Post Office RD Mistakes: ಜನರು ಮಾಡುವ 7 ದೊಡ್ಡ ತಪ್ಪುಗಳು (Avoid Now!)

WhatsApp Group Join Now
Telegram Group Join Now

ಇಂದಿನ ಕಾಲಮಾನದಲ್ಲಿ ಹಣವನ್ನು ಉಳಿತಾಯ ಮಾಡಿ ಮತ್ತು ಅದನ್ನು ನಿಧಾನವಾಗಿ ಹೆಚ್ಚಿಸಲು ಬಹಳ ಜನರು ಸುರಕ್ಷಿತ ಎನಿಸುವ Post Office Recurring Deposit (RD) ಅನ್ನು ಆಯ್ಕೆ ಮಾಡುತ್ತಿದ್ದಾರೆ. ವಿಶೇಷವಾಗಿ ಸಣ್ಣ ಸಣ್ಣ ಮೊತ್ತದ ಹಣವನ್ನು ತಿಂಗಳಿಗೆ ಉಳಿಸುವ ಅಭ್ಯಾಸವನ್ನು ಮಾಡಿಕೊಳ್ಳಲು ಇದು ಅತ್ಯುತ್ತಮವಾದ ಆಯ್ಕೆಯಾಗಿದೆ.

ಆದರೆ, ಸರಿಯಾದ ಮಾಹಿತಿ ಇಲ್ಲದೆ RD ನಲ್ಲಿ ಹೂಡಿಕೆ ಮಾಡುವುದರಿಂದ, ನೀವು ನಿರೀಕ್ಷಿಸಿದ್ದಷ್ಟು ಲಾಭ ಪಡೆಯಲು ಸಾಧ್ಯವಾಗದೇ ಹೋಗಬಹುದು. ಕೆಲವೊಮ್ಮೆ, ಸಣ್ಣ ಸಣ್ಣ ತಪ್ಪುಗಳು ದೊಡ್ಡ ಆರ್ಥಿಕ ನಷ್ಟಕ್ಕೂ ಕಾರಣವಾಗಬಹುದು.

ಈ ಲೇಖನದಲ್ಲಿ, ನಾವು Post Office RD mistakes ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ —ಪೋಸ್ಟ್ ಆಫೀಸ್ RD ಮಾಡುವಾಗ ಜನರು ಸಾಮಾನ್ಯವಾಗಿ ಮಾಡುವ 7 ದೊಡ್ಡ ತಪ್ಪುಗಳು ಯಾವುವು, ಅವುಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕು, ಮತ್ತು ನಿಮ್ಮ ಹೂಡಿಕೆಯನ್ನು ಹೇಗೆ ಹೆಚ್ಚು ಲಾಭದಾಯಕವಾಗಿಸಬಹುದು ಎಂಬುದನ್ನು ಇಲ್ಲಿ ನೋಡೋಣ.

Post office RD Mistakes : ಜನರು ಮಾಡುವ 7 ದೊಡ್ಡ ತಪ್ಪುಗಳು

ಜನರು ಸಾಮಾನ್ಯವಾಗಿ ತಮ್ಮ ಉಳಿತಾಯದ ಹಣವನ್ನು ಬ್ಯಾಂಕ್ ನ ಉಳಿತಾಯ ಖಾತೆಯಲ್ಲಿ ಇಡಲು ಬಯಸುತ್ತಾರೆ. ಆದರೆ ಇನ್ನೂ ಕೆಲವು ಜನ ಇದನ್ನು ಹೆಚ್ಚಿನ ಬಡ್ಡಿದರದೊಂದಿಗೆ ಲಾಭ ಗಳಿಸಲು ಹೆಚ್ಚಿನ ಸುರಕ್ಷತೆ ಹೊಂದಿರುವ ಪೋಸ್ಟ್ ಆಫೀಸ್ RD ಸ್ಕೀಮ್ ನಲ್ಲಿ ಜಮೆ ಮಾಡಲು ಪ್ರಾರಂಭಿಸುತ್ತಾರೆ.

