ಈ ಹಂತವನ್ನು ಅಭ್ಯರ್ಥಿಗಳು ತಮ್ಮ ssc ಲಾಗಿನ್ ನಲ್ಲಿ ಸರಿಯಾಗಿ ಮತ್ತು ಸಮಯಕ್ಕೆ ಮಾಡದೇ ಇದ್ದರೆ, ನೀವು ಈ ಬಾರಿಯ ಪರೀಕ್ಷೆ ಬರೆಯುವ ಅವಕಾಶವನ್ನೇ ಕಳೆದುಕೊಳ್ಳುತ್ತೀರಿ.

ಈ ಲೇಖನದಲ್ಲಿ, SSC GD Slot Booking ಗೆ ಸಂಬಂಧಿಸಿದ ಇತರೆ ಅಂಶಗಳಾದ, ಪ್ರಮುಖ ದಿನಾಂಕ,ಬುಕಿಂಗ್ ಮಾಡುವ ಪ್ರಕ್ರಿಯೆ,ಮಾಡಬಾರದ ತಪ್ಪುಗಳು ಹಾಗೂ ಇತರೆ ಪ್ರಮುಖ ಸೂಚನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.

SSC GD Slot Booking ಇಂದು ಕೊನೆ ದಿನ

Staff Selection Commission (SSC) ವತಿಯಿಂದ ನಡೆಸಲಾಗುವ SSC GD ಪರೀಕ್ಷೆಗೆ Slot ಬುಕಿಂಗ್ ಮಾಡುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಈ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ತಮಗೆ ಅನುಕೂಲವಾದ ವಾರವನ್ನು (WEEKS) ಆಯ್ಕೆ ಮಾಡಿಕೊಳ್ಳಬಹುದು.

ಇದು “First Come First Serve”- ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ತತ್ವದ ಆಧಾರದ ಮೇಲೆ ನಡೆಯುತ್ತದೆ. ಆದ್ದರಿಂದ, ತಡ ಮಾಡಿದರೆ ನೀವು ಬಯಸಿದ ಸ್ಲಾಟ್ ನಿಮಗೆ ಸಿಗದೇ ಹೋಗಬಹುದು.

ಇಂದು SSC GD Slot Booking Last Date ಆದ್ದರಿಂದ ಅಭ್ಯರ್ಥಿಗಳು ಬೇಗನೆ ನಿಮ್ಮ slot ಅನ್ನು ಬುಕ್ ಮಾಡಿಕೊಳ್ಳಿ.

SSC GD Slot Booking 2026 ಮಾಡಲು – ಪ್ರಮುಖ ದಿನಾಂಕಗಳು

Slot Booking ಆರಂಭ ದಿನಾಂಕ: 11 ಏಪ್ರಿಲ್ 2026

ಕೊನೆಯ ದಿನಾಂಕ: 15 ಏಪ್ರಿಲ್ 2026

ಪರೀಕ್ಷಾ ದಿನಾಂಕ:

  • week 1- 27th ಏಪ್ರಿಲ್ ಯಿಂದ 2nd ಮೇ
  • week 2 – 4th ಮೇ ಯಿಂದ 9th ಮೇ
  • week 3 – 18th ಮೇ ಯಿಂದ 23rd ಮೇ
  • week 4 – 25th ಮೇ ಯಿಂದ 30th ಮೇ

ಮುಖ್ಯ ಸೂಚನೆ :- ಕೊನೆಯ ದಿನಾಂಕದ ನಂತರ Slot ಬುಕಿಂಗ್ ಗೆ ಯಾವುದೇ ಅವಕಾಶವಿಲ್ಲ.

ಈ ದಿನಾಂಕಗಳ ಅಧಿಕೃತ ಮಾಹಿತಿ ನೋಡಲು ಇಲ್ಲಿ ಕ್ಲಿಕ್ ಮಾಡಿ.

SSC GD Slot Booking ಮಾಡುವುದು ಹೇಗೆ? (Step by Step process)

ಅಭ್ಯರ್ಥಿಗಳು ತಮ್ಮ slot ಬುಕ್ ಮಾಡಲು ಈ ಕೆಳಗೆ ನೀಡಿರುವ ಹಂತಗಳನ್ನು ಅನುಸರಿಸಿ. ಬೇಗನೆ ತಮಗೆ ಬೇಕಿರುವ slot ಅನ್ನು ಪಡೆಯಬಹುದು.

