PM kisan 22ನೇ ಕಂತು 2026 – ಯಾವಾಗ ರೈತರ ಕೈ ಸೇರಲಿದೆ ₹2000?

WhatsApp Group Join Now
Telegram Group Join Now

Table of Contents

PM kisan ಸಮ್ಮಾನ್ ನಿಧಿ ಸ್ಕೀಮ್ – ಕೇಂದ್ರ ಸರ್ಕಾರವು ದೇಶದ ರೈತರ ಕೃಷಿಯಲ್ಲಿನ ಸ್ವಾವಲಂಬನೆಗೆ ಮತ್ತು ತಮ್ಮ ಕೃಷಿ ಕೆಲಸದ ಪೂರಕ ಖರ್ಚುಗಳಿಗೆ ಸಹಾಯವಾಗಲೆಂದು ಪ್ರಾರಂಭಿಸಿದ ಯೋಜನೆಯಾಗಿದೆ. 2019 ರಲ್ಲಿ ಪ್ರಾರಂಭವಾದ ಈ ಯೋಜನೆ ದೇಶದ ಸರಿ ಸುಮಾರು 11 ಕೋಟಿ ರೈತರಿಗೆ ಸಹಾಯವಾಗಿದೆ. ಇಲ್ಲಿಯವರೆಗೆ 21 ಕಂತುಗಳ ಹಣವು ರೈತರ ಖಾತೆಗಳಿಗೆ ಜಮೆಯಾಗಿದ್ದು, ಈ ಸಮಯದಲ್ಲಿ  22ನೇ ಕಂತಿನ ₹2000 ಹಣ ಬಿಡುಗಡೆಯ ಸನಿಹದಲ್ಲಿದೆ.

ಆಗಲೇ ಕೇಳಿರುವ ಹಾಗೆ ರೈತರ ಕೃಷಿ ಕೆಲಸಗಳಿಗೆ ಮತ್ತು ಸಾಮಗ್ರಿಗಳ ಖರ್ಚು ನೀಗಿಸಲು ಸಹಾಯವಾಗುವ ದೃಷ್ಟಿಯಿಂದ ವರ್ಷಕ್ಕೆ 6000₹ ಗಳ ಹಣವನ್ನು ನೇರವಾಗಿ ರೈತರ ಖಾತೆಗಳಿಗೆ DBT ಮೂಲಕ ಹಣ ಜಮೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

PM Kisan 22ನೇ ಕಂತು ಬಿಡುಗಡೆ ದಿನಾಂಕ ಯಾವಾಗ?

ಹಿಂದಿನ ವರ್ಷಗಳ ರೂಢಿಯನ್ನು ಗಮನಿಸಿದರೆ ಪ್ರತಿವರ್ಷ 3 ಕಂತುಗಳ ರೂಪದಲ್ಲಿ ಜೂನ್, ಅಕ್ಟೋಬರ್ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ರೈತರಿಗೆ ಹಣವನ್ನು ಖಾತೆಗೆ ಜಮೆ ಮಾಡುವುದು ರೂಢಿಯಾಗಿತ್ತು. ಅದನ್ನೇ ಪರಿಗಣಿಸಿ ಹೇಳುವುದಾದರೆ. ಈ ತಿಂಗಳ (ಫೆಬ್ರುವರಿ ) ಅಂತ್ಯ ಅಥವಾ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ರೈತರ ಖಾತೆಗೆ ನೇರವಾಗಿ DBT ಮೂಲಕ ₹2000 ಹಣ ಜಮೆಯಾಗುವ ಸಾಧ್ಯತೆಗಳು ಹೆಚ್ಚಿವೆ.

ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿರುವುದಿಲ್ಲ. ಮತ್ತು ಇದಕ್ಕೆ ಸಂಬಂದಿಸಿದ ಯಾವುದೇ ರೀತಿಯ ಮಾಹಿತಿಗೆ ಪಿಎಂ ಕಿಸಾನ್ ನ ಅಧಿಕೃತ ವೆಬ್ಸೈಟ್ ಭೇಟಿ ಮಾಡುವುದು ಅವಶ್ಯಕವಾಗಿದೆ.

pm kisan scheme
pm kisan scheme

PM Kisan 22ನೇ ಕಂತಿನಲ್ಲಿ ₹2000 ಹಣ ಯಾರಿಗೆ ಸಿಗುತ್ತದೆ?