ಇದು ಉತ್ತಮವಾದ ಆಯ್ಕೆಯೇ ಆದರೂ ಸಹ ಇಲ್ಲಿ ಹೂಡಿಕೆ ಮಾಡುವ ಮೊದಲು ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಅತಿ ಮುಖ್ಯ.

ಜನರು ಮಾಡುವ 07 ದೊಡ್ಡ ತಪ್ಪುಗಳು ಎಂದರೆ, ಈ ವಿಷಯಗಳನ್ನು ತಿಳಿದುಕೊಳ್ಳದೆ ಹೂಡಿಕೆ ಮಾಡುವುದು… ಆ 07 ದೊಡ್ಡ ತಪ್ಪುಗಳನ್ನು ಒಂದೊಂದರಂತೆ ತಿಳಿದುಕೊಳ್ಳೋಣ.

01.RD ಯೋಜನೆ ಬಗ್ಗೆ ಪೂರ್ಣ ಮಾಹಿತಿ ತಿಳಿಯದೇ ಇರುವುದು.

ಬಹಳಷ್ಟು ಜನರು RD ಖಾತೆ ತೆರೆಯುವ ಮುನ್ನ ಅದರ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದುಕೊಂಡಿರುವುದಿಲ್ಲ. ಅತಿ ಮುಖ್ಯವಾಗಿ ಈ ಯೋಜನೆಯ ಮೂಲಭೂತವಾದ ವಿಷಯಗಳನ್ನು ತಿಳಿಯದೆ ಇರುವುದು.

👉 ಇದೆ ತರನಾದ ಹೆಚ್ಚಿನ ಮಾಹಿತಿಗೆ ಈಗಲೇ ನಮ್ಮ ಟೆಲಿಗ್ರಾಂ ಚಾನೆಲ್ ಅನ್ನು ಫಾಲೋ ಮಾಡಿ.

ಇದರಿಂದ ಉಂಟಾಗುವ ಸಮಸ್ಯೆಗಳು :

  • ಪ್ರಸ್ತುತ ಬಡ್ಡಿದರ ಎಷ್ಟು? ಎಂಬುದು ಗೊತ್ತಿಲ್ಲದಿರುವುದು.
  • ಎಷ್ಟು ಅವಧಿ ಎನ್ನುವುದರ ಬಗ್ಗೆ ಅರಿವು ಇಲ್ಲದಿರುವುದು.
  • penalty ನಿಯಮಗಳ ಬಗ್ಗೆ ತಿಳಿದಿಲ್ಲದಿರುವುದು.

ಈ ಕಾರಣದಿಂದಾಗಿ, ನಂತರ ಗೊಂದಲಕ್ಕೀಡಾಗುತ್ತಾರೆ ಅಥವಾ ತಪ್ಪು ನಿರೀಕ್ಷೆ ಇಟ್ಟುಕೊಳ್ಳುತ್ತಾರೆ.

ಪರಿಹಾರ :

  • RD ಆರಂಭಿಸುವ ಮೊದಲು ಅಂಚೆ ಕಚೇರಿಯಿಂದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ.
  • ಪೋಸ್ಟ್ ಆಫೀಸ್ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸುವುದು ಉತ್ತಮ.
Post-office-rd-mistakes-kannada
Post-office-rd-mistakes-kannada

02.ತಿಂಗಳ ಕಂತುಗಳನ್ನು ತಪ್ಪಿಸುವುದು (Missing Monthly Installments)

RD ಒಂದು ಶಿಸ್ತುಬದ್ಧ ಉಳಿತಾಯ ಯೋಜನೆಯಾಗಿದೆ. ಇಲ್ಲಿ ಪ್ರತಿ ತಿಂಗಳು ನಿಗದಿ ಪಡಿಸಿರುವ ಹಣವನ್ನು ಜಮೆ ಮಾಡುವುದು ಅತಿ ಮುಖ್ಯ.

ಈ ತಪ್ಪಿನ ಪರಿಣಾಮವಾಗಿ :

  • ದಂಡ (penalty) ವಿಧಿಸಲಾಗುತ್ತದೆ
  • ನಿಮ್ಮ maturity amount ಕಡಿಮೆಯಾಗಬಹುದು
  • ಖಾತೆ inactive ಆಗುವ ಸಾಧ್ಯತೆ ಹೆಚ್ಚಿರುತ್ತದೆ.

