Table of Contents
ಚಾಮರಾಜನಗರ ಜಿಲ್ಲೆಯಲ್ಲಿನ ನ್ಯಾಯಾಂಗ ಘಟಕದ ಅಧೀನ ನ್ಯಾಯಾಲಯಗಳಲ್ಲಿನ (chamarajanagara District Court Recruitment 2026) 13 ಸೇವಕ ಹುದ್ದೆಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶವರ ಕಚೇರಿ ಚಾಮರಾಜನಗರ ಜಿಲ್ಲೆ ಇವರಿಂದ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳ ಬಗ್ಗೆ ಸವಿವರವಾಗಿ ಈ ಲೇಖನದಲ್ಲಿ ತಿಳಿಸಲಾಗಿದೆ.
ಅರ್ಹತೆಗಳು
ಪ್ರಸ್ತುತ ನೇಮಕಾತಿ ಅಧಿಸೂಚನೆಗೊಂಡ chamarajanagara District Court Recruitment 2026 ರ 13 ಸೇವಕ ಹುದ್ದೆಗಳಿಗೆ ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳು :
ವಿದ್ಯಾರ್ಹತೆ
ಅರ್ಜಿ ಸಲ್ಲಿಸುವ ಬಯಸುವ ಅಭ್ಯರ್ಥಿಯು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್. ಎಸ್.ಎಲ್. ಸಿ ( 10ನೇ ತರಗತಿಯನ್ನು ) ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ತಿಳಿದಿರಬೇಕು.
ವಯೋಮಿತಿ
ಕನಿಷ್ಠ ವಯೋಮಿತಿಯನ್ನು 18 ವರ್ಷಕ್ಕೆ ನಿಗದಿಪಡಿಸಲಾಗಿದ್ದು, ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ಅಭ್ಯರ್ಥಿಗಳಿಗೆ 35+5 ವರ್ಷ, ಪ್ರವರ್ಗ (2ಎ, 2ಬಿ, 3ಎ 3ಬಿ ) ಅಭ್ಯರ್ಥಿಗಳಿಗೆ 38+5 ವರ್ಷ ಮತ್ತು ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ /ಪ್ರವರ್ಗ 1 ಅಭ್ಯರ್ಥಿಗಳಿಗೆ 40+5 ವರ್ಷವನ್ನು ನಿಗದಿ ಪಡಿಸಲಾಗಿದೆ.
ಅರ್ಜಿ ಶುಲ್ಕ
ಈ ಹುದ್ದೆಗಳಿಗೆ ನಿಗದಿ ಪಡಿಸಿರುವ ಅರ್ಜಿ ಶುಲ್ಕ ಸಾಮಾನ್ಯ ವರ್ಗ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 200 ರೂ ಮತ್ತು ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ /ಪ್ರವರ್ಗ 1/ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿಯನ್ನು ನೀಡಲಾಗಿದೆ.
ಅರ್ಜಿ ಶುಲ್ಕ ತುಂಬುವ ಬಗ್ಗೆ ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಹಂತ ಮತ್ತು ಸೂಚನೆಯನ್ನು ಗಮನಿಸಿ.
ವೇತನ ಶ್ರೇಣಿ
chamarajanagara District Court Recruitment 2026 ರಲ್ಲಿ ಹೊರಡಿಸಿರುವ 13 ಸೇವಕ ಹುದ್ದೆಗಳ ವೇತನ ಶ್ರೇಣಿಯನ್ನು 27000 ರೂ ಗಳಿಂದ 46675 ರೂ ಗಳ ವರೆಗೆ ನಿಗದಿಪಡಿಸಿದೆ.
ಒಟ್ಟು ಹುದ್ದೆಗಳು ಮತ್ತು ವರ್ಗಿಕರಣ
chamarajanagara District Court Recruitment 2026 ರ 13 ಸೇವಕ ಹುದ್ದೆಗಳಿಗೆ ಈ ಬಾರಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಈ ಕೆಳಗೆ ನೀಡಿರುವ ಹಾಗೆ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ.
ಸಾಮಾನ್ಯ ವರ್ಗದಲ್ಲಿ – ಕನ್ನಡ ಮಾಧ್ಯಮ, ಇತರೆ,ಗ್ರಾಮೀಣ, ಯೋಜನಾ ನಿರಾಶ್ರಿತ ಗಳಿಗೆ ತಲಾ 1 ಹುದ್ದೆಗಳನ್ನು ಮತ್ತು ಸಾಮಾನ್ಯ ವರ್ಗದ ಮಹಿಳೆ -2 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ.ಪ್ರವರ್ಗ 2ಎ -ಇತರೆ ಮತ್ತು ಮಹಿಳೆ ತಲಾ 1 ಹುದ್ದೆಯನ್ನು,ಪ್ರವರ್ಗ 3ಎ ಗ್ರಾಮೀಣ -1 ಹುದ್ದೆ,ಪರಿಶಿಷ್ಟ ಜಾತಿ -ಇತರೆ ಮತ್ತು ಮಹಿಳೆ ತಲಾ 1 ಹುದ್ದೆಯನ್ನು, ಪರಿಶಿಷ್ಟ ಪಂಗಡ ಗ್ರಾಮೀಣ 1 ಹುದ್ದೆ ಹಾಗೂ ಪ್ರವರ್ಗ 1ಎ ಅಂಗವಿಕಲ 1 ಹುದ್ದೆಯನ್ನು ಹಂಚಿಕೆ ಮಾಡಲಾಗಿದೆ
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ
ಕೊನೆಯ ದಿನಾಂಕ : 13/04/2026
ಅರ್ಜಿ ಶುಲ್ಕ ಪಾವತಿಸಲು ಕಡೆಯ ದಿನಾಂಕ :- 16/04/2026

ಅರ್ಜಿ ಸಲ್ಲಿಸುವ ವಿಧಾನ
chamarajanagara District Court Recruitment 2026 ರ 13 ಸೇವಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿಯನ್ನು ಕಡ್ಡಾಯವಾಗಿ ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. Online Recruitment ನಲ್ಲಿ ನೀಡಲಾಗಿರುವ ಲಿಂಕ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮಲ್ಲಿನ ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಮತ್ತು ಇಮೇಲ್ ಐ ಡಿ ಯನ್ನು ಕಡ್ಡಾಯವಾಗಿ ನೀಡಬೇಕು.