ಈ ಬಾರಿಯ ಹಣವನ್ನು ಪಡೆಯಲು ಬಯಸುವವರು ಈ ಕೆಳಗಿನ ಅರ್ಹತೆಗಳನ್ನು ಹೊಂದಿರುವಿರಾ ಎಂದು ನೋಡಿಕೊಳ್ಳುವುದು.ಕೆಳಗೆ ನೀಡಿರುವ ಎಲ್ಲಾ ಅಂಶಗಳು ಸರಿಯಾಗಿ ಹೊಂದಿಕೆಯಾದಲ್ಲಿ ಮಾತ್ರ ನಿಮ್ಮ 22ನೇ ಕಂತಿನ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ₹2000 ಹಣ ಖಾತೆಗೆ ಜಮೆಯಾಗುತ್ತದೆ.

  • ನಿಮ್ಮ ಭೂ ದಾಖಲೆಗಳು(ಮುಖ್ಯವಾಗಿ RTC) ನಿಮ್ಮ ಹೆಸರಿನಲ್ಲಿಯೇ ಇದೆಯೇ ಎಂದು ಖಾತ್ರಿಪಡಿಸಿಕೊಳ್ಳುವುದು.
  • Adhar Card, Bank passbook ಮತ್ತು ಪಹಣಿಯಲ್ಲಿ(RTC) ಹೆಸರು ಒಂದೇ ತರನಾಗಿರುವುದರ ಬಗ್ಗೆ ನೋಡಿಕೊಳ್ಳುವುದು ಒಳ್ಳೆಯದು.
  • ಆಧಾರ್ ನಂಬರ್ ಮತ್ತು ಬ್ಯಾಂಕ್ ಅಕೌಂಟ್ ಗೆ Adhar seeding ಆಗಿರುವುದರ ಬಗ್ಗೆ ನೋಡಿಕೊಳ್ಳುವುದು.
  • NPCI Maping ಆಗಿರುವುದನ್ನು ಪರಿಶೀಲಿಸಿಕೊಳ್ಳುವುದು.
  • ಮುಖ್ಯವಾಗಿ ekyc ಪೂರ್ಣಗೊಳಿಸಿರುವುದನ್ನು ಗಮನಿಸಿ.

ಈ ಐದು ಹಂತಗಳು ಪೂರ್ಣಗೊಂಡಿದ್ದರೆ ಈ ಬಾರಿಯ 22ನೇ ಕಂತಿನ ಹಣವು ನಿಮ್ಮ ಖಾತೆಗೆ ಖಂಡಿತವಾಗಿಯೂ ಬರುತ್ತದೆ. ಅಂತೆಯೇ ಇನ್ನೂ ಹೆಚ್ಚಿನ ಮಾಹಿತಿ ಅಥವಾ ಖಚಿತಪಡಿಸಿಕೊಳ್ಳಲು ಅಧಿಕೃತ ವೆಬ್ಸೈಟ್ ನಲ್ಲಿನ Beneficiary List ನಲ್ಲಿ ನಿಮ್ಮ ಹೆಸರನ್ನು ನೋಡಿಕೊಳ್ಳುವುದು.ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದಲ್ಲಿ ಈ ಬಾರಿಯ 22ನೇ ಕಂತಿನ ಹಣ ಪಡೆಯಲು ನೀವು ಅರ್ಹರಿದ್ದಂತೆ.

PM kisan ವೆಬ್ಸೈಟ್ ನಲ್ಲಿ Beneficiary List  ಹೆಸರು ಹುಡುಕುವುದು ಹೇಗೆ?

  • ಅಧಿಕೃತ ವೆಬ್ಸೈಟ್ ಆದ ಪಿಎಂ ಕಿಸಾನ್ ಗೆ ಭೇಟಿ ನೀಡುವುದು.
  • ಅಧಿಕೃತ ವೆಬ್ಸೈಟ್ ತೆರೆದುಕೊಂಡ ನಂತರದಲ್ಲಿ ಕಾಣುವ Farmers Corner ನಲ್ಲಿ ಫಲನುಭವಿಗಳ ಪಟ್ಟಿ ( Beneficiary List) ಮೇಲೆ ಕ್ಲಿಕ್ ಮಾಡಿ.
  • ನಂತರ ಅಲ್ಲಿ ತೋರುವ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮ ವನ್ನು ಆಯ್ಕೆ ಮಾಡಿಕೊಂಡು Get Report ಮೇಲೆ ಕ್ಲಿಕ್ ಮಾಡಿ.
  • ನಂತರದಲ್ಲಿ ನಿಮ್ಮ ಗ್ರಾಮದಲ್ಲಿನ ಎಲ್ಲಾ ಫಲನುಭವಿಗಳ ಹೆಸರಿನ ಪಟ್ಟಿ ತೆರೆದುಕೊಳ್ಳುತ್ತದೆ, ಇದರಲ್ಲಿ ನಿಮ್ಮ ಹೆಸರನ್ನು ಹುಡುಕಿ.
ರೈತರ ಖಾತೆಗೆ ಪಿಎಂ ಕಿಸಾನ್ ಹಣ!
ರೈತರ ಖಾತೆಗೆ ಪಿಎಂ ಕಿಸಾನ್ ಹಣ!