ಪರಿಹಾರ :

  • ನಿಮ್ಮ RD ಜಮೆಯ ದಿನಾಂಕವನ್ನು ನೆನಪಿನಲ್ಲಿಟ್ಟುಕೊಂಡಿರಿ.
  • ನಿಮ್ಮ salary date ಗೆ ಹೊಂದಿಸಿ RD date fix ಮಾಡಿ. ಅಥವಾ ತಿಂಗಳ ಮೊದಲ ವಾರವನ್ನು RD ಜಮೆ ಮಾಡುವ ದಿನಾಂಕವನ್ನಾಗಿ ಮಾಡಿ.
  • reminder set ಮಾಡಿಕೊಂಡಲ್ಲಿ ಸರಿಯಾದ ಸಮಯಕ್ಕೆ ಕಂತನ್ನು ಜಮೆ ಮಾಡಬಹುದು.

ಸಣ್ಣ ಸಣ್ಣ ತಪ್ಪುಗಳು ದೀರ್ಘಾವಧಿಯಲ್ಲಿ ದೊಡ್ಡ ನಷ್ಟಕ್ಕೆ ಕಾರಣವಾಗಬಹುದು.ಆದ್ದರಿಂದ ಸರಿಯಾದ ಸಮಯಕ್ಕೆ ಕಂತನ್ನು ಜಮೆ ಮಾಡುವುದರಿಂದ ನಿಮ್ಮ ಹಣವು ಬೆಳೆಯಲು ಸಹಕಾರಿಯಾಗುತ್ತದೆ.

03.ಮಧ್ಯದಲ್ಲೇ RD account ಮುಚ್ಚುವುದು.

ಬಹಳ ಜನರು ಅತಿ ಜರೂರು ಅಥವಾ ತುರ್ತು ಅವಶ್ಯಕತೆ ಗಳಿಗಾಗಿ RD account ಅನ್ನು ಮುಂಚಿತವಾಗಿ ಮುಚ್ಚುತ್ತಾರೆ.

ಇದರಿಂದ ಏನಾಗುತ್ತದೆ? :

  • ಕಡಿಮೆ ಬಡ್ಡಿ ದೊರೆಯುತ್ತದೆ.
  • ಹಲವು ಸಂದರ್ಭದಲ್ಲಿ penalty ಬೀಳುವ ಸಾಧ್ಯತೆಗಳಿವೆ.
  • ಲಾಂಗ್ ಟರ್ಮ್ ಕಾಂಪೌಂಡಿಂಗ್ ಲಾಭವನ್ನು ಕಳೆದುಕೊಳ್ಳುತ್ತಿರಿ.

ಪರಿಹಾರ :

  • RD ಎನ್ನುವುದು ಸಣ್ಣ ಉಳಿತಾಯ ಯೋಜನೆಯಾಗಿದೆ. ಇದು ಲಾಂಗ್ ಟರ್ಮ್ ನಲ್ಲಿ ಹೆಚ್ಚಿನ ಲಾಭ ನೀಡುತ್ತದೆ. ಇದನ್ನು ಎಮರ್ಜೆನ್ಸಿ ಫಂಡ್ ಆಗಿ ಬಳಸಬೇಡಿ.
  • ಅಗತ್ಯತೆಗಳಿಗೆ ಉಳಿತಾಯ ಖಾತೆ ಹಣವನ್ನು ಬಳಸಿ.

04.ಬಡ್ಡಿಯ ಲೆಕ್ಕಾಚಾರ ಅರ್ಥ ಮಾಡಿಕೊಳ್ಳದೆ ಇರುವುದು.

ಪೋಸ್ಟ್ ಆಫೀಸ್ RD ಯೋಜನೆಯಲ್ಲಿ ಬಡ್ಡಿಯು quarterly compounding ಆಗುತ್ತದೆ. ಆದರೆ ಹಲವು ಜನ ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ.