ಆನ್ಲೈನ್ ಹೊರತುಪಡಿಸಿ ಇತರೆ ತರನಾಗಿ ಅಂದರೆ ಅರ್ಜಿಯನ್ನು ಖುದ್ದು ಅಥವಾ ಅಂಚೆ ಮೂಲಕ ನೀಡುವ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
ನೇಮಕಾತಿ ವಿಧಾನ
ಈ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಎಸ್. ಎಸ್. ಎಲ್. ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಡೆದ ಗರಿಷ್ಠ ಅಂಕಗಳ ಅರ್ಹತೆಯ ಆಧಾರದ ಮೇಲೆ 1: 10 ಅನುಪಾತದಲ್ಲಿ (ಅಂದರೆ ಒಂದು ಹುದ್ದೆಗೆ 10 ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ.) ಸಂದರ್ಶನಕ್ಕೆ ಕರೆಯಲಾಗುತ್ತದೆ.
ನಂತರ ಸಂದರ್ಶನದಲ್ಲಿ ಪಡೆದ ಆಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಸಂದರ್ಶನದಲ್ಲಿ ಕನ್ನಡ ಓದಲು ಬರೆಯಲು ಮತ್ತು ಸಾಮಾನ್ಯ ಜ್ಞಾನದ ಬಗ್ಗೆ 10 ಅಂಕಗಳಿಗೆ ಪರೀಕ್ಷೆ ನಡೆಸಲಾಗುವುದು.
ಸಂದರ್ಶನದಲ್ಲಿ ಉತ್ತಮ ಅಂಕಗಳಿಕೆಗೆ ಸಲಹೆಗಳು
- ಸ್ವಚ್ಛ ಮತ್ತು ಉತ್ತಮ ಉಡುಗೆಯನ್ನು ತೊಟ್ಟು ಹೋಗಿ.
- ಪ್ರಶ್ನೆಗಳನ್ನು ಗಮನವಿಟ್ಟು ಕೇಳಿ.
- ಆತ್ಮವಿಶ್ವಾಸದಿಂದ ಪ್ರಶ್ನೆಗಳಿಗೆ ಉತ್ತರಿಸಿ.
- ಸಂಕ್ಷಿಪ್ತವಾಗಿ ಮತ್ತು ಸ್ಪಷ್ಟವಾಗಿ ಉತ್ತರಿಸಿ
- ಬಾಡಿ ಲ್ಯಾಂಗ್ವೇಜ್ ಉತ್ತಮವಾಗಿರಲಿ.
ಕೊನೆಯದಾಗಿ
chamarajanagara District Court Recruitment 2026 ರ 13 ಸೇವಕ ಹುದ್ದೆಯು ಒಳ್ಳೆಯ ಮತ್ತು ಅತ್ಯುತ್ತಮ ವೇತನದ huddeyagidduಹುದ್ದೆಯಾಗಿದ್ದು, ಹಲವು ವರ್ಷಗಳಿಂದ ಉದ್ಯೋಗದ ಆಕಾಂಕ್ಷೆಗಳಾಗಿ ಹೊಸ ಅಧಿಸೂಚನೆಗೆ ಕಾಯುತ್ತಿರುವವರಿಗೆ ಈ ಹುದ್ದೆಯ ನೇಮಕಾತಿ ಅಧಿಸೂಚನೆ ಆಶಾಕಿರಣದಂತೆ ಇರಬಹುದು.ಈ ಹುದ್ದೆಗೆ ಆಸಕ್ತರು ಕೊನೆಯ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ.
chamarajanagara District Court Recruitment 2026 ರ 13 ಸೇವಕ ಹುದ್ದೆಯ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಯಾವಾಗ?
13 ಸೇವಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24/04/2026
chamarajanagara District Court Recruitment 2026 ರ 13 ಸೇವಕ ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ ಏನು?
ಎಸ್. ಎಸ್. ಎಲ್. ಸಿ ಅಥವಾ ತತ್ಸಮಾನ
chamarajanagara District Court Recruitment 2026 ರ 13 ಸೇವಕ ಹುದ್ದೆಗಳಿಗೆ ಸಂದರ್ಶನ ಇದೆಯೇ?
ಹೌದು, ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಸಂದರ್ಶನವನ್ನು ನಡೆಸಲಾಗುತ್ತದೆ. 10 ಅಂಕಗಳ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
Jayanth
ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.
About Us →