Table of Contents
ಭಾರತ ಸರ್ಕಾರ ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಉತ್ತೇಜಿಸಲು ಮತ್ತು ಹೊಸದಾದ ಉದ್ಯಮವನ್ನು ಆರಂಭಿಸಲು ಸಹಾಯವಾಗಲೆಂದೆ ಮುದ್ರಾ ಲೋನ್ (Mudra Loan 2026) ಒಂದು ಪ್ರಮುಖ ಯೋಜನೆಯನ್ನಾಗಿ ಜಾರಿಗೊಳಿಸಿತು. ಈ ಯೋಜನೆ Pradhan Mantri Mudra Yojana (PMMY) ಎಂದು ಅಧಿಕೃತವಾಗಿ ಕರೆಯಲ್ಪಡುತ್ತದೆ. ನಿರುದ್ಯೋಗ ಸಮಸ್ಯೆವನ್ನು ಕಡಿಮೆ ಮಾಡಲು ಸ್ವಯಂ ಉದ್ಯೋಗ ಸೃಷ್ಟಿಗೆ ಪೂರಕವಾಗಿದೆ.
ಈ ಯೋಜನೆಯ ಮುಖ್ಯ ಉದ್ದೇಶ ಸಣ್ಣ ವ್ಯಾಪಾರಿಗಳು, ಸ್ಟಾರ್ಟ್‌ಅಪ್ ಉದ್ಯಮಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ಆರ್ಥಿಕ ಸಹಾಯವನ್ನು ನೀಡುವುದಾಗಿದೆ. ಈ ಯೋಜನೆಯ ಮೂಲಕ ಬ್ಯಾಂಕ್ ಮತ್ತು NBFCಗಳ ಮೂಲಕ ಸಾಲವನ್ನು ಪಡೆಯಬಹುದು.
ಈ ಲೇಖನದಲ್ಲಿ ಮುದ್ರಾ ಲೋನ್ ಗೆ ಅರ್ಜಿ ಸಲ್ಲಿಸುವುದಕ್ಕಿಂತ ಮೊದಲು ಕೆಲವು ಮುಖ್ಯ ಅಂಶಗಳನ್ನು ತಿಳಿದಿರಬೇಕು.ಅವುಗಳನ್ನು ಇಲ್ಲಿ ವಿವರವಾಗಿ ತಿಳಿಸಲಾಗಿದೆ.
ಮುದ್ರಾ ಲೋನ್ ಎಂದರೇನು?
ಮುದ್ರಾ ಲೋನ್ ಅಥವಾ PMMY ಯೋಜನೆ ಎಂದರೆ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಸರ್ಕಾರದ ಮೂಲಕ ಗ್ಯಾರಂಟಿ (Collateral) ಇಲ್ಲದೆ ಹಣಕಾಸಿನ ಸಹಾಯವನ್ನು ನೀಡಿ. ಸ್ವಯಂ ಉದ್ಯೋಗಕ್ಕೆ ದಾರಿ ಮಾಡಿಕೊಡುವ ಒಂದು ಒಳ್ಳೆಯ ಯೋಜನೆಯಾಗಿದೆ.
ಈ ಯೋಜನೆಯ ಮೂಲಕ ಉದ್ಯಮಿಗಳು ತಮ್ಮ ವ್ಯವಹಾರವನ್ನು ಹೊಸದಾಗಿ ಆರಂಭಿಸಲು ಅಥವಾ ವಿಸ್ತರಿಸಲು ಸಾಲವನ್ನು ಪಡೆಯಬಹುದು.
ಮುದ್ರಾ ಲೋನ್ ನ ವಿಶೇಷತೆಗಳು
- ಲೋನ್ ಪಡೆಯಲು ಗ್ಯಾರಂಟಿ (Collateral) ಅಗತ್ಯವಿಲ್ಲ.
- ಸಣ್ಣ ಉದ್ಯಮಗಳಿಗೆ ಸೂಕ್ತ ಸಾಲ ಸೌಲಭ್ಯ.
- ಬ್ಯಾಂಕ್ ಮೂಲಕ ಸುಲಭ ಪ್ರಕ್ರಿಯೆ
- ಬಿಸಿನೆಸ್ ಅಭಿವೃದ್ಧಿಗೆ ಸಹಾಯ
- ನಿಮ್ಮ ಬಿಸಿನೆಸ್ ಗಾತ್ರಕ್ಕೆ ತಕ್ಕಂತೆ ಸಾಲ ಸೌಲಭ್ಯ
ಇದೆ ತರನಾದ ಹೆಚ್ಚಿನ ಯೋಜನೆಗಳ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಅನ್ನು ಅನುಸರಿಸಿ.