ಗಮನಿಸಬೇಕಾದ ಇನ್ನೊಂದು ಅಂಶವೇನೆಂದರೆ ಇಲ್ಲಿ ನಿಮಗೆ ಬೇಕಿರುವ ದಿನಾಂಕವನ್ನು ನೀಡಲಾಗುವುದಿಲ್ಲ. ಇಲ್ಲಿ ನೀವು ವಾರ (week) ಗಳನ್ನು ಮಾತ್ರ ನಿಮ್ಮ ಆದ್ಯತೆಯನ್ನಾಗಿ ನೀಡಬಹುದು. ಅಂದರೆ ಈ ಮೇಲೆ ಹೇಳಿರುವ ಹಾಗೆ 4 ವಾರಗಳ ದಿನಾಂಕಗಳನ್ನು ನೀಡಲಾಗಿದೆ. ಅದರಲ್ಲಿ ನಿಮ್ಮ ಆಯ್ಕೆಯ ಯಾವುದೇ ವಾರವನ್ನು ಮೊದಲ ಆದ್ಯತೆಯಾಗಿ ನಂತರದ ನೆಚ್ಚಿನ ವಾರವನ್ನು 2ನೆಯ ಆದ್ಯತೆಯಾಗಿ ಹಾಗೂ 3ಮತ್ತು 4 ನೆಯ ವಾರವನ್ನು ಆದ್ಯತೆಯಾಗಿ ನೀಡಬೇಕು.

👉 ಇದೆ ತರನಾದ ಹೆಚ್ಚಿನ ಮಾಹಿತಿಗೆ ಈಗಲೇ ನಮ್ಮ ಟೆಲಿಗ್ರಾಂ ಚಾನೆಲ್ ಅನ್ನು ಫಾಲೋ ಮಾಡಿ.
  • ಹಂತ 01 :- ಮೊದಲನೆಯದಾಗಿ SSC ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ.
  • ಹಂತ 02 :-ನಿಮ್ಮ user id ಮತ್ತು ಪಾಸ್ವರ್ಡ್ ಬಳಸಿ, ಲಾಗಿನ್ ಆಗಿರಿ.
  • ಹಂತ 03 :-My application ಓಪನ್ ಮಾಡಿ.
  • ಹಂತ 04 :-SSC GD Week preference ಮೇಲೆ ಕ್ಲಿಕ್ ಮಾಡಿ.
  • ಹಂತ 05 :-ನಿಮ್ಮ ಆದ್ಯತೆಯ ಮೇರೆಗೆ week ಅನ್ನು ಆಯ್ಕೆ ಮಾಡಿ submit ಮಾಡಿ.
SSC GD Slot Booking Process
SSC GD Slot Booking Process

slot ಬುಕ್ ಮಾಡುವಾಗ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು

SSC ಅಧಿಕೃತ ವೆಬ್‌ಸೈಟ್ ನಲ್ಲಿ ನಿಮ್ಮ ಆದ್ಯತೆಯ ಸಮಯವನ್ನು ಆಯ್ಕೆ ಮಾಡುವಾಗ ಮೊದಲು ಸರಿಯಾದ ನೆಟ್ವರ್ಕ್ ಇರುವ ಕಡೆಯಿಂದ ಲಾಗಿನ್ ಮಾಡಿ ನಿಮ್ಮ ಆದ್ಯತೆಯನ್ನು ಆಯ್ಕೆ ಮಾಡಿ ಸಲ್ಲಿಸಿ.

SLOT ಬುಕ್ ಮಾಡುವಾಗ ನಿಮಗೆ ಬೇಕಿರುವ ವಾರವನ್ನು ನಿಮ್ಮ ಓದಿಗೆ ಹೊಂದಿಕೆಯಾಗುವಂತೆ ಅಡ್ಜೆಸ್ಟ್ ಮಾಡಿಕೊಳ್ಳಿ. ಅಂದರೆ ಕೊನೆಯ ವಾರವನ್ನು ಆಯ್ಕೆ ಮಾಡಿಕೊಂಡರೆ ಹೆಚ್ಚಿನ ಓದು ಅಥವಾ ರಿವಿಶನ್ ಗೆ ಹೆಚ್ಚಿನ ಸಮಯವಕಾಶ ಸಿಗುತ್ತದೆ.

ಒಮ್ಮೆ ನಿಮ್ಮ ಆದ್ಯತೆ ವಾರವನ್ನು ಆಯ್ಕೆ ಮಾಡಿ ಸಲ್ಲಿಸಿದ ನಂತರ ಅದನ್ನು ಬದಲಾಯಿಸಲು ಅವಕಾಶವಿಲ್ಲ, ಹಾಗೆಯೇ ಒಳ್ಳೆಯ ನೆಟ್ವರ್ಕ್ ಇರುವ ಸ್ಥಳದಲ್ಲಿ ನಿಮ್ಮ ಈ ಬುಕ್ ಮಾಡುವ ಕಾರ್ಯವನ್ನು ಮಾಡಿ.

