Table of Contents
ಭಾರತ ಸರ್ಕಾರದ ಗುಪ್ತಚಾರ ಇಲಾಖೆಯಲ್ಲಿನ ಸೆಕ್ಯೂರಿಟಿ ಅಸಿಸ್ಟೆಂಟ್ (IB SA) ಹುದ್ದೆಗೆ ಸೆಪ್ಟೆಂಬರ್ 29 & 30 ರಂದು Tier -1 ಪರೀಕ್ಷೆಯನ್ನು ವಿವಿಧ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಪರೀಕ್ಷೆ ನಡೆದು ಸುಮಾರು 4 ತಿಂಗಳುಗಳು ಪೂರ್ಣಗೊಂಡಿದ್ದು Tier-2 ಪರೀಕ್ಷೆಗೆ ಅಭ್ಯರ್ಥಿಗಳು ಕಾಯುತ್ತಿದ್ದರು. ಈಗ ಇಲಾಖೆಯಿಂದಲೇ Tier 2 ಪರೀಕ್ಷೆಯ ಅಧಿಕೃತ ದಿನಾಂಕದೊಂದಿಗೆ ಪ್ರವೇಶ ಪತ್ರವನ್ನು (Admit Card ) ಬಿಡುಗಡೆ ಮಾಡಿದ್ದಾರೆ.
Tier 2 ಪರೀಕ್ಷಾ ದಿನಾಂಕ 2026
ದೇಶದ ಭದ್ರತೆಯ ಜವಾಬ್ದಾರಿ ಹೊತ್ತ ಗುಪ್ತಚಾರ ಇಲಾಖೆಯಲ್ಲಿನ ಸೆಕ್ಯೂರಿಟಿ ಅಸಿಸ್ಟೆಂಟ್ ಹುದ್ದೆಗೆ Tier 2 ನಡೆಸಲು ಇಲಾಖೆಯ ವತಿಯಿಂದ ಅಧಿಕೃತವಾಗಿ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದ್ದಾರೆ. ಇದೆ ತಿಂಗಳ ಅಂದರೆ ಫೆಬ್ರವರಿ ದಿನಾಂಕ 22 ರಂದು ನಡೆಸಲು ಉದ್ದೇಶಿಸಲಾಗಿದೆ. ತನ್ನ ಅಧಿಕೃತ ಜಾಲತಾಣದಲ್ಲಿ (ವೆಬ್ಸೈಟ್ ) ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗಿದೆ.
IB SA Admit Card ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?
- Ministry of Home affairs ವೆಬ್ಸೈಟ್ ಗೆ ಭೇಟಿ ನೀಡಿ, Tier 2 admit card link ಮೇಲೆ ಕ್ಲಿಕ್ ಮಾಡಿ.
- User Id ಮತ್ತು ಪಾಸ್ವರ್ಡ್ ನಮೂದಿಸಿ ಕ್ಯಾಪ್ಚ್ ಕೋಡ್ ನಮೂದಿಸಿ ಲಾಗಿನ್ ಮಾಡಿ.
- Admit card ಸೆಕ್ಷನ್ ನಲ್ಲಿ admit card ತೋರುತ್ತದೆ ಅದನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿ.

ಆಯ್ಕೆ ಪ್ರಕ್ರಿಯೆ.
ಈ ಹುದ್ದೆಗೆ ಮೊದಲು CBT ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದನ್ನೇ Tier 1 ಎಂದು ಕರೆಯಲಾಗುತ್ತದೆ. ಈ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ಮತ್ತು ಮೀಸಲಾತಿಗಳ ಮೇಲೆ Tier 2 ಪರೀಕ್ಷೆಗೆ 1:5 ಅನುಪಾತದಲ್ಲಿ (1 ಹುದ್ದೆಗೆ 5 ಜನರಂತೆ) ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೊಂಡು ಪರೀಕ್ಷೆ ನಡೆಸುತ್ತಾರೆ. ಈ ಪರೀಕ್ಷೆ (Tier 2 ) ಅಂಕಗಳು ಕೇವಲ ಅರ್ಹತೆ ಹೊಂದಿರುವವುದನ್ನು ಪರೀಕ್ಷಿಸಲು ಮಾತ್ರ (Qualifying Only).