Mudra Loan 2026 ವಿಧಗಳು
mudra loan 2026 ರಲ್ಲಿ ಮುಖ್ಯವಾಗಿ 4 ವಿಧಗಳನ್ನು ಮಾಡಲಾಗಿದ್ದು ಅವುಗಳೆಂದರೆ :
1.ಶಿಶು ಲೋನ್ (Shishu)
ಈ ವಿಭಾಗದಲ್ಲಿ ಸಣ್ಣ ಉದ್ಯಮ ಪ್ರಾರಂಭಿಸಲು ಗರಿಷ್ಠ ಮೊತ್ತವಾಗಿ 50,000 ರೂ ಗಳನ್ನು ಸಾಲವಾಗಿ ನೀಡಲಾಗುತ್ತದೆ.ಮತ್ತು ಈ ಶಿಶು ಲೋನ್ ಮುಖ್ಯವಾಗಿ ಹೊಸದಾಗಿ ಉದ್ಯಮ ಪ್ರಾರಂಭಿಸಲು ಬಯಸುವವರಿಗೆ ಇದು ಸೂಕ್ತವಾಗಿದೆ.
- ಸಾಲ ಗರಿಷ್ಠ ಮೊತ್ತ: ₹50,000 ವರೆಗೆ
- ಹೊಸ ವ್ಯವಹಾರ ಆರಂಭಿಸುವವರಿಗೆ
2.ಕಿಶೋರ್ ಲೋನ್ (Kishore)
ಈ ವಿಭಾಗದಲ್ಲಿ ಸಣ್ಣ ಉದ್ಯಮ ಮತ್ತು ಉದ್ಯಮ ಸಣ್ಣದಾಗಿ ವಿಸ್ತರಿಸಲು ಬಯಸುವವರಿಗೆ ಸೂಕ್ತವಾಗಿದ್ದು, ಈ ವಿಭಾಗದಲ್ಲಿ 50,000 ರೂ ಇಂದ 5,00,000 ರೂ ವರೆಗೆ ಸಾಲವನ್ನು ನೀಡಲಾಗುತ್ತದೆ.
- ಸಾಲದ ಗರಿಷ್ಠ ಮೊತ್ತ: ₹50,000-₹5,00,000
3.ತರುಣ ಲೋನ್ (Tarun)
ಈ ವಿಭಾಗದಲ್ಲಿ ಮಧ್ಯಮ ಗಾತ್ರದ ಉದ್ಯಮಗಳಿಗೆ ಸಹಾಯವಾಗುತ್ತದೆ. ಇದಕ್ಕೆ ಸಾಲವಾಗಿ ಈ ವಿಭಾಗದಲ್ಲಿ ₹5,00,000 ದಿಂದ ₹10,00,000 ವರೆಗೆ ಹಣವನ್ನು ನೀಡಲಾಗುತ್ತದೆ.
- ಸಾಲದ ಗರಿಷ್ಠ ಮೊತ್ತ : ₹5,00,000 – ₹10,00,000
4.ತರುಣ ಪ್ಲಸ್ (Tarun Plus)
ಈ ವಿಭಾಗವನ್ನು ಹೊಸದಾಗಿಯೋಜನೆಗೆ ಸೇರ್ಪಡೆಗೊಳಿಸಲಾಗಿದೆ. ಇದರಲ್ಲಿ ಸಾಲವಾಗಿ 10,00,000 ರಿಂದ 20,00,000 ರೂ ಗಳನ್ನು ಪಡೆಯಬಹುದು.
- ಸಾಲದ ಗರಿಷ್ಠ ಮೊತ್ತ : ₹10,00,000 – ₹20,00,000
ಈ ವಿಭಾಗಗಳು ವ್ಯವಹಾರದ ಗಾತ್ರ ಮತ್ತು ಬೆಳವಣಿಗೆಯ ಹಂತವನ್ನು ಆಧರಿಸಿ ಸಾಲವನ್ನು ನೀಡಲಾಗುತ್ತದೆ.
ಅರ್ಜಿ ಹಾಕುವ ಮೊದಲು ಈ 7 ವಿಷಯ ತಿಳಿದುಕೊಳ್ಳಿ
1.Mudra Loan 2026 ಪಡೆಯಲು ಅರ್ಹತೆ (Eligibility)
ಮುದ್ರಾ ಲೋನ್ ಪಡೆಯಲು ಕೆಲವು ಅರ್ಹತೆಗಳನ್ನು ಹೊಂದಿರಬೇಕು.
