ಇಂದಿನ ಚಿನ್ನದ ಬೆಲೆ 2026 (Gold Price Today): 1g & 10g ರೇಟ್ ನೋಡಿ ಶಾಕ್ ಆಗ್ತೀರಾ!

WhatsApp Group Join Now
Telegram Group Join Now

ಇತ್ತೀಚಿನ ಕೆಲ ದಿನಗಳಲ್ಲಿ ಚಿನ್ನದ ಬೆಲೆ ಆಕಾಶದೆತ್ತರಕ್ಕೆ ಏರಿತ್ತು, ಆದರೆ ಈಗ ಚಿನ್ನದ ಬೆಲೆ ಇಳಿಕೆಯ ಕಡೆ ಮುಖ ಮಾಡಿದಂತಾಗಿದೆ. ಈಗ ಚಿನ್ನದ ಬೆಲೆಯಿಂದ ಹೂಡಿಕೆದಾರರು ಮತ್ತು ಸಾಮಾನ್ಯ ಖರೀದಿದಾರರ ಗಮನ ಸೆಳೆಯುವಂತೆಯಾಗಿದೆ. ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ, ಚಿನ್ನವು ಕೇವಲ ಆಭರಣದ ದೃಷ್ಟಿಯಿಂದಲ್ಲ,ಇದು ಒಂದು ರೀತಿಯ ಹೂಡಿಕೆ (Safe Investment) ಆಗಿಯೂ ಪರಿಗಣಿಸಲಾಗುತ್ತದೆ.

ಇಂದಿನ ಮಾರುಕಟ್ಟೆಯ ಟ್ರೆಂಡ್ ನೋಡಿದರೆ, 1 ಗ್ರಾಂ ಮತ್ತು 10 ಗ್ರಾಂ ಚಿನ್ನದ ದರಗಳಲ್ಲಿ ಸಣ್ಣ ಮಟ್ಟಿನ ಬದಲಾವಣೆಗಳು ಕಾಣ ಸಿಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಮತ್ತು ರೂಪಾಯಿ ಮೌಲ್ಯದ ವ್ಯತ್ಯಾಸದಿಂದ ಈ ಬದಲಾವಣೆಗಳು ಪ್ರತಿದಿನವೂ ಆಗುವುದು ಸಹಜ.

ಈ ಲೇಖನದಲ್ಲಿ ಇವತ್ತಿನ ಚಿನ್ನದ ದರವನ್ನು ಮತ್ತು ಚಿನ್ನದ ಕೊಳ್ಳುವಿಕೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಇತ್ತೀಚಿನ ದಿನಗಳಲ್ಲಿನ ಚಿನ್ನದ ದರ ಏರಿಕೆ ಮತ್ತು ಇಳಿಕೆಗೆ ಕಾರಣಗಳೇನು?

ಚಿನ್ನದ ಬೆಲೆ ಯಾವಾಗಲು ಸ್ಥಿರವಾಗಿರುವುದಿಲ್ಲ. ಅದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವು ಆರ್ಥಿಕ ಕಾರಣಗಳಿಂದ ಬದಲಾಗುತ್ತಿರುತ್ತದೆ.

  • 1. ಅಂತರಾಷ್ಟ್ರೀಯ ಮಾರುಕಟ್ಟೆ:

ಚಿನ್ನದ ಬೆಲೆ ವಿಶ್ವ ಮಟ್ಟದಲ್ಲಿ ನಿಗದಿಯಾಗುತ್ತದೆ.ಅಂತರಾಷ್ಟ್ರೀಯ ಮಟ್ಟದಲ್ಲಿ ಏನಾದರು ಬದಲಾವಣೆ ಅಥವಾ ಸಮಸ್ಯೆ ಅಥವಾ ಯುದ್ಧದ ಕಾರಣದಿಂದ ಮಾರುಕಟ್ಟೆಗಳಲ್ಲಿ ಚಿನ್ನದ ದರದ ಮೇಲೆ ಪರಿಣಾಮ ಬೀರುತ್ತದೆ.