Tier 2 ಪರೀಕ್ಷೆಯ ನಂತರದ ಹಂತಗಳು
ಈ ಹಂತ ಪೂರ್ಣಗೊಂಡ ನಂತರ Tier 1 ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಿ 1:1 ಅನುಪಾತದಲ್ಲಿ Interview ಗೆ ಕರೆಯುತ್ತಾರೆ.ತದ ನಂತರ ದಾಖಲಾತಿ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ.
ಪರೀಕ್ಷೆ ಮಾದರಿ
Tier 2 ಲಿಖಿತ ರೂಪದ ಪರೀಕ್ಷೆಯಾಗಿದ್ದು, 50 ಅಂಕಗಳಿಗೆ ನಡೆಸಲಾಗುತ್ತದೆ. ಇಲ್ಲಿ ಪ್ರತಿ ಭಾಗದಿಂದ 500 ಪದಗಳ ಭಾಷಾಂತರ ಮಾಡಬೇಕಿದ್ದು,ಒಂದು ಗಂಟೆಯ ಸಮಯವಕಾಶದಲ್ಲಿ ಸ್ಥಳೀಯ ಭಾಷೆಯಿಂದ ಇಂಗ್ಲಿಷ್ ಗೆ ಹಾಗೂ ಇಂಗ್ಲಿಷ್ ಭಾಷೆಯಿಂದ ಸ್ಥಳೀಯ ಭಾಷೆಗೆ ಭಾಷಾಂತರ ಮಾಡಬೇಕಿರುತ್ತದೆ. ಇದಕ್ಕೆ 50 ಅಂಕಗಳು ನಿಗದಿ ಮಾಡಲಾಗಿದೆ.
Tier 2 ಪ್ರರೀಕ್ಷಾ ತಯಾರಿ ಹೇಗೆ?
- ಮೊಟ್ಟ ಮೊದಲನೆಯದಾಗಿ ಪರೀಕ್ಷೆಯ ಮಾದರಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.
- ಪ್ರತಿ ದಿನ ಒಂದು ಭಾಷಾಂತರವನ್ನು ಮಾಡಿ. ಭಾಷಾಂತರಿಸುವಾಗ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಿ ಮತ್ತು ಅಭ್ಯಾಸ ಮಾಡಿ.
- ಪ್ರಚಲಿತ ಘಟನೆಗಳ ಮೇಲೆ ಸ್ವಲ್ಪ ಗಮನ ಕೊಡಿ. ಇದಕ್ಕೆ ಒಂದು ದಿನ ಪತ್ರಿಕೆಯನ್ನು ದಿನಾಲೂ ಓದಿ.
- ದಿನ ಪತ್ರಿಕೆಯಲ್ಲಿನ ಸಂಪಾದಕಿಯವನ್ನು ಭಾಷಾಂತರಿಸಲು ಪ್ರಯತ್ನಿಸಿ.
- ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಯೊಂದಿಗೆ ನಿಮ್ಮ ಅಭ್ಯಾಸ ಮಾಡಿ.
- ಒಂದೊಂದೇ ಪದಗಳನ್ನು ಭಾಷಾಂತರಿಸುವ ಬದಲು ವಾಕ್ಯ ಗಳನ್ನು ಸ್ಪಷ್ಟವಾಗಿ ಓದುವ ಮತ್ತು ಅರ್ಥವಾಗುವ ಹಾಗೆ ಭಾಷಾಂತರ ಮಾಡಬೇಕು.
- ಸರಳ ಭಾಷೆಯನ್ನು ಬಳಸಿ, ಅತಿ ಕ್ಲಿಷ್ಟಕರವಾದ ಭಾಷೆಯ ಬಳಕೆ ಬೇಡ.