ಸಾಮಾನ್ಯ ತಪ್ಪುಗಳು :

  • ಹೆಚ್ಚಿನ ಜನರು RD ಯೋಜನೆಯನ್ನು simple interest ಎಂದು ಭಾವಿಸುವುದು
  • ಇದರಿಂದ ತಮ್ಮ maturity amount ಬಗ್ಗೆ ತಪ್ಪು ನಿರೀಕ್ಷೆ ಇಟ್ಟುಕೊಳ್ಳುವುದು.

ಪರಿಹಾರ :

  • maturity amount ಅಥವಾ ಒಟ್ಟು ಬಡ್ಡಿ ಮೊತ್ತ ತಿಳಿಯಲು RD calculator ಬಳಸಿ.
  • ಹೂಡಿಕೆ ಮಾಡುವ ಮೊದಲು ಎಸ್ಟಿಮೇಷನ್ ಮಾಡಿ.

05. ಒಂದೇ RD ಅಕೌಂಟ್ ನಲ್ಲಿ ಮಾತ್ರ ಹೂಡಿಕೆ ಮಾಡುವುದು

ಜನರು ತಮ್ಮ ಎಲ್ಲಾ ಉಳಿತಾಯವನ್ನು ಒಂದೇ Post Office Recurring Deposit ( RD) ಅಕೌಂಟ್ ನಲ್ಲಿ ಹೂಡಿಕೆ ಮಾಡುವುದು.ಇದರಿಂದ ಉಳಿತಾಯ ಎಲ್ಲಾ ಕಡೆ ಹಂಚಿಕೆಯಾಗದೆ ಆರ್ಥಿಕ ನಷ್ಟವಾಗುವ ಸಾಧ್ಯತೆ ಇರುತ್ತದೆ.

ಸಮಸ್ಯೆ :

  • ಎಲ್ಲಾ ಹಣ ಒಂದೇ RD ಅಕೌಂಟ್ ನಲ್ಲಿ ಇಡುವುದರಿಂದ ಹಲವು ಸಮಸ್ಯೆಗಳಿವೆ
  • ಮಧ್ಯದಲ್ಲಿ ಹಣ ಬೇಕಿದ್ದಲ್ಲಿ ಇಡಿ ಅಕೌಂಟ್ ಮೇಲೆ ಪರಿಣಾಮ

ಉದಾಹರಣೆ :

ನೀವು 3,000/ತಿಂಗಳು ಹಣವನ್ನು ಒಂದೇ RD ಖಾತೆಯಲ್ಲಿ ಹೂಡಿಕೆ ಮಾಡುವ ಬದಲು,1,000₹ ಗಳ ಮೂರು ಖಾತೆಯನ್ನು ಹೊಂದುವುದು ಒಳ್ಳೆಯದು.

ಇದರಿಂದ ಒಂದು ಖಾತೆಯನ್ನು ಮುಚ್ಚಿದರು ಉಳಿದ ಎರಡು ಖಾತೆ ಮುಂದುವರೆಯುತ್ತದೆ.

ಪರಿಹಾರ :

  • ಒಂದಕ್ಕಿಂತ ಹೆಚ್ಚಿನ RD ಖಾತೆ ತೆರೆಯಿರಿ.
  • ಪ್ರತಿಯೊಂದಕ್ಕೂ ನಿಮ್ಮ ಗುರಿಗಳಿಗೆ ವಿಭಜನೆ ಮಾಡಿ. (ಶಿಕ್ಷಣ, ಮನೆ ನಿರ್ಮಾಣ, ಕಾರು /ಬೈಕ್ ಖರೀದಿ, ಇತ್ಯಾದಿ.)

06.Nominee ಸೇರಿಸದೆ ಇರುವುದು.