  • ($)ಡಾಲರ್ vs ರೂಪಾಯಿ(₹)

ಹಾಗೆಯೇ ಚಿನ್ನದ ಬೆಲೆಯೂ ದೇಶದ ಕರೆನ್ಸಿ ಮೇಲೇಯೂ ನಿರ್ಧರಿತವಾಗುತ್ತದೆ. ರೂಪಾಯಿ ಮೌಲ್ಯ ಹಾಗೂ ಡಾಲರ್ ಮೌಲ್ಯದ ಮೇಲೆ ಚಿನ್ನದ ದರ ವ್ಯತ್ಯಾಸವಾಗುವ ಸ್ಸಾಧ್ಯತೆಗಳಿವೆ.

  • ಹೂಡಿಕೆದಾರರ ಬೇಡಿಕೆಯಿಂದ

ಚಿನ್ನ ಎನ್ನುವುದು ನಿಯಮಿತವಾಗಿ ದೊರಕುವ ಮೌಲ್ಯಯುತ ವಸ್ತುವಾಗಿದೆ.ಅತಿಯಾದ ಬೇಡಿಕೆಯಿಂದ ಚಿನ್ನದ ಕೊರತೆ ಉಂಟಾಗಿ ಚಿನ್ನದ ಬೆಲೆಯಲ್ಲಿ ಏರಿಳಿತ ಸಾಧ್ಯ.

  • ಬಡ್ಡಿದರ (Interest Rate)

ಬ್ಯಾಂಕ್ ಗಳ ಬಡ್ಡಿದರ ಕಡಿಮೆ ಇದ್ದರೆ, ಅಥವಾ ಷೇರುಮಾರುಕಟ್ಟೆ ಕುಸಿತ ಕಂಡರೆ ಎಲ್ಲರೂ ಚಿನ್ನದ ಮೇಲೆ ಹೂಡಿಕೆ ಮಾಡಿ. ಅಧಿಕ ಲಾಭಗಳಿಸಲು ಮುಂದಾಗುತ್ತಾರೆ. ಆದ್ದರಿಂದ ಬಡ್ಡಿದರಗಳ ಮೇಲೆ ಅವಲಂಭಿತವಾಗುತ್ತದೆ.

ಇವತ್ತಿನ 1 ಗ್ರಾಂ & 10 ಗ್ರಾಂ ಚಿನ್ನದ ಬೆಲೆ (18K,22K & 24K)- Gold Price Today

ಇತ್ತೀಚಿನ ಚಿನ್ನದ ಬೆಲೆ(Gold Price Today) 18 ಕ್ಯಾರೆಟ್(18K), 22 ಕ್ಯಾರೆಟ್ (22K) ಮತ್ತು 24 ಕ್ಯಾರೆಟ್ (24K) ವಿಧವಾಗಿ ಬದಲಾಗುತ್ತದೆ. ಕೆಳಗಿನ ಟೇಬಲ್‌ನಲ್ಲಿ ಇವತ್ತಿನ ಚಿನ್ನದ ದರವನ್ನು ವಿವರಿಸಲಾಗಿದೆ.

ಚಿನ್ನದ ಪ್ರಕಾರ1 ಗ್ರಾಂ ದರ 10 ಗ್ರಾಂ ದರ
18K₹10996₹109960
22K₹13429₹134290
24K₹14661₹146610

ಚಿನ್ನದ ದರ ಪ್ರತಿನಿತ್ಯ ಬದಲಾಗುತ್ತಿರುತ್ತದೆ.ದಯವಿಟ್ಟು ಖರೀದಿ ಮಾಡುವ ಮುನ್ನ ಇತ್ತೀಚಿನ ಚಿನ್ನದ ದರಗಳನ್ನು ಪರಿಶೀಲಿಸಿ.

👉 ಇದೆ ತರನಾದ ಹೆಚ್ಚಿನ ಮಾಹಿತಿಗೆ ಈಗಲೇ ನಮ್ಮ ಟೆಲಿಗ್ರಾಂ ಚಾನೆಲ್ ಅನ್ನು ಫಾಲೋ ಮಾಡಿ.
Gold Price Today 04-04-2026
Gold Price Today 04-04-2026

ಕರ್ನಾಟಕದಲ್ಲಿ ಚಿನ್ನದ ಬೆಲೆಯಲ್ಲಿ ಬದಲಾವಣೆ.