- ಭಾರತೀಯ ನಾಗರಿಕರಾಗಿರಬೇಕು
- ವಯಸ್ಸು 18 ವರ್ಷಕ್ಕಿಂತ ಹೆಚ್ಚು ಇರಬೇಕು
- ಕೃಷಿಯೇತರ ವ್ಯವಹಾರ ಇರಬೇಕು
- ಸಣ್ಣ ಉದ್ಯಮ ಅಥವಾ ಸ್ಟಾರ್ಟ್‌ಅಪ್ ಯೋಜನೆ ಇರಬೇಕು.
ಈ ಯೋಜನೆಯು ಉತ್ಪಾದನೆ, ಟ್ರೇಡಿಂಗ್, ಸರ್ವಿಸ್ ಸೆಕ್ಟರ್ ಉದ್ಯಮಗಳಿಗೆ ಲಭ್ಯವಾಗುವುದು.

2.ಮುದ್ರಾ ಲೋನ್ ಪಡೆಯಲು ಬೇಕಾದ ದಾಖಲೆಗಳು
ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೇವಲು ಪ್ರಮುಖ ದಾಖಲೆಗಳನ್ನು ಹೊಂದಿರುವುದು ಅವಶ್ಯಕ. ಅವುಗಳೆಂದರೆ :
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ವಿಳಾಸ ಪುರಾವೆ
- ಬ್ಯಾಂಕ್ ಸ್ಟೇಟ್‌ಮೆಂಟ್
- ಬಿಸಿನೆಸ್ ಯೋಜನೆ ಅಥವಾ ಪ್ರಾಜೆಕ್ಟ್ ರಿಪೋರ್ಟ್
- ಭಾವಚಿತ್ರ
ಕೇವಲು ಬ್ಯಾಂಕ್ ಗಳು ಇನ್ನೂ ಕೆಲವು ಇತರೆ ದಾಖಲೆಗಳನ್ನು ಕೇಳಬಹುದು.
3.ಸಾಲ ಮೊತ್ತ ಎಷ್ಟು ಸಿಗುತ್ತದೆ?
ಆಗಲೇ ಹೇಳಿರುವ ಹಾಗೆ ಈ ಯೋಜನೆಯಲ್ಲಿ ಉದ್ಯಮಕ್ಕೆ ತಕ್ಕಂತೆ 4 ವಿಭಾಗಗಳನ್ನಾಗಿ ಮಾಡಲಾಗಿದ್ದು, 50,000₹ ಇಂದ 20,00,000₹ ಗಳ ವರೆಗೆ ಸಾಲ ಸೌಲಭ್ಯ ದೊರೆಯುತ್ತದೆ.
ಸಾಲದ ಮೊತ್ತ ನಿಮ್ಮ ಪ್ರಾಜೆಕ್ಟ್ ರಿಪೋರ್ಟ್, ಕ್ರೆಡಿಟ್ ಸ್ಕೋರ್ ಮತ್ತು ಇನ್ನಿತರ ಮಾಪನಗಳ ಮೇಲೆ ನಿರ್ಧಾರಿತವಾಗುತ್ತದೆ.
4.ಬಡ್ಡಿದರ (Mudra Loan Interest Rate)
ಮುದ್ರಾ ಲೋನ್ ಬಡ್ಡಿದರ ಬ್ಯಾಂಕ್ ಗಳ ಮೇಲೆ ನಿರ್ಧರಿತವಾಗುತ್ತದೆ.
ಸಾಮಾನ್ಯವಾಗಿ ಇದು 8%-13% ದ ವರೆಗೆ ಇರಬಹುದು.
5.ಗ್ಯಾರಂಟಿ (Collateral) ಅಗತ್ಯವಿಲ್ಲ!
ಮುದ್ರಾ ಲೋನ್ ನ ಒಂದು ಬಹು ಮುಖ್ಯ ಪ್ರಯೋಜನವೆಂದರೆ ಗ್ಯಾರಂಟಿ ಇಲ್ಲದೆ ಸಾಲವನ್ನು ನೀಡುವುದಾಗಿದೆ.
ಅಂದರೆ ನೀವು ಯಾವುದೇ ರೀತಿಯ ಆಸ್ತಿಯನ್ನು ಅಡಮಾನ ಅಥವಾ ಗ್ಯಾರಂಟಿ ರೂಪದಲ್ಲಿ ಇರಿಸುವುದು ಬೇಡ.
6.ಮುದ್ರಾ ಲೋನ್ ಆನ್‌ಲೈನ್ ಅರ್ಜಿ ಹೇಗೆ ಹಾಕುವುದು?
Mudra Loan 2026 Apply Online ಮಾಡಲು ಈ ಹಂತಗಳನ್ನು ಅನುಸರಿಸಿ.
- ಸಮೀಪದ ಬ್ಯಾಂಕ್ ಅಥವಾ NBFC ಆಯ್ಕೆಮಾಡಿ.
- ಮುದ್ರಾ ಲೋನ್ ಅರ್ಜಿ ಫಾರ್ಮ್ ಪಡೆದುಕೊಳ್ಳಿ.