ಇದು ಬಹಳ ದೊಡ್ಡ ಮತ್ತು ಸಾಮಾನ್ಯವಾಗಿ ಎಲ್ಲರೂ ಮಾಡುವಂತಹ ತಪ್ಪು.ಯಾವುದೇ ತರನಾದ ಖಾತೆ ತೆರೆದಲ್ಲಿ nominee ಹೆಸರನ್ನು ಸೇರಿಸುವುದು ಅತಿ ಮುಖ್ಯ ಮತ್ತು ಅವಶ್ಯಕ ಕೂಡ. ಇದರಿಂದ ನಿಮ್ಮ ನಂತರದಲ್ಲಿ ಈ ವ್ಯವಹಾರದ ಹಕ್ಕನ್ನು nominee ಹೊಂದಿರುತ್ತಾನೆ.

ಸಮಸ್ಯೆ ಏನು? :

  • nominee ಸೇರಿಸದೆ ಇದ್ದ ಪಕ್ಷದಲ್ಲಿ account holder ಗೆ ಏನಾದರೂ ಆದಲ್ಲಿ ಹಣ ಪಡೆಯಲು ಕುಟುಂಬಕ್ಕೆ ತೊಂದರೆಯಾಗುತ್ತದೆ.
  • ಕಾನೂನು ತೊಡಕು ಆಗಬಹುದು.

ಪರಿಹಾರ :

  • ಖಾತೆ ತೆರೆದಾಗಲೇ nominee ಹೆಸರನ್ನು ಸೇರಿಸಿ
  • ಇಲ್ಲದಿದ್ದಲ್ಲಿ ನಿಮ್ಮ ಕುಟುಂಬದ ಸದಸ್ಯರ ಹೆಸರನ್ನು ಸೇರಿಸಿ ಅವಶ್ಯಕತೆ ಇದ್ದರೆ ನಂತರ update ಮಾಡಿ.

ಇದು ನಿಮ್ಮ ಕುಟುಂಬದ ಆರ್ಥಿಕ ಸುರಕ್ಷತೆಗೆ ಬಹಳ ಮುಖ್ಯ.

post-office-rd-nominee-add
post-office-rd-nominee-add

07.ಹಣದುಬ್ಬರ ಗಮನಿಸದೆ ಇರುವುದು

ಬಹಳ ಜನರು RD ಸುರಕ್ಷಿತವಾಗಿದೆ ಅಂತ ಹೇಳಿ ಸಂಪೂರ್ಣ ಹಣವನ್ನು ಅದರಲ್ಲಿಯೇ ಹೂಡಿಕೆ ಮಾಡುತ್ತಾರೆ.ಇದು ತಪ್ಪು.

ಸಮಸ್ಯೆ :

  • ಹಣದುಬ್ಬರದ ಕಾರಣದಿಂದ ನಿಜವಾದ ಗಳಿಕೆ ಮೊತ್ತ ಕಡಿಮೆಯಾಗಬಹುದು.
  • ದೀರ್ಘವಧಿಯ ಗಳಿಕೆಯು ಹಣದುಬ್ಬರವನ್ನು ಮೀರಿಸಲು ಸಾಧ್ಯವಾಗದೆ ಇರಬಹುದು.

ಪರಿಹಾರ :

  • RD ಹೂಡಿಕೆಯ ಜೊತೆಯಲ್ಲಿ ಉಳಿತಾಯದ ಹಣವನ್ನು ಇನ್ನೂ ಬೇರೆ ಕಡೆಯಲ್ಲಿ ಹೂಡಿಕೆ ಮಾಡಿದರೆ ಉತ್ತಮ.
  • ನಿಮ್ಮ ಹೂಡಿಕೆಯು ಎಲ್ಲವನ್ನು ಒಳಗೊಂಡ ವಿವಿಧತೆಯ ಹೂಡಿಕೆಯಾಗಿದ್ದಲ್ಲಿ ಆರ್ಥಿಕ ಹೊರೆ ಕಡಿಮೆ ಆಗುತ್ತದೆ.

ಸುರಕ್ಷತೆಯ ಜೊತೆಗೆ ಹಣ ಬೆಳವಣಿಗೆಯು ಅಷ್ಟೇ ಮುಖ್ಯ.

ಪೋಸ್ಟ್ ಆಫೀಸ್ RD ಹೂಡಿಕೆಯ ಪ್ರಮುಖ ಲಾಭಗಳು

ಪೋಸ್ಟ್ ಆಫೀಸ್ ನ RD ಯಲ್ಲಿ ಹೂಡಿಕೆ ಮಾಡುವುದರಿಂದ ಹಲವಾರು ಲಾಭಗಳಿವೆ.