ಈ ತಪ್ಪುಗಳನ್ನು ಮಾಡಿದರೆ ಅವಕಾಶವನ್ನು ಕಳೆದುಕೊಳ್ಳುತ್ತಿರ..

ಬಹುತೇಕ ವಿದ್ಯಾರ್ಥಿಗಳು ಕೊನೆಯ ದಿನದವರೆಗೆ ಕಾಯ್ದು slot ಬುಕ್ ಮಾಡಬೇಕೆಂದಿರುತ್ತಾರೆ ಆದರೆ ಹೀಗೆ ಮಾಡಿದರೆ ಅದು ತಪ್ಪು ಏಕೆಂದರೆ ಕೊನೆಯ ಕ್ಷಣದಲ್ಲಿ ಸರ್ವರ್ ಸಮಸ್ಯೆ ಎದುರಾಗುತ್ತದೆ. ಹಾಗೆಯೇ ಎಲ್ಲರೂ ಒಮ್ಮೆಲೇ slot ಬುಕ್ ಮಾಡಲು ಪ್ರಾರಂಸಭಿಸಿದರೆ ವೆಬ್‌ಸೈಟ್ ನಿಧಾನವಾಗುತ್ತದೆ ಮತ್ತು ಎಲ್ಲಾ slot ಗಳು ಭರ್ತಿ ಯಾಗುವ ಸಂಭವವಿರುತ್ತದೆ. ಇದರಿಂದ ನಿಮ್ಮ slot ಬುಕಿಂಗ್ ಆಗದೇ ಇರಬಹುದು.

Login ಮಾಡಿದ ನಂತರದಲ್ಲಿ ಅವಸರದಲ್ಲಿ ನಿಮ್ಮ ಆದ್ಯತೆಯ ವಾರವನ್ನು ತಪ್ಪಾಗಿ ಆಯ್ಕೆ ಮಾಡಿ ಸಲ್ಲಿಸಿ ನಂತರ ಯೋಚಿಸುವುದು. ಇದು ಒಮ್ಮೆ ಸಲ್ಲಿಸಿದ ನಂತರ ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಆದ್ದರಿಂದ ನಿಮ್ಮ ಆಯ್ಕೆಯನ್ನು ಇನ್ನೊಮ್ಮೆ ಪರಿಶೀಲಿಸಿಕೊಂಡು ಸಲ್ಲಿಸಿ.

Slot ಆಯ್ಕೆ ಮಾಡಿ ಸಲ್ಲಿಸಿದ ನಂತರ ಇನ್ನೊಮ್ಮೆ ಲಾಗಿನ್ ಮಾಡಿ ನಿಮ್ಮ ಆದ್ಯತೆಯ ಆಯ್ಕೆಗಳು ಕನ್ಫರ್ಮ್ ಮಾಡದೇಯೇ ಎಂದು ಚೆಕ್ ಮಾಡಿಕೊಳ್ಳಿ. ಇದರಿಂದ slot ಬುಕಿಂಗ್ ನಲ್ಲಿ ಯಾವುದೇ ಸಮಸ್ಯೆಯಿಂದ ಬುಕ್ ಆಗದೆ ಇರಬಹುದು.

Slot booking ಆದ ನಂತರದ ಹಂತಗಳು ಯಾವುವು?

ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗೆ slot ಬುಕ್ ಮಾಡಿ, ಕನ್ಫರ್ಮ್ ಆದ ನಂತರ ನಿಮ್ಮ ಆದ್ಯತೆಯ ಆಯ್ಕೆಯನ್ನು ಪರಿಶೀಲಿಸಿ, ಸಾಧ್ಯವಾದಲ್ಲಿ ನಿಮ್ಮ ಮೊದಲ ಆದ್ಯತೆಯ ಅದೇ ಮೊದಲ ವಾರದಲ್ಲಿನ ಯಾವುದಾದರೂ ಒಂದು slot ಅನ್ನು ನಿಮಗೆ ಪರೀಕ್ಷಾ ಸಮಯವನ್ನಾಗಿ ನಿಗದಿಪಡಿಸುತ್ತಾರೆ.