- ಅಗತ್ಯ ದಾಖಲೆಗಳನ್ನು ಸಲ್ಲಿಸಿ.
- ನಂತರ ಬ್ಯಾಂಕ್ ಪರಿಶೀಲನೆ ಮಾಡುತ್ತದೆ.
- ಅರ್ಜಿ ಅನುಮೋದನೆ ನಂತರ ಸಾಲ ನಿಮ್ಮ ಖಾತೆಗೆ ಜಮಾ ಆಗುತ್ತದೆ.
7. ಅರ್ಜಿ ರಿಜೆಕ್ಟ್ ಆಗುವ ಸಾಮಾನ್ಯ ಕಾರಣಗಳು
ಕೆಲವು ಪ್ರಮುಖ ಕಾರಣಗಳಿಂದ Mudra Loan 2026 ರ ಅರ್ಜಿ ತಿರಸ್ಕರಿಸಲ್ಪಡಬಹುದು.
ತಪ್ಪಾದ ದಾಖಲೆಗಳ ಸಲ್ಲಿಕೆ
ಕ್ರೆಡಿಟ್ ಸ್ಕೋರ್ ಕಡಿಮೆ ಇರುವುದರಿಂದ
ಸ್ಪಷ್ಟವಾದ ವ್ಯವಹಾರ ಯೋಜನೆ (ಬಿಸಿನೆಸ್ ಪ್ಲಾನ್) ಇಲ್ಲದಿರುವುದರಿಂದ.
ಆದ್ದರಿಂದ ಅರ್ಜಿ ಹಾಕುವ ಮೊದಲು ಎಲ್ಲಾ ದಾಖಲೆಗಳನ್ನು ಸರಿಯಾಗಿ ಸಿದ್ಧಪಡಿಸಿಕೊಳ್ಳುವುದು ಮುಖ್ಯ.
ಕೊನೆಯದಾಗ
Mudra loan 2026 ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ಸಾಲವನ್ನು ಗ್ಯಾರಂಟಿ ರಹಿತವಾಗಿ ಪಡೆಯಲು ಉತ್ತಮ ಅವಕಾಶವಾಗಿದೆ. ನೀವು ಹೊಸ ವ್ಯವಹಾರ ಆರಂಭಿಸಲು ಅಥವಾ ಈಗಿರುವ ವ್ಯವಹಾರವನ್ನು ವಿಸ್ತರಿಸಲು ಯೋಚಿಸುತ್ತಿದ್ದರೆ ಈ ಯೋಜನೆ ನಿಮಗೆ ಉಪಯೋಗವಾಗುತ್ತದೆ.
ಆದರೆ ಅರ್ಜಿ ಹಾಕುವ ಮೊದಲು ಈ ಮೇಲೆ ತಿಳಿಸಿರುವ ಅಂಶಗಳನ್ನು ಸರಿಯಾಗಿ ತಿಳಿದುಕೊಳ್ಳುವುದು ಅವಶ್ಯಕ. ಹೀಗೆ ಮಾಡಿದರೆ ನಿಮ್ಮ Mudra Loan ಅರ್ಜಿ ಸುಲಭವಾಗಿ ಅನುಮೋದನೆ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ.
ಮುದ್ರಾ ಲೋನ್ 2026 ನಲ್ಲಿ ಎಷ್ಟು ಸಾಲ ಸಿಗುತ್ತದೆ?
ಮುದ್ರಾ ಲೋನ್ ಯೋಜನೆಯ ಮೂಲಕ ₹50,000 ರಿಂದ ₹20 ಲಕ್ಷವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದು.
ಮುದ್ರಾ ಲೋನ್ ಪಡೆಯಲು ಗ್ಯಾರಂಟಿ (Collateral) ಬೇಕೆ?
ಇಲ್ಲಾ, ಮುದ್ರಾ ಲೋನ್ ಪಡೆಯವು ಯಾವುದೇ ರೀತಿಯ ಗ್ಯಾರಂಟಿ ಅಥವಾ Collateral ಅವಶ್ಯಕತೆ ಇಲ್ಲ.
ಮುದ್ರಾ ಲೋನ್ ಪಡೆಯಲು ಬೇಕಾದ ದಾಖಲೆಗಳು ಯಾವುವು?
ಆಧಾರ್ ಕಾರ್ಡ್, ಪಾನ್ ಕಾರ್ಡ್, ವಿಳಾಸ ಪುರಾವೆ,ಬ್ಯಾಂಕ್ ಸ್ಟೇಟ್‌ಮೆಂಟ್ ಬಿಸಿನೆಸ್ ಪ್ಲಾನ್.
Jayanth
ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.
About Us →