Beneficiary List ನಲ್ಲಿ ಹೆಸರು ಇಲ್ಲದಿದ್ದರೆ ಏನು ಮಾಡಬೇಕು?

ಒಂದು ವೇಳೆ Beneficiary List ನಲ್ಲಿ ನಿಮ್ಮ ಹೆಸರು ಇಲ್ಲದಿದ್ದಲ್ಲಿ ಕೂಡಲೇ ನಿಮ್ಮ ತಾಲೂಕು ಕೃಷಿ ಇಲಾಖೆ ಕಚೇರಿಯನ್ನು ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಈ ಸಮಸ್ಯೆಯನ್ನು ತಿಳಿಸಿ ಮಾಹಿತಿಯನ್ನು ಪಡೆಯಬಹುದುದಾಗಿದೆ. ಹಾಗೆಯೇ ಈ ಮೇಲೆ ತಿಳಿಸಿರುವ ಯಾವುದೇ ಅರ್ಹತೆಗಳಿಂದ ನೀವು ಅನರ್ಹರಾಗಿರುವ ಬಗ್ಗೆ ಸಮಸ್ಯೆಗಳಿದ್ದರೆ ಅದಕ್ಕೆ ಸರಿಯಾದ ಪರಿಹಾರವನ್ನು ನೀಡುತ್ತಾರೆ.

ಕಚೇರಿಗೆ ಭೇಟಿ ನೀಡುವಾಗ ಬೇಕಿರುವ ಎಲ್ಲಾ ಪೂರಕ ದಾಖಲೆಗಳಾದ – RTC, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಇತರೆ ಅಗತ್ಯ ದಾಖಲೆಯನ್ನು ತೆಗೆದುಕೊಂಡು ಹೋಗಿ.

ಸ್ವತಃ ನೀವೇ ನಿಮ್ಮ ಆಧಾರ್ Seeding ಆಗಿರುವುದನ್ನು ಚೆಕ್ ಮಾಡುವುದು ಹೇಗೆ?

My ಆಧಾರ್ Uidai ವೆಬ್ಸೈಟ್ ಗೆ ಭೇಟಿ ನೀಡಿ. services (ಸೇವೆಗಳು) ಅನ್ನು ಆಯ್ಕೆ ಮಾಡಿ.

ಅಲ್ಲಿ ತೋರುವ ಸೇವೆಗಳಲ್ಲಿ Bank seeding status ಮೇಲೆ ಕ್ಲಿಕ್ ಮಾಡಿ.

ನಂತರ ಆಧಾರ್ ನಂಬರ್ ಮತ್ತು ಅಲ್ಲಿರುವ ಕ್ಯಾಪ್ಟ ಕೋಡ್ ನಮೂದಿಸಿ login with otp ಮೇಲೆ ಕ್ಲಿಕ್ ಮಾಡಿ.

ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಗೆ otp ಬರುತ್ತದೆ. ಆ otp ಮೂಲಕ ನಿಮ್ಮ ಆಧಾರ್ seeding status ತಿಳಿಯಬಹುದು.

ekyc ಪೂರ್ಣಗೊಳಿಸಿರುವು ಹೇಗೆ?