01.ಸುರಕ್ಷತೆ :-

ಪೋಸ್ಟ್ ಆಫೀಸ್ ಎಲ್ಲಾ ಯೋಜನೆಗಳು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವುದರಿಂದ ಹೆಚ್ಚಿನ ಭದ್ರತೆ ಮತ್ತು ಸುರಕ್ಷತೆಯನ್ನು ಹೊಂದಿದೆ.

02.ಖಚಿತ ಗಳಿಕೆಯ ಭರವಸೆ :

ಇಲ್ಲಿ ಯಾವುದೇ ಮಾರುಕಟ್ಟೆಯ ಏರಿಳಿತಗಳಿಗೆ ಒಳಗಾಗದೆ, ನಿಮ್ಮ ಹಣಕ್ಕೆ ಖಚಿತ ಪಡಿಸಿರುವ ಬಡ್ಡಿದರವನ್ನು ನೀಡಲಾಗುತ್ತದೆ.

03.ಸಣ್ಣ ಮೊತ್ತದಿಂದಲೂ ಆರಂಭಿಸಬಹುದು :

ಪೋಸ್ಟ್ ಆಫೀಸ್ RD ಯನ್ನು 100₹ ಗಳಿಂದಲೂ ಶುರು ಮಾಡಬಹುದು. ಎಲ್ಲಾ ವರ್ಗದವರಿಗೂ RD ಖಾತೆ ತೆರೆದು ಹೂಡಿಕೆ ಮಾಡಲು ಸಹಕಾರಿ.

04.ಉಳಿತಾಯದ ಹವ್ಯಾಸ ಬೆಳೆಯುತ್ತದೆ.

ಪ್ರತಿ ತಿಂಗಳು ಹಣವನ್ನು RD ಖಾತೆಗೆ ಜಮೆ ಮಾಡುವುದರಿಂದ ಉಳಿತಾಯದ ಹವ್ಯಾಸ ರೂಢಿಯಾಗುತ್ತದೆ. ನಂತರದ ಹೂಡಿಕೆಗಳಿಗೆ ಸಹಾಯಕವಾಗುತ್ತದೆ.

ಯಾರಿಗೆ ಪೋಸ್ಟ್ ಆಫೀಸ್ RD ಸೂಕ್ತ?

  • ಖಾಸಗಿ ನೌಕರರು
  • ಸರ್ಕಾರಿ ನೌಕರರು
  • ಕೃಷಿ ಕಾರ್ಮಿಕರು
  • ಸಣ್ಣ ವ್ಯಾಪಾರಸ್ಥರು
  • ವಿದ್ಯಾರ್ಥಿಗಳು

ಕಡಿಮೆ ರಿಸ್ಕ್, ಹೆಚ್ಚಿನ ಲಾಭಗಳಿಸಲು ಈ ಪೋಸ್ಟ್ ಆಫೀಸ್ RD ಸ್ಕೀಮ್ ಉತ್ತಮವಾದ ಆಯ್ಕೆಯಾಗಿದೆ.

ಕೊನೆಯದಾಗಿ

Post Office RD Mistakes ಗಳ ಬಗ್ಗೆ ತಿಳಿದುಕೊಳ್ಳುವುದರಿಂದ ನಿಮ್ಮ ಹೂಡಿಕೆಯನ್ನು ಸುರಕ್ಷಿತ ಮತ್ತು ಲಾಭದಾಯಕವಾಗಿಸುತ್ತದೆ.

ಸಣ್ಣ ಸಣ್ಣ ತಪ್ಪುಗಳೇ ದೊಡ್ಡ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಆದ್ದರಿಂದ:

  • ಸರಿಯಾದ ಮಾಹಿತಿ ಪಡೆದುಕೊಳ್ಳಿ, ನಂತರ ಹೂಡಿಕೆ ಆರಂಭಿಸಿ.
  • ಶಿಸ್ತಿನಿಂದ ಹೂಡಿಕೆ ಮಾಡಿ
  • ದೀರ್ಘವಧಿಯ ಹೂಡಿಕೆ ಮೇಲೆ ಗಮನ ಕೊಡಿ.