ಅವಶ್ಯಕವಾದ ಮುಖ್ಯ ಸೂಚನೆಗಳು
- ಪ್ರವೇಶ ಪತ್ರದಲ್ಲಿ ಕೇಳಿರುವ ಎಲ್ಲಾ ಸೂಚನೆಗಳನ್ನು ಚಾಚು ತಪ್ಪದೆ ಪಾಲಿಸಿ.
- ಪರೀಕ್ಷೆಗೆ ಮುಖ್ಯವಾಗಿ ಪ್ರವೇಶ ಪತ್ರ ಮತ್ತು ಸರ್ಕಾರಿ ಗುರುತಿನ ಚೀಟಿಗಳಾದ ಆಧಾರ್, ಪಾನ್ ಕಾರ್ಡ್ ನಂತಹ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗುವುದು ಅವಶ್ಯಕ.
- ರಿಪೋರ್ಟಿಂಗ್ ಟೈಮ್ ಗಿಂತ ಒಂದು ಗಂಟೆ ಮೊದಲೇ ಪರೀಕ್ಷಾ ಕೇಂದ್ರವನ್ನು ತಲುಪಿ.
- ನಿಷೇದಿತಾ ವಸ್ತುಗಳನ್ನು ಯಾವುದೇ ಕಾರಣಕ್ಕೂ ಬಳಸಬೇಡಿ.
- ಪರೀಕ್ಷೆ ಬರೆಯಲು ಒಳ್ಳೆಯ ಪೆನ್ ಬಳಕೆ ಮಾಡಿ.
- ಪರೀಕ್ಷೆ ಕೊಠಡಿ ಮೇಲ್ವಿಚಾರಕರ ಸೂಚನೆಗಳನ್ನು ಪಾಲಿಸಿ.
IB SA Tier 2 Exam Date 2025 ಯಾವಾಗ?
Tier 2 ಪರೀಕ್ಷಾ ದಿನಾಂಕವನ್ನು ಫೆಬ್ರವರಿ 22,2026 ರಂದು ನಡೆಸಲು ನಿಗದಿಪಡಿಸಲಾಗಿದೆ.
IB SA Tier 2 Admit Card ಹೇಗೆ ಡೌನ್ಲೋಡ್ ಮಾಡುವುದು?
ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, Tier 2 admit card link ಮಖಾಂತರ ನಿಮ್ಮ user Id ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಮಾಡಿ. ಅಡ್ಮಿಟ್ ಕಾರ್ಡ್ ವಿಭಾಗದಲ್ಲಿ ನಿಮ್ಮ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
IB SA Tier 2 Exam pattern ಹೇಗೆ?
ಒಂದು ಗಂಟೆಯ ಅವಧಿಯಲ್ಲಿ 50 ಅಂಕಗಳಿಗೆ 500 ಪದಗಳ ಭಾಷಾಂತರ ಮಾಡಬೇಕಿದ್ದು, ಸ್ಥಳೀಯ ಭಾಷೆಯಿಂದ ಇಂಗ್ಲಿಷ್ ಗೆ ಮತ್ತು ಇಂಗ್ಲಿಷ್ ಭಾಷೆಯಿಂದ ಸ್ಥಳೀಯ ಭಾಷೆಗೆ ಭಾಷಾಂತರ ಮಾಡಬೇಕು.
Jayanth
ವಿಷಯ ಬರಹಗಾರ(Content Writer)ನಾಗಿ 5 ವರ್ಷಗಳಿಗಿಂತ ಹೆಚ್ಚು ಕೆಲಸದ ಅನುಭವ ಹೊಂದಿರುವ ನಾನು. ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ನನ್ನ ಬರಹದ ಮೂಲಕ ಈ ವೆಬ್ಸೈಟ್ ನಲ್ಲಿ ಹಂಚಿಕೊಳ್ಳುತ್ತೇನೆ. ಕಷ್ಟವಾದ ವಿಷಯಗಳನ್ನೂ ಸುಲಭವಾಗಿ ಅರ್ಥವಾಗುವಂತೆ ವಿವರಿಸಿ, ಓದುಗರಿಗೆ ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿ ದೊರಕುವಂತೆ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ.
About Us →