ಕರ್ನಾಟಕದ ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು, ಮಂಗಳೂರು,ಹುಬ್ಬಳ್ಳಿ ಇವುಗಳಲ್ಲಿ ಚಿನ್ನದ ಬೆಲೆ ಒಂದೇ ಟ್ರೆಂಡ್ ನಲ್ಲಿ ಇರುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಚಿನ್ನದ ಬೆಲೆಯಲ್ಲಿ ವ್ಯತ್ಯಾಸಗಳು ಕಾಣಬಹುದು.

ಕಾರಣಗಳು

  • ಸ್ಥಳೀಯ ಮಟ್ಟದ ಚಿನ್ನದ ವ್ಯಾಪಾರಿಗಳ ಮೇಕಿಂಗ್ ಚಾರ್ಜ್ ನಲ್ಲಿನ ಬದಲಾವಣೆಯಿಂದ.
  • ನಗರ ಮಟ್ಟದಲ್ಲಿ ಬೇಡಿಕೆ ಹೆಚ್ಚಿರುವುದರಿಂದ, ಬೆಲೆ ಹೆಚ್ಚಳ ಆಗುವ ಸಾಧ್ಯತೆ ಇದೆ.
  • ಉದಾಹರಣೆಗೆ ಬೆಂಗಳೂರು ನಗರದಲ್ಲಿ ಚಿನ್ನ ಕೊಳ್ಳುವವರ ಸಂಖ್ಯೆ ಅಧಿಕ ಇರುವುದರಿಂದ ಚಿನ್ನದ ಬೆಲೆ ಸ್ವಲ್ಪ ಹೆಚ್ಚಿರುತ್ತದೆ.

ಯಾವಾಗ ಚಿನ್ನ ಖರೀದಿ ಮಾಡುವುದು ಒಳ್ಳೆಯದು

ಇದು ಅತ್ಯಂತ ಮುಖ್ಯ ಪ್ರಶ್ನೆಯಾಗಿದೆ.ಚಿನ್ನ ಖರೀದಿ ಮಾಡುವುದಕ್ಕೂ ಮೊದಲು ಲಾಭ ಗಳಿಸಲು ಯಾವಾಗ ಚಿನ್ನ ಖರೀದಿ ಮಾಡುವುದು ಸೂಕ್ತ ಸಮಯವಾಗಿದೆ ಎಂದು ತಿಳಿದುಕೊಳ್ಳಬೇಕು.

ಬೆಲೆ ಇಳಿದಾಗ :

  • ಈ ಸಮಯದಲ್ಲಿ ಚಿನ್ನ ಖರೀದಿ ಮಾಡುವುದು ಸೂಕ್ತ ಸಮಯವಾಗಿದೆ.
  • ದೀರ್ಘ ಕಾಲ ಹೂಡಿಕೆ ಮಾಡಲು ಬಯಸುವವರು ಈ ಸಮಯದ ಸದ್ಭಳಕೆ ಮಾಡಿಕೊಳ್ಳಬಹುದು.

ಬೆಲೆ ಏರಿದಾಗ :

  • ಈ ಸಮಯದಲ್ಲಿ ಚಿನ್ನ ಖರೀದಿ ಮಾಡುವ ಬದಲು ಸ್ವಲ್ಪ ಸಮಯ ಕಾಯುವುದು ಉತ್ತಮ.
  • ಆದರೆ ಮದುವೆ ಅಥವಾ ತುರ್ತು ಪರಿಸ್ಥಿತಿಯಲ್ಲಿ ಚಿನ್ನ ಖರೀದಿ ಮಾಡಬಹುದು.

ಚಿನ್ನದಲ್ಲಿ ದೀರ್ಘ ಕಾಲದ ಹೂಡಿಕೆ ಮಾಡಿದರೆ ಉತ್ತಮ ಹೂಡಿಕೆಯ ಆಯ್ಕೆಯಾಗುತ್ತದೆ.

18K, 22K ಮತ್ತು 24K ನಡುವಿನ ವ್ಯತ್ಯಾಸವೇನು?

ಪ್ರಕಾರ ಶುದ್ಧತೆ ಉಪಯೋಗ
18K75%ದಿನನಿತ್ಯ ಬಳಕೆ ಆಭರಣ
22K91.6%ಆಭರಣ
24K99.9%ಹೂಡಿಕೆ (ಕಾಯಿನ್ಸ್ ಮತ್ತು ಬಾರ್)

24K ಚಿನ್ನ ಶುದ್ಧ ರೂಪದ್ದಾಗಿರುವುದರಿಂದ ಬೆಲೆ ಹೆಚ್ಚಿರುತ್ತದೆ. ಮತ್ತು ಇದು ಹೂಡಿಕೆ ಉದ್ದೇಶಗಳಿಗೆ ಮಾತ್ರ ಖರೀದಿ ಮಾಡುತ್ತಾರೆ.