ಪಿಎಂ ಕಿಸಾನ್ ಯೋಜನೆಯಲ್ಲಿ 2000₹ ಗಳ ಸಹಾಯಧನವನ್ನು ಪಡೆಯಲು ekyc ಮಾಡುವುದು ಅತಿ ಅವಶ್ಯಕ, ಇದರಿಂದ ಸಹಾಯಧನ ಮಧ್ಯವರ್ತಿಗಳಿಲ್ಲದೆ ನೇರವಾಗಿ ಫಲನುಭವಿಯ ಖಾತೆಗೆ ಜಮೆ ಮಾಡಲು ಐದು ಸಹಕಾರಿಯಾಗುತ್ತದೆ.

ekyc 03 ಬಗೆನಾಗಿ ಪೂರ್ಣಗೊಳಿಸಬಹುದು.ಒಂದು ವೇಳೆ ನಿಮ್ಮ ekyc ಪೂರ್ಣಗೊಳ್ಳದೆ ಇದ್ದಲ್ಲಿ ಈ ಕೆಳಗಿನ ಯಾವುದೇ ವಿಧಾನ ಬಳಸಿ ಕೊಂಡು ekyc ಯನ್ನು ಪೂರ್ಣಗೊಳಿಸಿಕೊಳ್ಳಬಹುದು.

01.OTP ಮುಖಾಂತರ ekyc ಪೂರ್ಣಗೊಳಿಸುವುದು

ಅಧಿಕೃತ ವೆಬ್ಸೈಟ್ ನಲ್ಲಿ ತೋರುವ ekyc ಪೇಜ್ ಗೆ ಭೇಟಿ ನೀಡಿ. ಅಲ್ಲಿ ಕೇಳುವ ಆಧಾರ್ ನಂಬರ್ ಮತ್ತು OTP ನಮೂದಿಸುವುದರ ಮೂಲಕ ekyc ಯನ್ನು ಪೂರ್ಣಗೋಳಿಸಿಕೊಳ್ಳಿ.

02.ಬೈಯೋಮೆಟ್ರಿಕ್ ಮೂಲಕ ekyc ಪೂರ್ಣಗೊಳಿಸುವುದು

ಈ ಮೂಲಕ ekyc ಪೂರ್ಣಗೊಳಿಸಲು ವೈಯಕ್ತಿಕವಾಗಿ ಸಾಧ್ಯವಿಲ್ಲ ಇಲ್ಲಿ ನಿಮ್ಮ thumb ಮೂಲಕ ಬಯೋಮೆಟ್ರಿಕ್ ಪಡೆದು ekyc ಪೂರ್ಣಗೋಳಿಸುತ್ತಾರೆ. ಆದ್ದರಿಂದ CSC ಕೇಂದ್ರಕ್ಕೆ ತೆರಳಿ ekyc ಪೂರ್ಣಗೊಳಿಸಿಕೊಳ್ಳುವುದು ಅವಶ್ಯಕ.

03.Face Authentication ಮೂಲಕ ekyc ಪೂರ್ಣಗೊಳಿಸುವುದು

ಪಿಎಂ ಕಿಸಾನ್ ಮತ್ತು ಆಧಾರ್ ಫೇಸ್ RD App ಅನ್ನು playstore ಮೂಲಕ ಡೌನ್ಲೋಡ್ ಮಾಡಿ.ಆಧಾರ್ ನಂಬರ್ ನಮೂದಿಸಿ ಮತ್ತು ಮುಖವನ್ನು ಚಿತ್ರೀಕರಿಸುವುದರ ಮೂಲಕ ಪೂರ್ಣಗೊಳಿಸಬಹುದು.

PM Kisan Samman Nidhi
PM Kisan Samman Nidhi

ನಿಮ್ಮ ಇತರೆ ಹಳೆಯ ಕಂತಿನ ಹಣ ಜಮೆಯಾಗಿರುವ ಸ್ಥಿತಿಯನ್ನು ತಿಳಿಯಲು.

  • ಪಿಎಂ ಕಿಸಾನ್ಅ ಸಮ್ಮಾನ್ ನಿಧಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವುದು.
  • ಅಲ್ಲಿ ತೋರುವ Farmers Corner ನಲ್ಲಿ Know Your ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ರಿಜಿಸ್ಟರ್ ನಂಬರ್ ಮತ್ತು ಕ್ಯಾಪ್ಟ ಕೋಡ್ ಅನ್ನು ಸರಿಯಾಗಿ ನಮೂದಿಸಿ ಸಲ್ಲಿಸಿ.
  • ನಂತರ ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಗೆ otp ಬರುತ್ತದೆ. ಅದನ್ನು ನಮೂದಿಸಿ ಸಲ್ಲಿಸಿದ ತಕ್ಷಣ ನಿಮ್ಮ ಇತರೆ ಹಳೆಯ ಕಂತಿನ ಹಣ ಜಮೆಯಾಗಿರುವ ಸ್ಥಿತಿಯನ್ನು ನೋಡಬಹುದು.