ಅಡ್ಮಿಟ್ ಕಾರ್ಡ್ ನಲ್ಲಿರುವ ಮತ್ತು ತಿಳಿದಿರಬೇಕಿರುವ ಪ್ರಮುಖ ಮಾಹಿತಿ

ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಂಡ ನಂತರದಲ್ಲಿ ಇದರಲ್ಲಿ ನಮೂದಿಸಿರುವ ದಿನಾಂಕ ಮತ್ತು ಸಮಯ (slot ) ಹಾಗೂ ಸ್ಥಳ (venue )ವನ್ನು ನೋಡಿಕೊಳ್ಳಿ,ಇದರಲ್ಲಿ ಇರುವ ಈ ಮಾಹಿತಿಯು ಫೈನಲ್ ಆಗಿರುತ್ತದೆ. ಮತ್ತೆ ಬದಲಿಸಲು ಬರುವುದಿಲ್ಲ.

ಈ ಅಡ್ಮಿಟ್ ಕಾರ್ಡ್ ನಲ್ಲಿ ನಿಮ್ಮ ಫೋಟೋ ಮತ್ತು ಸಿಗ್ನೇಚರ್ ಇರುವುದು ಹಾಗೆಯೇ ಪರೀಕ್ಷೆಗೆ ಸಂಬಂಧಿಸಿದ ನಿಯಮ ಮತ್ತು ಸೂಚನೆಗಳನ್ನು ಒಳಗೊಂಡಿರುತ್ತದೆ.

ಪರೀಕ್ಷೆಗೆ ಹೋಗುವ ಮೊದಲು ಈ ಅಂಶಗಳನ್ನು ಗಮನಿಸಿ.

ಪರೀಕ್ಷೆಗೆ ಹೋಗುವ ಮೊದಲು ಇದರಲ್ಲಿನ ಎಲ್ಲಾ ಅಂಶಗಳನ್ನು ಓದಿಕೊಂಡು, ನಿಯಮಕ್ಕೆ ಅನುಸಾರವಾಗಿ ಬೇಕಿರುವ ಎಲ್ಲಾ ಸಾಮಗ್ರಿಗಳಾದ -ಅಡ್ಮಿಟ್ ಕಾರ್ಡ್, ಫೋಟೋ ಮತ್ತು ಗವರ್ನಮೆಂಟ್ ನೀಡಿರುವ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗಿ.

ಡ್ರೆಸ್ ಕೋಡ್ ಮೇಲೆ ಗಮನಕೊಡಿ.ಯಾವುದೇ ತರನಾದ ಆಭರಣ ಗಳನ್ನು ತೊಟ್ಟು ಹೋಗಬೇಡಿ. ಬೆಲ್ಟ್ ಮತ್ತು shoes ಗಳನ್ನು ಪರೀಕ್ಷಾ ಕೇಂದ್ರದ ಒಳಗೆ ಬಿಡುವುದಿಲ್ಲ.

ನನ್ನ ಸ್ವಂತ ಅನುಭವ

ಹೌದು, ಈ ಪರೀಕ್ಷೆಯನ್ನು ನಾನು ಕೂಡ ಬರೆದಿದ್ದೇನೆ, ಆ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದಲ್ಲಿ ನಿಮ್ಮನ್ನು ಚೆಕ್ ಮಾಡಿ ಕೊಠಡಿ ಒಳಗಡೆ ಬಿಡುತ್ತಾರೆ. ಆಗ ನೀವು ಧರಿಸಿದ ಯಾವುದೇ ರೀತಿಯ ಮೆಟಲ್ ಆಭರಣಗಳು, ದಾರಗಳು, ಬೆಲ್ಟ್, ಬ್ಯಾಗ್ ಮತ್ತು shoes ಅಥವಾ ಚಪ್ಪಲಿಗಳನ್ನು ಒಳಗಡೆ ತೆಗೆದು ಕೊಂಡು ಹೋಗಲು ಬಿಡುವುದಿಲ್ಲ.

SSC GD Exam Slot Booking Details
SSC GD Exam Slot Booking Details

ಎಲ್ಲವನ್ನು ತಪಾಸಣೆ ವೇಳೆಯಲ್ಲಿ ಕೊಟ್ಟು, ಅಡ್ಮಿಟ್ ಕಾರ್ಡ್ ಮತ್ತು ID ಕಾರ್ಡ್ ಅನ್ನು ಮಾತ್ರ ತೆಗೆದುಕೊಂಡು ಹೋಗಲು ಬಿಡುತ್ತಾರೆ.