22K ಚಿನ್ನವು ಹೆಚ್ಚಾಗಿ ಆಭರಣಗಳಲ್ಲಿ ಬಳಕೆ ಮಾಡುತ್ತಾರೆ. ಇದು ಹೂಡಿಕೆ ಕ್ಕಿಂತ ಹೆಚ್ಚಾಗಿ ಮದುವೆ ಸಮಾರಂಭ ಅಥವಾ ಅಲಂಕಾರಿಕ ವಸ್ತುವಾಗಿ ಮಾತ್ರ ಖರೀದಿ ಮಾಡುತ್ತಾರೆ.

18K ಚಿನ್ನವು ದಿನನಿತ್ಯ ಬಳಕೆ ಮಾಡುವ ಆಭರಣಗಳ ತಯಾರಿಯಲ್ಲಿ ಬಳಸಲಾಗುತ್ತದೆ.

ಚಿನ್ನ ಖರೀದಿಯಲ್ಲಿ ಗಮನಿಸಬೇಕಾದ ಮುಖ್ಯ ಅಂಶಗಳು

ಚಿನ್ನ ಖರೀದಿ ಮಡುವಾಗ ಮುಖ್ಯವಾಗಿ ಈ ಕೆಳಗಿನ ಅಂಶಗಳನ್ನು ತಿಳಿದುಕೊಳ್ಳಿ.

  • BIS Hallmark

ಖರೀದಿ ಮಾಡುವ ಮುನ್ನ ಚಿನ್ನದ ಪ್ರಕಾರ ಮತ್ತು ಶುದ್ಧತೆಯನ್ನು ಹೊಂದಿದೆ ಎಂದು ತಿಳಿಯಲು BIS Hallmark ಇರುವ ಚಿನ್ನವನ್ನು ಪರಿಶೀಲಿಸಬೇಕು ನಂತರ ಖರೀದಿ ಮಾಡಬೇಕು.

  • ಮೇಕಿಂಗ್ ಚಾರ್ಜ್ (making charge )

ಆಭರಣದ ಅಂಗಡಿಗಳು ಆಭರಣದ ಮೇಲೆ ಮೇಕಿಂಗ್ ಚಾರ್ಜ್ ಗಳನ್ನು ವಿಧಿಸುತ್ತಾರೆ. ಇಲ್ಲಿ ಕೆಲವು ಅಂಗಡಿಗಳ ಮೇಕಿಂಗ್ ಚಾರ್ಜ್ ದರವನ್ನು ಹೋಲಿಕೆ ಮಾಡಿಕೊಂಡು ಖರೀದಿಸುವುದು ಸೂಕ್ತ.

  • Price ಅಥವಾ ದರವನ್ನು ಪರಿಶೀಲಸಿಕೊಳ್ಳಿ.

ಚಿನ್ನ ಖರೀದಿಸುವಾಗ ಇಂದಿನ ಚಿನ್ನದ ಬೆಲೆ ಎಷ್ಟು?(Gold price Today) ಎಂದು ತಿಳಿದುಕೊಂಡು ಖರೀದಿಸಿ.

Gold Price Today
Gold Price Today

ಚಿನ್ನದ ಹೂಡಿಕೆ v/s ಇತರೆ ಹೂಡಿಕೆ – ಯಾವುದು ಒಳ್ಳೆಯದು

ಹೂಡಿಕೆ ರಿಸ್ಕ್ ರಿಟರ್ನ್
ಚಿನ್ನ ಕಡಿಮೆ ಸ್ಟೇಬಲ್
ಷೇರು ಹೆಚ್ಚು ಹೆಚ್ಚು
FDಕಡಿಮೆ ಕಡಿಮೆ

ಕೊನೆಯದಾಗಿ

ಇತ್ತೀಚಿನ ಚಿನ್ನದ ಏರಿಳಿತಗಳನ್ನು ಗಮನಿಸಿದರೆ, ಚಿನ್ನದ ದರ ಇತರೆ ಅಂಶಗಳ ಮೇಲೆ ಅವಲಂಭಿತವಾಗಿದೆ.ಖರೀದಿ ಅಥವಾ ಹೂಡಿಕೆ ಮಾಡುವ ಮೊದಲು ಇತ್ತೀಚಿನ ಅಥವಾ ಇಂದಿನ ಚಿನ್ನದ ದರದ(gold price Today )ಬಗ್ಗೆ ಗಮನವಿರಲಿ.