ಹೀಗೆ ಮಾಡಿದರೆ, ನೀವು ನಿಮ್ಮ ಉಳಿತಾಯದ ಹಣವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಬಹುದು.ನಿಮ್ಮ ಕನಸ್ಸನ್ನು ನನಸಾಗಿಸಿಕೊಳ್ಳಬಹುದು.

ಮುಖ್ಯ ಸೂಚನೆ
ಗಮನಿಸಿ

ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಕೇವಲ ಶಿಕ್ಷಣ ಮತ್ತು ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿ ಮಾತ್ರವಾಗಿದೆ. ಇದು ಯಾವುದೇ ರೀತಿಯ ಹಣಕಾಸು (Financial) ಹೂಡಿಕೆ ಸಲಹೆ (Investment Advice) ಅಲ್ಲ. ಹೂಡಿಕೆ ಮಾಡುವ ಮೊದಲು ನಿಮ್ಮ ವೈಯಕ್ತಿಕ ಹಣಕಾಸು ಸ್ಥಿತಿ, ಗುರಿಗಳು ಹಾಗೂ ಅಪಾಯ ಸಾಮರ್ಥ್ಯವನ್ನು ಪರಿಗಣಿಸಿ, ಅಗತ್ಯವಿದ್ದಲ್ಲಿ ಪ್ರಮಾಣಿತ ಹಣಕಾಸು ಸಲಹೆಗಾರರ (Financial Advisor) ಸಲಹೆ ಪಡೆಯಿರಿ. ಬಡ್ಡಿದರಗಳು ಹಾಗೂ ಯೋಜನೆ ನಿಯಮಗಳು ಕಾಲಾನುಸಾರ ಬದಲಾಗಬಹುದು.


post office RD mistakes: 07 ದೊಡ್ಡ ತಪ್ಪುಗಳು ಯಾವುವು?

RD ಯೋಜನೆ ಬಗ್ಗೆ ಪೂರ್ಣ ಮಾಹಿತಿ ತಿಳಿಯದೇ ಇರುವುದು.ತಿಂಗಳ ಕಂತುಗಳನ್ನು ತಪ್ಪಿಸುವುದು (Missing Monthly Installments).ಮಧ್ಯದಲ್ಲೇ RD account ಮುಚ್ಚುವುದು.ಬಡ್ಡಿಯ ಲೆಕ್ಕಾಚಾರ ಅರ್ಥ ಮಾಡಿಕೊಳ್ಳದೆ ಇರುವುದು.ಒಂದೇ RD ಅಕೌಂಟ್ ನಲ್ಲಿ ಮಾತ್ರ ಹೂಡಿಕೆ ಮಾಡುವುದು. Nominee ಸೇರಿಸದೆ ಇರುವುದು.ಹಣದುಬ್ಬರ ಗಮನಿಸದೆ ಇರುವುದು

post office RD ತೆರೆಯಲು ಕನಿಷ್ಠ ಹೂಡಿಕೆಯ ಮೊತ್ತ ಎಷ್ಟು?

ಕನಿಷ್ಠ 100₹ ಗಳಿಂದಲೂ ಸಹ ಪೋಸ್ಟ್ ಆಫೀಸ್ RD ಖಾತೆ ತೆರೆಯಲು ಅನುವು ಮಾಡಿಕೊಡಲಾಗಿದೆ.

ಯಾರಿಗೆ ಈ ಪೋಸ್ಟ್ ಆಫೀಸ್ RD ಸ್ಕೀಮ್ ಸೂಕ್ತ?

ಖಾಸಗಿ ನೌಕರರು,ಸರ್ಕಾರಿ ನೌಕರರು, ವಿದ್ಯಾರ್ಥಿಗಳು, ಕೃಷಿ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಸ್ಥರು,


About Content Writer
Jayanth

Jayanth

ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.

About Us →
WhatsApp Group Join Now
Telegram Group Join Now

Leave a Comment