ಪರೀಕ್ಷೆಯ ತೆಗೆದುಕೊಳ್ಳುವ ಸಮಯದಲ್ಲಿ ಸಮಯವನ್ನು ಸರಿಯಾಗಿ ನಿರ್ವಹಣೆ ಮಾಡಿ. ಸಮಯದ ಅಭಾವ ಉಂಟಾಗಬಹುದು. ಆದ್ದರಿಂದ ಸರಿಯಾಗಿ ಅಭ್ಯಾಸ ಮಾಡಿಕೊಂಡು ಹಾಗೆಯೇ mock test ತೆಗೆದುಕೊಂಡು ಪರೀಕ್ಷೆಯ ಅನುಭವ ಪಡೆದು ಪರೀಕ್ಷೆಗೆ ತೆರಳಿ.ಏಕೆಂದರೆ ಪರೀಕ್ಷೆಯಲ್ಲಿ ಒತ್ತಡ ಮತ್ತು ಓದಿರುವ ವಿಷಯಗಳು ಮರೆತು ಹೋಗುವಂತೆ ಅನುಭವವಾಗುತ್ತದೆ.

namma career ವತಿಯಿಂದ ಪ್ರಮುಖ ಸಲಹೆಗಳು

  • ಅಭ್ಯರ್ಥಿಗಳು Slot Booking ಮಾಡಿದ ನಂತರ screenshot ಅಥವಾ ಫೋಟೋ ತೆಗೆದುಕೊಳ್ಳಿ. ನಂತರದ ದಿನಗಳಲ್ಲಿ ಸಹಾಯವಾಗುತ್ತದೆ.
  • ತದನಂತರದಲ್ಲಿ ನಿಮ್ಮ Admit Card ಬಿಡುಗಡೆಯಾದ ನಂತರ ಎಲ್ಲಾ ವಿವರಗಳನ್ನು ಇನ್ನೊಮ್ಮೆ ಚೆಕ್ ಮಾಡಿಕೊಳ್ಳಿ.
  • ಪರೀಕ್ಷೆಯ ದಿನದಂದು ಪರೀಕ್ಷಾ ಕೇಂದ್ರವನ್ನು ಸ್ವಲ್ಪ ಮುಂಚಿತವಾಗಿ ತಲುಪಿ, ಕೊನೆಯ ಕ್ಷಣದಲ್ಲಿ ಗಡಿಬಿಡಿ ಆಗುವ ಸಾಧ್ಯತೆ ಇರುತ್ತದೆ.
  • ಪರೀಕ್ಷೆ ಬರೆಯುವಾಗ ಗಾಭರಿ ಅಥವಾ ಭಯ ಪಡುವ ಅವಶ್ಯಕತೆಯಿಲ್ಲ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದು ಬನ್ನಿ.

ಕೊನೆಯ ಮಾತು

ಈ ಕೂಡಲೇ ನಿಮ್ಮ ಆದ್ಯತೆಯ slot ಅನ್ನು ಬುಕ್ ಮಾಡಿಕೊಳ್ಳಿ, ಇವತ್ತು ಕೊನೆಯ ದಿನವಾಗಿರುವುದರಿಂದ ಕೆಲವೇ ಗಂಟೆಗಳು ಉಳಿದಿದೆ. ಹಾಗೆಯೇ ಇದು ನಿಮ್ಮ ಭವಿಷ್ಯದ ಮತ್ತು ಕನಸಿನ ಹುದ್ದೆಗೆ ಪ್ರಮುಖ ಹಂತವಾಗಿರುವುದರಿಂದ. ಈ slot ಬುಕ್ ಮಾಡುವ ಹಂತವನ್ನು ತಡ ಮಾಡದೇ, ಸರಿಯಾಗಿ ಮತ್ತು ಜಾಗರೂಕತೆಯಿಂದ ಆಯ್ಕೆ ಮಾಡಿ ಸಲ್ಲಿಸಿ.


SSC GD Slot ಬುಕಿಂಗ್ ಮಾಡುವ ಕೊನೆಯ ದಿನಾಂಕ ಯಾವುದು?

SSC GD Slot Booking 2026 ರ ಕೊನೆಯ ದಿನಾಂಕ 15 ಏಪ್ರಿಲ್ 2026 ಅಂದರೆ ಇಂದು ಕೊನೆ ದಿನ. ಅಭ್ಯರ್ಥಿಗಳು ತಕ್ಷಣವೇ ನಿಮ್ಮ slot ಬುಕ್ ಮಾಡಿಕೊಳ್ಳಿ.

SSC GD Slot Booking ಮಾಡದೇ ಇದ್ದರೆ ಏನಾಗುತ್ತದೆ?

ಈ ಬಾರಿ SSC GD 2026 ರ ಪರೀಕ್ಷೆ ಬರೆಯುವ ಅವಕಾಶವನ್ನು ಕಳೆದುಕೊಳ್ಳುತ್ತಿರಿ…

About Content Writer
Jayanth

Jayanth

ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.

About Us →
WhatsApp Group Join Now
Telegram Group Join Now

Leave a Comment