ಇಲ್ಲಿ ನಿಮ್ಮ ಹಿಂದಿನ ಎಲ್ಲಾ ಕಂತುಗಳ ಮತ್ತು ಪ್ರಸ್ತುತ ಇರುವ 22ನೇ ಕಂತಿನ ಹಣ ಯಾವ ಸ್ಥಿತಿಯಲ್ಲಿದೆ ಎಂಬ ಬಗ್ಗೆ ಮಾಹಿತಿಯನ್ನು ನೋಡಬಹುದು. ಹಾಗೆಯೇ ನಿಮ್ಮ ekyc ಪೂರ್ಣಗೊಂಡಿದೆಯೋ ಇಲ್ಲವೋ ಮತ್ತು ಆಧಾರ್ seeding ಆಗಿದೆಯೋ ಇಲ್ಲವೋ ಎಲ್ಲವನ್ನು ವೀಕ್ಷಿಸಬಹುದು.


PM Kisan 22ನೇ ಕಂತು ಯಾವಾಗ ಬಿಡುಗಡೆಯಾಗುತ್ತದೆ?

ಪ್ರಸ್ತುತ 22ನೇ ಕಂತಿನ ಹಣ ಬಿಡುಗಡೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇರುವುದಿಲ್ಲ. ಪ್ರತಿ ವರ್ಷದಂತೆ ಫೆಬ್ರುವರಿ ತಿಂಗಳಿನಲ್ಲಿ ಜಮೆ ಮಾಡುವುದು ರೂಢಿ.

PM Kisan 22ನೇ ಕಂತಿನ ಹಣ ಜಮೆಯಾಗುವ ಬಗ್ಗೆ ಸ್ಥಿತಿಯನ್ನು ಹೇಗೆ ಪರಿಶೀಲಿಸಬೇಕು?

PM Kisan ಅಧಿಕೃತ ವೆಬ್ಸೈಟ್ ಗೆ ಹೋಗಿ — Know Your Status ಕ್ಲಿಕ್ ಮಾಡಿ —- ರಿಜಿಸ್ಟರ್ ನಂಬರ್ ಮತ್ತು ಕ್ಯಾಪ್ಟ ನಮೂದಿಸಿ — ನಿಮ್ಮ ಸ್ಥಿತಿ ತಿಳಿಯಿರಿ.

PM Kisan eKYC ಮಾಡುವುದು ಕಡ್ಡಾಯವೇ?

ಹೌದು. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಫಲಾನುಭವಿ ekyc ಕಡ್ಡಾಯವಾಗಿದೆ.ekyc ಮಾಡದೇ ಇದ್ದಲ್ಲಿ ಮುಂದಿನ ಕಂತಿನ ಹಣ ತಡೆಹಿಡಿಯುವ ಸಾಧ್ಯತೆ ಇದೆ.

ಪಿಎಂ ಕಿಸಾನ್ Beneficiary List ನಲ್ಲಿ ಹೆಸರು ಇಲ್ಲದಿದ್ದರೆ ಏನು ಮಾಡಬೇಕು?

ಕೂಡಲೇ ನಿಮ್ಮ ತಾಲೂಕಿನ ಕೃಷಿ ಅಧಿಕಾರಿ ಕಚೇರಿ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ.

About Content Writer
Jayanth

Jayanth

'NAMMA CAREER’ ಬ್ಲಾಗಿಂಗ್ ವೆಬ್ಸೈಟ್ ನ Founder ಮತ್ತು Writer ಆದ ನಾನು, ಕಳೆದ 6 ವರ್ಷಗಳಿಂದ Content Writer ಆಗಿ ಕೆಲಸದ ಅನುಭವ ಹೊಂದಿದ್ದೇನೆ. ಈ ಬ್ಲಾಗ್ ವೆಬ್ಸೈಟ್‌ನಲ್ಲಿ ಶಿಕ್ಷಣ, ಉದ್ಯೋಗ, ಸರ್ಕಾರಿ ಯೋಜನೆಗಳು ಹಾಗೂ ಸಾರ್ವಜನಿಕರಿಗೆ ಉಪಯುಕ್ತವಾಗುವ ಮಾಹಿತಿಗಳನ್ನು ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಬರೆದು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಓದುಗರಿಗೆ ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ನೀಡುವುದೇ ನನ್ನ ಮುಖ್ಯ ಉದ್ದೇಶವಾಗಿದೆ.

About Us →
WhatsApp Group Join Now
Telegram Group Join Now

Leave a Comment