ಮುಖ್ಯ ಸೂಚನೆ
ಗಮನಿಸಿ

ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಕೇವಲ ಶಿಕ್ಷಣ ಮತ್ತು ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿ ಮಾತ್ರವಾಗಿದೆ. ಇದು ಯಾವುದೇ ರೀತಿಯ ಹಣಕಾಸು (Financial) ಹೂಡಿಕೆ ಸಲಹೆ (Investment Advice) ಅಲ್ಲ. ಹೂಡಿಕೆ ಮಾಡುವ ಮೊದಲು ನಿಮ್ಮ ವೈಯಕ್ತಿಕ ಹಣಕಾಸು ಸ್ಥಿತಿ, ಗುರಿಗಳು ಹಾಗೂ ಅಪಾಯ ಸಾಮರ್ಥ್ಯವನ್ನು ಪರಿಗಣಿಸಿ, ಅಗತ್ಯವಿದ್ದಲ್ಲಿ ಪ್ರಮಾಣಿತ ಹಣಕಾಸು ಸಲಹೆಗಾರರ (Financial Advisor) ಸಲಹೆ ಪಡೆಯಿರಿ. ಬಡ್ಡಿದರಗಳು ಹಾಗೂ ಯೋಜನೆ ನಿಯಮಗಳು ಕಾಲಾನುಸಾರ ಬದಲಾಗಬಹುದು.


22K ಮತ್ತು 24K ಚಿನ್ನದ ನಡುವಿನ ವ್ಯತ್ಯಾಸವೇನು?

24K ಚಿನ್ನವು 99.9% ಶುದ್ಧ ಚಿನ್ನವಾಗಿದೆ.ಇದನ್ನು ಮುಖ್ಯವಾಗಿ ಹೂಡಿಕೆಯ ಉದ್ದೇಶಗಳಿಗೆ ಬಳಸಲಾಗುತ್ತದೆ.22K ಚಿನ್ನವು 91.6% ಶುದ್ಧ ಚಿನ್ನವಾಗಿದೆ. ಇದನ್ನು ಮುಖ್ಯವಾಗಿ ಆಭರಣಗಳಲ್ಲಿ ಬಳಸಲಾಗುತ್ತದೆ.

ಚಿನ್ನದ ಮೇಲೆ ಹೂಡಿಕೆ ಮಾಡುವುದು ಸೂಕ್ತವೇ?

ಹೌದು, ದೀರ್ಘವಧಿಗೆ ಚಿನ್ನದ ಮೇಲೆ ಹೂಡಿಕೆ ಮಾಡುವುದು ಒಳ್ಳೆಯ ಆಯ್ಕೆಯಾಗಿದೆ.

ಚಿನ್ನ ಖರೀದಿಸುವಾಗ ಯಾವ ವಿಚಾರಗಳನ್ನು ಗಮನಿಸಬೇಕು?

BIS Hallmark,ಮೇಕಿಂಗ್ ಚಾರ್ಜ್,22K ಅಥವಾ 24K ಯಾವುದು ಸೂಕ್ತ ಮತ್ತು ಏಕೆ ಎನ್ನುವುದರ ಬಗ್ಗೆ ಅರಿವಿರಬೇಕು.

ಚಿನ್ನದ ಮೇಲೆ ಹೂಡಿಕೆ ದೀರ್ಘವಧಿಗೆ ಸೂಕ್ತವೇ?

ಹೌದು, ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುವವ ಹೆಚ್ಚಿನ ಜನ ದೀರ್ಘವಧಿಗೆ ಹೂಡಿಕೆ ಮಾಡುತ್ತಾರೆ. ಇದು ಲಾಭದಾಯಕವು ಆಗಿದೆ.

About Content Writer
Jayanth

Jayanth

ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.

About Us →
WhatsApp Group Join Now
Telegram Group Join Now

Leave a Comment